AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tv9 Facebook Live | ಕ್ರಿಸ್​ಮಸ್, ಹೊಸವರ್ಷದ ಸಂಭ್ರಮ ನಿಷೇಧ ಎಷ್ಟು ಸರಿ?

ಕೊರೊನಾ ನಡುವೆ ಕ್ರಿಸ್​ಮಸ್ ಹಾಗೂ ಹೊಸವರ್ಷ ಆಚರಣೆಗೆ ಸಂಬಂಧಿಸಿ ಸರ್ಕಾರ ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ. ಈ ವಿಚಾರಗಳು ಎಷ್ಟರ ಮಟ್ಟಿಗೆ ಸರಿ ಅಥವಾ ಪರಿಣಾಮಕಾರಿ, ಈ ಬಾರಿಯ ಹೊಸ ವರ್ಷಾಚರಣೆ ಹೇಗಿರಲಿದೆ ಎಂಬ ಬಗ್ಗೆ ಟಿವಿ9 ಫೇಸ್​ಬುಕ್ ಲೈವ್​ನಲ್ಲಿ ಸಂವಾದ ನಡೆಯಿತು.

Tv9 Facebook Live | ಕ್ರಿಸ್​ಮಸ್, ಹೊಸವರ್ಷದ ಸಂಭ್ರಮ ನಿಷೇಧ ಎಷ್ಟು ಸರಿ?
ಪಬ್ ಮಾಲಿಕ ಕಿರಣ್​​ರಾಜ್ (ಎಡ), ರೂಪದರ್ಶಿ ಬಬಿತಾ (ಮಧ್ಯ), ಶ್ವಾಸಕೋಶತಜ್ಞ ಡಾ. ಚೇತನ್ (ಬಲ)
TV9 Web
| Updated By: ganapathi bhat|

Updated on:Apr 06, 2022 | 11:33 PM

Share

ಬೆಂಗಳೂರು: ಕೊರೊನಾ ನಡುವೆ ಕ್ರಿಸ್​ಮಸ್ ಹಾಗೂ ಹೊಸವರ್ಷ ಆಚರಣೆಗೆ ಸಂಬಂಧಿಸಿ ಸರ್ಕಾರ ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ. ಚರ್ಚ್, ಮಾಲ್, ಹೊಟೇಲ್ ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ಪಾಲಿಸಬೇಕಾದ ನಿಯಮಾವಳಿಗಳನ್ನು ರೂಪಿಸಿದೆ. ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಅವರ ಆದೇಶದಂತೆ ಕ್ರಿಸ್​ಮಸ್ ಮತ್ತು ಹೊಸವರ್ಷಾಚರಣೆ ವೇಳೆ ಮಾಸ್ಕ್​, ಸಾಮಾಜಿಕ ಅಂತರವಿಲ್ಲದೆ ಹೆಚ್ಚು ಜನ ಸೇರುವಂತಿಲ್ಲ, ಹಸ್ತಲಾಘವ, ಆಲಿಂಗನ ಮಾಡುವಂತಿಲ್ಲ.

ಆದರೆ, ಈ ವಿಚಾರಗಳು ಎಷ್ಟರ ಮಟ್ಟಿಗೆ ಸರಿ ಅಥವಾ ಪರಿಣಾಮಕಾರಿ, ಈ ಬಾರಿಯ ಹೊಸ ವರ್ಷಾಚರಣೆ ಹೇಗಿರಲಿದೆ ಎನ್ನುವ ಪ್ರಶ್ನೆಯನ್ನು ಕೇಂದ್ರೀಕರಿಸಿ ಶುಕ್ರವಾರ, ಟಿವಿ9 ಫೇಸ್​ಬುಕ್ ಲೈವ್ ಸಂವಾದ ನಡೆಸಿತು. ಪಬ್ ಮಾಲಿಕ ಕಿರಣ್​ರಾಜ್, ಶ್ವಾಸಕೋಶತಜ್ಞ ಡಾ.ಚೇತನ್ ಹಾಗೂ ರೂಪದರ್ಶಿ ಬಬಿತಾ ಸಂವಾದದಲ್ಲಿ ಭಾಗವಹಿಸಿದ್ದರು. ಆ್ಯಂಕರ್ ಆನಂದ್ ಬುರ್ಲಿ ಕಾರ್ಯಕ್ರಮ ನಡೆಸಿಕೊಟ್ಟರು.

‘ಧಾರ್ಮಿಕ ಕೇಂದ್ರಗಳು, ದೇವಾಲಯ, ಮದುವೆ ಸಮಾರಂಭಗಳಲ್ಲಿ ಬೇಕಾದಷ್ಟು ಜನರು ಸೇರುತ್ತಿದ್ದಾರೆ. ಆದರೆ, ಹೊಸವರ್ಷಕ್ಕೆ ಜನರು ಆಲಿಂಗನ ಮಾಡುವಂತಿಲ್ಲ, ಹಸ್ತಲಾಘವ ಮಾಡುವಂತಿಲ್ಲ ಎನ್ನುವುದು ಎಷ್ಟು ಸರಿ. ಅದೂ ಕೂಡ ಹೊಸವರ್ಷದ ದಿನದಂದು ಈ ನಿಯಮ ವಿಧಿಸುವುದರಿಂದ ಏನು ಉಪಯೋಗ’ ಎಂದು ಪಬ್ ಮಾಲೀಕ ಕಿರಣ್​ರಾಜ್ ಪ್ರಶ್ನಿಸಿದರು.

ಈ ಬಗ್ಗೆ ಸಹಮತ ಸೂಚಿಸಿದ ಶ್ವಾಸಕೋಶತಜ್ಞ ಡಾ.ಚೇತನ್, ಬರೀ ಆ ದಿನದ ನಿಯಮಾವಳಿಗಳಿಂದ ಕೊರೊನಾ ಇಲ್ಲವಾಗುತ್ತದೆ ಅನ್ನುವುದು ಭ್ರಮೆಯೇ ಆಗಿದೆ ಎಂದರು. ತುಂಬಾ ಜನರ ಸಂಪರ್ಕ ಮತ್ತು ಇತರರೊಂದಿಗೆ ಆಪ್ತವಾಗಿ ವ್ಯವಹರಿಸುವುದರಿಂದ ಕೊರೊನಾ ಹರಡುತ್ತದೆ ಎಂಬುದು ನಿಜ. ಆದರೆ, ದಿನದ ನಿರ್ಬಂಧದಿಂದ ಎಲ್ಲವನ್ನೂ ನಿಯಂತ್ರಿಸುವುದು ಸಾಧ್ಯವಿಲ್ಲ ಎಂದು ತಿಳಿಸಿದರು. ಜನರಿಗೆ ಕೊರೊನಾ ಬಗ್ಗೆ ಅರಿವು ಬರಬೇಕು. ವೈಜ್ಞಾನಿಕ ಮತ್ತು ತಾರ್ಕಿಕವಾಗಿ ರೋಗವನ್ನು ಅರ್ಥೈಸಿಕೊಳ್ಳುವ ಸಾಮರ್ಥ್ಯ ಬೇಕು ಎಂದು ವಿವರಿಸಿದರು.

ಆರ್ಥಿಕತೆ ಸ್ಥಿರವಾಗಲು ಅಂಗಡಿ ಮುಂಗಟ್ಟು, ಹೊಟೇಲ್ ಮುಂತಾದ ವ್ಯವಹಾರಗಳನ್ನು ಮತ್ತೆ ಆರಂಭಿಸಿದ್ದೇವೆ. ಈಗ ಲಾಭದ ಹೊತ್ತು ಬಂದಾಗ ಮತ್ತೆ ಮುಚ್ಚಿ ಎನ್ನುತ್ತಿದ್ದಾರೆ ಎಂದು ಪಬ್ ಮಾಲಿಕ ಕಿರಣ್​ರಾಜ್ ಕೇಳಿದರು. ಮನುಷ್ಯರು ಸಮಾಜಜೀವಿಗಳು. ಅವರಿಗೆ ಹೊರಗೆ ಹೋಗಬೇಕು, ಖುಷಿಯ ಕ್ಷಣ ಆಸ್ವಾದಿಸಬೇಕು ಎಂಬ ಯೋಚನೆಗಳು ಇರುತ್ತವೆ. ಕ್ರಿಸ್​ಮಸ್, ಹೊಸವರ್ಷಕ್ಕೆ ಒಂದಷ್ಟು ಸಂಪಾದನೆ ಮಾಡಿಕೊಳ್ಳುವ ಹಾಡುಗಾರರು, ಕಲಾವಿದರು ಇರುತ್ತಾರೆ.‌ ಇದೀಗ ಅವರೆಲ್ಲರಿಗೂ ಕಷ್ಟವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಪ್ರತೀ ಬಾರಿಯ ಆದಾಯಕ್ಕಿಂತ ಈ ವರ್ಷ ಶೇ.60ರಿಂದ 70ರಷ್ಟು ಲಾಭಾಂಶ ಕಡಿಮೆಯಾಗುವ ಲಕ್ಷಣವಿದೆ. ₹ 1 ಲಕ್ಷ ಆದಾಯ ಇದ್ದರೆ, ಈ ಬಾರಿ ಕೇವಲ 40 ಸಾವಿರ ವ್ಯವಹಾರ ನಡೆಯಬಹುದಷ್ಟೆ ಎಂದು ಅವರು ಅಂದಾಜಿಸಿದರು. ಇದರಿಂದ ಕೆಲಸಗಾರರಿಗೆ ಬೋನಸ್, ನ್ಯೂ ಇಯರ್ ಗಿಫ್ಟ್ ಕೊಡುವುದೆಲ್ಲಾ ಕಷ್ಟ ಆಗಲಿದೆ ಎಂದು ತಿಳಿಸಿದರು.

ಜನರ ಭಾವದ‌ ಪ್ರಕಾರ ನೋಡಿದರೆ, ಅವರು ನಿಯಮಾವಳಿಗಳನ್ನು ಸ್ವೀಕರಿಸಲು ತಯಾರಿಲ್ಲ. ಸಂಭ್ರಮಾಚರಣೆ, ಬ್ಯುಸಿನೆಸ್​ಗಳಿಗೆ ಹೆಚ್ಚು ಮಹತ್ವ ಕೊಡುತ್ತಾರೆ ಎಂದು ಡಾ. ಚೇತನ್ ಅಭಿಪ್ರಾಯಪಟ್ಟರು. ಜನರಿಗೆ ತಡೆ ಹೇರುವುದಕ್ಕಿಂತ ಹೆಚ್ಚಾಗಿ ಅವರಲ್ಲಿ ಜಾಗೃತಿ ಮೂಡಿಸೋಣ. ಅವರಿಗೆ ಶಿಕ್ಷಣ ಕೊಡೋಣ. ಕೊರೊನಾ ಲಕ್ಷಣ ಕಂಡುಬಂದಲ್ಲಿ ಮರುಯೋಚನೆ ಮಾಡದೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವಂತೆ ನೋಡಿಕೊಳ್ಳೋಣ. ಆಸ್ಪತ್ರೆ, ವೈದ್ಯಕೀಯ ಸೌಲಭ್ಯಗಳ ಗುಣಮಟ್ಟ ಹೆಚ್ಚಿಸೋಣ ಎಂದು ಮಾತನಾಡಿದರು. ಒಂದುವೇಳೆ ಜನರಿಗೆ ನಿರ್ಬಂಧ ಹೇರುವುದೇ ಆದರೆ, ಎಲ್ಲಾ ಸಂದರ್ಭದಲ್ಲೂ ನಿರ್ಬಂಧ ವಿಧಿಸಬೇಕು. ಆರ್.ಆರ್. ನಗರ, ಸಿರಾದಲ್ಲಿ ಯಾಕೆ ಚುನಾವಣಾ ಕ್ಯಾಂಪೇನ್ ಮಾಡಬೇಕಿತ್ತು. ಅಲ್ಲಿ ಮಾಸ್ಕ್ ಇಲ್ಲದೆ ಸಾವಿರಾರು ಸಂಖ್ಯೆಯಲ್ಲಿ ಜನ ಸೇರುತ್ತಿದ್ದರು.‌ ಅದರಿಂದ ಕೊರೊನಾ ಮತ್ತಷ್ಟು ಹೆಚ್ಚಾಗ್ತಿರ್ಲಿಲ್ವಾ? ಎಂದು ಸರ್ಕಾರದ ನಿಲುವನ್ನು ಪ್ರಶ್ನಿಸಿದರು.

ಹೊಸವರ್ಷ, ಕ್ರಿಸ್​ಮಸ್ ಆಚರಣೆಗೆ ಪಬ್​ನಲ್ಲಿ ವಹಿಸಿರುವ ಸೂಕ್ತ ಮುಂಜಾಗರೂಕತಾ ಕ್ರಮಗಳ ಬಗ್ಗೆ ಕಿರಣ್ ​ರಾಜ್​ ವಿವರಿಸಿದರು. ಟೇಬಲ್​ಗಳ ನಡುವೆ ಗ್ಲಾಸ್ ಬ್ಯಾರಿಕೇಡ್ಸ್ ಹಾಕಿದ್ದೇವೆ. ಹೆಚ್ಚುವರಿ ಬೌನ್ಸರ್, ಗಾರ್ಡ್​ಗಳನ್ನು ನೇಮಿಸಿದ್ದೇವೆ. ತಾಪಮಾನ ಪರೀಕ್ಷೆ, ಸ್ಯಾನಿಟೈಸರ್ ಬಳಕೆ, ಶುಚಿತ್ವ ಕಾಪಾಡಿಕೊಳ್ಳಲು ವ್ಯವಸ್ಥೆ ರೂಪಿಸಲಾಗುವುದು ಎಂದು ತಿಳಿಸಿದರು.

ರೂಪದರ್ಶಿ ಬಬಿತಾ ಮಾತನಾಡಿ, ಪ್ರತಿ ವರ್ಷದಂತೆ ಈ ಬಾರಿ ಹೊಸವರ್ಷ ಆಚರಣೆ ಸಾಧ್ಯವಾಗುತ್ತಿಲ್ಲ. ಆ ಬಗ್ಗೆ ಬೇಸರವಿದೆ. ಸಂಪೂರ್ಣ ಹೆದರಿಕೊಂಡು ಮನೆಯಲ್ಲೇ ಕುಳಿತುಕೊಳ್ಳುವುದೂ ಕಷ್ಟ. ನಮ್ಮ ಸುರಕ್ಷೆಗಾಗಿ ಸರ್ಕಾರ ನಿಯಮ ರೂಪಿಸಿದೆ. ಅದನ್ನು ಗೌರವಿಸಬೇಕು. ಸಂಭ್ರಮಾಚರಣೆಯಲ್ಲಿ ನಮ್ಮ ಬಗ್ಗೆ ನಾವು ಕಾಳಜಿವಹಿಸಿಕೊಳ್ಳಬೇಕು ಎಂದರು.

ಹೊಸವರ್ಷದ ಸಂಭ್ರಮಕ್ಕೆ ಎಂ.ಜಿ.ರಸ್ತೆ ಸುತ್ತಮುತ್ತ ವಾಹನ ಸಂಚಾರ ನಿರ್ಬಂಧ

Published On - 6:25 pm, Fri, 18 December 20