ಶಬ್ ಎ ಬರಾತ್ 2021; ಕ್ಷಮೆಯ ರಾತ್ರಿ.. ತಿಳಿಯಿರಿ ಮುಸ್ಲಿಮರು ಆಚರಿಸುವ ಪ್ರವಿತ್ರ ರಾತ್ರಿಯ ಮಹತ್ವ
ಅನೇಕ ಕಡೆಗಳಲ್ಲಿ, ಶಾಬ್-ಎ-ಬರಾತ್ನಂದು ಅನೇಕ ಮುಸ್ಲಿಮರು ಕ್ಷಮೆಯ ರಾತ್ರಿ ಎಂದು ಪೂಜಿಸುತ್ತಾರೆ. ಇಡೀ ರಾತ್ರಿ ಅಲ್ಲಾಹ್ನನ್ನು ಅವರ ಆಶೀರ್ವಾದವನ್ನು ದಯಪಾಲಿಸುವಂತೆ ಕೇಳಿಕೊಳ್ಳುತ್ತಾರೆ. ಹಾಗೂ ತಮ್ಮ ಪೂರ್ವಜರನ್ನು ಕ್ಷಮಿಸುವಂತೆ ಅಲ್ಲಾಹ್ನನ್ನು ಕೇಳಿಕೊಳ್ಳುತ್ತ ಪ್ರಾರ್ಥನೆಗಳನ್ನು ಮಾಡುತ್ತಾರೆ.
ಶಾಬ್-ಎ-ಬರಾತ್.. ಇದು ಬಂದು ಪ್ರಮುಖ ರಾತ್ರಿ. ಮತ್ತು ಇದನ್ನು ಶಾಬಾನ್ನ ಮಧ್ಯದಲ್ಲಿ ಆಚರಿಸಲಾಗುತ್ತದೆ. 2021 ರ ಮಾರ್ಚ್ 28 ರ ಭಾನುವಾರದಂದು ಸೂರ್ಯ ಮುಳುಗಿದ ನಂತರ 15 ನೇ ಶಬಾನ್ ಪ್ರಾರಂಭವಾಗಲಿದೆ. ಮುಂದಿನ ಸೂರ್ಯಾಸ್ತದವರೆಗೆ ಶಾಬ್-ಎ-ಬರಾತ್ ಆಚರಿಸಲಾಗುವುದು, ಅಂದರೆ 2021 ರ ಮಾರ್ಚ್ 29 ರ ಸೋಮವಾರ ಸಂಜೆ.
ವಿವಿಧ ದೇಶಗಳಲ್ಲಿ ಈ ದಿನವನ್ನು ಆಚರಿಸಲು ವಿಭಿನ್ನ ಮಾರ್ಗಗಳಿನ್ನು ಹೊಂದಿದ್ದಾರೆ. ಹಾಗೂ ಈ ಹಬ್ಬಕ್ಕೆ ವಿವಿಧ ಹೆಸರುಗಳಿಂದ ಗುರುತಿಸಲಾಗುತ್ತೆ. ಶಬ್-ಎ-ಬರಾತ್ ಹಬ್ಬವನ್ನು ಮುಖ್ಯವಾಗಿ ದಕ್ಷಿಣ ಏಷ್ಯಾದಲ್ಲಿ ಮುಸ್ಲಿಮರು ಆಡಂಬರ ಮತ್ತು ಉತ್ಸಾಹದಿಂದ ಆಚರಿಸುತ್ತಾರೆ. ಕೆಲವು ಸುನ್ನಿ ಇಸ್ಲಾಂ ಸಂಪ್ರದಾಯಗಳ ಪ್ರಕಾರ, ಈ ರಾತ್ರಿಯನ್ನು ಶಾಬ್-ಎ-ಬರಾತ್ (ಸ್ವಾತಂತ್ರ್ಯದ ರಾತ್ರಿ) ಎಂದು ಕರೆಯಲಾಗುತ್ತದೆ. ಏಕೆಂದರೆ ಈ ದಿನ ಅಲ್ಲಾಹನು ನರಕಕ್ಕೆ ಗುರಿಯಾಗಿದ್ದ ತನ್ನ ಸೇವಕರನ್ನು ಮುಕ್ತಗೊಳಿಸುತ್ತಾನೆ. ಮುಂಬರುವ ವರ್ಷದಲ್ಲಿ ಆ ವ್ಯಕ್ತಿಯ ಜೀವನ, ಅವನ ಪೋಷಣೆ ಮತ್ತು ಹಜ್ (ತೀರ್ಥಯಾತ್ರೆ) ಮಾಡಲು ಅವರಿಗೆ ಅವಕಾಶವಿದೆಯೇ ಎಂದು ಈ ರಾತ್ರಿ ನಿರ್ಧರಿಸಲಾಗುತ್ತದೆ. ಮುಸ್ಲಿಂ ಸಮುದಾಯದ ಸದಸ್ಯರು ಈ ದಿನ ಮಸೀದಿಗಳು ಮತ್ತು ಸ್ಮಶಾನಗಳಿಗೆ ಭೇಟಿ ನೀಡಿ ಪ್ರಾರ್ಧಿಸುವ ಸಂಪ್ರದಾಯವಿದೆ.
ಇನ್ನು ಶಾಬಾನ್ ಇಸ್ಲಾಮಿಕ್ ಕ್ಯಾಲೆಂಡರ್ನ 8ನೇ ತಿಂಗಳು. ಈ ತಿಂಗಳ 14 ಮತ್ತು 15 ರ ನಡುವಿನ ರಾತ್ರಿಯನ್ನು ವಿಶ್ವದಾದ್ಯಂತ ಶಾಬ್-ಎ-ಬರಾತ್ ಎಂದು ಆಚರಿಸಲಾಗುತ್ತದೆ. ಪವಿತ್ರ ರಂಜಾನ್ ಮಾಸಕ್ಕೆ 15 ದಿನಗಳ ಮೊದಲು ಈ ದಿನ ಆಚರಿಸಲಾಗುತ್ತೆ. ಹಾಗೂ ಶಾಬಾನ್ನ 15ನೇ ದಿನದಂದು ಉಪವಾಸ ಸಹ ಮಾಡಲಾಗುತ್ತೆ. ಅನೇಕ ಕಡೆಗಳಲ್ಲಿ, ಶಾಬ್-ಎ-ಬರಾತ್ನಂದು ಅನೇಕ ಮುಸ್ಲಿಮರು ಕ್ಷಮೆಯ ರಾತ್ರಿ ಎಂದು ಪೂಜಿಸುತ್ತಾರೆ. ಇಡೀ ರಾತ್ರಿ ಅಲ್ಲಾಹ್ನನ್ನು ಅವರ ಆಶೀರ್ವಾದವನ್ನು ದಯಪಾಲಿಸುವಂತೆ ಕೇಳಿಕೊಳ್ಳುತ್ತಾರೆ. ಹಾಗೂ ತಮ್ಮ ಪೂರ್ವಜರನ್ನು ಕ್ಷಮಿಸುವಂತೆ ಅಲ್ಲಾಹ್ನನ್ನು ಕೇಳಿಕೊಳ್ಳುತ್ತ ಪ್ರಾರ್ಥನೆಗಳನ್ನು ಮಾಡುತ್ತಾರೆ. ಈ ರಾತ್ರಿ ಅಲ್ಲಾಹ್ನು ಎಲ್ಲಾ ಪಾಪಗಳನ್ನು ಕ್ಷಮಿಸುತ್ತಾನೆ ಮತ್ತು ಮುಂದಿನ ವರ್ಷಕ್ಕೆ ಜನರ ಭಾಗ್ಯವನ್ನು ಸಹ ನಿರ್ಧರಿಸುತ್ತಾನೆ ಎಂಬ ನಂಬಿಕೆ ಇದೆ. ಈ ದಿನವನ್ನು ಶಾಬ್-ಎ-ರಾತ್, ಬರಾ ನೈಟ್ ಮತ್ತು ಮಿಡ್-ಶಾಬಾನ್ ಎಂದೂ ಸಹ ಕರೆಯುತ್ತಾರೆ. ಹೆಚ್ಚುವರಿಯಾಗಿ, ಟ್ವೆಲ್ವರ್ ಶಿಯಾ ಮುಸ್ಲಿಮರು ಈ ದಿನದಂದು ಮುಹಮ್ಮದ್ ಅಲ್-ಮಹ್ದಿ (Muhammad al-mahdi)ಅವರ ಜನ್ಮದಿನವಾಗಿಯೂ ಆಚರಿಸುತ್ತಾರೆ.
ಹದೀಸ್ ಪ್ರಕಾರ ಶಾಬ್-ಎ-ಬರಾತ್ ಏನು? ಕುರಾನ್ನಲ್ಲಿ ಈ ಹಬ್ಬದ ರಾತ್ರಿಯ ಮಹತ್ವದ ಬಗ್ಗೆ ಸ್ಪಷ್ಟ ಮಾಹಿತಿ ಅಥವಾ ಹೇಳಿಕೆ ನೀಡುವಂತಹ ಯಾವುದೇ ಸಹೀಹ್ ಹದೀಸ್, ಪ್ರವಚನಗಳಿಲ್ಲ. ಆದ್ರೆ ದಕ್ಷಿಣ ಏಷ್ಯಾದಲ್ಲಿ, ಅನೇಕ ಜನರು ಈ ರಾತ್ರಿಯನ್ನು ಆಚರಿಸುತ್ತಾರೆ. ಅಲ್ಲಾಹ್ನ ಆರಾಧನೆಯಲ್ಲಿ ರಾತ್ರಿಯನ್ನು ಕಳೆಯುತ್ತಾರೆ. ಆದ್ರೆ ಈ ಹಬ್ಬದ ರಾತ್ರಿಯ ಮಹತ್ವ ಮತ್ತು ಮಹಿಮೆ ತಿಳಿಸುವ ಉಲ್ಲೇಖಗಳನ್ನು ಕೆಲ ದೈಫ್ ಹದೀಸ್ಗಳಲ್ಲಿ ಕಾಣಬಹುದು.
ಸದ್ಯ ರಾಜ್ಯದಲ್ಲಿ ಕೊರೊನಾ ಎರಡನೇ ಅಲೆಯ ಭೀತಿ ಎದುರಾಗಿದ್ದು ರಾಜ್ಯ ಸರ್ಕಾರ ಮಾರ್ಗಸೂಚಿಯನ್ನು ಹೊರಡಿಸಿದೆ. ಹಬ್ಬದ ಸಮಯದಲ್ಲಿ ಗುಂಪುಗೂಡದಂತೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಆಚರಣೆ ನಿರ್ಬಂಧಿಸಿ ಆದೇಶ ಹೊರಡಿಸಿದೆ. ಯುಗಾದಿ, ಹೋಳಿ, ಶಬ್ ಎ ಬರತ್, ಗುಡ್ ಫ್ರೈಡೇ ಮುಂತಾದ ಎಲ್ಲಾ ಹಬ್ಬ ಹರಿದಿನಗಳಲ್ಲಿ ಗುಂಪುಗೂಡದಂತೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಆಚರಣೆ ನಿರ್ಬಂಧಿಸಿ ಆದೇಶಿಸಿದೆ. ಸಾರ್ವಜನಿಕ ಸ್ಥಳ, ಮೈದಾನ, ಪಾರ್ಕ್, ಮಾರ್ಕೆಟ್ ಹಾಗೂ ಪ್ರಾರ್ಥನಾ ಮಂದಿರಗಳಲ್ಲಿ ಆಚರಿಸುವುದಕ್ಕೆ ನಿಷೇಧ ಹೇರಲಾಗಿದೆ. ಇದಲ್ಲದೆ, ಆದೇಶ ಉಲ್ಲಂಘಿಸಿದರೆ ಎನ್ಡಿಎಂಎ ಕಾಯ್ದೆಯಡಿ ಕ್ರಮ ಜರುಗಿಸಲಾಗುವುದು ಎಂದು ಕ್ರಮಕೈಗೊಳ್ಳುವುದಾಗಿ ರಾಜ್ಯ ಸರ್ಕಾರದಿಂದ ಎಚ್ಚರಿಕೆ ನೀಡಲಾಗಿದೆ.
ಇದನ್ನೂ ಓದಿ: Shab-e-Miraj 2021: ಶಬ್-ಎ-ಮಿರಾಜ್, ತಿಳಿಯಿರಿ ರಜಬ್ ತಿಂಗಳ ಈ ಪವಿತ್ರ ದಿನದ ಪ್ರಾಮುಖ್ಯತೆ