ಶೋಭಾ ಕರಂದ್ಲಾಜೆಗೆ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ? ಇದರ ಹಿಂದಿನ ಹೈಕಮಾಂಡ್ ತಂತ್ರವೇನು?
ದಸರಾ ಹಬ್ಬ ಮುಗಿಯುವುದರೊಳಗಾಗಿ ಬಿಜೆಪಿ ರಾಜ್ಯಾಧ್ಯಕ್ಷರ ನೇಮಕವಾಗಲಿದೆ ಎಂಬ ನಿರೀಕ್ಷೆ ಜೋರಾಗಿದೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ರಾಜ್ಯ ಬಿಜೆಪಿ ಚುಕ್ಕಾಣಿ ಹಿಡಿಯಬಹುದು ಎಂಬ ಮಾತು ದಟ್ಟವಾಗಿದೆ. ಅಷ್ಟಕ್ಕೂ ಬಿಜೆಪಿ ವರಿಷ್ಠರು ಶೋಭಾ ಶೋಭಾ ಕರಂದ್ಲಾಜೆಗೇ ಮಣೆಯಾಕುತ್ತಿರುವುದು ಯಾಕೆ? ಹೈಕಮಾಂಡ್ ತಂತ್ರವೇನು? ಇಲ್ಲಿದೆ ವಿವರ
ಬೆಂಗಳೂರು, (ಅಕ್ಟೋಬರ್ 23): ವಿಧಾನಸಭೆ (Karnataka Assembly ELections 2023)ಸೋಲಿನ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ (Nalin Kumar Kateel) ತಮ್ಮನ್ನು ಹುದ್ದೆಯಿಂದ ಮುಕ್ತಗೊಳಿಸುವಂತೆ ಹೈಕಮಾಂಡ್ಗೆ (BJP High command) ಮನವಿ ಮಾಡಿದ್ದರು. ನಳೀನ್ ಕುಮಾರ್ ಕೇಳಿಕೊಂಡು ತಿಂಗಳುಗಳೇ ಕಳೆದು ಹೋಗಿವೆ. ಆದರೂ, ಹೊಸ ನೇಮಕಾತಿಗೆ ವರಿಷ್ಠರು ಮನಸ್ಸು ಮಾಡಿರಲಿಲ್ಲ. ಜೊತೆಗೆ ವಿಪಕ್ಷ ನಾಯಕ ಹುದ್ದೆಯ್ನೂ ಖಾಲಿ ಇರಿಸಿಕೊಂಡಿದೆ. ಆದ್ರೆ, ಇದೀಗ ಅಲರ್ಟ್ ಆಗಿರುವ ಹೈಕಮಾಂಡ್, ದಸರಾ ಮುಗಿಯುವುದರೊಳಗೆ ರಾಜ್ಯ ಬಿಜೆಪಿಗೆ ನೂತನ ಸಾರಥಿ ನೇಮಿಸಲಿದೆ ಎಂದು ಹೇಳಲಾಗುತ್ತಿದೆ. ಆದರಲ್ಲೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ(Shobha Karandlaje) ಹೆಸರು ಮುನ್ನೆಲೆಯಲ್ಲಿರುವುದು ಅಚ್ಚರಿಕೆ ಕಾರಣವಾಗಿದೆ.
2 ದಿನಗಳೊಳಗಾಗಿ ನೇಮಕಾತಿ ಆಗಬಹುದು ಎಂಬ ನಿರೀಕ್ಷೆಯನ್ನು ರಾಜ್ಯ ಬಿಜೆಪಿ ನಾಯಕರು ರಾಜ್ಯ ನಾಯಕರು ಹೊಂದಿದ್ದಾರೆ. ಶೀಘ್ರವೇ ಘೋಷಣೆ ಆಗಬಹುದು ಎಂಬ ನಿರೀಕ್ಷೆಯನ್ನೂ ಇರಿಸಿಕೊಂಡಿದ್ದಾರೆ. ಬಿಜೆಪಿ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ತಮ್ಮ ಹೆಸರು ಮುನ್ನೆಲೆಯಲ್ಲಿದ್ರೂ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತ್ರ, ಆ ಬಗ್ಗೆ ಗೊತ್ತೇ ಇಲ್ಲ ಎಂದೇ ದಸರಾ ಮಹೋತ್ಸವದಲ್ಲಿ ಭಾಗಿಯಾಗಿದ್ದಾರೆ.
ಇನ್ನು ನೇರವಾಗಿ ದೆಹಲಿಯಿಂದಲೇ ಅಧ್ಯಕ್ಷರ ಹೆಸರನ್ನು ಹೈಕಮಾಂಡ್ ಘೋಷಣೆ ಮಾಡಲಿದೆ. ಆದ್ರೆ, ರಾಜ್ಯ ಬಿಜೆಪಿ ನಾಯಕರಿಗೆ ಈ ನೇಮಕಾತಿ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಇಲ್ಲದಷ್ಟು, ವರಿಷ್ಠರು ಗೌಪ್ಯತೆ ಕಾಯ್ದುಕೊಂಡಿದ್ದಾರೆ. ಶೋಭಾ ಕರಂದ್ಲಾಜೆ ಹೆಸರು ಮುಂಚೂಣಿಗೆ ಬರುತ್ತಿದ್ದಂತೆಯೇ ಒಕ್ಕಲಿಗ ಕೋಟಾವೇ ಮಾನದಂಡವಾದರೆ ನಾವ್ಯಾಕೆ ಆಗಬಾರದು ಎಂಬ ಪ್ರಶ್ನೆಯನ್ನು ಪಕ್ಷದ ಒಕ್ಕಲಿಗ ನಾಯಕರು ಹೊಂದಿದ್ದಾರೆ. ಅಷ್ಟಕ್ಕೂ ಬಿಜೆಪಿ ವರಿಷ್ಠರು ಶೋಭಾ ಕರಂದ್ಲಾಜೆಗೇ ಮಣೆಯಾಕುತ್ತಿರುವುದು ಯಾಕೆ ಎನ್ನುವುದನ್ನು ನೋಡೋದಾದ್ರೆ
ಮಹಿಳಾ ಅಧ್ಯಕ್ಷೆ ಮೂಲಕ ಬಣ ಬಡಿದಾಟಕ್ಕೆ ಬ್ರೇಕ್ ಹಾಕಲು ಪ್ಲ್ಯಾನ್
ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟದ ಮೇಲೆ ಹಲವು ನಾಯಕರ ಕಣ್ಣು ಹಾಕಿದ್ದರು. ರಾಜ್ಯಾಧ್ಯಕ್ಷ ರೇಸ್ನಲ್ಲಿ ಸಿ.ಟಿ.ರವಿ, ಬಿ.ವೈ.ವಿಜಯೇಂದ್ರ, ಬಸನಗೌಡ ಪಾಟೀಲ್ ಯತ್ನಾಳ್, ಅಶ್ವತ್ಥ್ ನಾರಾಯಣ್, ವಿ.ಸೋಮಣ್ಣದಿಂದಲೂ ಸರ್ವಪ್ರಯತ್ನ ನಡೆದಿದೆ. ಈ ಈ ಹಿನ್ನಲೆಯಲ್ಲಿ ನಾಯಕರ ನಡುವೆ ಪಕ್ಷದ ಅಧ್ಯಕ್ಷಗಿರಿಗಾಗಿ ತೀವ್ರ ಪೈಪೋಟಿ ನಡೆದಿದ್ದು, ನಾಯಕರ ಮಧ್ಯೆ ಬಣ ನಿರ್ಮಾಣವಾಗಿದೆ. ಹೀಗಾಗಿ ಮಹಿಳಾ ಅಧ್ಯಕ್ಷೆ ಮೂಲಕ ಬಣ ಬಡಿದಾಟಕ್ಕೆ ಬ್ರೇಕ್ ಹಾಕಲು ಬಿಜೆಪಿ ಹೈಕಮಾಂಡ್ ಪ್ಲ್ಯಾನ್ ರೂಪಿಸಿದೆ. ಇನ್ನೂ ಬಹುಮುಖ್ಯವಾಗಿ ಶೋಭಾ ಕರಂದ್ಲಾಜೆ ಹೆಸರಿಗೆ ಮಾಜಿ ಸಿಎಂ ಯಡಿಯೂರಪ್ಪ ವಿರೋಧಿಸಲ್ಲ ಎನ್ನುವುದು ವರಿಷ್ಠರ ತಂತ್ರವಾಗಿದೆ.
ರಾಜ್ಯಾಧ್ಯಕ್ಷ ಮತ್ತು ವಿಪಕ್ಷ ನಾಯಕರ ನೇಮಕಾತಿ ವಿಳಂಬದ ಬಗ್ಗೆ ಧ್ವನಿಎತ್ತಿದ್ದ ಮಾಜಿ ಸಿಎಂ ಡಿ.ವಿ.ಸದಾನಂದ ಗೌಡರಿಗೆ ಹೈಕಮಾಂಡ್ ಬುಲಾವ್ ನೀಡಿದೆ. ತಮಿಳುನಾಡಿಗೆ ತೆರಳಿ ಬಿಜೆಪಿ ಕಾರ್ಯಕರ್ತರಿಗೆ ನೆರವಾಗುವಂತೆ ಸೂಚಿಸದ್ದು, ತಮಿಳುನಾಡು ಸರ್ಕಾರದಿಂದ ಆಗುತ್ತಿದೆ ಎನ್ನಲಾದ ಕಿರುಕುಳದ ಕುರಿತು ಪರಿಶೀಲನಾ ವರದಿ ಸಲ್ಲಿಸುಂತೆ ಜವಾಬ್ದಾರಿ ಹೊರಿಸಿದೆ. ಇದರ ಜೊತೆಗೆ ಡಿ.ವಿ.ಸದಾನಂದಗೌಡ ಕಳೆದ ಬುಧವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಕರೆ ಮೇರೆಗೆ ನವದೆಹಲಿಗೆ ತೆರಳಿ ಭೇಟಿ ಮಾಡುತ್ತಿರುವುದು ಕೂಡಾ ರಾಜ್ಯಾಧ್ಯಕ್ಷ ಸ್ಥಾನದ ವಿಚಾರದಲ್ಲಿ ಕುತೂಹಲ ಹುಟ್ಟಿಸಿದೆ.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:01 am, Mon, 23 October 23