ಹೆಚ್ಚು ರಿಟರ್ನ್ಸ್ ಬಯಸಿ ಮ್ಯೂಚುವಲ್ ಫಂಡ್ಗಳಲ್ಲಿ (Mutual Funds) ಹೂಡಿಕೆ ಮಾಡುತ್ತಿರುವವರಿಗೆ ಮಿಡ್‌ಕ್ಯಾಪ್ ಮ್ಯೂಚುವಲ್ ಫಂಡ್ಗಳು (Mid Cap Mutual Funds) ಕಳೆದ ಕೆಲವು ವರ್ಷಗಳಿಂದ ಮಹತ್ವದ್ದಾಗಿ ಪರಿಗಣಿಸಿವೆ. ಕಳೆದ ಮೂರು ವರ್ಷಗಳಲ್ಲಿ ಈ ಮಾದರಿಯ ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆ ಮಾಡಿ ಶೇಕಡಾ 20ರ ವರೆಗೂ ಆದಾಯ ಗಳಿಸಿದವರಿದ್ದಾರೆ. ತಜ್ಞರ ಪ್ರಕಾರ, ಲಾರ್ಜ್ ಕ್ಯಾಪ್ ಕಂಪನಿಗಳಿಗಿಂತಲೂ ಮಿಡ್ಕ್ಯಾಪ್ಗಳಿಗೆ ಉತ್ತಮ ಸಾಮರ್ಥ್ಯವಿದೆ. ಉತ್ತಮ ರಿಟರ್ನ್ಸ್ಗಾಇ ಮಿಡ್‌ಕ್ಯಾಪ್ ಫಂಡ್ಗಳಲ್ಲಿ ಹೂಡಿಕೆ ಮಾಡುವುದು ಉತ್ತಮ ಎಂಬುದು ತಜ್ಞರ ಅಭಿಪ್ರಾಯ. ಭಾರತೀಯ ಮ್ಯೂಚುವಲ್ ಫಂಡ್ಸ್ ಅಸೋಸಿಯೇಷನ್ (AMFI) ವೆಬ್ಸೈಟ್ನಲ್ಲಿ ಲಭ್ಯವಿರುವ (2022ರ ನವೆಂಬರ್ 7ರಂದು) ದತ್ತಾಂಶಗಳ ಪ್ರಕಾರ ಆರಂಭದಿಂದಲೂ ಉತ್ತಮ ರಿಟರ್ನ್ಸ್ ಗಳಿಸುತ್ತಿರುವ ಕೆಲವು ಮಿಡ್‌ಕ್ಯಾಪ್ ಮ್ಯೂಚುವಲ್ ಫಂಡ್ ಕಂಪನಿಗಳ ಮಾಹಿತಿ ಇಲ್ಲಿ ನೀಡಲಾಗಿದೆ.
ಯೂನಿಯನ್ ಮಿಡ್‌ಕ್ಯಾಪ್ ಫಂಡ್
2020ರ ಮಾರ್ಚ್ನಲ್ಲಿ ಆರಂಭಗೊಂಡ ಬಳಿಕ ಯೂನಿಯನ್ ಮಿಡ್‌ಕ್ಯಾಪ್ ಫಂಡ್ನಲ್ಲಿ ಡೈರೆಕ್ಟ್ ಪ್ಲಾನ್ ಆಯ್ಕೆ ಮಾಡಿದವರಿಗೆ ಶೇಕಡಾ 52.12ರ ರಿಟರ್ನ್ಸ್ ದೊರೆತಿದೆ. ರೆಗ್ಯುಲರ್ ಪ್ಲಾನ್ ಆಯ್ಕೆ ಮಾಡಿದವರಿಗೆ ಶೇಕಡಾ 50.18ರ ರಿಟರ್ನ್ಸ್ ದೊರೆತಿದೆ. ಈ ಮ್ಯೂಚುವಲ್ ಫಂಡ್ ಬಿಎಸ್ಇ 150 ಮಿಡ್‌ಕ್ಯಾಪ್ ಟೋಟಲ್ ರಿಟರ್ನ್ಸ್ ಇಂಡೆಕ್ಸ್ ಅಡಿ ಕಾರ್ಯನಿರ್ವಹಿಸುತ್ತಿದೆ.
ಮೀರಾ ಅಸೆಟ್ ಮಿಡ್‌ಕ್ಯಾಪ್ ಫಂಡ್
ಮೀರಾ ಅಸೆಟ್ ಮಿಡ್‌ಕ್ಯಾಪ್ ಫಂಡ್ ಆರಂಭವಾದಂದಿನಿದ ಡೈರೆಕ್ಟ್ ಪ್ಲಾನ್ ಅಡಿ ಹೂಡಿಕೆ ಮಾಡಿದವರಿಗೆ ಶೇಕಡಾ 28.96ರ ರಿಟರ್ನ್ಸ್ ಗಳಿಸಿಕೊಟ್ಟಿದೆ. ರೆಗ್ಯುಲರ್ ಪ್ಲಾನ್ ಅಡಿ ಶೇಕಡಾ 23.86ರ ರಿಟರ್ನ್ಸ್ ಗಳಿಸಿಕೊಟ್ಟಿದೆ. ಈ ಫಂಡ್ ನಿಫ್ಟಿ ಮಿಡ್‌ಕ್ಯಾಪ್ ಟೋಟಲ್ 150 ರಿಟರ್ನ್ಸ್ ಇಂಡೆಕ್ಸ್ ಅಡಿ ಕಾರ್ಯನಿರ್ವಹಿಸುತ್ತಿದೆ.
ಸುಂದರಂ ಮಿಡ್‌ಕ್ಯಾಪ್ ಫಂಡ್
ಸುಂದರಂ ಮಿಡ್‌ಕ್ಯಾಪ್ ಫಂಡ್ನ ಡೈರೆಕ್ಟ್ ಪ್ಲಾನ್ ಆರಂಭವಾದ ಬಳಿಕ ಈವರೆಗೆ ಶೇಕಡಾ 16.93ರ ರಿಟರ್ನ್ಸ್ ಗಳಿಸಿದೆ. ರೆಗ್ಯುಲರ್ ಪ್ಲಾನ್ ಈವರೆಗೆ ಶೇಕಡಾ 50.18 ರಿಟರ್ನ್ಸ್ ಗಳಿಸಿದೆ. ಈ ಫಂಡ್ ನಿಫ್ಟಿ ಮಿಡ್‌ಕ್ಯಾಪ್ 150 ಟೋಟಲ್ ರಿಟರ್ನ್ಸ್ ಇಂಡೆಕ್ಸ್ ಅಡಿ ಕಾರ್ಯನಿರ್ವಹಿಸುತ್ತಿದೆ.
ಮೋತಿಲಾಲ್ ಒಸ್ವಾಲ್ ಮಿಡ್‌ಕ್ಯಾಪ್ ಫಂಡ್
ಮೋತಿಲಾಲ್ ಒಸ್ವಾಲ್ ಮಿಡ್‌ಕ್ಯಾಪ್ ಫಂಡ್ನ ಡೈರೆಕ್ಟ್ ಪ್ಲಾನ್ ಈವರೆಗೆ ಶೇಕಡಾ 22.64ರ ಗಳಿಕೆ ದಾಖಲಿಸಿದೆ. ರೆಗ್ಯುಲರ್ ಪ್ಲಾನ್ ಕೂಡ ಶೇಕಡಾ 21.14ರ ರಿಟರ್ನ್ಸ್ ಗಳಿಸಿದೆ. ಈ ಫಂಡ್ ಸಹ ನಿಫ್ಟಿ ಮಿಡ್‌ಕ್ಯಾಪ್ 150 ಟೋಟಲ್ ರಿಟರ್ನ್ಸ್ ಇಂಡೆಕ್ಸ್ ಅಡಿ ಕಾರ್ಯನಿರ್ವಹಿಸುತ್ತಿದೆ.
ಕೋಟಕ್ ಎಮರ್ಜಿಂಗ್ ಈಕ್ವಿಟಿ ಫಂಡ್
ಕೋಟಕ್ ಎಮರ್ಜಿಂಗ್ ಈಕ್ವಿಟಿ ಫಂಡ್ನ ಡೈರೆಕ್ಟ್ ಪ್ಲಾನ್ ಈವರೆಗೆ ಶೇಕಡಾ 20.37ರ ಗಳಿಕೆ ದಾಖಲಿಸಿದೆ. ರೆಗ್ಯುಲರ್ ಪ್ಲಾನ್ ಶೇಕಡಾ 14.02ರ ಗಳಿಕೆ ದಾಖಲಿಸಿದೆ. ಇದೂ ಕೂಡ ನಿಫ್ಟಿ ಮಿಡ್‌ಕ್ಯಾಪ್ 150 ಟೋಟಲ್ ರಿಟರ್ನ್ಸ್ ಇಂಡೆಕ್ಸ್ ಅಡಿ ಕಾರ್ಯನಿರ್ವಹಿಸುತ್ತಿದೆ.
ಎಚ್ಡಿಎಫ್ಸಿ ಮಿಡ್-ಕ್ಯಾಪ್ ಅಪಾರ್ಚುನಿಟೀಸ್ ಫಂಡ್
ಎಚ್ಡಿಎಫ್ಸಿ ಮಿಡ್-ಕ್ಯಾಪ್ ಅಪಾರ್ಚುನಿಟೀಸ್ ಫಂಡ್ ಡೈರೆಕ್ಟ್ ಪ್ಲಾನ್ ಈವರೆಗೆ ಶೇಕಡಾ 19.83ರ ರಿಟರ್ನ್ಸ್ ಗಳಿಸಿದೆ. ರೆಗ್ಯುಲರ್ ಪ್ಲಾನ್ ಅಡಿ ಶೇಕಡಾ 16.40 ರಿಟರ್ನ್ಸ್ ಗಳಿಸಿದೆ. ನಿಫ್ಟಿ ಮಿಡ್‌ಕ್ಯಾಪ್ 150 ಟೋಟಲ್ ರಿಟರ್ನ್ಸ್ ಇಂಡೆಕ್ಸ್ ಅಡಿ ಇದು ಕಾರ್ಯನಿರ್ವಹಿಸುತ್ತಿದೆ.
ಆಕ್ಸಿಸ್ ಮಿಡ್‌ಕ್ಯಾಪ್
ಆಕ್ಸಿಸ್ ಮಿಡ್‌ಕ್ಯಾಪ್ ಫಂಡ್ ಡೈರೆಕ್ಟ್ ಪ್ಲಾನ್ ಈವರೆಗೆ ಶೇಕಡಾ 19.25ರ ರಿಟರ್ನ್ಸ್ ದಾಖಲಿಸಿದ್ದರೆ, ರೆಗ್ಯುಲರ್ ಪ್ಲಾನ್ ಶೇಕಡಾ 17.92ರ ರಿಟರ್ನ್ಸ್ ದಾಖಲಿಸಿದೆ. ಈ ಫಂಡ್ ಎಸ್&ಪಿ ಬಿಎಸ್ಇ 150 ಮಿಡ್‌ಕ್ಯಾಪ್ ಟೋಟಲ್ ರಿಟರ್ನ್ಸ್ ಇಂಡೆಕ್ಸ್ ಅಡಿ ಕಾರ್ಯನಿರ್ವಹಿಸುತ್ತಿದೆ.
ಟಾಟಾ ಮಿಡ್‌ಕ್ಯಾಪ್ ಗ್ರೋಥ್ ಫಂಡ್
ಟಾಟಾ ಮಿಡ್‌ಕ್ಯಾಪ್ ಗ್ರೋಥ್ ಫಂಡ್ನ ಡೈರೆಕ್ಟ್ ಪ್ಲಾನ್ ಈವರೆಗೆ ಶೇಕಡಾ 19.13 ಗಳಿಕೆ ದಾಖಲಿಸಿದ್ದು, ರೆಗ್ಯುಲರ್ ಪ್ಲಾನ್ ಶೇಕಡಾ 12.53ರ ಗಳಿಗೆ ದಾಖಲಿಸಿದೆ. ನಿಫ್ಟಿ ಮಿಡ್‌ಕ್ಯಾಪ್ 150 ಟೋಟಲ್ ರಿಟರ್ನ್ಸ್ ಇಂಡೆಕ್ಸ್ ಅಡಿ ಇದು ಕಾರ್ಯನಿರ್ವಹಿಸುತ್ತಿದೆ.
****
(ಭಾರತೀಯ ಮ್ಯೂಚುವಲ್ ಫಂಡ್ಸ್ ಅಸೋಸಿಯೇಷನ್ ಅಥವಾ ಎಎಂಎಫ್ಐ ವೆಬ್ಸೈಟ್ನಲ್ಲಿ 2022ರ ನವೆಂಬರ್ 7 ಪ್ರಕಟವಾದ ದತ್ತಾಂಶಗಳ ಆಧಾರದಲ್ಲಿ ಈ ಮಾಹಿತಿ ನೀಡಲಾಗಿದೆ. ಮ್ಯೂಚುವಲ್ ಫಂಡ್ ಹೂಡಿಕೆ ಮಾರುಕಟ್ಟೆ ರಿಸ್ಕ್ಗಳಿಗೆ ಕಾರಣವಾಗುವುದರಿಂದ ಹೂಡಿಕೆ ಮಾಡುವ ಮೊದಲು ನಿಮ್ಮ ಹಣಕಾಸು ಸಲಹೆಗಾರರ ಅಭಿಪ್ರಾಯ ಕೇಳಿಕೊಳ್ಳುವುದು ಉತ್ತಮ)