ಪೊಲೀಸರ ಕಾರ್ಯಾಚರಣೆ ವೇಳೆ ಸಿಕ್ತು ಕೆಜಿ ಗಟ್ಟಲೇ ಗಾಂಜಾ: 5 ಆರೋಪಿಗಳ ಬಂಧನ
ಪೊಲೀಸರು ನಡೆಸಿದ ಕಾರ್ಯಾಚರಣೆಯ ವೇಳೆ ಗಾಂಜಾ ಮಾರಾಟ ಮಾಡುತ್ತಿದ್ದ ಐವರು ಆರೋಪಿಗಳು ಸೆರೆಸಿಕ್ಕಿದ್ದು, ಆರೋಪಿಗಳ ವಿರುದ್ಧ ವಿರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಡಗು: ಜಿಲ್ಲೆಯ ಪೊಲೀಸರು ನಡೆಸಿದ ಕಾರ್ಯಾಚರಣೆಯ ವೇಳೆ ಗಾಂಜಾ ಮಾರಾಟ ಮಾಡುತ್ತಿದ್ದ ಐವರು ಆರೋಪಿಗಳು ಸೆರೆಸಿಕ್ಕಿದ್ದು, ಆರೋಪಿಗಳ ವಿರುದ್ಧ ವಿರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಧಿತರೆಲ್ಲರೂ ಕೊಡಗು ಜಿಲ್ಲೆ ವಿರಾಜಪೇಟೆ ನಿವಾಸಿಗಳಾಗಿದ್ದು, ಸಾಧಿಕ್ (31), ಅಬ್ದುಲ್ ಜಮೀಲ್ (26), ಕೆ.ಇ.ಕಬೀರ್ (27), ಮೆಲ್ವಿನ್ ಅಂತೋಣಿ (22), ಎಂ.ಎ.ಇಮ್ರಾನ್ (22) ಸದ್ಯ ಪೊಲೀಸರ ಅತಿಥಿಯಾಗಿದ್ದಾರೆ. ಬಂಧಿತರಿಂದ ಪೊಲೀಸರು 50 ಸಾವಿರ ರೂಪಾಯಿ ಮೌಲ್ಯದ 1.480 ಕೆ.ಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಗಾಂಜಾ ಸಾಗಿಸುತ್ತಿದ್ದವ ಪೊಲೀಸರ ಅತಿಥಿಯಾದ, 1.50 ಕೆಜಿ ವಶ
Published On - 9:11 pm, Fri, 18 December 20