ಕನ್ನಡ ಕೈಬರಹಕ್ಕೆ ಫೇಸ್​ಬುಕ್ ಪುಟದ ವೇದಿಕೆ: ನಿಮ್ಮದೇ ಬರವಣಿಗೆಯ ಕವನ ಹಂಚಿಕೊಳ್ಳಲು ಇಲ್ಲಿದೆ ಅವಕಾಶ

ತಮ್ಮ ಸುಂದರ ಅಥವಾ ಅಪರೂಪದ ಕೈಬರಹಗಳನ್ನು ಜನರ ಮುಂದೆ ಇಡುವ ಹೊಸ ಪ್ರಯತ್ನ ಇದಾಗಿದೆ. ‘ಕನ್ನಡ ಕೈ ಬರಹ’ -ಇದು ಬೆರಳ ಗುರುತಿನ ಗೋಡೆ ಎಂಬ ಫೇಸ್ಬುಕ್ ಪುಟದಲ್ಲಿ ಅಪರೂಪದ ತಮ್ಮದೇ ಕೈ ಬರಹದ ಮೂಲಕ ಅನೇಕ ಯುವ ಕವಿಗಳು, ಆಸಕ್ತರು ತಮ್ಮ ಕವಿತೆಗಳನ್ನು ಹಂಚಿಕೊಳ್ಳುತ್ತಾರೆ.

ಕನ್ನಡ ಕೈಬರಹಕ್ಕೆ ಫೇಸ್​ಬುಕ್ ಪುಟದ ವೇದಿಕೆ: ನಿಮ್ಮದೇ ಬರವಣಿಗೆಯ ಕವನ ಹಂಚಿಕೊಳ್ಳಲು ಇಲ್ಲಿದೆ ಅವಕಾಶ
ಕನ್ನಡ ಕೈಬರಹಕ್ಕೆ ಫೇಸ್ಬುಕ್ ಪುಟದ ವೇದಿಕೆ: ನಿಮ್ಮದೇ ಬರವಣಿಗೆಯ ಕವನ ಹಂಚಿಕೊಳ್ಳಲು ಇಲ್ಲಿದೆ ಅವಕಾಶ


ತಂತ್ರಜ್ಞಾನವು ಬೆಳೆಯುತ್ತಿದ್ದಂತೆ ಜೀವನದ ವಿನ್ಯಾಸವೇ ಬದಲಾಗಿ ಹೋಗಿದೆ. ಕನ್ನಡದೊಂದಿಗೆ ಸರಾಗವಾಗಿ ಇಂಗ್ಲಿಷ್ ಬೆರೆತುಕೊಂಡಿದೆ. ಸಂಪ್ರದಾಯದಂತೆ ಹಿಂದಿನಿಂದ ಬೆಳೆದು ಬಂದಿದ್ದ ಎಷ್ಟೋ ವಾಡಿಕೆಗಳು ಮಾಯವಾಗಿ ಹೊಸ ಹೊಸ ಅವಿಷ್ಕಾರಗಳು ಕಣ್ಣ ಮುಂದೆ ಬಂದಿವೆ. ಇಂತಹ ಈ ಯುಗದಲ್ಲಿ ಪುಸ್ತಕ-ಪೆನ್ನು ಬಳಕೆಯ ಅನಿವಾರ್ಯತೆಯೇ ಹಲವರಿಗೆ ಇಲ್ಲವಾಗಿದೆ. ಮೊಬೈಲ್, ಲ್ಯಾಪ್ಟಾಪ್ಗಳೇ ನಮ್ಮ ಬರಹದ ಅಗತ್ಯವನ್ನೂ ತೀರಿಸುತ್ತಿವೆ.

ಇತ್ತೀಚಿನ ದಿನಗಳಲ್ಲಿ ಶಾಲೆಯಲ್ಲಿ ಓದುವ ಮಕ್ಕಳು ಬಿಟ್ಟರೆ ಬಹುತೇಕ ಮಂದಿ ಪೆನ್ ಬಳಸುವುದು ತೀರಾ ಅಪರೂಪ. ಏನೆನ್ನಾದರೂ ಬರಿಯಬೇಕೆಂದರೆ ಮೊಬೈಲ್ ಅಥವಾ ಲ್ಯಾಪ್ಟಾಪ್ ತೆಗೆದಿರಿಸಿಕೊಳ್ಳುತ್ತಾರೆ. ಇನ್ನು ಸೋಮಾರಿ ವಿದ್ಯಾರ್ಥಿಗಳು ಬೇರೆಯವರ ನೋಟ್ಸ್ ಫೋಟೋ ಕ್ಲಿಕ್ಕಿಸಿ ಓದುವ ಹವ್ಯಾಸವೂ ಬೆಳೆಸಿಕೊಂಡಿದ್ದಾರೆ. ಇಲ್ಲವೇ ಗೂಗಲ್ ಮೊರೆ ಹೋಗ್ತಾರೆ. ಕೈಲಿ ಬರೆದು ಅದೆಷ್ಟೂ ದಿನಗಳಾದ್ವು, ಪೆನ್ ಬಳಸೋ ಅಭ್ಯಾಸ ಕಡಿಮೆಯಾಗಿದೆ. ಪೆನ್ ಬಳಸಿದ್ರೆ ಕೈಯಲ್ಲಾ ಇಂಕ್ ಆಗುತ್ತೆ ಎಂಬ ಮಾತುಗಳು ಕಿವಿಗೆ ರಾಚಿಸುತ್ತಿವೆ. ಹೀಗಾಗಿ ಕೈ ಬರಹ ನಶಿಸಿ ಹೋಗುತ್ತಿದೆ. ಕೈಬರಹವನ್ನು ಉತ್ತೇಜಿಸಲು ಫೇಸ್ಬುಕ್ನಲ್ಲೊಂದು ವಿಶೇಷ ಪುಟ ಆರಂಭವಾಗಿದೆ.

ತಮ್ಮ ಸುಂದರ ಅಥವಾ ಅಪರೂಪದ ಕೈಬರಹಗಳನ್ನು ಜನರ ಮುಂದೆ ಇಡುವ ಹೊಸ ಪ್ರಯತ್ನ ಇದಾಗಿದೆ. ‘ಕನ್ನಡ ಕೈ ಬರಹ’ -ಇದು ಬೆರಳ ಗುರುತಿನ ಗೋಡೆ ಎಂಬ ಫೇಸ್ಬುಕ್ ಪುಟದಲ್ಲಿ ಅಪರೂಪದ ತಮ್ಮದೇ ಕೈ ಬರಹದ ಮೂಲಕ ಅನೇಕ ಯುವ ಕವಿಗಳು, ಆಸಕ್ತರು ತಮ್ಮ ಕವಿತೆಗಳನ್ನು ಹಂಚಿಕೊಳ್ಳುತ್ತಾರೆ. ಸುಂದರ ಬರಹದ ಜೊತೆಗೆ ಭಾವನೆ ಬೆರೆತು ಮೂಡಿ ಬರುವ ಕವಿತೆಗಳು ಮತ್ತಷ್ಟು ಮನಸ್ಸಿಗೆ ಸಂತೃಪ್ತಿ ನೀಡುತ್ತದೆ. ಜೊತೆಗೆ ಪ್ರಸಿದ್ಧ ಕವಿಗಳ, ಬರಹಗಾರರ ಕೈ ಬರಹಗಳನ್ನೂ ಸಹ ಇದರಲ್ಲಿ ಪೋಸ್ಟ್ ಮಾಡಲಾಗುತ್ತದೆ.

ಯಾರು ಬೇಕಾದರೂ ತಮ್ಮ ಕೈ ಬರಹದೊಂದಿಗೆ ಭಾವನೆಗಳನ್ನು ಹಂಚಿಕೊಳ್ಳುವ ಮುಕ್ತ ವೇದಿಕೆ ಇದಾಗಿದೆ. ಪ್ರೀತಿ, ಮೋಸ, ಕಷ್ಟ, ಸುಖ, ಜೀವನ ಈ ರೀತಿ ಎಲ್ಲಾ ರೀತಿಯ ಭಾವನೆಗಳ ಸಾರದೊಂದಿಗೆ ಮೂಡಿ ಬರುವ ಕವಿತೆಗಳ ರಾಶಿ ಇಲ್ಲಿ ಸಿಗುತ್ತವೆ. ಕವಿತೆ ಬರೆಯದಿದ್ದರೂ ಒಂದೊಮ್ಮೆಯಾದರೂ ಇಲ್ಲಿಗೆ ಭೇಟಿ ಕೊಟ್ಟರೆ ಸಮಯ ಕಳೆಯುವುದೇ ಗೊತ್ತಾಗುವುದಿಲ್ಲ. ಅದ್ಭುತ ಚಿಂತನೆ, ಭಾವನೆಗಳಿಂದ ರಚಿತವಾದ ಅದೆಷ್ಟೋ ಕವಿತೆಗಳು ನಮ್ಮನ್ನು ಮೋಡಿ ಮಾಡುತ್ತವೆ. ನೀವು ಕೂಡ ನಿಮ್ಮ ಕೈಬರಹದಲ್ಲಿ ಕವಿತೆಗಳನ್ನು ಈ ಪುಟದಲ್ಲಿ ಹಂಚಿಕೊಳ್ಳಬಹುದು. ಕವಿತೆ ಇಷ್ಟವಾದವರೂ ನಿಮ್ಮನ್ನು ಪ್ರಶಂಸಿಸಲು ಮರೆಯಲ್ಲ.

ಇದನ್ನೂ ಓದಿ: ಅಮ್ಮನ ಮಾತು ಕೇಳಿ ವೇದಿಕೆ ಮೇಲೆ ಬಿಕ್ಕಿ ಬಿಕ್ಕಿ ಅತ್ತ ‘ಕನ್ನಡತಿ’ ಹೀರೋ ಕಿರಣ್​ ರಾಜ್​!

Click on your DTH Provider to Add TV9 Kannada