International Plastic Bag Free Day 2022: ಪ್ಲಾಸ್ಟಿಕ್ ಮುಕ್ತ ವಿಶ್ವದತ್ತ ಸದೃಢ ಹೆಜ್ಜೆಯ ಸಂಕಲ್ಪಕ್ಕೆ ಇಂದು ಶುಭದಿನ

ಪ್ಲಾಸ್ಟಿಕ್ ಬಳಕೆ ವಿರುದ್ಧದ ಆಂದೋಲನ ಮೊದಲು ನಮ್ಮ ಮನೆಗಳಿಂದಲೇ ಆರಂಭವಾಗಬೇಕಿದೆ.

International Plastic Bag Free Day 2022: ಪ್ಲಾಸ್ಟಿಕ್ ಮುಕ್ತ ವಿಶ್ವದತ್ತ ಸದೃಢ ಹೆಜ್ಜೆಯ ಸಂಕಲ್ಪಕ್ಕೆ ಇಂದು ಶುಭದಿನ
ಪ್ಲಾಸ್ಟಿಕ್ ಬಳಕೆ ಕಡಿಮೆಯಾದರೆ ಮಾತ್ರ ಪರಿಸರ ಉಳಿಯಲು ಸಾಧ್ಯ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jul 03, 2022 | 8:18 AM

ಹವಾಮಾನ ವೈಪರಿತ್ಯ (Climate Change) ಇಂದು ವಿಶ್ವದ ದೊಡ್ಡ ಸಮಸ್ಯೆಯಾಗಿದೆ. ಪ್ರತಿ ವರ್ಷ ಜುಲೈ 3ರಂದು ‘ವಿಶ್ವ ಪ್ಲಾಸ್ಟಿಕ್ ಬ್ಯಾಗ್ ಮುಕ್ತ ದಿನ’ವಾಗಿ (International Plastic Bag Free Day 2022) ಆಚರಿಸುವ ಮೂಲಕ ಪ್ಲಾಸ್ಟಿಕ್ ಮುಕ್ತ ಜಗತ್ತಿನತ್ತ ಹೆಜ್ಜೆ ಇಡಲು ಸಂಕಲ್ಪ ಮಾಡಲಾಗುತ್ತದೆ. ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಲು, ನಿರ್ಬಂಧಿಸಲು ಹಲವು ಹೊಸ ಕ್ರಮಗಳನ್ನು ಈ ದಿನದಂದು ಘೋಷಿಸುವುದು ವಾಡಿಕೆ. ಪ್ಲಾಸ್ಟಿಕ್​​ನಿಂದ ವಿಶ್ವಕ್ಕೆ ಎದುರಾಗಿರುವ ಕಂಟಕಗಳು ಹತ್ತು ಹಲವು. ಏಕಬಳಕೆ ಪ್ಲಾಸ್ಟಿಕ್ ಉತ್ಪನ್ನಗಳನ್ನು ಒಮ್ಮೆ ಬಳಸಿದ ನಂತರ ಮತ್ತೊಮ್ಮೆ ಬಳಸಲು ಸಾಧ್ಯವಾಗುವುದಿಲ್ಲ. ಅವು ವ್ಯರ್ಥವಾಗುತ್ತವೆ. ಭಾರತದಲ್ಲಿ ಮೊನ್ನೆಯಿಂದ (ಜುಲೈ 1) ಏಕಬಳಕೆ ಪ್ಲಾಸ್ಟಿಕ್ ಮೇಲೆ ಕಟ್ಟುನಿಟ್ಟಿನ ನಿರ್ಬಂಧದ ಆದೇಶ ಜಾರಿಯಾಗಿದೆ. ಪ್ಲಾಸ್ಟಿಕ್ ಬ್ಯಾಗ್, ಸ್ಟ್ರಾ (ಪೈಪ್), ಕಾಫಿ ಕಪ್​ಗಳು, ಸೋಡಾ, ನೀರಿನ ಬಾಟಲಿ ಮತ್ತು ಬಹುತೇಕ ಆಹಾರ ಉತ್ಪನ್ನಗಳ ಪ್ಯಾಕೇಜಿಂಗ್​ಗೆ ಬಳಸುವ ಪ್ಲಾಸ್ಟಿಕ್​ಗಳಿಗೆ ನಿರ್ಬಂಧ ಹೇರಲಾಗಿದೆ.

ಪ್ಲಾಸ್ಟಿಕ್ ವಿರುದ್ಧದ ಪರಿಸರವಾದಿಗಳು ಹತ್ತಾರು ವರ್ಷಗಳಿಂದ ಹೋರಾಡುತ್ತಿದ್ದಾರೆ. 1997ರಲ್ಲಿ ಸಾಗರದಲ್ಲಿ ದೊಡ್ಡ ಪ್ಲಾಸ್ಟಿಕ್ ಪ್ಯಾಚ್ (The Great Plastic Patch) ಕಂಡು ಬಂತು. ಅದಾದ ನಂತರ ವಿಶ್ವದ ಹಲವು ದೇಶಗಳಲ್ಲಿ ಪ್ಲಾಸ್ಟಿಕ್ ಬಳಕೆಯ ಅಪಾಯಗಳ ಬಗ್ಗೆ ಚರ್ಚೆ ಆರಂಭವಾಯಿತು.

2002ರಲ್ಲಿ ಬಾಂಗ್ಲಾದೇಶವು ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಿತು. ಈ ಮೂಲಕ ವಿಶ್ವದಲ್ಲಿ ಏಕಬಳಕೆ ಪ್ಲಾಸ್ಟಿಕ್ ನಿಷೇಧಿಸಿದ ಮೊದಲ ದೇಶವಾಯಿತು. ಚರಂಡಿಗಳಲ್ಲಿ ಪ್ಲಾಸ್ಟಿಕ್ ಕಟ್ಟಿಕೊಳ್ಳುತ್ತಿರುವುದರಿಂದ ರಸ್ತೆಗಳ ಮೇಲೆ ನೀರು ಹರಿದು, ತೊಂದರೆಯಾಗುತ್ತಿತ್ತು. ಇದನ್ನು ಮನಗಂಡ ಬಾಂಗ್ಲಾ ಸರ್ಕಾರ ಪ್ಲಾಸ್ಟಿಕ್​ಗೆ ನಿರ್ಬಂಧ ಹೇರಿತು. ಮಳೆ ಪ್ರಮಾಣ ಹೆಚ್ಚಾಗಿರುವ ಬಾಂಗ್ಲಾದಲ್ಲಿ ಪ್ರವಾಹ ದೊಡ್ಡ ಸಮಸ್ಯೆ. ಪ್ಲಾಸ್ಟಿಕ್​ನಿಂದ ನೀರಿನ ಸಹಜ ಹರಿವಿಗೆ ತೊಂದರೆಯಾಗಿ, ಪ್ರವಾಹ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿತ್ತು. ಪ್ಲಾಸ್ಟಿಕ್ ನಿಷೇಧದ ಮೂಲಕ ಈ ಸಮಸ್ಯೆ ಪರಿಹರಿಸಿಕೊಳ್ಳಲು ಬಾಂಗ್ಲಾ ಯತ್ನಿಸಿತು.

ಇದನ್ನೂ ಓದಿ
Image
Plastic Ban: ಇಂದಿನಿಂದ ಜೀವನಶೈಲಿ ಬದಲಾಯಿಸಿ; ಪ್ಲಾಸ್ಟಿಕ್ ಬದಲು ಈ ಪರಿಸರಸ್ನೇಹಿ ವಸ್ತುಗಳನ್ನು ಬಳಸಿ
Image
Plastic Ban: ಇಂದಿನಿಂದ ಏಕ ಬಳಕೆಯ ಪ್ಲಾಸ್ಟಿಕ್​ಗೆ ನಿಷೇಧ; 1 ಲಕ್ಷ ರೂ. ದಂಡ ಕಟ್ಟಬೇಕಾದೀತು ಹುಷಾರ್!
Image
ಫ್ರೂಟಿ, ಟ್ರೋಫಿಕಾನಾ, ಆ್ಯಪಿ ಟೆಟ್ರಾ ಪ್ಯಾಕ್​ಗೆ ಜುಲೈ 1ರಿಂದ ನಿಷೇಧ?; ಇಲ್ಲಿದೆ ಮಾಹಿತಿ
Image
Amul: ಪ್ಲಾಸ್ಟಿಕ್ ಸ್ಟ್ರಾ ಬ್ಯಾನ್ ಮಾಡದಂತೆ ಪ್ರಧಾನಿ ಮೋದಿಗೆ ಅಮುಲ್ ಮನವಿ; ಕಾರಣವೇನು?

ಇದನ್ನೂ ಓದಿ: Plastic Ban: ಇಂದಿನಿಂದ ಜೀವನಶೈಲಿ ಬದಲಾಯಿಸಿ; ಪ್ಲಾಸ್ಟಿಕ್ ಬದಲು ಈ ಪರಿಸರಸ್ನೇಹಿ ವಸ್ತುಗಳನ್ನು ಬಳಸಿ

ಪ್ಲಾಸ್ಟಿಕ್ ಬ್ಯಾಗ್ ಮುಕ್ತ ದಿನದ ಮೂಲಕ ಪ್ಲಾಸ್ಟಿಕ್ ಬಳಕೆಯ ಅಪಾಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪರಿಸರಪ್ರಿಯರು ಯತ್ನಿಸುತ್ತಾರೆ. ಏಕಬಳಕೆ ಪ್ಲಾಸ್ಟಿಕ್​ನಿಂದ ತಯಾರಿಸಿದ ವಸ್ತುಗಳು ನಮ್ಮ ಜಲಮೂಲಗಳನ್ನು ಕಲುಷಿತಗೊಳಿಸುತ್ತವೆ. ನದಿ, ಸಮುದ್ರಗಳನ್ನು ತಲುಪುವ ಪ್ಲಾಸ್ಟಿಕ್​ಗಳು ಜಲಚರಗಳ ಜೀವಕ್ಕೆ ಕಂಟಕವಾಗಿವೆ. ಮೈಕ್ರೊಪ್ಲಾಸ್ಟಿಕ್ ಸೇವಿಸಿ ಎಷ್ಟೋ ಮೀನು ಮತ್ತಿತರ ಜೀವಿಗಳು ಸಾವನ್ನಪ್ಪಿವೆ. ಇಂಥ ಜಲಚರಗಳನ್ನು ಸೇವಿಸುವ ಮನುಷ್ಯರ ಅರೋಗ್ಯವೂ ಹಾಳಾಗುತ್ತಿದೆ.

ಪ್ರತಿವರ್ಷ ಸುಮಾರು 3 ಕೋಟಿ ಟನ್ ಪುನರ್​ಬಳಕೆ ಸಾಧ್ಯವಿಲ್ಲದ ಪ್ಲಾಸ್ಟಿಕ್ ಉತ್ಪಾದನೆಯಾಗುತ್ತಿದೆ. ವಿಶ್ವದಲ್ಲಿ ಕೇವಲ ಶೇ 10ರಷ್ಟು ಪ್ಲಾಸ್ಟಿಕ್ ವಸ್ತುಗಳು ಪುನರ್​ ಬಳಕೆಯಾಗುತ್ತಿದೆ. ಪ್ಲಾಸ್ಟಿಕ್ ವಸ್ತುಗಳ ಪುನರ್​ ಬಳಕೆಯು ತುಂಬಾ ಸಂಕೀರ್ಣ ಪ್ರಕ್ರಿಯೆಯಾಗಿದೆ. ಭಾರತ, ಬಾಂಗ್ಲಾದೇಶ, ಚೀನಾ, ಇಟಲಿ ಸೇರಿದಂತೆ ಹಲವು ದೇಶಗಳಲ್ಲಿ ಏಕಬಳಕೆ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣ ನಿರ್ಬಂಧಿಸಲಾಗಿದೆ. ಪ್ಲಾಸ್ಟಿಕ್ ಮಾಲಿನ್ಯಕ್ಕೆ ಕಡಿವಾಣ ಹಾಕಲೆಂದು ಸರ್ಕಾರಗಳು ಈ ಕ್ರಮ ತೆಗೆದುಕೊಂಡಿವೆ.

ಪ್ಲಾಸ್ಟಿಕ್ ಬಳಕೆ ವಿರುದ್ಧದ ಆಂದೋಲನ ಮೊದಲು ನಮ್ಮ ಮನೆಗಳಿಂದಲೇ ಆರಂಭವಾಗಬೇಕಿದೆ. ಅಂಗಡಿಗಳಿಗೆ ಹೋಗುವಾಗ ಕೈಲಿ ಬಟ್ಟೆ ಚೀಲ ಹಿಡಿದುಕೊಂಡು ಹೋಗುವುದನ್ನು ನಾವು ರೂಢಿಸಿಕೊಳ್ಳಬೇಕು. ಅಂಗಡಿಗಳ ಮಾಲೀಕರು ಗ್ರಾಹಕರಿಗೆ ಪ್ಲಾಸ್ಟಿಕ್ ಚೀಲ ಕೊಡುವುದು ನಿಲ್ಲಿಸಿ, ಜಾಗೃತಿ ಮೂಡಿಸಬೇಕಿದೆ.