ಓದು ಮಗು ಓದು: ನನ್ನ ಮನಸಲ್ಲಿರೋ ಪ್ರಶ್ನೆಗೆ ಪುಸ್ತಕಗಳಲ್ಲೂ ಉತ್ತರ ಸಿಗುತ್ತೆ!

ಬೆಂಗಳೂರಿನ ಉಲ್ಲಾಳದ ವಿದ್ಯಾನಿಕೇತನ ಪಬ್ಲಿಕ್ ಶಾಲೆಯಲ್ಲಿ 2ನೇ ತರಗತಿಯಲ್ಲಿ ಓದುತ್ತಿರುವ ತನವ ಪಿ.ಬಿ ಈಗಂತೂ ಪೂರ್ತಿ ಮಾಯಾಲೋಕದಲ್ಲಿ ಮುಳುಗಿದಾನೆ!

ಓದು ಮಗು ಓದು: ನನ್ನ ಮನಸಲ್ಲಿರೋ ಪ್ರಶ್ನೆಗೆ ಪುಸ್ತಕಗಳಲ್ಲೂ ಉತ್ತರ ಸಿಗುತ್ತೆ!
ವಿಂಪಿಯೊಂದಿಗೆ ತನವ
Follow us
ಶ್ರೀದೇವಿ ಕಳಸದ
|

Updated on: Jan 16, 2021 | 12:18 PM

ಈಗಂತೂ ಮಕ್ಕಳ ಇಸ್ಕೂಲ್​ ಮನೇಲಲ್ವೇ? ಹಾಗಿದ್ದರೆ ಪಠ್ಯಪುಸ್ತಕ ಬಿಟ್ಟು ಬೇರೇನು ಓದುತ್ತಿವೆ ನಮ್ಮ ಮಕ್ಕಳು ಎನ್ನುವ ಕುತೂಹಲ ಟಿವಿ9 ಕನ್ನಡ ಡಿಜಿಟಲ್​ಗೆ ಉಂಟಾಯಿತು. ತಡಮಾಡದೆ ಒಂದಿಷ್ಟು ಮಕ್ಕಳಿಗೆ, ಈ ತನಕ ನಿಮಗೆ ಇಷ್ಟವಾದ ಐದು ಪುಸ್ತಕಗಳು ಮತ್ತವುಗಳ ಬಗ್ಗೆ ದೊಡ್ಡವರ ಸಹಾಯ ಪಡೆದುಕೊಂಡೇ ಬರೆದು ಕಳಿಸಿ ಎಂದು ಕೇಳಲಾಯಿತು. ಮೆಲ್ಲಮೆಲ್ಲಗೆ ‘ಕನ್ನಡ’ದಲ್ಲಿ ಬಂದು ನಮ್ಮನ್ನು ತಲುಪಿದ ಮೇಲ್​ಗಳಲ್ಲಿ ಕೆಲವೊಂದಿಷ್ಟನ್ನು ಆಯ್ಕೆ ಮಾಡಲಾಯಿತು. ಈ ಓದು ಮಗು ಓದು ಸರಣಿಯಲ್ಲಿ ಪ್ರಜ್ಞಾವಂತ ಪೋಷಕರ, ಲೇಖಕರ, ಶಿಕ್ಷಕರ ಮತ್ತು ಓದುಬರಹವನ್ನೇ ಬದುಕಿನ ಭಾಗವಾಗಿಸಿಕೊಂಡ ದೊಡ್ಡಮಕ್ಕಳ ಅನುಭವಾಧಾರಿತ ಕಥನಗಳು, ವಿಶ್ಲೇಷಣಾತ್ಮಕ ಮತ್ತು ಮುನ್ನೋಟದಿಂದ ಕೂಡಿದ ಲೇಖನಗಳೂ ಇರುತ್ತವೆ. ಇಷ್ಟೇ ಅಲ್ಲ, ಇಲ್ಲಿ ನೀವೂ ನಿಮ್ಮ ಮಕ್ಕಳೊಂದಿಗೆ ಪಾಲ್ಗೊಳ್ಳಬಹುದು ಹಾಗೆಯೇ ಪ್ರತಿಕ್ರಿಯೆಗಳನ್ನೂ ಹಂಚಿಕೊಳ್ಳಬಹುದು. ಇ-ಮೇಲ್: tv9kannadadigital@gmail.com

ಬೆಂಗಳೂರಿನ ತನವ ಪಿ.ಬಿ. ಆಯ್ಕೆಗಳು ಇಲ್ಲಿವೆ

ಪು: Diary of a Wimpy Kid ಪ್ರ: puffin books ಲೇ: Jeff Kinney ವಿಂಪಿ ಕಿಡ್ಸ್ ಬುಕ್ಸ್ ಸಿರೀಸ್ ನಲ್ಲಿ ನಂಗೆ ತುಂಬಾ ಇಷ್ಟವಾದ ಪುಸ್ತಕ ‘Dairy of Wimpy Kid-The dog days’. ಇಲ್ಲಿ ವಿಂಪಿ ತುಂಬಾ ಆಲಸಿಯಾಗಿರ್ತಾನೆ. ಯಾವಾಗಲೂ ಟಿವಿ, ವಿಡಿಯೋ ಗೇಮ್ಸ್ ಅಂತಾ ಸಮಯ ಹಾಳು ಮಾಡ್ತಾ ಇರ್ತಾನೆ. ಹಾಗಾಗಿ ಅವರಮ್ಮ ಅವನಿಗೆ ಎಲ್ಲದರಿಂದ ದೂರ ಇಡೋದಕ್ಕೆ ನೋಡ್ತಾ ಮಾಡ್ತಾ ‘Reading is fun’ ಅನ್ನೋ ಹೆಸರಲ್ಲಿ ಕ್ಲಬ್ ಶುರು ಮಾಡ್ತಾರೆ. ಒಂದೊಂದೇ ಪುಸ್ತಕವನ್ನು ಓದೋದಕ್ಕೆ ಹೇಳ್ತಾರೆ. ‘Charlotte’s Web’ ಪುಸ್ತಕದಿಂದ ತನ್ನ ಓದನ್ನು ಶುರು ಮಾಡ್ತಾನೆ. ಅದಾದ ಮೇಲೆ ವಿಂಪಿ ಮತ್ತು ಅವನ ಸ್ನೇಹಿತ Rowley ಗೆ ‘Your Birthday is hot, hot, hot’ ಎಂಬ ಒಂದು ಪುಸ್ತಕ ಸಿಗುತ್ತೆ. ಆ ಪುಸ್ತಕ ನೋಡಿ ಅವರಿಗೆ ದುಡ್ಡು ಮಾಡಬೇಕೆಂಬ ಆಸೆ ಹುಟ್ಟುತ್ತೆ. ಅದಕ್ಕಾಗಿ ಅವರಿಬ್ಬರೂ ಸೇರಿ ‘V.I.P lawn service’ ಎಂಬ ಕೆಲಸವನ್ನು ಶುರು ಮಾಡ್ತಾರೆ. ಹೀಗೆ ಅವನು ಟಿವಿ, ವಿಡಯೋ ಗೇಮ್ಸ್ ಎಲ್ಲವನ್ನೂ ಬಿಟ್ಟು ಓದುವುದು, ಕೆಲಸ ಮಾಡುವುದನ್ನು ಕಲೀತಾನೆ. ವಿಂಪಿಯ ಎಲ್ಲ ಪುಸ್ತಕಗಳಲ್ಲೂ ಮಜಮಜಾ ಜೋಕ್ಸ್​ ಇವೆ. ನಾನು ತುಂಬಾ  ಎಂಜಾಯ್ ಮಾಡಿದ್ದೇನೆ.

ಪು: Grandma’s Bag Of Stories ಲೇ: Sudha Murthy ಪ್ರ: Penguin Random House India ಈ ಪುಸ್ತಕದಲ್ಲಿ ಸುಧಾ ಮೂರ್ತಿ ಅವರು ತಮ್ಮ  ಅಜ್ಜಿ ಹೇಳಿದ ಕಥೆಗಳನ್ನು ಬರೆದಿದ್ದಾರೆ. ಆ ಕತೆಗಳ ಮೂಲಕ ನಾವು ತಿಳಿದುಕೊಳ್ಳಬೇಕಾದ ಅಳವಡಿಸಿಕೊಳ್ಳಬೇಕಾದ ಎಷ್ಟೊಂದು ವಿಷಯಗಳಿವೆ. ಸರಳವಾಗಿ ಇಂಗ್ಲಿಷಿನಲ್ಲಿ ಕುತೂಹಲಕಾರಿಯಾಗಿ ಕಥೆ ಬರೆದಿದ್ದಾರೆ. ಸಂಬಂಧ ಅಂದರೇನು, ಪ್ರೀತಿ ಅಂದರೇನು, ವಿಶ್ವಾಸ ಅಂದರೇನು, ನಡೆವಳಿಕೆ ಹೇಗಿರಬೇಕು ಇಂಥದ್ದೆಲ್ಲಾ ಅರ್ಥ ಮಾಡಿಕೊಳ್ಳೋಕೆ ಯೋಚಿಸೋದಕ್ಕೆ ಕಲೀತಿದೀನಿ ಈ ಕಥೆಗಳನ್ನು ಓದ್ತಾ. ಈ ಪುಸ್ತಕದಲ್ಲಿ ನನಗೆ ‘What’s In It For Me?’  ಕಥೆ ತುಂಬಾ ಇಷ್ಟವಾಯಿತು.

ಪ್ರ: Pratham Books ನಾನು ಪ್ರಥಮ್ ಬುಕ್ಸ್ ನವರ ಲೆವೆಲ್ 1,2,3 ಪುಸ್ತಕಗಳನ್ನು ಓದಿದ್ದೇನೆ. ಇತ್ತೀಚೆಗೆ ನಾನು ತುಂಬಾ ಕಥೆಗಳನ್ನು  https://storyweaver.org.in/  ಮೂಲಕ ಓದುತ್ತಿದ್ದೇನೆ. ಆ ಪುಸ್ತಕಗಳಲ್ಲಿರುವ ಚಿತ್ರಗಳು ನನ್ನನ್ನು ಮಾಯಾಲೋಕಕ್ಕೆ ಕರೆದೊಯ್ಯುತ್ತಿವೆ. ಓದುತ್ತಾ ಪುಳಕಗೊಳ್ತಿದೀನಿ. ‘I Spy a Lake’ ಅನ್ನೋ ಪುಸ್ತಕ ತುಂಬಾ ಇಷ್ಟವಾಗಿದೆ.

ಪು: The Children’s Illustrated Encyclopedia ಪ್ರ: Om books ಇದು ತುಂಬಾ ದೊಡ್ಡ Colorful ಪುಸ್ತಕ. ನಾನು ಯಾವ ವಿಷಯಗಳ ಬಗ್ಗೆ ಕುತೂಹಲಕಾರಿಯಾಗಿದ್ದೇನೋ ಅದೆಲ್ಲವೂ ಇದರಲ್ಲಿ ಓದಲು ಸಿಗುತ್ತಿದೆ. ನನಗೆ Space, Human History, Science ಬಗ್ಗೆ ತುಂಬಾ ಪ್ರಶ್ನೆಗಳು ತಲೇಲಿ ಬರ್ತಾ ಇದ್ವು. ಈ ಪುಸ್ತಕ ಓದಲು ಶುರು ಮಾಡಿದ್ಮೇಲೆ ನನಗೆ ಎಷ್ಟೊಂದು ಉತ್ತರಗಳು ಸಿಕ್ಕಿವೆ. ಈ ಪುಸ್ತಕದಲ್ಲಿ ಎಲ್ಲ ವಿಷಯಗಳನ್ನೂ ಚಿತ್ರಗಳ ಮೂಲಕ ವಿವರಿಸಿದ್ದಾರೆ. ಇದನ್ನು ಓದಲು ತುಂಬಾ ಖುಷಿ ಆಗುತ್ತದೆ.

ಪುಸ್ತಕ: April Fools’ Fiasco ಪ್ರ: Random House Books ಲೇ: Ron Roy ಜೋಶ್, ಡಿಂಕ್, ರುತ್ ರೋಸ್ ಈ ಮೂವರು Book Nook ಅನ್ನೋ ಒಂದು ಶಾಪ್ ಗೆ ಹೋಗುತ್ತಾರೆ. ಅಲ್ಲಿ Mr. Paskey ಆ ಆಂಗಡಿಯನ್ನು ನಡೆಸ್ತಿರ್ತಾನೆ. ಆ ದಿನ ಏಪ್ರಿಲ್ ಫೂಲ್ ಇತ್ತು. Mr. Paskey ಹತ್ತಿರ ಒಂದು Treasure box ಇರುತ್ತೆ. ಆ ಮೂವರೂ ಮಕ್ಕಳು ಅದರಲ್ಲೇನಿದೆ ಎಂದು ಕುತೂಹಲದಿಂದ Mr.Paskey ಯನ್ನು ಕೇಳಿದಾಗ ಅವನು ‘ನಾನು Numistmatis’ ಇದರಲ್ಲಿ coin collection ಇದೆ ಎಂದು ಹೇಳಿ ಫೂಲ್ ಮಾಡಿರುತ್ತಾನೆ. ಆದರೆ ಅದರಲ್ಲಿ ಬೆಲೆಬಾಳುವ ವಸ್ತುಗಳಿವೆ ಎಂದು ಅದು ಕಳುವಾದಾಗ ಗೊತ್ತಾಗುತ್ತದೆ. ಆ ಮಕ್ಕಳು Mr. Paskey ಗೆ fool ಮಾಡಲೆಂದು ಮತ್ತೊಂದು ದಿನ ಬರುತ್ತಾರೆ ಆದರೆ ಅವನ ಅಂಗಡಿಗೆ ಕಳ್ಳರು ನುಗ್ಗಿ Treasure box ಕದ್ದಿರುವುದು ತಿಳಿದು ಮಕ್ಕಳೂ ಪೊಲೀಸರ ಜೊತೆ ಸೇರಿ  ಅದನ್ನು ಹುಡುಕಲು ಸಹಾಯ ಮಾಡುತ್ತಾರೆ. Mr.Paskey ಗೆ ಖುಷಿಯಾಗಿ ಆ ಮಕ್ಕಳಿಗೆ ಒಂದು ವರ್ಷ ಎಲ್ಲೀಸ್ ಡಿನ್ನರ್ ಕೂಪನ್ ಉಡುಗೊರೆಯಾಗಿ ಕೊಡುತ್ತಾನೆ.

ಓದು ಮಗು ಓದು: ನನಗೆ Ruskin Bond ಆಟೋಗ್ರಾಫ್ ಸಿಕ್ಕಿದೆ!

ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?