AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಡಿ ಜಿಲ್ಲೆಯಲ್ಲಿ ಶತಮಾನಗಳಿಂದ ಇದೆ ಈ ಬಲಿಷ್ಠ ಅರಮನೆ! ಆದ್ರೆ ಇಲ್ಲಿ ನೆಲೆಸಿದ್ದವರಿಗೆ ಸಂತಾನ ಕುಡಿಯೇ ಇಲ್ಲ

ನಿಜಾಮರ ಕಾಲದ ಈ ಮನೆ ಸುಮಾರು 300 ವರ್ಷಗಳಷ್ಟು ಹಳೆಯದಾಗಿದ್ದು, ಬೀದರ್ ಜಿಲ್ಲೆ ಹುಮ್ನಾಬಾದ ತಾಲೂಕಿನ ದುಬಲಗುಂಡಿ ಗ್ರಾಮದಲ್ಲಿ ಇದ್ದು, ಸುಸಜ್ಜಿತವಾದ 27 ಕೋಣೆ ಹೊಂದಿದ್ದು, 3 ಶತಮಾನಗಳು ಉರಳಿದರು ಮನೆ ಮಾತ್ರ ಅಚ್ಚಳಿಯದೇ ಹಾಗೆ ಉಳಿದು ಬಿಟ್ಟಿದೆ.

ಗಡಿ ಜಿಲ್ಲೆಯಲ್ಲಿ ಶತಮಾನಗಳಿಂದ ಇದೆ ಈ ಬಲಿಷ್ಠ ಅರಮನೆ! ಆದ್ರೆ ಇಲ್ಲಿ ನೆಲೆಸಿದ್ದವರಿಗೆ ಸಂತಾನ ಕುಡಿಯೇ ಇಲ್ಲ
ನಿಜಾಮರ ಕಾಲದ ಬೃಹತ್ತಾಕಾರದ ಮನೆ
preethi shettigar
| Updated By: ಸಾಧು ಶ್ರೀನಾಥ್​|

Updated on:Dec 18, 2020 | 5:40 PM

Share

ಬೀದರ್: ನಿಜಾಮರ ಕಾಲದಲ್ಲಿ ನಿರ್ಮಾಣವಾದ ಬೃಹತ್ತಾದ ಅರಮನೆಯದು. 2 ಎಕರೆ ಪ್ರದೇಶದಲ್ಲಿರುವ ಈ ಮನೆಯಲ್ಲಿ ವಿಶಾಲವಾದ 27 ಕೊಠಡಿಗಳಿವೆ. ಮುಂಬಾಗಿಲಿನ ಹೊಸ್ತಿಲಿನಿಂದ ಹಿಡಿದು ಹಿತ್ತಲ ಮನೆ ಬಾಗಿಲ ತನಕ ಅಲ್ಲಿ ಎಲ್ಲವೂ ಪರಿಪೂರ್ಣ. ಹಾಗಿದ್ರೆ ಇದ್ಯಾವ ಅರಮನೆ ಅಂತಿರಾ ನೀವೇ ನೋಡಿ..

ವಿಶಾಲವಾದ ಮನೆಯ ಒಳಾಂಗಣ

ಬೀದರ್ ಜಿಲ್ಲೆಯ ಪ್ರವಾಸಿ ಕೇಂದ್ರವಾದ ಈ ಬೃಹತ್ತಾದ ಮನೆ ಇಂದು ನಿನ್ನೆಯದಲ್ಲ. ಈ ಮನೆಯಲ್ಲಿ ಕನ್ನಡದ ಸುಮಾರು 4 ಸಿನಿಮಾಗಳು ಚಿತ್ರೀಕರಣವಾಗಿವೆ. ಬೀದರ್ ಕೋಟೆಗೆ ಬಂದು ಚಿತ್ರೀಕರಣ ಮಾಡುವವರೆಲ್ಲ ಈ ಮನೆಗೆ ಬಂದು ಹೋಗೋದು ಗ್ಯಾರೆಂಟಿ.

ಪುರಾತನ ಕಾಲದ ಪಾತ್ರೆಗಳು

ವಿಶಾಲವಾದ ಪ್ರಾಂಗಣ, ಗೋಡೆ ತುಂಬಾ ನವಾಬ ಕಾಲದ ಪೋಟೋಗಳು, ಮನೆಯ ತುಂಬಾ ಪುರಾತನ ಕಾಲದ ತಾಮ್ರದ ಪಾತ್ರೆಗಳು, ಗೋಡೆ ಮೇಲಿನ ಗಡಿಯಾರ, ನೆಲದ ಮೇಲಿನ ಮೇಜು, ಮೂಲೆಯಲ್ಲಿರುವ ಕಬಾರ್ಡ್, ಚೇರು ಇವೆಲ್ಲವೂ ಕೂಡ 100 ವರ್ಷದಷ್ಟು ಹಳೆಯ ಸಾಮಗ್ರಿಗಳು. ತುರಿಯೋ ಮಣೆಯಿಂದ ಹಿಡಿದು ನೀರು ತುಂಬಿಡುವ ಬಿಂದಿಗೆ ವರೆಗೆ ಎಲ್ಲವೂ ಪುರಾತನವಾದವು. ಈ ಮನೆಯನ್ನ ಹೊರಗಿನಿಂದ ನೋಡಿದ್ರೆ ಯಾವುದೋ ನಿಜಾಮನ ಕಾಲದ ಮನೆಯಾಗಿರಬೇಕು ಅಂದುಕೊಳ್ತಿವಿ.

ಈ ಮನೆಯಲ್ಲಿ ವಾಸವಿದ್ದ ಜನರ ಫೋಟೊ

ಹೌದು ಈ ಮನೆ ಸುಮಾರು 300 ವರ್ಷಗಳಷ್ಟು ಹಳೆಯದಾಗಿದ್ದು, ಬೀದರ್ ಜಿಲ್ಲೆ ಹುಮ್ನಾಬಾದ ತಾಲೂಕಿನ ದುಬಲಗುಂಡಿ ಗ್ರಾಮದಲ್ಲಿ ಇದೆ. ಇದು ಸುಸಜ್ಜಿತವಾದ 27 ಕೋಣೆ ಹೊಂದಿದ್ದು, 3 ಶತಮಾನಗಳು ಉರುಳಿದರು ಮನೆ ಮಾತ್ರ ಅಚ್ಚಳಿಯದೇ ಹಾಗೆ ಉಳಿದು ಬಿಟ್ಟಿದೆ. ಈ ಮನೆಯ ಪ್ರತಿಯೊಂದು ವಸ್ತುವು ಕೂಡಾ ಗತಕಾಲದ ಇತಿಹಾಸವನ್ನ ನೆನಪಿಸುತ್ತಿದ್ದು ಹುಮನಾಬಾದ್ ತಾಲೂಕಿಗೆ ಈ ಮನೆ ಕಿರೀಟ ಪ್ರಾಯದಂತೆ ಗೋಚರಿಸುತ್ತಿದೆ.

ಅಂದಿನ ಕಾಲದ ಕಾಯಿ ತುರಿಯುವ ಮಣೆ

ಶತ ಶತಮಾನಗಳಿಂದಲೂ ಈ ಮನೆಯಲ್ಲಿ ಅದೆಷ್ಟೋ ಕುಟುಂಬಗಳ ವಂಶಸ್ಥರು ಬಾಳಿ ಬದುಕಿ ಹೋಗಿದ್ದಾರೆ. ಆದರೆ ಈ ಮನೆಯಲ್ಲಿ ವಾಸವಿದ್ದವರೆಲ್ಲರಿಗೂ ಗಂಡು ಸಂತಾನವೇ ಈವರೆಗೆ ಆಗಿಲ್ಲ ಎನ್ನುವುದು ವಿಪರ್ಯಾಸ. 10ಕ್ಕೂ ಹೆಚ್ಚು ಕುಟುಂಬಗಳು ಇಲ್ಲಿ ವಾಸವಾಗಿದ್ದರೂ ಇಲ್ಲಿಯವರೆಗೂ ಕೂಡಾ ಗಂಡು ಮಕ್ಕಳು ಇವರಿಗೆ ಆಗಿಲ್ಲ. ಎಲ್ಲರೂ ಕೂಡಾ ದತ್ತು ಪುತ್ರರನ್ನ ಪಡೆದುಕೊಂಡು ತಮ್ಮ ವಂಶವನ್ನ ಬೆಳೆಸುತ್ತಿದ್ದಾರೆ.

ಅಂದಿನ ಅಪರೂಪದ ಪಾತ್ರೆಗಳು

ಗಡಿ ಜಿಲ್ಲೆಯಲ್ಲಿ ಸುಸಜ್ಜಿತವಾದ ಅರಮನೆ ಇರುವುದು ಆಶ್ಚರ್ಯಕರ ಇನ್ನು ಈ ಮನೆಯಲ್ಲಿ ಅನೇಕ ಚಿತ್ರಗಳು ಚಿತ್ರೀಕರಣವಾಗಿದ್ದು, ಉತ್ತರ ಕರ್ನಾಟಕದ ಹಳ್ಳಿ ಸೊಗಡಿನ ಚಿತ್ರಗಳ ಚಿತ್ರೀಕರಣಕ್ಕೆ ಈ ಮನೆ ಹೇಳಿ ಮಾಡಿಸಿದಷ್ಟು ಸುಸಜ್ಜಿತವಾಗಿದೆ. ಜೊತೆಗೆ ಈ ಮನೆಯಲ್ಲಿ ಅರಮನೆಯಲ್ಲಿರಬೇಕಾದ ಎಲ್ಲಾ ವಸ್ತುಗಳು ಇವೆ. ಸುಮಾರು 2 ಎಕರೆ ಪ್ರದೇಶದಲ್ಲಿ ಕಟ್ಟಿರೋ ಈ ಮನೆಯನ್ನ ನೋಡಲೇಂದೇ ಜನ ದೂರದ ಊರಿನಿಂದ ಬರ್ತಾರೆ. ಆದ್ರೆ ವಿಪರ್ಯಾಸ ಅಂದ್ರೆ ಈ ಎಲ್ಲಾ ಸುಪ್ಪತ್ತಿಗೆಯನ್ನ ಅನುಭವಿಸುವುದಕ್ಕೆ ಈ ಮನೆಯಲ್ಲಿ ಗಂಡು ಸಂತಾನವೇ ಇಲ್ಲ.

ಸುಮಾರು 3 ತಲೆಮಾರುಗಳಿಂದ ಈ ಮನೆಯಲ್ಲಿ ಗಂಡು ಸಂತಾವೇ ಆಗಿಲ್ಲ. ಅದು ದೇವ ಶಾಪವೋ ಎನೋ ಗೊತ್ತಿಲ್ಲ ಎನ್ನುತ್ತಾರೆ ಇಲ್ಲಿನ ಜನತೆ. ಯಾವುದಕ್ಕೂ ಕೊರತೆ ಇಲ್ಲದಿರುವ ಈ ಮನೆಯಲ್ಲಿ ಎಲ್ಲಾ ರೀತಿಯ ಸೌಲಭ್ಯ ಇದ್ದು, ವಿಶೇಷತೆಗಳಿಂದ ಕೂಡಿದೆ. ಬೀದರ್ ಜಿಲ್ಲೆಯಲ್ಲಿ ಹಲವಾರು ತಾಣಗಳಿದ್ದು, ಅವುಗಳಲ್ಲಿ ಈ ಮನೆ ಕೂಡ ವಿಶೇಷವೆನಿಸಿದೆ. ಗಡಿ ಜಿಲ್ಲೆಯಲ್ಲಿ ಈ ರೀತಿಯ ಒಂದು ಸುಸಜ್ಜಿತವಾದ ಅರಮನೆ ಇರುವುದು ಆಶ್ಚರ್ಯಕರ ಸಂಗತಿಯಾಗಿದೆ.

ನಿಜಾಮರ ಕಾಲದ ಮನೆಯ ಹೊರಾಂಗಣ ದೃಶ್ಯ

ಐತಿಹಾಸಿಕ ಸ್ಮಾರಕಗಳು ಪ್ರವಾಸಿಗರ ವೀಕ್ಷಣೆಗೆ ಮುಕ್ತ, ಆದ್ರೆ ಇದನ್ನು ಬಿಟ್ಟು..

Published On - 5:39 pm, Fri, 18 December 20

ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?