AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಓದು ಮಗು ಓದು: ಆಟಿಕೆಗಳಿಗಿಂತ ನನಗೆ ಪುಸ್ತಕ ಓದುವ ಖುಷಿಯೇ ಖುಷಿ…

‘ಎಷ್ಟೋ ಬಾರಿ ಶಾಲೆಯಲ್ಲಿ ಸಾಮಾನ್ಯ ಜ್ಞಾನದ ಪ್ರಶ್ನೆಗಳು ಎದುರಾದರೆ ಉತ್ತರಿಸುವುದು ನನಗೆ ಸುಲಭವಾಗುತ್ತದೆ. ಹಾಗಾಗಿ ಪುಸ್ತಕಗಳನ್ನು ಓದುವುದೆಂದರೆ ಬಹಳ ಇಷ್ಟ, ಅವುಗಳನ್ನು ಓದುತ್ತಿದ್ದಾಗ ಸಿಗುವ ಖುಷಿ ನನಗೆ ಬೇರೆಲ್ಲೂ ಸಿಗದು.‘ ಹೀಗೆನ್ನುತ್ತಾಳೆ ಬೆಂಗಳೂರಿನ ಪದ್ಮನಾಭನಗರದ ಪ್ರಾರ್ಥನಾ ಶಾಲೆಯಲ್ಲಿ 6ನೇ ತರಗತಿ ಓದುತ್ತಿರುವ ಶರಧಿ ಎಚ್.ಎಸ್.

ಓದು ಮಗು ಓದು: ಆಟಿಕೆಗಳಿಗಿಂತ ನನಗೆ ಪುಸ್ತಕ ಓದುವ ಖುಷಿಯೇ ಖುಷಿ...
ತನ್ನ ನೆಚ್ಚಿನ ಪುಸ್ತಕದೊಂದಿಗೆ ಶರಧಿ.
ಶ್ರೀದೇವಿ ಕಳಸದ
|

Updated on:Jan 12, 2021 | 6:40 PM

Share

ಈಗಂತೂ ಮಕ್ಕಳ ಇಸ್ಕೂಲ್​ ಮನೇಲಲ್ವೇ? ಹಾಗಿದ್ದರೆ ಪಠ್ಯಪುಸ್ತಕ ಬಿಟ್ಟು ಬೇರೇನು ಓದುತ್ತಿವೆ ನಮ್ಮ ಮಕ್ಕಳು ಎನ್ನುವ ಕುತೂಹಲ ಟಿವಿ9 ಕನ್ನಡ ಡಿಜಿಟಲ್​ಗೆ ಉಂಟಾಯಿತು. ತಡಮಾಡದೆ ಒಂದಿಷ್ಟು ಮಕ್ಕಳಿಗೆ, ಈ ತನಕ ನಿಮಗೆ ಇಷ್ಟವಾದ ಐದು ಪುಸ್ತಕಗಳು ಮತ್ತವುಗಳ ಬಗ್ಗೆ ದೊಡ್ಡವರ ಸಹಾಯ ಪಡೆದುಕೊಂಡೇ ಬರೆದು ಕಳಿಸಿ ಎಂದು ಕೇಳಲಾಯಿತು. ಮೆಲ್ಲಮೆಲ್ಲಗೆ ‘ಕನ್ನಡ’ದಲ್ಲಿ ಬಂದು ನಮ್ಮನ್ನು ತಲುಪಿದ ಮೇಲ್​ಗಳಲ್ಲಿ ಕೆಲವೊಂದಿಷ್ಟನ್ನು ಆಯ್ಕೆ ಮಾಡಲಾಯಿತು. ಈ ಓದು ಮಗು ಓದು ಸರಣಿಯಲ್ಲಿ ಪ್ರಜ್ಞಾವಂತ ಪೋಷಕರ, ಲೇಖಕರ, ಶಿಕ್ಷಕರ ಮತ್ತು ಓದುಬರಹವನ್ನೇ ಬದುಕಿನ ಭಾಗವಾಗಿಸಿಕೊಂಡ ದೊಡ್ಡಮಕ್ಕಳ ಅನುಭವಾಧಾರಿತ ಕಥನಗಳು, ವಿಶ್ಲೇಷಣಾತ್ಮಕ ಮತ್ತು ಮುನ್ನೋಟದಿಂದ ಕೂಡಿದ ಲೇಖನಗಳೂ ಇರುತ್ತವೆ. ಇಷ್ಟೇ ಅಲ್ಲ, ಇಲ್ಲಿ ನೀವೂ ನಿಮ್ಮ ಮಕ್ಕಳೊಂದಿಗೆ ಪಾಲ್ಗೊಳ್ಳಬಹುದು ಹಾಗೆಯೇ ಪ್ರತಿಕ್ರಿಯೆಗಳನ್ನೂ ಹಂಚಿಕೊಳ್ಳಬಹುದು. ಇ-ಮೇಲ್  tv9kannadadigital@gmail.com

ಬೆಂಗಳೂರಿನ ಶರಧಿ ಎಚ್. ಎಸ್. ಆಯ್ಕೆಗಳು ಹೀಗಿವೆ.

ಪುಸ್ತಕಗಳು ನಮಗೆ ಬಹಳಷ್ಟು ವಿಷಯಗಳ ಬಗ್ಗೆ ಜ್ಞಾನ ನೀಡುತ್ತವೆ. ಇವುಗಳಿಂದ ನಮಗೆ ಬಹಳಷ್ಟು ಉಪಯೋಗಗಳಿವೆ. ನಮಗೆ ಪ್ರಕೃತಿ, ಪ್ರಾಣಿ, ಪಕ್ಷಿ, ಇತಿಹಾಸದ ಕಥೆಗಳೆಂದರೆ ಬಹಳ ಇಷ್ಟ. ಓದುವುದು ನನ್ನ ನೆಚ್ಚಿನ ಹವ್ಯಾಸ, ದಿನಪತ್ರಿಕೆಯಿಂದ ಹಿಡಿದು ಎಲ್ಲ ಬಗೆಯ ಪುಸಕ್ತಗಳನ್ನು ಓದುತ್ತೇನೆ. ಓದುವುದರಿಂದ ಸಾಹಿತ್ಯ, ಸಂಸ್ಕೃತಿ, ಕಲೆ, ಸಂಗೀತ, ಪ್ರಾಣಿ, ಪಕ್ಷಿ ಹಾಗೂ ಪಕ್ಷಿಗಳ ಬಗ್ಗೆ ಅನೇಕ ಸಂಗತಿಗಳನ್ನು ತಿಳಿಯಲು ಸಹಾಯವಾಗುತ್ತದೆ. ಜೊತೆಗೆ ನನ್ನ ಸಾಮಾನ್ಯ ಜ್ಞಾನ ವೃದ್ಧಿಯಾಗುತ್ತದೆ, ಇದು ನನಗೆ ಶಾಲಾ ಶಿಕ್ಷಣಕ್ಕೂ ನೆರವಾಗುತ್ತದೆ. ಎಷ್ಟೋ ಬಾರಿ ಶಾಲೆಯಲ್ಲಿ ಸಾಮಾನ್ಯ ಜ್ಞಾನದ ಪ್ರಶ್ನೆಗಳು ಎದುರಾದರೆ ಉತ್ತರಿಸುವುದು ನನಗೆ ಸುಲಭವಾಗುತ್ತದೆ. ಹಾಗಾಗಿ ಪುಸ್ತಕಗಳನ್ನು ಓದುವುದೆಂದರೆ ಬಹಳ ಇಷ್ಟ, ಅವುಗಳನ್ನು ಓದುತ್ತಿದ್ದಾಗ ಸಿಗುವ ಖುಷಿ ನನಗೆ ಎಷ್ಟು ಆಟಿಕೆ, ಬಟ್ಟೆಗಳನ್ನು ಕೊಡಿಸಿದರೂ ಸಿಗುವುದಿಲ್ಲ.

ಪು: ಕೊಕ್ಕರೆಗಳ ರಕ್ಷಣೆಗೆ ಲಾಮಾ ಸೇನೆ ಕನ್ನಡಕ್ಕೆ : ನಾಗೇಶ ಹೆಗಡೆ ಪ್ರ: ಅಂಕಿತ ಪುಸ್ತಕ

ಈ ಪುಸ್ತಕದಲ್ಲಿ ಅರುಣಾಚಲ ಪ್ರದೇಶಕ್ಕೆ ವಲಸೆ ಬರುವ ಒಂದು ಅಪರೂಪದ ಕಪ್ಪು ಕತ್ತಿನ ಕೊಕ್ಕರೆಗಳ ರಕ್ಷಣೆಯ ಬಗ್ಗೆ ಇದ್ದು, ಜನರು ಇದನ್ನು ಹೇಗೆ ರಕ್ಷಿಸುತ್ತಾರೆ ಎಂಬ ಕಥೆಯಾಧಾರಿತ ಪುಸ್ತಕವಿದು. ಈ ಕಪ್ಪು ಕತ್ತಿನ ಕೊಕ್ಕರೆಗಳಿಗೆ ಬಂದ ಅಪಾಯವನ್ನು ದೂರ ಮಾಡಿದ ಮೂವರು ಎಳೆಯರ ಸಾಹಸದ ಕಥೆ ಬಹಳ ಸ್ವಾರಸ್ಯಕರವಾಗಿದೆ. ಈ ಪುಸ್ತಕವು ಕೇವಲ 24 ಘಂಟೆಗಳಲ್ಲಿ ನಡೆದ ನೈಜ ಕಥೆಯಾಧಾರಿತವಾಗಿದೆ.

ಪು: ಬಾಲರ ಬಾಪು ಪ್ರಕಾಶನ :ವಾರ್ತಾ ಮತ್ತು ಸಾರ್ವಾಜನಿಕ ಸಂಪರ್ಕ ಇಲಾಖೆ

ಈ ಕಥೆಯು ಮಹಾತ್ಮ ಗಾಂಧೀಜಿಯವರ ಆತ್ಮಕಥನವಾಗಿದ್ದು, ಅವರ ಜೀವನ ಸಾಗಿ ಬಂದ ಬಗೆ, ಅವರು ಚಳವಳಿಗಳಲ್ಲಿ ಹೇಗೆ ಪಾಲ್ಗೊಂಡಿದ್ದರು ಎಂಬ ಬಗ್ಗೆ ಮಾಹಿತಿ ಇದೆ. ಅವರ ಬದುಕಿನಲ್ಲಿ ನಡೆಯುವ ಘಟನೆಗಳು ಅವರ ಮನಸ್ಸಿನ ಮೇಲೆ ಹೇಗೆ ಪ್ರಭಾವ ಬೀರುತ್ತವೆ ಎನ್ನುವುದೂ ಆಸಕ್ತಿಕರವಾಗಿದೆ. ಇದು ನನ್ನ ಮೆಚ್ಚಿನ ಪುಸ್ತಕ.

ಪು: ಜನರೊಂದಿಗೆ ವನ್ಯಜೀವ ಪ್ರ: ಕಲ್ಪವೃಕ್ಷ ಕನ್ನಡಕ್ಕೆ :ನಾಗೇಶ ಹೆಗಡೆ

ಈ ಪುಸ್ತಕದಲ್ಲಿ ಹಲವಾರು ಅಪರೂಪದ ಪ್ರಾಣಿಗಳು, ಕೊಕ್ಕರೆ , ಕಾಡು ಪಾಪ, ಕಡಲಾಮೆ, ನೀರು ನಾಯಿ ಮುಂತಾದವುಗಳ ಕಥೆಯಿದೆ. ಈ ಅಪರೂಪದ ಪ್ರಾಣಿಗಳು ಯಾವ ದೇಶದಿಂದ ವಲಸೆ ಬರುತ್ತವೆ, ಎಲ್ಲಿಗೆ ಬರುತ್ತವೆ, ಇವುಗಳ ವಿಶೇಷತೆಗಳು, ಆಹಾರ ಪದ್ಧತಿಗಳೇನು ಎನ್ನುವುದೆಲ್ಲಾ ಇದೆ. ಹೀಗಾಗಿ ನಾನಿದನ್ನು ಬಹಳ ಇಷ್ಟಪಡುತ್ತೇನೆ.

ಪು:ಮಕ್ಕಳ ರಾಮಕೃಷ್ಣ ಪ್ರಕಾಶನ : ರಾಮಕೃಷ್ಣ ಆಶ್ರಮ

ಇದು ಶ್ರೀ ರಾಮಕೃಷ್ಣರ ಜೀವನದ ಕಥೆಯಾಗಿದೆ. ಇದರಲ್ಲಿ ರಾಮಕೃಷ್ಣರ ಜನ್ಮ, ಬಾಲ್ಯ, ವಿದ್ಯಾಭ್ಯಾಸ, ಸಂಗೀತ ಹಾಗೂ ಅವರ ಜೀವನವನ್ನಾಧರಿಸಿದ ಕಥೆಗಳಿವೆ. ಅವರ ಸರಳ ಜೀವನ, ಪ್ರತಿಯೊಬ್ಬರಲ್ಲೂ ದೇವರನ್ನು ಕಾಣುವ ಅವರ ಗುಣ ನನಗೆ ವಿಶೇಷವಾಗಿ ಇಷ್ಟವಾಯಿತು.

ಪು: ಮಕ್ಕಳ ಶಾರದಾದೇವಿ ಪ್ರಕಾಶನ: ರಾಮಕೃಷ್ಣ ಆಶ್ರಮ

ಈ ಕಥೆ ಪುಸ್ತಕವು ಶಾರದಾದೇವಿಯವರ ಕುರಿತ ಕಥೆಯಾಗಿದ್ದು, ಇದರಲ್ಲಿ ಶಾರದಾದೇವಿಯವರು ಹೇಗೆ ಬಾಲ್ಯದಲ್ಲಿ ಆಟವನ್ನೆಲ್ಲಾ ಬಿಟ್ಟು ದುರ್ಗಾಮಾತೆಯ ಪೂಜೆಯಲ್ಲಿ ನಿರತರಾಗುತ್ತಿದ್ದರು, ಯಾವುದೇ ಬೇಧ-ಭಾವವಿಲ್ಲದೆ ಜನರಿಗೆ ಹೇಗೆ ಸಹಾಯ ಮಾಡುತ್ತಿದ್ದರು ಎನ್ನುವುದರ ಬಗ್ಗೆ ಮನಮುಟ್ಟುವಂತೆ ವಿವರಿಸಲಾಗಿದೆ. ಹಾಗಾಗಿ ಇದು ನನಗೆ ಬಹಳ ಪ್ರಿಯ ಪುಸ್ತಕವಾಗಿದೆ.

ಓದು ಮಗು ಓದು: ಇದು ಕುಂದಾಪುರದ ಪಾರ್ವತಿ ಮೇಡಮ್ ಕ್ಲಾಸ್…

Published On - 6:36 pm, Tue, 12 January 21