AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೆ ಶುರುವಾದ ಆಣೆ-ಪ್ರಮಾಣ: ದೇವೇಗೌಡರು ದುಡ್ಡು ತಿಂದಿಲ್ಲಾ ಅಂತಾ ಪ್ರಮಾಣ ಮಾಡುತ್ತಾರಾ ಎಂದ ಹೆಚ್​ಸಿ ಬಾಲಕೃಷ್ಣ

ಎರಡು ಬಾರಿ ಸಿಎಂ ಆದವರು ಸಮಯೋಚಿತವಾಗಿ ಮಾತನಾಡಬೇಕು. ಸರಿ ನಾವೆಲ್ಲರೂ ಕಳ್ಳರೇ ಒಪ್ಪಿಕೊಳ್ಳುತ್ತೇವೆ, ನಾವೆಲ್ಲಾ ತಿಂದಿದ್ದೇವೆ. ನಾನು ಸತ್ಯಹರಿಶ್ಚಂದ್ರ, ಏನು ತಿಂದಿಲ್ಲ ಅಂತಾ ಅವರು ಆಣೆ ಮಾಡಲಿ ಎಂದು ಹೆಚ್​ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ಮಾಡಿದರು.

ಮತ್ತೆ ಶುರುವಾದ ಆಣೆ-ಪ್ರಮಾಣ: ದೇವೇಗೌಡರು ದುಡ್ಡು ತಿಂದಿಲ್ಲಾ ಅಂತಾ ಪ್ರಮಾಣ ಮಾಡುತ್ತಾರಾ ಎಂದ ಹೆಚ್​ಸಿ ಬಾಲಕೃಷ್ಣ
ಹೆಚ್​​ಸಿ ಬಾಲಕೃಷ್ಣ
ಸೈಯ್ಯದ್​ ನಿಜಾಮುದ್ದೀನ್​, ರಾಮನಗರ
| Edited By: |

Updated on: Oct 27, 2023 | 12:21 PM

Share

ರಾಮನಗರ ಅ.27: ವರ್ಗಾವಣೆಯಲ್ಲಿ ಹಣ ಪಡೆದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಆದಿಯಾಗಿ ಸರ್ಕಾರದ ಎಲ್ಲ ಸಚಿವರು ಧರ್ಮಸ್ಥಳದಲ್ಲಿ (Dharmasthala) ಆಣೆ ಮಾಡುವಂತೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ (HD Kumaraswamy) ಸವಾಲು ಹಾಕಿದ್ದರು. ಈ ವಿಚಾರವಾಗಿ ಕಾಂಗ್ರೆಸ್​ ಶಾಸಕ ಹೆಚ್.ಸಿ.ಬಾಲಕೃಷ್ಣ (HC Balakrishna) ಮಾತನಾಡಿ ಹೆಚ್​ಡಿ ಕುಮಾರಸ್ವಾಮಿ ಅವರ ಬಾಲಿಷ ಹೇಳಿಕೆಗೆ ಉತ್ತರ ನಾನು ಕೊಡುವುದಿಲ್ಲ. ಮಾಜಿ ಸಿಎಂ ಆಗಿ ಕುಮಾರಸ್ವಾಮಿ ಚಿಲ್ಲರೆ ರೀತಿ ಮಾತನಾಡುತ್ತಾರೆ. ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರು ದುಡ್ಡು ತಿಂದಿಲ್ಲಾ ಅಂತಾ ಪ್ರಮಾಣ ಮಾಡುತ್ತಾರಾ ? ಎಂದು ಪ್ರಶ್ನಿಸಿದರು.

ರಾಮನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಎರಡು ಬಾರಿ ಸಿಎಂ ಆದವರು ಸಮಯೋಚಿತವಾಗಿ ಮಾತನಾಡಬೇಕು. ಸರಿ ನಾವೆಲ್ಲರೂ ಕಳ್ಳರೇ ಒಪ್ಪಿಕೊಳ್ಳುತ್ತೇವೆ, ನಾವೆಲ್ಲಾ ತಿಂದಿದ್ದೇವೆ. ನಾನು ಸತ್ಯಹರಿಶ್ಚಂದ್ರ, ಏನು ತಿಂದಿಲ್ಲ ಅಂತಾ ಅವರು ಆಣೆ ಮಾಡಲಿ ಎಂದು ವಾಗ್ದಾಳಿ ಮಾಡಿದರು.

ಇದನ್ನೂ ಓದಿ: ಡಿಕೆ ಶಿವಕುಮಾರ್ ಸವಾಲು ಸ್ವೀಕರಿಸಿದ ಹೆಚ್​ಡಿ ಕುಮಾರಸ್ವಾಮಿ, ಉಭಯ ನಾಯಕರ ರಾಜಕೀಯ ಯುದ್ಧ ಶುರು

ರಾಮನಗರ ಹೆಸರು ಬದಲಾಯಿಸಿದರೇ ಉಪವಾಸ ಮಾಡುತ್ತೇನೆಂಬ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು ಉಪವಾಸ ಮಾಡುವುದು, ಬಿಡುವುದು ಅವರಿಗೆ ಬಿಟ್ಟದ್ದು. ಸುಮ್ಮನೆ ಏನೇನೋ ಮಾತನಾಡ್ತಾರೆ ಬಿಡಿ ಎಂದು ಲೇವಡಿ ಮಾಡಿದರು.

ಆಣೆ ಪ್ರಮಾಣದ ಬಗ್ಗೆ ನನಗೆ ನಂಬಿಕೆ ಇಲ್ಲ ಎಂದ ರಾಮಲಿಂಗಾರೆಡ್ಡಿ

ಹೆ​ಚ್​ಡಿಕುಮಾರಸ್ವಾಮಿ ಹೇಳಿಕೆಗೆ ಮಾನ್ಯತೆ ನೀಡಬೇಕಿಲ್ಲ. ಯಾವ ಪಕ್ಷ ಅಧಿಕಾರದಲ್ಲಿರಬೇಕು ಅಂತ ಜನ ತೀರ್ಮಾನ ಮಾಡುತ್ತಾರೆ. ಕಳೆದ 5 ತಿಂಗಳ ಹಿಂದೆ ಜನ ನಿರ್ಧರಿಸಿ ನಮ್ಮನ್ನು ಆಯ್ಕೆ ಮಾಡಿದ್ದಾರೆ. ಆಣೆ ಪ್ರಮಾಣದ ಬಗ್ಗೆ ನನಗೆ ನಂಬಿಕೆ ಇಲ್ಲ. ಆರೋಪ ಮಾಡುವ ಬದಲು ಲೋಕಾಯುಕ್ತಕ್ಕೆ ದೂರು ಕೊಡಲಿ. ಇಲ್ಲ ಯಾವುದೇ ತನಿಖೆಗೆ ಒತ್ತಾಯ ಮಾಡಲಿ ಎಂದು ತಿರುಗೇಟು ನೀಡಿದರು.

ಕುಮಾರಸ್ವಾಮಿ ಎಲ್ಲಾ ಹೇಳಿಕೆಗಳಿಗೆ ಉತ್ತರ ಕೊಡುವ ಅಗತ್ಯವಿಲ್ಲ

ಕುಮಾರಸ್ವಾಮಿ ಎಲ್ಲಾ ಹೇಳಿಕೆಗಳಿಗೆ ಉತ್ತರ ಕೊಡುವ ಅಗತ್ಯವಿಲ್ಲ. ಅವರು ಹೇಳಿಕೊಳ್ಳುತ್ತಾ ಇರುತ್ತಾರೆ, ಹೇಳಿಕೊಳ್ಳುತ್ತಲೇ ಇರಲಿ. ಈಗಾಗಲೇ ಜನ ಅವರಿಗೆ ಉತ್ತರ ಕೊಟ್ಟಿದ್ದಾರೆ. ನಮ್ಮ ಅಹವಾಲಿಗೂ ಉತ್ತರ ಕೊಟ್ಟಿದ್ದಾರೆ. ಅಷ್ಟನ್ನು ಅರ್ಥ ಮಾಡಿಕೊಂಡರೆ ಸಾಕಲ್ಲವಾ. ಆದ್ದರಿಂದ ಅವರು ಹೇಳಿಗೆಲ್ಲ ಉತ್ತರ ಕೊಡುವ ಅವಶ್ಯಕತೆ ಇಲ್ಲ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ