Stock Market Updates: ಜಿಗಿದ ಷೇರುಪೇಟೆ ವಹಿವಾಟು; ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ ಸೆನ್ಸೆಕ್ಸ್

ಸೆನ್ಸೆಕ್ಸ್​ನಲ್ಲಿ ಎಚ್​ಸಿಎಲ್ ಟೆಕ್ನಾಲಜೀಸ್, ಇನ್ಫೋಸಿಸ್, ವಿಪ್ರೋ, ಪವರ್ ಗ್ರಿಡ್, ಟೆಕ್ ಮಹೀಂದ್ರಾ, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಹಿಂದೂಸ್ತಾನ್ ಯುನಿಲೀವರ್, ಎಚ್​ಡಿಎಫ್​ಸಿ, ಎಚ್​ಡಿಎಫ್​ಸಿ ಬ್ಯಾಂಕ್ ಹಾಗೂ ಮಹೀಂದ್ರಾ & ಮಹೀಂದ್ರಾ ಉತ್ತಮ ಗಳಿಕೆ ದಾಖಲಿಸಿವೆ.

Stock Market Updates: ಜಿಗಿದ ಷೇರುಪೇಟೆ ವಹಿವಾಟು; ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ ಸೆನ್ಸೆಕ್ಸ್
ಸಾಂದರ್ಭಿಕ ಚಿತ್ರ
Image Credit source: PTI
Updated By: Ganapathi Sharma

Updated on: Nov 24, 2022 | 4:37 PM

ಮುಂಬೈ: ಸತತ ಮೂರನೇ ದಿನವೂ ಗಳಿಕೆಯ ಓಟ ಮುಂದುವರಿಸಿರುವ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಬಿಎಸ್​ಇ ಸೆನ್ಸೆಕ್ಸ್ (BSE Sensex) ಗುರುವಾರ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ ವಹಿವಾಟು ನಡೆಸಿದೆ. ಜಾಗತಿಕ ಮಾರುಕಟ್ಟೆಗಳಲ್ಲಿ ಕಂಡುಬಂದ ಸ್ಥಿರತೆ, ಬಡ್ಡಿ ದರ ಹೆಚ್ಚಳ ಪ್ರಕ್ರಿಯೆಯನ್ನು ನಿಧಾನಗೊಳಿಸುವುದಾಗಿ ಅಮೆರಿಕದ ಫೆಡರಲ್ ಬ್ಯಾಂಕ್ ನೀಡಿದ ಸುಳಿವು ಸೆನ್ಸೆಕ್ಸ್ ವಹಿವಾಟಿನ ಮೇಲೆ ಪ್ರಭಾವ ಬೀರಿತು. ಗುರುವಾರದ ವಹಿವಾಟಿನ ಕೊನೆಯಲ್ಲಿ ಶೇಕಡಾ 1.24ರ, ಅಂದರೆ 762.10 ಅಂಶ ಜಿಗಿತ ಕಾಣುವ ಮೂಲಕ ಸೆನ್ಸೆಕ್ಸ್ 62,272.68ರಲ್ಲಿ ವಹಿವಾಟು ಮುಗಿಸಿತು. ಒಂದು ಹಂತದಲ್ಲಿ 901.75 ಅಂಶ ಚೇತರಿಸಿ 62,412.33ರ ವರೆಗೂ ವಹಿವಾಟು ನಡೆಸಿತ್ತು. ಎನ್​ಎಸ್​ಇ ನಿಫ್ಟಿ (NSE Nifty) ಶೇಕಡಾ 1.19ರಷ್ಟು ಚೇತರಿಸಿ, 216.85 ಅಂಶ ಹೆಚ್ಚಾಗಿ 18,484.10ರಲ್ಲಿ ವಹಿವಾಟು ಮುಕ್ತಾಯಗೊಳಿಸಿತು. ಒಂದು ಹಂತದಲ್ಲಿ ನಿಫ್ಟಿ 52 ವಾರಗಳ ಗರಿಷ್ಠ, ಅಂದರೆ 18,529.70ರಲ್ಲಿ ವಹಿವಾಟು ನಡೆಸಿತ್ತು.

ಅಮೆರಿಕದ ಮಾರುಕಟ್ಟೆಯಲ್ಲಿ ಷೇರು ವಹಿವಾಟು ಹೆಚ್ಚಳ, ಡಾಲರ್​ ಮೌಲ್ಯದಲ್ಲಿ ಇಳಿಕೆ ಕಂಡುಬಂದಿತು. ಭಾರತದಲ್ಲಿ ಸಾಲದ ನೀಡಿಕೆ ಪ್ರಮಾಣ ಹೆಚ್ಚಳ, ಆರ್ಥಿಕತೆಯ ಸ್ಥಿರ ಬೆಳವಣಿಗೆ ಮಾರುಕಟ್ಟೆ ಚೇತರಿಕೆಗೆ ಪೂರಕವಾಯಿತು. ಅಮೆರಿಕದ ಮಾರುಕಟ್ಟೆ ಮತ್ತು ಭಾರತದ ಸ್ಥೂಲ ಆರ್ಥಿಕತೆಯ ಬೆಳವಣಿಗೆಯ ಅಂಶಗಳು ಸೆನ್ಸೆಕ್ಸ್ ಮೇಲೆ ಪ್ರಭಾವ ಬೀರಿದವು. ಜತೆಗೆ ಕಚ್ಚಾ ತೈಲ ಬೆಲೆ ಸಕಾರಾತ್ಮಕವಾಗಿ ಪ್ರಭಾವ ಬೀರಿತು. ಸೆನ್ಸೆಕ್ಸ್​ನಲ್ಲಿ ಲಾರ್ಜ್ ಕ್ಯಾಪ್​ಗಳ, ಮುಖ್ಯವಾಗಿ ಎಚ್​ಡಿಎಫ್​ಸಿ, ಇನ್ಫೋಸಿಸ್, ಟಿಸಿಎಸ್, ಆರ್​ಐಎಲ್ ಷೇರುಗಳ ಚೇತರಿಕೆಯ ಓಟಕ್ಕೆ ಕಾರಣವಾಯಿತು’ ಎಂದು ಜಿಯೋಜಿತ್ ಫೈನಾನ್ಸಿಯಲ್ ಸರ್ವೀಸಸ್​ನ ಮುಖ್ಯ ಹೂಡಿಕೆ ತಜ್ಞ ವಿ.ಕೆ. ವಿಜಯ ಕುಮಾರ್ ತಿಳಿಸಿದ್ದಾರೆ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಬುಧವಾರ 789.86 ಕೋಟಿ ರೂ. ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.

ಇದನ್ನೂ ಓದಿ
Google Layoffs: ಗೂಗಲ್ ಮಾತೃಸಂಸ್ಥೆ ಅಲ್ಫಾಬೆಟ್​ನಿಂದ 10,000 ಉದ್ಯೋಗಿಗಳ ವಜಾಕ್ಕೆ ಸಿದ್ಧತೆ; ವರದಿ
ಡೆಬಿಟ್ ಕಾರ್ಡ್ ಇಲ್ಲದೆಯೂ ಫೋನ್​ ಪೇ ಆ್ಯಕ್ಟಿವೇಟ್ ಮಾಡಬಹುದು; ಹೇಗೆಂಬ ವಿವರ ಇಲ್ಲಿದೆ
ಇನ್ನೂ ಆಧಾರ್, ಪ್ಯಾನ್ ಲಿಂಕ್ ಮಾಡಿಲ್ಲವೇ? ಬೇಗ ಮಾಡಿ; ಇಲ್ಲವಾದರೆ ನಿಷ್ಕ್ರಿಯವಾಗಲಿದೆ ಪ್ಯಾನ್ ಕಾರ್ಡ್
Digital Wallets: ಡಿಜಿಟಲ್ ವಾಲೆಟ್​ನಲ್ಲಿ ಹೆಚ್ಚು ಹಣ ಇಡುವುದು ಉತ್ತಮಲ್ಲ; ತಜ್ಞರು ಹೀಗೆನ್ನಲು ಕಾರಣವಿದೆ

ಗಳಿಕೆ, ನಷ್ಟದ ಲೆಕ್ಕಾಚಾರ

ಸೆನ್ಸೆಕ್ಸ್​ನಲ್ಲಿ ಎಚ್​ಸಿಎಲ್ ಟೆಕ್ನಾಲಜೀಸ್, ಇನ್ಫೋಸಿಸ್, ವಿಪ್ರೋ, ಪವರ್ ಗ್ರಿಡ್, ಟೆಕ್ ಮಹೀಂದ್ರಾ, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಹಿಂದೂಸ್ತಾನ್ ಯುನಿಲೀವರ್, ಎಚ್​ಡಿಎಫ್​ಸಿ, ಎಚ್​ಡಿಎಫ್​ಸಿ ಬ್ಯಾಂಕ್ ಹಾಗೂ ಮಹೀಂದ್ರಾ & ಮಹೀಂದ್ರಾ ಉತ್ತಮ ಗಳಿಕೆ ದಾಖಲಿಸಿದವು. ಮತ್ತೊಂದೆಡೆ, ಬಜಾಜ್ ಫಿನ್​ಸರ್ವ್, ಟಾಟಾ ಸ್ಟೀಲ್, ಬಜಾಜ್ ಫೈನಾನ್ಸ್, ಕೋಟಕ್ ಮಹೀಂದ್ರಾ ಬ್ಯಾಂಕ್​ ಷೇರುಗಳ ಮೌಲ್ಯದಲ್ಲಿ ಕುಸಿತವಾಯಿತು.

ಏಷ್ಯಾದಾದ್ಯಂತ ಮಾರುಕಟ್ಟೆ ವಹಿವಾಟಿನಲ್ಲಿ ಗುರುವಾರವೂ ಗಳಿಕೆಯ ಓಟ ಮುಂದುವರಿದಿದೆ. ಸಿಯೋಲ್, ಶಾಂಘೈ, ಹಾಂಗ್​ಕಾಂಗ್ ಷೇರು ಮಾರುಕಟ್ಟೆಗಳು ಉತ್ತಮ ವಹಿವಾಟು ನಡೆಸಿವೆ. ಯುರೋಪ್​ನಲ್ಲಿಯೂ ಮಾರುಕಟ್ಟೆ ಚೇತರಿಸಿದೆ.

ಇದನ್ನೂ ಓದಿ: Cash Back: ಕ್ಯಾಷ್‌ಬ್ಯಾಕ್‌ ಆಸೆಗೆ ಶಾಪಿಂಗ್ ಮಾಡುವ ಮುನ್ನ ಈ ವಿಚಾರಗಳನ್ನು ತಿಳಿದಿರಿ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರೆಲ್ ಬ್ರೆಂಟ್ ಕಚ್ಚಾ ತೈಲದ ಬೆಲೆ ಶೇಕಡಾ 0.46ರಷ್ಟು ಕಡಿಮೆಯಾಗಿ 85.02 ಡಾಲರ್​ಗೆ ಮಾರಾಟವಾಗಿದೆ.

ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕನ್ ಡಾಲರ್ ಎದುರು ರೂಪಾಯಿ ಮೌಲ್ಯ 29 ಪೈಸೆ ವೃದ್ಧಿಯಾಗಿ 81.64 ಆಯಿತು. ಹಿಂದಿನ ದಿನದ ವಹಿವಾಟಿನ ಅಂತ್ಯದಲ್ಲಿ ರೂಪಾಯಿ ಮೌಲ್ಯ 18 ಪೈಸೆ ಕುಸಿದು 81.85ರಲ್ಲಿ ವಹಿವಾಟು ಕೊನೆಗೊಳಿಸಿತ್ತು. ಇಂದು 81.64ರಲ್ಲಿ ವಹಿವಾಟು ಮುಗಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ