ಅರೆ ನೆರಳು ಚಂದ್ರಗ್ರಹಣದಿಂದ ಕಾದಿದಿಯಾ ಮಹಾ ಕಂಟಕ?
ಬೆಂಗಳೂರು: ಇತ್ತೀಚೆಗಷ್ಟೇ ಜಗತ್ತು ನಭೋಮಮಂಡಲದ ಕುತೂಹಲ ತೋಳ ಚಂದ್ರಗ್ರಹಣಕ್ಕೆ ಸಾಕ್ಷಿಯಾಗಿತ್ತು. ಆದ್ರೀಗ ಇಂದು ನಡೆಯೋ ಅರೆ ನೆರಳು ಚಂದ್ರಗ್ರಹಣದ ಬಗ್ಗೆಯೂ ಜನರು ಅಷ್ಟೇ ಕುತೂಹಲ ಮತ್ತು ಕೌತುಕದಿಂದ ಕಾಯ್ತಿದ್ದಾರೆ. ಗ್ರಹಣ ಅಂದಕೂಡಲೇ ಕೆಲವರಿಗೆ ಕುತೂಹಲ, ಕೌತುಕ.. ಖಗೋಳ ಮ್ಯಾಜಿಕ್ ಕಣ್ತುಂಬಿಕೊಳ್ಳೋ ತವಕ.. ಆದ್ರೆ ಇನ್ನು ಕೆಲವ್ರಿಗೆ ಗ್ರಹಣ ಅಂದ್ರೆ ಭಯ-ಭೀತಿ. ಗ್ರಹಣದಿಂದ ಯಾರಿಗೆ ಏನಾಗುತ್ತೋ? ಯಾರಿಗೆ ಶುಭ, ಯಾರಿಗೆ ಅಶುಭ ಅನ್ನೋ ಲೆಕ್ಕಾಚಾರ ಶುರುವಾಗುತ್ತೆ. ವರ್ಷದ ಆರಂಭದಲ್ಲೇ ತೋಳ ಚಂದ್ರಗ್ರಹಣವನ್ನ ಕಣ್ತುಂಬಿಸಿ ಕೊಂಡಿರೊ ಜನರಿಗೆ, ಐದು ತಿಂಗಳ […]
ಬೆಂಗಳೂರು: ಇತ್ತೀಚೆಗಷ್ಟೇ ಜಗತ್ತು ನಭೋಮಮಂಡಲದ ಕುತೂಹಲ ತೋಳ ಚಂದ್ರಗ್ರಹಣಕ್ಕೆ ಸಾಕ್ಷಿಯಾಗಿತ್ತು. ಆದ್ರೀಗ ಇಂದು ನಡೆಯೋ ಅರೆ ನೆರಳು ಚಂದ್ರಗ್ರಹಣದ ಬಗ್ಗೆಯೂ ಜನರು ಅಷ್ಟೇ ಕುತೂಹಲ ಮತ್ತು ಕೌತುಕದಿಂದ ಕಾಯ್ತಿದ್ದಾರೆ.
ಗ್ರಹಣ ಅಂದಕೂಡಲೇ ಕೆಲವರಿಗೆ ಕುತೂಹಲ, ಕೌತುಕ.. ಖಗೋಳ ಮ್ಯಾಜಿಕ್ ಕಣ್ತುಂಬಿಕೊಳ್ಳೋ ತವಕ.. ಆದ್ರೆ ಇನ್ನು ಕೆಲವ್ರಿಗೆ ಗ್ರಹಣ ಅಂದ್ರೆ ಭಯ-ಭೀತಿ. ಗ್ರಹಣದಿಂದ ಯಾರಿಗೆ ಏನಾಗುತ್ತೋ? ಯಾರಿಗೆ ಶುಭ, ಯಾರಿಗೆ ಅಶುಭ ಅನ್ನೋ ಲೆಕ್ಕಾಚಾರ ಶುರುವಾಗುತ್ತೆ. ವರ್ಷದ ಆರಂಭದಲ್ಲೇ ತೋಳ ಚಂದ್ರಗ್ರಹಣವನ್ನ ಕಣ್ತುಂಬಿಸಿ ಕೊಂಡಿರೊ ಜನರಿಗೆ, ಐದು ತಿಂಗಳ ಬಳಿಕ ಬಂದಿರುವ ಮತ್ತೊಂದು ಚಂದ್ರಗ್ರಹಣವು, ನಾನಾ ಕುತೂಹಲಗಳಿಗೆ ಎಡೆ ಮಾಡಿಕೊಟ್ಟಿದೆ.
ಏನಿದು ಅರೆ ನೆರಳು ಚಂದ್ರಗ್ರಹಣ? ಇನ್ನು ಇಂದು ಗೋಚರವಾಗೋ ಅರೆನೆರಳು ಚಂದ್ರಗ್ರಹಣ ಸಂಪೂರ್ಣ ಭಿನ್ನವಾಗಿರಲಿದೆ. ಇದು ಪೂರ್ತಿ ಕಪ್ಪಾಗಿರೋದಿಲ್ಲ. ಹಾಗೇ ಚಂದ್ರನ ಆಕಾರದಲ್ಲೂ ಯಾವುದೇ ಬದಲಾವಣೆಯಾಗೋದಿಲ್ಲ. ಜೊತೆಗೆ ಚಂದ್ರ ಅರ್ಧಾಕಾರದಲ್ಲಿ ಕಾಣದೆ ಪೂರ್ಣ ಗಾತ್ರದಲ್ಲಿ ಚಲಿಸಲಿದ್ದಾನೆ. ಚಂದ್ರನ ತುದಿಯ ಭಾಗ ಮಾತ್ರ ಗೋಚರಿಸಲಿದೆ. ಅಂದ್ರೆ ಚಂದ್ರ ಭೂಮಿಯ ದಟ್ಟವಾದ ನೆರಳನ್ನ ಪ್ರವೇಶ ಮಾಡೋದ್ರಿಂದ, ನೆರಳಾಗಿ ಅಂದ್ರೆ ಶ್ಯಾಡೋ ಮಾದರಿಯಲ್ಲಿ ಕಾಣಿಸಿಕೊಳ್ತಾನೆ. ಅದಕ್ಕೆ ಈ ಚಂದ್ರಗ್ರಹಣವನ್ನ ಅರೆ ನೆರಳು ಚಂದ್ರಗ್ರಹಣ ಅಂತಾ ಕರೀತಾರೆ.
ಎಷ್ಟು ಗಂಟೆಗೆ ಅರೆ ನೆರಳು ಚಂದ್ರಗ್ರಹಣ? ಇನ್ನು ಇಂದು ರಾತ್ರಿ 11.15ಕ್ಕೆ ಅರೆ ನೆರಳು ಚಂದ್ರಗ್ರಹಣ ಆರಂಭವಾಗಲಿದ್ದು, ಮಧ್ಯರಾತ್ರಿ 2.34ಕ್ಕೆ ಚಂದ್ರಗ್ರಹಣ ಅಂತ್ಯಗೊಳ್ಳಲಿದೆ. ಹೀಗೆ ಒಟ್ಟು 3 ಗಂಟೆ 19 ನಿಮಿಷಗಳ ಕಾಲ ಈ ಅರೆ ಚಂದ್ರಗ್ರಹಣ ಗೋಚರವಾಗಲಿದೆ.
ಎಲ್ಲೆಲ್ಲಿ ಗ್ರಹಣ ಗೋಚರ? ಈ ಅರೆ ನೆರಳು ಚಂದ್ರ ಗ್ರಹಣ ಏಷ್ಯಾದ ಕೆಲವು ಭಾಗಗಳಲ್ಲಿ ಹಾಗೇ ಆಸ್ಟ್ರೇಲಿಯಾ, ದಕ್ಷಿಣ ಅಮೆರಿಕಾ, ಯುರೋಪ್, ಆಫ್ರಿಕಾ, ಈಜಿಪ್ಟ್, ಇಂಡೋನೇಷ್ಯಾದಲ್ಲಿ ಗೋಚರವಾಗಲಿದೆ. ಆದ್ರೆ ಭಾರತದಲ್ಲಿ ಅಲ್ಪ ಪ್ರಮಾಣದಲ್ಲಿ ಗೋಚರವಾಗುತ್ತೆ ಎಂದು ಹೇಳಲಾಗ್ತಿದೆ.
ಇನ್ನು ಅರೆನೆರಳು ಚಂದ್ರಗ್ರಹಣದಿಂದ ಏನೆಲ್ಲಾ ಪರಿಣಾಮಗಳು ಎದುರಾಗುತ್ತವೆ..? ಪ್ರಕೃತಿ ಮೇಲೆ ಯಾವ ರೀತಿ ಪ್ರಭಾವ ಬೀರುತ್ತೆ..? ರಾಜಕೀಯದಲ್ಲಿ ಯಾವೆಲ್ಲಾ ಸಮಸ್ಯೆಗಳು ಎದುರಾಗುತ್ತವೆ ಅನ್ನೋದನ್ನ ನೋಡೋದಾದ್ರೆ.
ಚಂದ್ರಗ್ರಹಣವೇನೋ ಆಗ್ತಿದೆ.. ಇದು ಭಾರತದಲ್ಲಿ ಅಷ್ಟಾಗಿ ಗೋಚರವಾಗಲ್ಲ.. ಆದ್ರೂ ಕೂಡ ಪರಿಣಾಮವಂತೂ ಇದ್ದೇ ಇರುತ್ತೆ. ಹೀಗಾಗಿ ಅರೆನೆರಳು ಚಂದ್ರಗ್ರಹಣದಿಂದ ಯಾವ್ಯಾವ ಕ್ಷೇತ್ರದ ಮೇಲೆ ಎಷ್ಟು ಪ್ರಭಾವ ಬೀರುತ್ತೆ? ಪ್ರಕೃತಿ ಮೇಲೆ ಆಗೋ ಪರಿಣಾಮವೇನು? ರಾಜಕೀಯ ಕ್ಷೇತ್ರದ ಮೇಲೆ ಹೇಗೆ ಎಫೆಕ್ಟ್ ಆಗುತ್ತೆ? ಚಂದ್ರಗ್ರಹಣದಿಂದ ಯಾವ್ಯಾವ ರಾಶಿಗಳಿಗೆ ಯಾವ ರೀತಿ ಹೊಡೆತ ಕೊಡುತ್ತೆ ಅನ್ನೋದ್ರ ಪಿನ್ ಟು ಪಿನ್ ಮಾಹಿತಿ ಡೀಟೇಲ್ಸ್ ಇಲ್ಲಿದೆ.
ಅರೆ ನೆರಳು ಚಂದ್ರಗ್ರಹಣದಿಂದ ಪ್ರಕೃತಿ ವಿಕೋಪ!? ಅಂದ್ಹಾಗೇ, ಈ ಅರೆ ನೆರಳು ಚಂದ್ರಗ್ರಹಣದಿಂದ ಪ್ರಕೃತಿ ವಿಕೋಪಗಳು, & ಭೂಕಂಪಗಳು ಹೆಚ್ಚಾಗೋ ಸಾಧ್ಯತೆಯಿದೆ. ಈಗಾಗ್ಲೇ ಒಂದರ ಹಿಂದೆ ಒಂದು ಚಂಡಮಾರುತಗಳು ದೇಶವನ್ನ ಅಲ್ಲಕಲ್ಲೋಲ ಮಾಡ್ತಿವೆ. ಇನ್ಮುಂದೆಯೂ ಕೂಡ ಪ್ರಕೃತಿ ವಿಕೋಪಗಳು ಮುಂದುವರಿಯುತ್ತವಂತೆ. ಹೀಗಾಗಿ ಸಮುದ್ರದ ದಡದಲ್ಲಿರೋರು ಎಚ್ಚರದಿಂದಿರಬೇಕು. ಅಷ್ಟೇ ಅಲ್ಲದೆ ಮೀನುಗಾರರು ಸ್ವಲ್ಪ ದಿನ ಸಮುದ್ರಕ್ಕೆ ಹೋಗೋದನ್ನ ನಿಲ್ಲಿಸಿದ್ರೆ ಒಳ್ಳೇದು ಅಂತಾರೆ ವೈಜ್ಞಾನಿಕ ಜ್ಯೋತಿಷಿಗಳಾದ ಶ್ರೀ ಸಚ್ಚಿದಾನಂದ್ ಬಾಬು ಗೂರೂಜಿ ಅವರು.
ಚಂದ್ರಗ್ರಹಣದಿಂದ ಅಪಘಾತ, ಗಲಾಟೆಗಳು ಹೆಚ್ಚಳ!? ಇನ್ನು ಅರೆನೆರಳು ಚಂದ್ರಗ್ರಹಣ ಸಂಭವಿಸಿದ ಬಳಿಕ ರಸ್ತೆ ಅಪಘಾತಗಳು, ಇದ್ರಿಂದ ಸರ್ಜರಿಗಳು ಹೆಚ್ಚಾಗೋ ಸಾಧ್ಯತೆಯಿದೆಯಂತೆ. ಅಷ್ಟೇ ಅಲ್ಲದೆ ಗಲಾಟೆಗಳು ಕೂಡ ನಡೆಯಬಹುದು ಅಂದ್ರು.
ರಾಷ್ಟ್ರ & ರಾಜ್ಯ ರಾಜಕಾರಣಕ್ಕೂ ಭಾರಿ ಹೊಡೆತ!? ಇತ್ತ ಈ ಬಾರಿ ಸಂಭವಿಸೋ ಚಂದ್ರಗ್ರಹಣ ರಾಜಕೀಯದ ಮೇಲೂ ಪ್ರಭಾವ ಬೀರಲಿದೆಯಂತೆ. ಇದ್ರಿಂದ ರಾಜ್ಯ ರಾಜಕೀಯದ ಜೊತೆಗೆ ರಾಷ್ಟ್ರ ರಾಜಕೀಯಕ್ಕೂ ಭಾರಿ ಹೊಡೆತ ಬೀಳಲಿದೆಯಂತೆ.
ಮಾರ್ಚ್ 2021ಕ್ಕೆ ಸಿಗುತ್ತಾ ಕೊರೊನಾದಿಂದ ಮುಕ್ತಿ? ಕೊರೊನಾ ಮಹಾಮಾರಿ ದೇಶವನ್ನ ಹಿಂಡಿ ಹಿಪ್ಪೆ ಮಾಡ್ತಿದೆ. ಯಾವಾಗಪ್ಪಾ ಕೊರೊನಾದಿಂದ ಮುಕ್ತಿ ಸಿಗುತ್ತೆ ಅಂತಾ ಜನರು ಕಾತರದಿಂದ ಕಾಯ್ತಿದ್ದಾರೆ. ಹೀಗಾಗಿ ಚಂದ್ರಗ್ರಹಣ ಮುಗಿದ ಬಳಿಕ ಕೊರೊನಾ ನಾರ್ಮಲ್ ಆಗಲು ಎರಡ್ಮೂರು ತಿಂಗಳು ಬೇಕಾಗುತ್ತಂತೆ. ಕೊರೊನಾ ಸಂಪೂರ್ಣ ಮುಕ್ತಿ ಸಿಗಲು ಮಾರ್ಚ್ 2021 ಆಗುತ್ತಂತೆ.
ಒಟ್ನಲ್ಲಿ ತೋಳ ಚಂದ್ರಗ್ರಹಣವಾಗಿ ಐದು ತಿಂಗಳ ಬಳಿಕ ಇದೀಗ ಅರೆನೆರಳು ಚಂದ್ರಗ್ರಹಣ ಬಂದಿದೆ. ಈಗಾಗ್ಲೇ ಸಾಲು ಸಾಲು ಸಂಕಷ್ಟದ ಸುಳಿಯಲ್ಲಿ ಪರದಾಡ್ತಿರೋದು ಜನರಿಗೆ ಇದು ಮತ್ಯಾವ ಸಮಸ್ಯೆಗಳನ್ನ ತಂದೊಡ್ಡುತ್ತೋ, ಯಾವ ರೀತಿ ಪ್ರಭಾವ ಬೀರುತ್ತೋ ಅನ್ನೋದೇ ಚರ್ಚೆಗೆ ಗ್ರಾಸವಾಗಿದೆ.
Published On - 12:15 pm, Fri, 5 June 20