AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಚಿಕಿತ್ಸೆಗೆ ಶತಮಾನದ ಸಂಜೀವಿನಿ, ಇಂದಿನಿಂದ ರಾಜ್ಯದಲ್ಲೂ ಪ್ಲಾಸ್ಮಾ ಥೆರಪಿ

ಬೆಂಗಳೂರು: ಡೆಡ್ಲಿ ಕೊರೊನಾ ವಿರುದ್ಧ ಯಾವುದೇ ಲಸಿಕೆ ವರ್ಕ್ ಆಗ್ತಿಲ್ಲ. ಅಕಸ್ಮಾತ್ ಒಂದು ಔಷಧ ವರ್ಕ್ ಆಯ್ತು ಅಂತಾ ಮತ್ತೆ ಅದೇ ಮದ್ದನ್ನು ಇನ್ನೊಬ್ಬ ರೋಗಿಗೆ ಕೊಟ್ರೆ, ಮಟಾಷ್.. ಹೇಗ್ ಹೇಗೋ ಆಡ್ತಿರೋ ಕೊರೊನಾ ವೈರಸ್​ಗೆ ಒಂದು ಗತಿ ಕಾಣಿಸೋಕೆ ಆಗ್ತಾನೆ ಇಲ್ಲ. ಆಧುನಿಕ ಜಗತ್ತಿನ ತಂತ್ರಜ್ಞಾನಗಳನ್ನ ಬುಡಮೇಲು ಮಾಡುವಷ್ಟು ಸಾಮರ್ಥ್ಯವಿರುವ ಈ ಪೀಡೆ ಕೊರೊನಾ ವಿರುದ್ಧ ಬ್ರಹ್ಮಾಸ್ತ್ರವೊಂದು ಸಿಕ್ಕಿದೆ. ನಮ್ಮ ರಾಜ್ಯದಲ್ಲೂ ಆ ಚಿಕಿತ್ಸಾ ವಿಧಾನ ಆರಂಭವಾಗ್ತಿದೆ. ‘ಕೊರೊನಾ’ ವಿರುದ್ಧದ ಹೋರಾಟದಲ್ಲಿ ಈ ದಿನ ಅವಿಸ್ಮರಣೀಯ..! […]

ಕೊರೊನಾ ಚಿಕಿತ್ಸೆಗೆ ಶತಮಾನದ ಸಂಜೀವಿನಿ, ಇಂದಿನಿಂದ ರಾಜ್ಯದಲ್ಲೂ ಪ್ಲಾಸ್ಮಾ ಥೆರಪಿ
ಸಾಧು ಶ್ರೀನಾಥ್​
|

Updated on:Apr 25, 2020 | 10:26 AM

Share

ಬೆಂಗಳೂರು: ಡೆಡ್ಲಿ ಕೊರೊನಾ ವಿರುದ್ಧ ಯಾವುದೇ ಲಸಿಕೆ ವರ್ಕ್ ಆಗ್ತಿಲ್ಲ. ಅಕಸ್ಮಾತ್ ಒಂದು ಔಷಧ ವರ್ಕ್ ಆಯ್ತು ಅಂತಾ ಮತ್ತೆ ಅದೇ ಮದ್ದನ್ನು ಇನ್ನೊಬ್ಬ ರೋಗಿಗೆ ಕೊಟ್ರೆ, ಮಟಾಷ್.. ಹೇಗ್ ಹೇಗೋ ಆಡ್ತಿರೋ ಕೊರೊನಾ ವೈರಸ್​ಗೆ ಒಂದು ಗತಿ ಕಾಣಿಸೋಕೆ ಆಗ್ತಾನೆ ಇಲ್ಲ. ಆಧುನಿಕ ಜಗತ್ತಿನ ತಂತ್ರಜ್ಞಾನಗಳನ್ನ ಬುಡಮೇಲು ಮಾಡುವಷ್ಟು ಸಾಮರ್ಥ್ಯವಿರುವ ಈ ಪೀಡೆ ಕೊರೊನಾ ವಿರುದ್ಧ ಬ್ರಹ್ಮಾಸ್ತ್ರವೊಂದು ಸಿಕ್ಕಿದೆ. ನಮ್ಮ ರಾಜ್ಯದಲ್ಲೂ ಆ ಚಿಕಿತ್ಸಾ ವಿಧಾನ ಆರಂಭವಾಗ್ತಿದೆ.

‘ಕೊರೊನಾ’ ವಿರುದ್ಧದ ಹೋರಾಟದಲ್ಲಿ ಈ ದಿನ ಅವಿಸ್ಮರಣೀಯ..! ಅದೆಲ್ಲಿಂದ ಬಂತು ಅನ್ನೋದರ ಬಗ್ಗೆ ಇನ್ನೂ ಕನ್ಫರ್ಮೇಷನ್ ಇಲ್ಲ. ಹೇಗೆಲ್ಲಾ ವರ್ತಿಸುತ್ತೆ ಅನ್ನೋದನ್ನ ಪಕ್ಕಾ ಹೇಳೋದಕ್ಕೂ ಆಗಲ್ಲ. ಅಷ್ಟಕ್ಕೂ ಕೊರೊನಾ ಕೊಡ್ತಿರೋ ಕಾಟಕ್ಕೆ ವಿಜ್ಞಾನಿಗಳೇ ಬೆಚ್ಚಿಬಿದ್ದಿದ್ದಾರೆ. ವೈರಸ್ ಹಾವಳಿಗೆ ಬ್ರೇಕ್ ಹಾಕಲು ವೈದ್ಯ ವೃಂದ ಸರ್ಕಸ್ ಮಾಡ್ತಿದೆ. ಆದ್ರೆ ಯಾವುದರಲ್ಲೂ ಪರ್ಫೆಕ್ಟ್ ರಿಸಲ್ಟ್ ಸಿಗ್ತಿಲ್ಲ. ಈ ಹೊತ್ತಲ್ಲೇ ‘ಪ್ಲಾಸ್ಮಾ ಥೆರಪಿ’ ಅನ್ನೋ ಬ್ರಹ್ಮಾಸ್ತ್ರವೊಂದು ಕೊರೊನಾ ವಿರುದ್ಧ ಪ್ರಯೋಗಕ್ಕೆ ಸಿದ್ಧವಾಗಿದೆ. ಈಗಾಗಲೇ ದೇಶದಲ್ಲಿ ವಿವಿಧ ರಾಜ್ಯಗಳು ಈ ಚಿಕಿತ್ಸಾ ವಿಧಾನ ಅನುಸರಿಸಿ ಸಕ್ಸಸ್ ಆಗಿದ್ದು, ಕರ್ನಾಟಕದಲ್ಲೂ ಇಂದಿನಿಂದ ‘ಪ್ಲಾಸ್ಮಾ ಥೆರಪಿ’ ಟ್ರೀಟ್​ಮೆಂಟ್ ಅಧಿಕೃತವಾಗಿ ಆರಂಭಿಸಲಾಗುತ್ತಿದೆ.

‘ಪ್ಲಾಸ್ಮಾ ಥೆರಪಿ’ಗೆ ಸಿದ್ಧವಾಗಿದೆ ಬೆಂಗಳೂರು ಮೆಡಿಕಲ್ ಕಾಲೇಜು..!  ಯೆಸ್ ‘ಪ್ಲಾಸ್ಮಾ ಥೆರಪಿ’ ಅನ್ನೋದು ‘ಕೊರೊನಾ’ ವಿರುದ್ಧ ಒಂದು ಬ್ರಹ್ಮಾಸ್ತ್ರವೇ ಸರಿ. ಜಗತ್ತಿನಲ್ಲಿ ಈಗಾಗಲೇ ಲಕ್ಷಾಂತರ ಜನರನ್ನು ಬಲಿ ಪಡೆದಿರುವ ಮಹಾಮಾರಿಗೆ ಒಂದು ಗತಿ ಕಾಣಿಸಲು ಅಗತ್ಯವಾದ ಮದ್ದು ಸಿಗ್ತಾನೇ ಇಲ್ಲ. ಹೀಗಾಗಿ ಕ್ಷಣದಿಂದ ಕ್ಷಣಕ್ಕೆ, ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ. ಈ ಹೊತ್ತಲ್ಲೇ ಸಂಶೋಧಕರು ‘ಕೊವಿಡ್-19’ ವಿರುದ್ಧ ಪ್ಲಾಸ್ಮಾ ಥೆರಪಿ ಮೊರೆ ಹೋಗಿದ್ದಾರೆ. ಭಾರತೀಯರಾಗಿ ಇದು ಹೆಮ್ಮೆ ಸಂಗತಿ.

ಯಾಕಂದ್ರೆ ಕೊರೊನಾ ವಿರುದ್ಧ ಹೋರಾಟದಲ್ಲಿ ಪ್ಲಾಸ್ಮಾ ಥೆರಪಿ ಎಷ್ಟು ಪರಿಣಾಮಕಾರಿ ಅನ್ನೋದನ್ನ ಭಾರತೀಯ ಸಂಶೋಧಕರೇ ವಿಶ್ವಕ್ಕೆ ಪರಿಚಯಿಸಿದ್ದಾರೆ. ಈಗಾಗ್ಲೇ ಹಲವು ರಾಜ್ಯಗಳಲ್ಲಿ ಪ್ಲಾಸ್ಮಾ ಥೆರಪಿ ಮೂಲಕ ಚಿಕಿತ್ಸೆ ನೀಡಲಾಗ್ತಿದೆ. ಇಂದಿನಿಂದ ರಾಜ್ಯದಲ್ಲೂ ಪ್ಲಾಸ್ಮಾ ಥೆರಪಿ ಆರಂಭವಾಗ್ತಿದ್ದು, ಬೆಂಗಳೂರು ಮೆಡಿಕಲ್ ಕಾಲೇಜು ಇದಕ್ಕಾಗಿ ಸಿದ್ಧವಾಗಿದೆ. ಚಿಕಿತ್ಸೆ ವಿಧಾನವನ್ನ ಡೀಟೇಲ್ ಆಗಿ ನೋಡೋದಾದ್ರೆ.

ಶತಮಾನದ ಸಂಜೀವಿನಿ..! ‘ಪ್ಲಾಸ್ಮಾ ಥೆರಪಿ’ಗಾಗಿ ಗುಣಮುಖನಾದ ವ್ಯಕ್ತಿಯಿಂದ ರಕ್ತದಲ್ಲಿನ ರೋಗನಿರೋಧಕ ಸಂಗ್ರಹಿಸುತ್ತಾರೆ. ಇನ್ನು ರಕ್ತದಲ್ಲಿ ಸಂಗ್ರಹವಾಗಿರುವ ಈ ಪ್ಲಾಸ್ಮಾ ದೇಹದಲ್ಲಿರುವ ರೋಗನಿರೋಧಕ ಶಕ್ತಿಯಾಗಿರುತ್ತದೆ. ಈ ಮೊದಲು ಕೊರೊನಾದಿಂದ ಗುಣಮುಖರಾದ ವ್ಯಕ್ತಿಯಿಂದ ‘ಪ್ಲಾಸ್ಮಾ’ ಸಂಗ್ರಹ ಮಾಡಲಾಗುತ್ತದೆ. ನಂತರ ಕೊರೊನಾ ವೈರಸ್​ನಿಂದ ಬಳಲುತ್ತಿರುವ ವ್ಯಕ್ತಿ ದೇಹಕ್ಕೆ ಇದೇ ‘ಪ್ಲಾಸ್ಮಾ’ವನ್ನ ಟ್ರಾನ್ಸ್​ಫರ್ ಮಾಡುತ್ತಾರೆ.

ಚಿಕಿತ್ಸೆಯಲ್ಲಿ ಸೋಂಕಿನಿಂದ ಗುಣಮುಖರಾದ ಬಳಿಕ ಒಬ್ಬ ವ್ಯಕ್ತಿ 2 ಡೋಸ್ ‘ಪ್ಲಾಸ್ಮಾ’ ಕೊಡುವಷ್ಟು ಶಕ್ತನಾಗಿರುತ್ತಾನೆ. ಹಾಗೆ ಒಬ್ಬ ಸೋಂಕಿತನಿಗೆ 1 ಡೋಸ್ ‘ಪ್ಲಾಸ್ಮಾ’ ಕೊಡಬೇಕಿರುವ ಹಿನ್ನೆಲೆಯಲ್ಲಿ, ಇಬ್ಬರನ್ನು ಗುಣಮಾಡಬಹುದು. ಈ ಮೊದಲು ‘ಕೊರೊನಾ’ ವಿರುದ್ಧ ಹೋರಾಡಿದ ಪರಿಣತಿ ಮೇಲೆ ‘ಪ್ಲಾಸ್ಮಾ’ ಹೊಸ ದೇಹದಲ್ಲಿ ಌಕ್ಟಿವ್ ಆಗುತ್ತದೆ. ಹೀಗೆ ಹೊಸ ದೇಹ ಸೇರಿದ ಬಳಿಕ ಕೊರೊನಾ ವೈರಸ್ ನಾಶಪಡಿಸಲು ‘ಪ್ಲಾಸ್ಮಾ’ ಹೋರಾಟ ಆರಂಭ ಮಾಡುತ್ತದೆ. ಇದೆಲ್ಲದರ ನಂತರ ಪ್ಲಾಸ್ಮಾ ಥೆರಪಿ ಪರಿಣಾಮ ಕೊರೊನಾ ಸೋಂಕಿತ ವ್ಯಕ್ತಿ ಅಲ್ಪಕಾಲದಲ್ಲೇ ಚೇತರಿಕೆ ಕಾಣುತ್ತಾನೆ.

ಸದ್ಯದ ಮಟ್ಟಿಗೆ ಲಭ್ಯವಿರುವ ಚಿಕಿತ್ಸಾ ವಿಧಾನಗಳ ಪೈಕಿ ಪ್ಲಾಸ್ಮಾ ಥೆರಪಿ ಕೊರೊನಾ ವಿರುದ್ಧದ ಚಿಕಿತ್ಸೆಗೆ ದೊಡ್ಡ ಅಸ್ತ್ರವಾಗಿದೆ. ಪ್ಲಾಸ್ಮಾ ಥೆರಪಿ ಮೂಲಕ ಸೋಂಕಿತನನ್ನು ಸುಲಭವಾಗಿ ಬದುಕಿಸಬಹುದಾಗಿದೆ. ಯಾವುದೇ ಔಷಧವೂ ನೀಡದಷ್ಟು ಭರವಸೆ, ಪ್ಲಾಸ್ಮಾ ಥೆರಪಿ ನೀಡುತ್ತಿದೆ. ಸ್ವತಃ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕೂಡ ಇದನ್ನ ರೈಟ್ ಅಂದಿದ್ದಾರೆ. ಅಲ್ಲದೆ ಪ್ಲಾಸ್ಮಾ ಥೆರಪಿಯಿಂದ ರೋಗಿಗಳಲ್ಲಿ ಆಗುತ್ತಿರುವ ಬದಲಾವಣೆ ಕೂಡ ಹುಬ್ಬೇರುವಂತೆ ಮಾಡಿದೆ. ಇದೀಗ ರಾಜ್ಯದಲ್ಲೂ ಪ್ಲಾಸ್ಮಾ ಥೆರಪಿ ಆರಂಭವಾಗುತ್ತಿರುವುದು ಹೊಸ ಭರವಸೆ ಮೂಡಿಸಿದೆ.

Published On - 7:43 am, Sat, 25 April 20

ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
49 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿದ ಇಶಾನ್ ಕಿಶನ್
49 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿದ ಇಶಾನ್ ಕಿಶನ್
ಊಟಿಯಂತಾದ ಕೋಲಾರ, ರಸ್ತೆ ಕಾಣದೇ ವಾಹನ ಸವಾರರು ಪರದಾಟ
ಊಟಿಯಂತಾದ ಕೋಲಾರ, ರಸ್ತೆ ಕಾಣದೇ ವಾಹನ ಸವಾರರು ಪರದಾಟ
ಔಷಧಿ ಖರೀದಿಲಿ ಭಾರಿ ಭ್ರಷ್ಟಾಚಾರ: ಕಮಿಷನ್ ಬೇಡಿಕೆಯ ಸ್ಫೋಟಕ ಆಡಿಯೋ ಇಲ್ಲಿದೆ
ಔಷಧಿ ಖರೀದಿಲಿ ಭಾರಿ ಭ್ರಷ್ಟಾಚಾರ: ಕಮಿಷನ್ ಬೇಡಿಕೆಯ ಸ್ಫೋಟಕ ಆಡಿಯೋ ಇಲ್ಲಿದೆ
ಥಿಯೇಟರ್​​ಗೆ ತೆರಳಿ ‘ಡೆವಿಲ್’ ವೀಕ್ಷಿಸಿದ ದರ್ಶನ್ ತಾಯಿ ಮೀನಾ
ಥಿಯೇಟರ್​​ಗೆ ತೆರಳಿ ‘ಡೆವಿಲ್’ ವೀಕ್ಷಿಸಿದ ದರ್ಶನ್ ತಾಯಿ ಮೀನಾ