AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

National Farmers Day 2020 | ಕೃಷಿ ಆಸಕ್ತಿಗೆ ನೀರೆರೆಯುವ ಫೇಸ್​ಬುಕ್ ಪುಟಗಳು

ಕೃಷಿಗೆ ಸಂಬಂಧಿಸಿದ ಫೇಸ್​ಬುಕ್ ಪುಟಗಳ ಪರಿಚಯವನ್ನು ಇಲ್ಲಿ ಮಾಡಿಕೊಡ್ತೀವಿ. ಕೃಷಿಯಲ್ಲಿ ಜೀವನ ಕಟ್ಟಿಕೊಳ್ಳಲು ಬೇಕಾದ ಸಲಹೆ, ಸೂಚನೆಗಳನ್ನು ನೀಡುವ ಈ ಫೇಸ್​ಬುಕ್ ಪುಟಗಳು ಕೃಷಿ ಸಾಹಸಗಳಿಗೆ ಒಂದಿಷ್ಟು ಸಾಥ್ ನೀಡುತ್ತವೆ.

National Farmers Day 2020 | ಕೃಷಿ ಆಸಕ್ತಿಗೆ ನೀರೆರೆಯುವ ಫೇಸ್​ಬುಕ್ ಪುಟಗಳು
ಪ್ರಾತಿನಿಧಿಕ ಚಿತ್ರ
ಆಯೇಷಾ ಬಾನು
|

Updated on:Dec 24, 2020 | 6:35 AM

Share

ಕೊರೊನಾ ನಂತರ ಹಲವರು ವ್ಯವಸಾಯ ಮಾಡೋಕೆ ಶುರು ಮಾಡಿದ್ದಾರೆ. ಯುವ ರೈತರು, ತಮ್ಮ ಬೆಳೆ, ಕೃಷಿ ಬಗ್ಗೆ ಚರ್ಚಿಸಲು, ಕೃಷಿ ಬಗ್ಗೆ ಮಾಹಿತಿ ಪಡೆಯಲು ಸಾಮಾಜಿಕ ಜಾಲತಾಣಗಳ ಮೊರೆ ಹೋಗಿದ್ದಾರೆ. ವಿಷಯಗಳನ್ನು ರವಾನಿಸಲು ಹಾಗೂ ಗೊತ್ತಿಲ್ಲದ ವಿಷಯಗಳನ್ನು ಬೇಗ ತಿಳಿದುಕೊಳ್ಳಲು ಜನ ಫೇಸ್​ಬುಕ್, ಟ್ವಿಟರ್​ನಂಥ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ಸಮಯ ಕಳೆಯುತ್ತಾರೆ. ಅದರಂತೆ ಯುವ ರೈತರು ಫೇಸ್​ಬುಕ್ ಪುಟಗಳ ಮೂಲಕ ಕೃಷಿಯನ್ನು ಮತ್ತಷ್ಟು ಬೆಳೆಸುವ ಮಾರ್ಗವನ್ನು ಕಂಡು ಕೊಂಡಿದ್ದಾರೆ.

ಹಾಗಾದ್ರೆ ಬನ್ನಿ ಕೃಷಿಗೆ ಸಂಬಂಧಿಸಿದ ಫೇಸ್​ಬುಕ್ ಪುಟಗಳ ಪರಿಚಯವನ್ನು ಇಲ್ಲಿ ಮಾಡಿಕೊಡ್ತೀವಿ. ಕೃಷಿಯಲ್ಲಿ ಜೀವನ ಕಟ್ಟಿಕೊಳ್ಳಲು ಬೇಕಾದ ಸಲಹೆ, ಸೂಚನೆಗಳನ್ನು ನೀಡುವ ಈ ಫೇಸ್​ಬುಕ್ ಪುಟಗಳು ಕೃಷಿ ಸಾಹಸಗಳಿಗೆ ಒಂದಿಷ್ಟು ಸಾಥ್ ನೀಡುತ್ತವೆ.

ಕೃಷಿ ಮಾಹಿತಿ (Agriculture information) ಕೃಷಿ ಮಾಹಿತಿ ಗ್ರೂಪಿನಲ್ಲಿ ಕೃಷಿಕರಿಗೆ ಜಾಗೃತಿ ಮೂಡಿಸುವುದು ಹಾಗೂ ಕೃಷಿಗೆ ಸಂಬಂಧ ಪಟ್ಟ ಮಾಹಿತಿಗಳು, ಹೊಸ ತಂತ್ರಜ್ಞಾನ ಬಗ್ಗೆ ಹೆಚ್ಚಿನ ವಿವರ ನೀಡಲಾಗುತ್ತೆ.

ಸಾವಯವ ಕೃಷಿ ಗುಂಪು (Organic Agriculture Group of India) ಈ ಗ್ರೂಪಿನಲ್ಲಿ ಸಾವಯವ ಕೃಷಿ ಬಗ್ಗೆ ಚರ್ಚೆ ನಡೆಸಲಾಗುತ್ತೆ. ಬೆಳೆ ಬೆಳೆಯುವುದರ ಬಗ್ಗೆ ಯಾವುದೇ ಮಾಹಿತಿ ಬೇಗಾದರೂ ಇಲ್ಲಿಂದ ಪಡೆಯಬಹುದು. ಯುವ ಪೀಳಿಗೆಗೆ ಸಾವಯುವ ಕೃಷಿ ಬಗ್ಗೆ ಒಲವು ಮೂಡಿಸುವ ಕಾರ್ಯ ಮಾಡುತ್ತಿದೆ.

ಕರ್ನಾಟಕ ಕೃಷಿ ಭಾರತೀಯ ರೈತರು (Karnataka agriculture farmars off indian) ಈ ಗ್ರೂಪಿನಲ್ಲಿ ರೈತರು ತಿಳಿದುಕೊಳ್ಳಬೇಕಾಗಿರುವ ಸರ್ಕಾರದ ಯೋಜನೆಗಳು ಹಾಗೂ ಸರ್ಕಾರ ರೈತರ ಬಗ್ಗೆ ತೆಗೆದುಕೊಳ್ಳುತ್ತಿರುವ ನಿರ್ಧಾರಗಳ ಬಗ್ಗೆ ಮಾಹಿತಿ ನೀಡಲಾಗಿದೆ. ರೈತರು ತಮ್ಮ ಬೆಳೆಯನ್ನು ಇಲ್ಲಿ ಪ್ರಮೋಟ್ ಮಾಡಿಕೊಳ್ಳಬಹುದು. ಜನ ಸಾಮಾನ್ಯರು ಸಹ ಈ ಫೇಸ್​ಬುಕ್ ಪುಟದ ಸಹಾಯದಿಂದ ಎಲ್ಲೆಲ್ಲಿ ಯಾವ ಯಾವ ಪದಾರ್ಥಗಳು ಕಡಿಮೆ ಬೆಲೆಗೆ ದೊರೆಯುತ್ತವೆ ಎಂಬ ಮಾಹಿತಿಯನ್ನೂ ತಿಳಿಯಬಹುದಾಗಿದೆ.

ಆಧುನಿಕ ಕೃಷಿ ಅಳವಡಿಕೆಗಳು (Modern Agricultural Implements (Sonu Agro Engineering) ಈ ಗ್ರೂಪ್ ಎಲ್ಲಾ ರೈತರು ಮತ್ತು ಕೃಷಿ ಉಪಕರಣಗಳ ವಿತರಕರಿಗೆ ಜ್ಞಾನ ಹಂಚುವ ಕೆಲಸ ಮಾಡಿತ್ತಿದೆ. ಆಧುನಿಕ ಕೃಷಿ ಉಪಕರಣಗಳ ಸಹಾಯದಿಂದ ಕೃಷಿ ಮಾಡುವ ಹೊಸ ತಂತ್ರಜ್ಞಾನದ ಪರಿಚಯ ಮಾಡಿಕೊಡುತ್ತಿದೆ. ಆಧುನಿಕ ಕೃಷಿ ಉಪಕರಣಗಳ ಮೂಲಕ ಎಲ್ಲಾ ರೈತರು ಆಧುನಿಕ ಕೃಷಿ ತಂತ್ರಜ್ಞಾನದ ಬಗ್ಗೆ ತಿಳಿದುಕೊಳ್ಳಬಹುದು.

ಭಾರತೀಯ ರೈತರು (INDIAN FARMERS) ಈ ಫೇಸ್​ಬುಕ್ ಪುಟದ ಮೂಲಕ ಭಾತರದಲ್ಲಿ ರೈತರು ಅನುಭವಿಸುತ್ತಿರುವ ಕಷ್ಟಗಳು ಹಾಗೂ ಅದರ ಪರಿಹಾರದ ಬಗ್ಗೆ ಚರ್ಚಿಸಲಾಗುತ್ತೆ.

ಕೃಷಿ ಕಿರಣ.. ಇದರಲ್ಲಿ ಕೃಷಿಗೆ ಸಂಬಂಧಿಸಿದ ವಿಚಾರ, ಫೋಟೋ, ವೀಡಿಯೊಗಳನ್ನು ಹಂಚಿಕೊಳ್ಳಲಾಗುತ್ತೆ.

ಕೃಷಿ ಗುಂಪು (agriculture group) ಇದರಲ್ಲಿ ವ್ಯವಸಾಯಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ನೀಡಲಾಗುತ್ತೆ. ರೈತರು ತಮ್ಮ ತೋಟದಲ್ಲಿ ಬೆಳೆಯುವ ಬೆಳೆಯ ಮಾಹಿತಿ ಹಾಗೂ ಫೋಟೋಗಳನ್ನು ಫೋಸ್ಟ್ ಮಾಡುವ ಮೂಲಕ ಇತರ ರೈತರಲ್ಲೂ ಕೃಷಿಯ ಉತ್ಸಾಹ ತುಂಬುವಂತೆ ಮಾಡುತ್ತಾರೆ.

ಮನೆಯಲ್ಲಿ ತೋಟಗಾರಿಕೆ, ಸಾವಯವ ಕೃಷಿ ಮತ್ತು ಮಿಶ್ರಗೊಬ್ಬರ (IDEH) Home Gardening, Organic Farming & Composting (IDEH) ಈ ಫೇಸ್​ಬುಕ್ ಪುಟದಲ್ಲಿ ದೈನಂದಿನ ಜೀವನದಲ್ಲಿ ಆರೋಗ್ಯ, ಉತ್ತಮ ಆಹಾರ ಪದ್ಧತಿಗೆ ಕೃಷಿಯ ಬಳಕೆ. ಸಾವಯವ ಕೃಷಿ ಮತ್ತು ಮಿಶ್ರಗೊಬ್ಬರ ಹಾಗೂ ಮನೆಯಲ್ಲಿಯೇ ಯಾವ ರೀತಿ ಕೃಷಿ ಮಾಡಬಹುದು ಎಂಬುದರ ಬಗ್ಗೆ ಮಾಹಿತಿ ನೀಡಲಾಗುತ್ತೆ.

Published On - 6:00 pm, Wed, 23 December 20

ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ