ಇನ್ನೂ 11 ಆಪ್​ಗಳು ಬ್ಯಾನ್​ ಆದವು! ಯಾವುವು? ಚೆಕ್ ಮಾಡಿ..

| Updated By: ಆಯೇಷಾ ಬಾನು

Updated on: Nov 23, 2020 | 11:52 AM

ಇತ್ತೀಚೆಗಷ್ಟೇ ಚೀನಾದ 59 ಌಪ್​ಗಳಿಂದ ವೈಯಕ್ತಿಕ ಮಾಹಿತಿಯ ಸೋರಿಕೆಯಾಗುತ್ತಿದೆ ಎಂದು ಹೇಳಿ ಭಾರತ ಅವುಗಳನ್ನ ಬ್ಯಾನ್​ ಮಾಡಿದ್ದವು. ಜೊತೆಗೆ, ಗೂಗಲ್​ ಸಂಸ್ಥೆಗೆ ಅವುಗಳನ್ನು ತಮ್ಮ ಪ್ಲೇ ಸ್ಟೋರ್​ನಿಂದ ಸಹ ತೆಗೆಯಲು ಸೂಚಿಸಿತ್ತು. ಇದೀಗ, ಗೂಗಲ್ ಸಂಸ್ಥೆಯು ತಾನಾಗಿಯೇ ಮತ್ತಷ್ಟು ಌಪ್​ಗಳನ್ನ ತನ್ನ ಪ್ಲೇ ಸ್ಟೋರ್​ನಿಂದ ಬ್ಯಾನ್ ಮಾಡಿದೆ. ಇದಕ್ಕೆ ಕಾರಣ ಜೋಕರ್​ ಎಂಬ ಮಾಲ್​ವೇರ್​ (Malware). ಇದು ತಮಾಷೆಯಲ್ಲ.. ಈ ‘Joker’​ನಿಂದ ನಿಮ್ಮ ಮೊಬೈಲ್​ನ ಸ್ವಲ್ಪ ದೂರನೇ ಇಡಿ! ಹೌದು, ಚೆಕ್ ಪಾಯಿಂಟ್​ ಎಂಬ ಸೈಬರ್​ ಸೆಕ್ಯೂರಿಟಿ […]

ಇನ್ನೂ 11 ಆಪ್​ಗಳು ಬ್ಯಾನ್​ ಆದವು! ಯಾವುವು? ಚೆಕ್ ಮಾಡಿ..
ಸಾಂದರ್ಭಿಕ ಚಿತ್ರ
Follow us on

ಇತ್ತೀಚೆಗಷ್ಟೇ ಚೀನಾದ 59 ಌಪ್​ಗಳಿಂದ ವೈಯಕ್ತಿಕ ಮಾಹಿತಿಯ ಸೋರಿಕೆಯಾಗುತ್ತಿದೆ ಎಂದು ಹೇಳಿ ಭಾರತ ಅವುಗಳನ್ನ ಬ್ಯಾನ್​ ಮಾಡಿದ್ದವು. ಜೊತೆಗೆ, ಗೂಗಲ್​ ಸಂಸ್ಥೆಗೆ ಅವುಗಳನ್ನು ತಮ್ಮ ಪ್ಲೇ ಸ್ಟೋರ್​ನಿಂದ ಸಹ ತೆಗೆಯಲು ಸೂಚಿಸಿತ್ತು. ಇದೀಗ, ಗೂಗಲ್ ಸಂಸ್ಥೆಯು ತಾನಾಗಿಯೇ ಮತ್ತಷ್ಟು ಌಪ್​ಗಳನ್ನ ತನ್ನ ಪ್ಲೇ ಸ್ಟೋರ್​ನಿಂದ ಬ್ಯಾನ್ ಮಾಡಿದೆ. ಇದಕ್ಕೆ ಕಾರಣ ಜೋಕರ್​ ಎಂಬ ಮಾಲ್​ವೇರ್​ (Malware).

ಇದು ತಮಾಷೆಯಲ್ಲ.. ಈ ‘Joker’​ನಿಂದ ನಿಮ್ಮ ಮೊಬೈಲ್​ನ ಸ್ವಲ್ಪ ದೂರನೇ ಇಡಿ!
ಹೌದು, ಚೆಕ್ ಪಾಯಿಂಟ್​ ಎಂಬ ಸೈಬರ್​ ಸೆಕ್ಯೂರಿಟಿ ಕಂಪನಿಯು ನಡೆಸಿದ ತನಿಖೆಯಲ್ಲಿ ಈ ಹೊಸ ಮಾಲ್​ವೇರ್ ಅಥವಾ ಕಂಪ್ಯೂಟರ್​ ವೈರಸ್​ ಮಾದರಿಯ ತಂತ್ರಾಂಶವು ಕಂಡು ಬಂದಿದೆ. ಗೂಗಲ್​ ಬ್ಯಾನ್​ ಮಾಡಿರುವ ಆ 11 ಌಪ್​ಗಳ ಮೂಲಕ ನಿಮ್ಮ ಮೊಬೈಲ್​ಗೆ ಡೌನ್​ಲೋಡ್​ ಆಗುವ ಈ ಜೋಕರ್​ ಮಾಲ್​ವೇರ್​ ನಿಮ್ಮ ಮೋಬೈಲ್​ನಲ್ಲಿರುವ ವೈಯಕ್ತಿಕ ಮಾಹಿತಿ ಕದಿಯಲು ಮುಂದಾಗುತ್ತದೆ. ಇದರಲ್ಲಿ ಹಣಕಾಸಿನ ಮಾಹಿತಿ ಸಹ ಒಂದು.

ಹೀಗಾಗಿ, ಈ ಕೆಳಕಂಡ ಌಪ್​ಗಳನ್ನು ಕೂಡಲೇ ಬ್ಯಾನ್​ ಮಾಡುವುದರ ಜೊತೆಗೆ ಗೂಗಲ್​ ಈ ಌಪ್​ ಬಳಕೆದಾರರಿಗೆ ತಮ್ಮ ಮೊಬೈಲ್​ನಿಂದ ಕೂಡಲೇ ಡಿಲೀಟ್​ ಮಾಡಲು ಸೂಚಿಸಿದೆ.
1. imagecompress.android
2. contact.withme.texts
3. hmvoice.friendsms
4. relax. relaxation.androidsms
5. cheery.message.sendsms
6. peason.lovinglovemessage
7. file.recovefiles
8. LPlocker.lockapps
9. remindme.alram
10. training.memorygame

Published On - 3:45 pm, Sat, 11 July 20