ಬಬಲ್ ಮ್ಯಾಜಿಕ್: ಸೋಪ್ ಬಬಲ್ ಒಳಗೆ ಬರೋಬ್ಬರಿ 783 ಸಣ್ಣ ಗುಳ್ಳೆಗಳನ್ನು ಸೃಷ್ಟಿಸಿ ದಾಖಲೆ!
ಗುಳ್ಳೆಯೊಳಗೆ ಗುಳ್ಳೆಯಂತೆ ಬರೋಬ್ಬರಿ 783 ಬಬಲ್ಗಳನ್ನು ಸೃಷ್ಟಿಸಿ ಗಿನ್ನಿಸ್ ದಾಖಲೆ ಬರೆದ ಚಾಂಗ್.
ಮಕ್ಕಳೆಲ್ಲಾ ಒಂದೊಂದು ಗುಳ್ಳೆಗಳನ್ನು ಊದಿ, ಹಾರಿಸಿ ಸಂತಸಪಡುತ್ತಾರೆ. ಅದನ್ನು ಹಿಡಿಯಲು, ಅಂಗೈಯಲ್ಲಿ ಇಟ್ಟು ನೋಡಲು ಕಾಯುತ್ತಾರೆ. ಆದರೆ, ಆ ಗುಳ್ಳೆಗಳು ಅಷ್ಟು ಹೊತ್ತು ಇರುವುದಿಲ್ಲ. ಸಣ್ಣ ಗಾಳಿಗೋ ಬಬಲ್ ಚಲನೆಗೋ ಒಡೆದು ಹೋಗುತ್ತದೆ. ಒಂದು ಬಬಲ್ ಸೃಷ್ಟಿಸೋದೆ ಕಷ್ಟ ಅನಿಸಿಬಿಡುತ್ತದೆ. ಆದರೆ, ಈ ವ್ಯಕ್ತಿ ಗುಳ್ಳೆಯೊಳಗೆ ಗುಳ್ಳೆಯಂತೆ ಬರೋಬ್ಬರಿ 783 ಬಬಲ್ಗಳನ್ನು ಸೃಷ್ಟಿಸಿ ಸಾಧನೆ ಮಾಡಿದ್ದಾರೆ.
ಬಬಲ್ ಒಳಗೆ ಬಬಲ್ನಂತೆ 783 ಗುಳ್ಳೆಗಳನ್ನು ಸೃಷ್ಟಿಸಿದ್ದಾರೆ. ಆ ಮೂಲಕ, ಗಿನ್ನಿಸ್ ವಿಶ್ವ ದಾಖಲೆ ಕೂಡ ಮಾಡಿದ್ದಾರೆ. ಗಿನ್ನಿಸ್ ವಿಶ್ವ ದಾಖಲೆ ತಂಡ ಸದ್ಯ ತನ್ನ ಅಧಿಕೃತ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿರುವ ಈ ಬಬಲ್ ವಿಡಿಯೊ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ. ಗಿನ್ನಿಸ್ ರೆಕಾರ್ಡ್ ಬುಕ್ನಲ್ಲಿ ದಾಖಲೆ ಬರೆದ ಪ್ರತಿಭಾವಂತನ ಸಾಧನೆಯ ಕಥೆ ಇದು. ನಮಗೆಲ್ಲ ಅಸಾಧ್ಯ ಎಂದೆನಿಸುವ ವಿಷಯ ಇಲ್ಲೊಬ್ಬ ಪ್ರತಿಭಾವಂತ ವ್ಯಕ್ತಿಗೆ ಸಾಧ್ಯವಾಗಿದೆ. ಈ ದಾಖಲೆ ಬರೆದ ವ್ಯಕ್ತಿಯ ಹೆಸರು ಚಾಂಗ್.
ಅಂದಹಾಗೆ, ಗಿನ್ನಿಸ್ ದಾಖಲೆಯ ವಿಡಿಯೊ ನೋಡುವುದೇ ಖುಷಿ. ದಾಖಲೆ ಬರೆಯಲೇಬೇಕೆಂದು ಉತ್ಸಾಹದಲ್ಲಿ ಹೆಜ್ಜೆ ಇಟ್ಟವರು, ಇಲ್ಲಿ ತಮ್ಮ ವಿಭಿನ್ನ ಪ್ರಯತ್ನದ ಮೂಲಕವೇ ಎಲ್ಲರನ್ನು ಚಕಿತಗೊಳಿಸುತ್ತಾರೆ. ಅದೇ ರೀತಿ ಈಗ ಈ ವಿಡಿಯೊ ಸಹ ವೈರಲ್ ಆಗಿ ನೆಟ್ಟಿಗರ ಗಮನ ಸೆಳೆಯುತ್ತಿದೆ. ಇವರು ದಾಖಲೆ ಮಾಡುವ ವಿಡಿಯೊವನ್ನು ಈಗ ಎಲ್ಲರೂ ಬಹು ಕುತೂಹಲದಿಂದ ನೋಡುತ್ತಿದ್ದಾರೆ.
ಸ್ಕೇಟಿಂಗ್ನಲ್ಲಿ ಗಿನ್ನಿಸ್ ದಾಖಲೆ ನಿರ್ಮಿಸಿದ ಕುಂದಾನಗರಿ ಕುವರ ಅಭಿಷೇಕ್ ನವಲೆ; ದರ್ಶನ್ ನೀಡಿದ್ದರು ನೆರವು
Published On - 8:51 pm, Sun, 17 January 21