ಚಿತ್ರಸಂತೆ ಆನ್ಲೈನ್, ಗ್ಯಾಲರಿ ಕಲಾಕೃತಿಗಳು ಆಫ್ಲೈನ್; ಪರಿಷತ್ ಆವರಣದಲ್ಲಿ ಏನೆಲ್ಲಾ ಇದೆ?
ಇದೇ ಮೊದಲ ಬಾರಿಗೆ ಆನ್ಲೈನ್ ಮೂಲಕ ಚಿತ್ರಸಂತೆ ನಡೆಸಲಾಗುತ್ತಿದ್ದು ಸಾಮಾಜಿಕ ಜಾಲತಾಣದಲ್ಲಿ ಉತ್ತಮ ಸ್ಪಂದನೆ ಪಡೆದುಕೊಳ್ಳುತ್ತಿದೆ. ಹಾಗಾದ್ರೆ ಕರ್ನಾಟಕ ಚಿತ್ರಕಲಾ ಪರಿಷತ್ನ ಆವರಣ ಹೇಗಿದೆ? ಕಲಾರಸಿಕರು ಅತ್ತ ಕಡೆ ಹೋದ್ರೆ ಏನೆಲ್ಲ ನೋಡಬವುದು? ಇಲ್ಲಿದೆ ಉತ್ತರ. ಚಿತ್ರಕಲಾ ಪರಿಷತ್ನ ಆವರಣದ ಚಿತ್ರನೋಟ ಇಲ್ಲಿದೆ. ಕಣ್ತುಂಬಿಕೊಳ್ಳಿ.
ಬೆಂಗಳೂರು: 60 ವರ್ಷ ಪೂರೈಸಿದ ಕರ್ನಾಟಕ ಚಿತ್ರಕಲಾ ಪರಿಷತ್ ತನ್ನ 18ನೇ ಚಿತ್ರಸಂತೆಯನ್ನು ಆನ್ಲೈನ್ ಮೂಲಕ ಆಯೋಜಿಸಿದೆ. ಮಹಾಮಾರಿ ಕೊರೊನಾ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಈ ಹೆಜ್ಜೆ ಇಟ್ಟಿದ್ದು. ಸಾಮಾಜಿಕ ಜಾಲತಾಣದಲ್ಲಿ ಉತ್ತಮ ಸ್ಪಂದನೆ ಪಡೆದುಕೊಳ್ಳುತ್ತಿದೆ. ಹಾಗಾದ್ರೆ ಕರ್ನಾಟಕ ಚಿತ್ರಕಲಾ ಪರಿಷತ್ನಲ್ಲಿ ಚಿತ್ರ ಸಂತೆ ನಡೆಯುತ್ತಿಲ್ಲವಾ? ಕಲಾರಸಿಕರು ಅತ್ತ ಕಡೆ ಹೋದ್ರೆ ಏನೆಲ್ಲ ನೋಡಬವುದು? ಅಲ್ಲಿನ ಸದ್ಯದ ಚಿತ್ರಣ ಹೇಗಿದೆ ಎಂಬ ಹಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
ಚಿತ್ರಸಂತೆ ಅಂದ್ರೆ ಅಲ್ಲಿ ಸಂತೆ ಮಾದರಿಯ ವಾತಾವರಣವೇ ಇರುತ್ತಿತ್ತು. ಜನಸಂದಣಿ ಕಂಡು ಬರುತ್ತಿತ್ತು. ಆದ್ರೆ ಈ ಬಾರಿ ಬೇರೆಯೇ ಪರಿಸ್ಥಿತಿ ಕಂಡುಬಂದಿದೆ. ಕೊರೊನಾ ಹಿನ್ನೆಲೆಯಲ್ಲಿ ಚಿತ್ರ ಸಂತೆಯನ್ನು ಆನ್ಲೈನ್ ಮೂಲಕ ನಡೆಸಲಾಗುತ್ತಿದ್ದು ಚಿತ್ರಕಲಾ ಪರಿಷತ್ಗೆ ಭೇಟಿ ನೀಡೋ ಮಂದಿ ಗ್ಯಾಲರಿಯಲ್ಲಿ ಹಾಕಿರುವ ಕಲಾಕೃತಿಗಳನ್ನು ನೋಡಬಹುದಾಗಿದೆ. ಮೊದಲಿಗೆ ಚಿತ್ರಕಲಾ ಪರಿಷತ್ ಅಂಗಳಕ್ಕೆ ಕಾಲಿಡ್ತಿದ್ದಂತೆ ಕೊರೊನಾಗೆ ಲಸಿಕೆಯ ಕಲಾಕೃತಿಗ ಸ್ವಾಗತ ಮಾಡುತ್ತೆ.
ಚಿತ್ರಕಲಾ ಪರಿಷತ್ನಲ್ಲಿ ಒಟ್ಟು 13 ಗ್ಯಾಲರಿಗಳಿವೆ. ವಿಶೇಷ ಅಂದ್ರೆ ಹಳೆ ಕಲಾಕೃತಿಗಳ ಜೊತೆಗೆ ಕೆಲ ಹೊಸ ಕಲಾಕೃತಿಗಳು ಜನರ ಗಮನ ಸೆಳೆಯುತ್ತಿವೆ. ಆಯಿಲ್ ಪೇಂಟ್, ಸ್ಯಾಂಡ್ ಆರ್ಟ್, 3ಡಿ ಕಲಾಕೃತಿ, ದೈತ್ಯ ಆನೆ, ಮೋಹಕ ಮುರಳಿಯ ಲೀಲೆ ಸೇರಿದಂತೆ ಮನ ಸೆಳೆಯುವ ಐತಿಹಾಸಿಕ, ಪಾರಂಪರಿಕತೆಯನ್ನು ಪರಿಚಯಿಸುವ ಕಲಾಕೃತಿಗಳನ್ನು ನೋಡಿ ಆನಂದಿಸಬಹುದು. ಅಲ್ಲದೆ ತಮಗಿಷ್ಟವಾದ ಕಲಾಕೃತಿಗಳನ್ನು ಖರೀದಿಸಲೂಬಹುದು. ಹೀಗಾಗಿ ಚಿತ್ರಸಂತೆ ಆನ್ಲೈನ್ನಲ್ಲಿ ನಡೆಯುವುದರ ಬಗ್ಗೆ ಮಾಹಿತಿ ಇಲ್ಲದವರು ಭೇಟಿ ನೀಡಿದ್ರೆ ಲಾಸ್ ಏನೇನೂ ಆಗಲ್ಲ.
ಫ್ಯಾಷನ್ ಪ್ರಿಯರನ್ನು ಸೆಳೆಯುವ ಚಿತ್ತಾರ ವಿಶೇಷ ಅಂದ್ರೆ ಈ ಬಾರಿ ಕರ್ನಾಟಕ ಚಿತ್ರಕಲಾ ಪರಿಷತ್ ಆವರಣದಲ್ಲೇ ಅನೇಕ ಸ್ಟಾಲ್ಗಳನ್ನು ಇಡಲು ಅವಕಾಶ ನೀಡಲಾಗಿದೆ. ಚಿತ್ತಾರ ಶೀರ್ಷಿಕೆಯಡಿ ಕ್ರಾಫ್ಟ್ ಎಗ್ಜಿಬಿಷನ್ ಮಾಡಲಾಗುತ್ತಿದೆ. ಹೀಗಾಗಿ ಇಲ್ಲಿಗೆ ಬರುವ ಮಂದಿ ತಮಗಿಷ್ಟವಾದ ಪ್ರಾಚೀನ ಕಾಲದ ವಸ್ತುಗಳು, ವಿಭಿನ್ನ ಮಾದರಿಯ ಹಾಗೂ ತಮ್ಮ ಅಂದ ಹೆಚ್ಚಿಸುವ ಓಲೆ, ಜುಮ್ಕಿ, ಬಟ್ಟೆ, ಮನೆ ಬಳಕೆಗೆ ಉಪಯೋಗಿಸುವ ವಸ್ತು ಹಾಗೂ ಮನೆ ಅಂದ ಹೆಚ್ಚಿಸುವ ಉಪಕರಣಗಳು, ಆಹಾರ ಪದಾರ್ಥಗಳು ಸೇರಿದಂತೆ ಅನೇಕ ಸ್ಟಾಲ್ಗಳನ್ನು ಇಡಲಾಗಿದೆ.
ಕಳೆದ ವರ್ಷಕ್ಕೆ ಹೋಲಿಸಿದ್ರೆ ಈ ಬಾರಿ ಒಳ್ಳೆಯ ಕಲೆಕ್ಷನ್ಗಳನ್ನು ನೋಡಬಹುದು. ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಮಾಹಿತಿ ಕೊರತೆ ಹಾಗೂ ಕೊರೊನಾ ಹಿನ್ನೆಲೆ ಕಡಿಮೆ ಜನ ಭೇಟಿ ನೀಡ್ತಿರೋದ್ರಿಂದ ಸ್ಟಾಲ್ಗಳಲ್ಲಿ ಹೆಚ್ಚಿನ ಸಮಯವನ್ನು ಕಳೆಯುತ್ತ ವಸ್ತುಗಳನ್ನು ಮುಟ್ಟಿ, ಪರಿಶೀಲಿಸಿ ಖರೀದಿ ಮಾಡಬಹುದು. ಫ್ಯಾಷನ್ ಪ್ರಿಯರಿಗೆ ಇದು ಒಂದು ರೀತಿಯ ದೊಡ್ಡ ಅನುಕೂಲವಾಗಿದೆ. ಒಂದು ತಿಂಗಳ ಕಾಲ ಚಿತ್ತಾರದಲ್ಲಿ ಶಾಪಿಂಗ್ ಮಾಡುವ ಭಾಗ್ಯ ನಿಮ್ಮದಾಗಲಿದೆ.
ಚಿತ್ರಕಲಾ ಪರಿಷತ್ನಲ್ಲಿ ಜನಪದ ನೃತ್ಯ ರಂಗು ಪರಿಷತ್ನಲ್ಲಿ ದೊಳ್ಳು ಕುಣಿತ, ಹುಲಿವೇಷ ಸೇರಿದಂತೆ ಜನಪದ ನೃತ್ಯ ಪ್ರದರ್ಶನಗಳನ್ನು ಕೈಗೊಳ್ಳಲಾಗಿದೆ. ಕೊರೊನಾ ಇರುವ ಹಿನ್ನೆಲೆಯಲ್ಲಿ ಕೊರೊನಾದ ಎಲ್ಲಾ ಮುಂಜಾಗ್ರತ ಕ್ರಮಗಳನ್ನು ಅನುಸರಿಸಿ ಈ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ.
ವಾರದಲ್ಲಿ ಎರಡು ಬಾರಿ ನಡೆಯುತ್ತೆ ಫುಡ್ ಮೇಳ ಇನ್ನು ಇಲ್ಲಿ ವಾರದಲ್ಲಿ ಎರಡು ಬಾರಿ ಅಂದ್ರೆ ಶನಿವಾರ ಮತ್ತು ಭಾನುವಾರ ಫುಡ್ ಮೇಳ ಆಯೋಜಿಸಲಾಗುತ್ತೆ. ಇಲ್ಲಿ ಕರಾವಳಿ ಸೇರಿದಂತೆ ಕರ್ನಾಟಕದ ಫೇಮಸ್ ಭಕ್ಷ್ಯಗಳನ್ನು ಸವಿಯಬಹುದು. ಸದ್ಯ ಆನ್ಲೈನ್ನಲ್ಲಿ ಚಿತ್ರಸಂತೆ ಹವಾ ಜೋರಾದ್ರೆ. ಚಿತ್ರಕಲಾ ಪರಿಷತ್ನಲ್ಲಿ ಬೇರೆ ಬೇರೆ ರೀತಿಯ ಚಟುವಟಿಕೆಗಳು ಗರಿಗೆದರಿವೆ. ಒಟ್ಟಿನಲ್ಲಿ ಈ ಬಾರಿಯ ಚಿತ್ರಸಂತೆಗೆ ಒಳ್ಳೆಯ ಮೆಚ್ಚುಗೆ ಸಿಕ್ಕಿದ್ದು ಜನರೂ ಸಹ ಕೊರೊನಾದ ನಡುವೆ ಇದೊಂದು ಉತ್ತಮ ಬ್ರೇಕ್ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಚಿತ್ರಕಲಾ ಪರಿಷತ್ನ ಆವರಣದ ಚಿತ್ರನೋಟ ಇಲ್ಲಿದೆ. ಕಣ್ತುಂಬಿಕೊಳ್ಳಿ.
ವರ್ಚ್ಯುವಲ್ ಚಿತ್ರಸಂತೆ 2021: ಆನ್ಲೈನ್ನಲ್ಲಿ ಕಲಾವಿದನ ಕುಂಚ ಮಾತಾಡಿದಾಗ..
Published On - 6:57 am, Thu, 7 January 21