ಗ್ರೀನ್ ಟೀ, ದಾಳಿಂಬೆ ಜ್ಯೂಸ್ ಕುಡಿದ್ರೆ ಕೊರೊನಾ ಬರೋದಿಲ್ವಂತೆ!

ಕೊರೊನಾ ವೈರಸ್​ನಿಂದ ಬಚಾವಾಗೋಕೆ ಔಷಧಿ ಸಿಗುತ್ತೋ? ಇಲ್ವೋ? ಅಂತ ಇಡೀ ವಿಶ್ವದ ಜನರು ತಲೆ ಕೆಡಿಸಿಕೊಂಡಿರುವ ಸಂದರ್ಭದಲ್ಲಿ ಹೊಸ ಸಂಶೋಧನೆಯೊಂದು ಅಚ್ಚರಿಯ ಮಾಹಿತಿ ನೀಡಿದೆ. ಕೋವಿಡ್-19 ವೈರಾಣುವಿನ ವಿರುದ್ಧ ಹೋರಾಡಲು ದೇಹಕ್ಕೆ ಬೇಕಾದ ಶಕ್ತಿ ನಾವು ದಿನನಿತ್ಯ ಸೇವಿಸುವ ಸಾಧಾರಣ ಆಹಾರದಲ್ಲೇ ಇದೆಯೆಂಬ ವಿಚಾರ ಬೆಳಕಿಗೆ ಬಂದಿದೆ. ವಿದೇಶಿ ವಿಜ್ಞಾನಿಗಳ ತಂಡ ಇತ್ತೀಚೆಗೆ ನಡೆಸಿದ ಸಂಶೋಧನೆಯೊಂದರಲ್ಲಿ ಕ್ರೇನ್ ಬೆರಿಽ, ಚೋಕ್ ಬೆರಿಽ, ದಾಳಿಂಬೆ ಜ್ಯೂಸ್ ಹಾಗೂ ಗ್ರೀನ್ ಟೀ ಮೊದಲಾದ ಪೇಯಗಳಲ್ಲಿ ಕೊರೊನಾ ವೈರಸ್ ಅನ್ನು ನಿಷ್ಕ್ರಿಯಗೊಳಿಸುವ […]

ಗ್ರೀನ್ ಟೀ, ದಾಳಿಂಬೆ ಜ್ಯೂಸ್ ಕುಡಿದ್ರೆ ಕೊರೊನಾ ಬರೋದಿಲ್ವಂತೆ!
Follow us
ಅರುಣ್​ ಕುಮಾರ್​ ಬೆಳ್ಳಿ
| Updated By: Team Veegam

Updated on:Nov 24, 2020 | 2:54 AM

ಕೊರೊನಾ ವೈರಸ್​ನಿಂದ ಬಚಾವಾಗೋಕೆ ಔಷಧಿ ಸಿಗುತ್ತೋ? ಇಲ್ವೋ? ಅಂತ ಇಡೀ ವಿಶ್ವದ ಜನರು ತಲೆ ಕೆಡಿಸಿಕೊಂಡಿರುವ ಸಂದರ್ಭದಲ್ಲಿ ಹೊಸ ಸಂಶೋಧನೆಯೊಂದು ಅಚ್ಚರಿಯ ಮಾಹಿತಿ ನೀಡಿದೆ. ಕೋವಿಡ್-19 ವೈರಾಣುವಿನ ವಿರುದ್ಧ ಹೋರಾಡಲು ದೇಹಕ್ಕೆ ಬೇಕಾದ ಶಕ್ತಿ ನಾವು ದಿನನಿತ್ಯ ಸೇವಿಸುವ ಸಾಧಾರಣ ಆಹಾರದಲ್ಲೇ ಇದೆಯೆಂಬ ವಿಚಾರ ಬೆಳಕಿಗೆ ಬಂದಿದೆ.

ವಿದೇಶಿ ವಿಜ್ಞಾನಿಗಳ ತಂಡ ಇತ್ತೀಚೆಗೆ ನಡೆಸಿದ ಸಂಶೋಧನೆಯೊಂದರಲ್ಲಿ ಕ್ರೇನ್ ಬೆರಿಽ, ಚೋಕ್ ಬೆರಿಽ, ದಾಳಿಂಬೆ ಜ್ಯೂಸ್ ಹಾಗೂ ಗ್ರೀನ್ ಟೀ ಮೊದಲಾದ ಪೇಯಗಳಲ್ಲಿ ಕೊರೊನಾ ವೈರಸ್ ಅನ್ನು ನಿಷ್ಕ್ರಿಯಗೊಳಿಸುವ ಅಂಶಗಳು ಪತ್ತೆಯಾಗಿವೆ. ಸಂಶೋಧನಾ ಕೇಂದ್ರದಲ್ಲಿ ಕೊರೊನಾ ವೈರಾಣುವಿನ ಮೇಲೆ ಕ್ರೇನ್ ಬೆರಿಽ, ಚೋಕ್ ಬೆರಿಽ, ದಾಳಿಂಬೆ ಜ್ಯೂಸ್ ಹಾಗೂ ಗ್ರೀನ್ ಟೀ ಪಾನೀಯಗಳನ್ನು ಪ್ರಯೋಗಿಸಿದಾಗ ಅಚ್ಚರಿಯ ಫಲಿತಾಂಶ ಲಭ್ಯವಾಗಿದೆ.

ಪ್ರಯೋಗ ಮಾಡಿದ್ದು ಹೇಗೆ?

ಸಂಶೋಧನಾ ಕೇಂದ್ರದೊಳಗೆ ಸಾಧಾರಣ ಉಷ್ಣಾಂಶವನ್ನು ಕಾಯ್ದುಕೊಂಡು ಆಯ್ದ ಪಾನೀಯಗಳೊಂದಿಗೆ ಕೋವಿಡ್-19ವೈರಾಣುವನ್ನು ಸಂಪರ್ಕಕ್ಕೆ ತಂದಾಗ ಚೋಕ್ ಬೆರಿಽ ಜ್ಯೂಸ್ ಕೇವಲ ಐದೇ ಐದು ನಿಮಿಷಗಳಲ್ಲಿ ಶೇಕಡಾ 97ರಷ್ಟು ಕೊರೊನಾ ವೈರಾಣುಗಳನ್ನು ನಿಷ್ಕ್ರಿಯಗೊಳಿಸಿದೆ. ಅಂತೆಯೇ, ದಾಳಿಂಬೆ ಜ್ಯೂಸ್ ಹಾಗೂ ಗ್ರೀನ್ ಟೀ ಶೇಕಡಾ 80ರಷ್ಟು ವೈರಾಣುಗಳನ್ನು ನಿಷ್ಕ್ರಿಯಗೊಳಿಸಿವೆ. ಈ ಪ್ರಯೋಗದ ಫಲಿತಾಂಶವನ್ನು ನೋಡಿ ಅಚ್ಚರಿಗೊಂಡ ವಿಜ್ಞಾನಿಗಳು ಜ್ವರಕ್ಕೆ ಕಾರಣವಾಗುವ ಇತೆ ವೈರಸ್​ಗಳ ಮೇಲೆ ಪ್ರಯೋಗ ನಡೆಸಿದಾಗಲೂ ಆಶಾದಾಯಕ ಫಲಿತಾಂಶ ಸಿಕ್ಕಿದೆ. 

ಪರದಾಟಕ್ಕಿಂತ ಮುನ್ನೆಚ್ಚರಿಕೆ ವಾಸಿ!

ಕೋವಿಡ್19 ವಿರುದ್ಧ ಅಧಿಕೃತವಾಗಿ ಲಸಿಕೆ ಸಿಗುವ ತನಕ ಸಾಕಷ್ಟು ಜಾಗ್ರತೆ ಮಾಡುವುದು ನಮ್ಮ ಆರೋಗ್ಯದ ದೃಷ್ಟಿಯಿಂದ ಉತ್ತಮ. ಹೊರಗಡೆ ಹೋದಾಗ ಬಾಯಿ ರುಚಿಗಾಗಿ ಸಿಕ್ಕ ಸಿಕ್ಕ ಜಂಕ್ ಫುಡ್ ತಿನ್ನುವ ಬದಲು ನಮ್ಮ ದೇಹಕ್ಕೆ ರೋಗ ನಿರೋಧಕ ಶಕ್ತಿ ನೀಡುವ ಆಹಾರ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳುವುದು ನಮಗಿರುವ ಒಂದೊಳ್ಳೆ ಆದ್ಯತ. Prevention is better than cure ಅನ್ನೋ ಮಾತು ಸಾರ್ವಕಾಲಿಕ ಸತ್ಯ ಅನ್ನೋದನ್ನ ಮರೆಯಬಾರದು.

Published On - 9:55 pm, Wed, 11 November 20