ಖಗೋಳದಲ್ಲಿ ಅರೆನೆರಳು ಚಂದ್ರಗ್ರಹಣದ ಕೌತಕ, ಚಮತ್ಕಾರವನ್ನ ಕಣ್ತುಂಬಿಕೊಂಡ ಜನ
ಬೆಂಗಳೂರು: ಅರೆ ನೆರಳು ಚಂದ್ರಗ್ರಹಣ.. 5 ತಿಂಗಳ ಬಳಿಕ ನಭೋಮಂಡಲದಲ್ಲಿ ವಿಸ್ಮಯವನ್ನ ಉಂಟು ಮಾಡ್ತು. ಖಗೋಳ ಕೌತುಕಕ್ಕೆ ಸಾಕ್ಷಿಯಾಯ್ತು. ಏಷ್ಯಾದ ಹಲವೆಡೆ ಚಂದ್ರಗ್ರಹಣ ಚಮತ್ಕಾರವನ್ನ ಸೃಷ್ಟಿಸಿತ್ತು. ಚಂದ್ರದ ಅರೆನೆರಳನ್ನ ಕೋಟ್ಯಂತರ ಮಂದಿ ಕಣ್ತುಂಬಿಕೊಂಡ್ರು. ಮಧ್ಯರಾತ್ರಿವರೆಗೂ ಎಚ್ಚರವಿದ್ದು ಎಲ್ಲರೂ ಬಣ್ಣದಾಟವನ್ನ ನೋಡಿ ಖುಷಿಪಟ್ರು. ರಾತ್ರಿ 11:15ಕ್ಕೆ ಗೋಚರಿಸಿದ ಪೂರ್ಣಚಂದ್ರ..! ಹೌದು , ಜನವರಿ 10 ರ ಬಳಿಕ ಚಂದ್ರಗ್ರಹಣ ಮತ್ತೆ ನಿನ್ನೆ ಆಕಾಶದಲ್ಲಿ ಗೋಚರಿಸಿತ್ತು. ಈ ವರ್ಷದ ಎರಡನೇ ಚಂದ್ರಗ್ರಹಣ ಇದಾಗಿತ್ತು. ರಾತ್ರಿ 11:15ಕ್ಕೆ ಶುರುವಾದ ಚಂದ್ರಗ್ರಹಣ 2: […]
ಬೆಂಗಳೂರು: ಅರೆ ನೆರಳು ಚಂದ್ರಗ್ರಹಣ.. 5 ತಿಂಗಳ ಬಳಿಕ ನಭೋಮಂಡಲದಲ್ಲಿ ವಿಸ್ಮಯವನ್ನ ಉಂಟು ಮಾಡ್ತು. ಖಗೋಳ ಕೌತುಕಕ್ಕೆ ಸಾಕ್ಷಿಯಾಯ್ತು. ಏಷ್ಯಾದ ಹಲವೆಡೆ ಚಂದ್ರಗ್ರಹಣ ಚಮತ್ಕಾರವನ್ನ ಸೃಷ್ಟಿಸಿತ್ತು. ಚಂದ್ರದ ಅರೆನೆರಳನ್ನ ಕೋಟ್ಯಂತರ ಮಂದಿ ಕಣ್ತುಂಬಿಕೊಂಡ್ರು. ಮಧ್ಯರಾತ್ರಿವರೆಗೂ ಎಚ್ಚರವಿದ್ದು ಎಲ್ಲರೂ ಬಣ್ಣದಾಟವನ್ನ ನೋಡಿ ಖುಷಿಪಟ್ರು.
ರಾತ್ರಿ 11:15ಕ್ಕೆ ಗೋಚರಿಸಿದ ಪೂರ್ಣಚಂದ್ರ..! ಹೌದು , ಜನವರಿ 10 ರ ಬಳಿಕ ಚಂದ್ರಗ್ರಹಣ ಮತ್ತೆ ನಿನ್ನೆ ಆಕಾಶದಲ್ಲಿ ಗೋಚರಿಸಿತ್ತು. ಈ ವರ್ಷದ ಎರಡನೇ ಚಂದ್ರಗ್ರಹಣ ಇದಾಗಿತ್ತು. ರಾತ್ರಿ 11:15ಕ್ಕೆ ಶುರುವಾದ ಚಂದ್ರಗ್ರಹಣ 2: 34ಕ್ಕೆ ಅಂತ್ಯವಾಯ್ತು. ಮಧ್ಯರಾತ್ರಿ 12:15 ನಿಮಿಷಕ್ಕೆ ಪೂರ್ಣಚಂದ್ರ ಗೋಚರಿಸಿತು. ಇನ್ನು ಗ್ರಹಣದ ವೇಳೆ ಭೂಮಿಯ ನೆರಳು ಇಡೀ ಚಂದ್ರನನ್ನು ಸಂಪೂರ್ಣವಾಗಿ ಆವರಿಸಿತ್ತು. ಖಗೋಳದಲ್ಲಿನ ಈ ಚಮತ್ಕಾರವನ್ನ ಎಲ್ಲರೂ ಕಣ್ತುಂಬಿಕೊಂಡ್ರು.
ಆದ್ರೆ ಚಂದ್ರನ ಆಕಾರದಲ್ಲಿ ಯಾವುದೇ ಬದಲಾವಣೆ ಇರಲಿಲ್ಲ. ಹೀಗಾಗಿ ಸುಮಾರು 3 ಗಂಟೆ 19 ನಿಮಿಷಗಳ ಕಾಲ ಭಾರತೀಯರು ಅರೆ ನೆರಳಿನ ಚಂದಮಾಮನನ್ನ ನೋಡಿ ಸಂತಸಪಟ್ರು. ಆದ್ರೆ ಭಾರತೀಯರ ಮೇಲೆ ಹೆಚ್ಚು ಪ್ರಭಾವ ಇಲ್ಲದಿರೋದ್ರಿಂದ ಚಂದ್ರಗ್ರಹಣದ ಬಗ್ಗೆ ಜನರು ಅಷ್ಟಾಗಿ ತಲೆ ಕೆಡಿಸಿಕೊಂಡಿರಲಿಲ್ಲ.
ಇನ್ನು ಬೆಂಗಳೂರಿನ ವಿಧಾನಸೌಧ, ಲಾಲ್ಬಾಗ್, ಹೆಬ್ಬಾಳ ಸೇರಿದಂತೆ ಹಲವು ಏರಿಯಾಗಳಲ್ಲಿ ಜನರು ಅರೆ ನೆರಳಿನ ಚಂದ್ರಗ್ರಹಣವನ್ನ ಕಣ್ತುಂಬಿಕೊಂಡ್ರು. ಇಂಟ್ರೆಸ್ಟಿಂಗ್ ಅಂದ್ರೆ, ಬೆಂಗ್ಳೂರಿನ ವಿಧಾನಸೌಧದ ಬಳಿ ಗ್ರಹಣದ ವೇಳೆ ಸಾಮಾಜಿಕ ಕಾರ್ಯಕರ್ತರಾದ ನರಸಿಂಹ ಮೂರ್ತಿ ಅನ್ನೋರು ಆಹಾರ ಸೇವಿಸೋ ಮೂಲಕ ಮೂಢನಂಬಿಕೆ ಬಗ್ಗೆ ಜಾಗೃತಿ ಮೂಡಿಸಿದ್ರು.
ಒಟ್ನಲ್ಲಿ ಇಡೀ ಪ್ರಪಂಚವೆಲ್ಲಾ ಕಾತರದಿಂದ ಕಾಯ್ತಿದ್ದ ಅರೆನೆರಳು ಚಂದ್ರಗ್ರಹಣ ಬಂದು ಹೋಯ್ತು. ಭಾರತದಲ್ಲಿ ಪೂರ್ಣಚಂದ್ರನ ಚಿತ್ರ ಕೊಂಚ ಮುಸುಕು ಮುಸುಕಾಗಿ ಕಾಣಿಸಿಕೊಳ್ತು. ಅದ್ರಲ್ಲೂ ಚಂದ್ರಗ್ರಹಣದಿಂದ ಯಾವುದೇ ಸಮಸ್ಯೆಯಿಲ್ಲ ಎಂದಿದ್ದಕ್ಕೆ ಜನರು ತಮ್ಮ ಪಾಡಿಗೆ ತಾವು ಇದ್ರು. ಹಲವರು ರಾತ್ರಿಯಿಡೀ ಎಚ್ಚರದಿಂದಿದ್ದು. ನಭೋಮಂಡಲದಲ್ಲಿ ಕೌತುಕವನ್ನ ನೋಡಿ ಖುಷಿಯ ಅಲೆಯಲ್ಲಿ ತೇಲಿದ್ರು.