ನಿನ್ನೆ-ಮೊನ್ನೆ ತಾಮ್ರದ ಬೆನಿಫಿಟ್​ ಬಗ್ಗೆ ಹೇಳ್ತಾ ಇದ್ದವರು ಈಗ ಉಲ್ಟಾ!

ಕಾಲಾಯ ತಸ್ಮೈ ನಮಃ. ಕಾಲ ಅದೆಷ್ಟು ಬೇಗ ಬದಲಾಗುತ್ತೆ ಅಲ್ವಾ..? ಕಾಲದ ಜೊತೆ ನಮ್ಮ ನಿಮ್ಮ ನಿಲುವು ಕೂಡಾ ಬದಲಾಗುತ್ತೆ. ನಿನ್ನೆ ಮೊನ್ನೆ ತಾಮ್ರದ ಬೆನಿಫಿಟ್ ಬಗ್ಗೆ ಹೇಳ್ತಾ ಇದ್ವಿ? ತಾಮ್ರ ಆರೋಗ್ಯಕ್ಕೆ ಉತ್ತಮ, ತಾಮ್ರ ಸೌಂದರ್ಯ ಹೆಚ್ಚಿಸುತ್ತೆ, ತಾಮ್ರ ಮುಖದ ಕಾಂತಿ ಹೆಚ್ಚಿಸುತ್ತೆ ಹೀಗೆಲ್ಲಾ ಕಥೆಗಳನ್ನು ಕೇಳಿದ್ದೇವೆ.. ಆದ್ರೆ, ಈಗ ಹೊಸ ಸುದ್ದಿ ಬಂದಿದೆ. ತಾಮ್ರ ಕೂಡಾ ವಿಷವಾಗುತ್ತಂತೆ..? ಅಡುಗೆ ಮಾಡೋ ಪಾತ್ರೆಗಳಲ್ಲಿ ತಾಮ್ರದ ಪಾತ್ರವೇ ಶ್ರೇಷ್ಠ ಅಂತ ನಾವೆಲ್ಲಾ ನಂಬಿಕೊಂಡಿದ್ದೇವೆ. ಸಾಮಾನ್ಯವಾಗಿ ನಮ್ಮಲ್ಲಿ ಹೆಚ್ಚಿನವರು […]

ನಿನ್ನೆ-ಮೊನ್ನೆ ತಾಮ್ರದ ಬೆನಿಫಿಟ್​ ಬಗ್ಗೆ ಹೇಳ್ತಾ ಇದ್ದವರು ಈಗ ಉಲ್ಟಾ!
Follow us
ಸಾಧು ಶ್ರೀನಾಥ್​
|

Updated on:Oct 28, 2019 | 2:03 PM

ಕಾಲಾಯ ತಸ್ಮೈ ನಮಃ. ಕಾಲ ಅದೆಷ್ಟು ಬೇಗ ಬದಲಾಗುತ್ತೆ ಅಲ್ವಾ..? ಕಾಲದ ಜೊತೆ ನಮ್ಮ ನಿಮ್ಮ ನಿಲುವು ಕೂಡಾ ಬದಲಾಗುತ್ತೆ. ನಿನ್ನೆ ಮೊನ್ನೆ ತಾಮ್ರದ ಬೆನಿಫಿಟ್ ಬಗ್ಗೆ ಹೇಳ್ತಾ ಇದ್ವಿ? ತಾಮ್ರ ಆರೋಗ್ಯಕ್ಕೆ ಉತ್ತಮ, ತಾಮ್ರ ಸೌಂದರ್ಯ ಹೆಚ್ಚಿಸುತ್ತೆ, ತಾಮ್ರ ಮುಖದ ಕಾಂತಿ ಹೆಚ್ಚಿಸುತ್ತೆ ಹೀಗೆಲ್ಲಾ ಕಥೆಗಳನ್ನು ಕೇಳಿದ್ದೇವೆ.. ಆದ್ರೆ, ಈಗ ಹೊಸ ಸುದ್ದಿ ಬಂದಿದೆ. ತಾಮ್ರ ಕೂಡಾ ವಿಷವಾಗುತ್ತಂತೆ..?

ಅಡುಗೆ ಮಾಡೋ ಪಾತ್ರೆಗಳಲ್ಲಿ ತಾಮ್ರದ ಪಾತ್ರವೇ ಶ್ರೇಷ್ಠ ಅಂತ ನಾವೆಲ್ಲಾ ನಂಬಿಕೊಂಡಿದ್ದೇವೆ. ಸಾಮಾನ್ಯವಾಗಿ ನಮ್ಮಲ್ಲಿ ಹೆಚ್ಚಿನವರು ರಾತ್ರಿ ತಾಮ್ರದ ಚೊಂಬಿನಲ್ಲಿ ನೀರು ಹಾಕಿಟ್ಟು ಮುಂಜಾನೆ ಎದ್ದು ಅದನ್ನು ಕುಡೀತೀವಿ. ಮುಖ ಕಾಂತಿಯುತವಾಗುತ್ತೆ ಅಂತ ಬೀಗ್ತೀವಿ. ಅಷ್ಟೇ ಅಲ್ಲಾ ಅನೀಮಿಯಾ ಅಂದ್ರೆ ರಕ್ತಹೀನತೆಯಿಂದ ಬಳಲ್ತಾ ಇರೋ ಜನರಿಗೆ ಔಷಧಿಯ ರೀತಿ ತಾಮ್ರ ಕೊಡೋದ್ರಿಂದ ಅವರು ಆರೋಗ್ಯವಾಗಿರ್ತಾರೆ ಎನ್ನಲಾಗಿದೆ. ಇದು ಮೊಡವೆಯನ್ನು ಕಡಿಮೆ ಮಾಡುತ್ತೆ, ಹಲ್ಲಿನ ಸವೆತವನ್ನು ನಿಲ್ಲಿಸುತ್ತಂತೆ, ಮಹಿಳೆಯರಲ್ಲಿ ಕಂಡು ಬರುವ ಮೂಳೆ ಸವೆತವನ್ನು ತಡೆಗಟ್ಟುತ್ತಂತೆ. ಅದ್ರ ಜೊತೆ ಜೊತೆಗೆ ಅರ್ಥ್ರೈಟಿಸ್ ಗೂ ಪರಿಹಾರವಾಗುತ್ತಂತೆ. ಇದಲ್ಲದೇ ಇದರಿಂದ ಗಾಯ ಬೇಗ ವಾಸಿಯಾಗುತ್ತಂತೆ.

ಇದನ್ನು ಸಪರೇಟಾಗಿ ತಿನ್ನಬೇಕಿಲ್ಲ. ಯಾಕೆಂದ್ರೆ ನೀವು ನಿತ್ಯ ತಿನ್ನುವ ಕೆಲವು ಆಹಾರಗಳಲ್ಲೂ ತಾಮ್ರದ ಅಂಶವಿದೆ ಅನ್ನೋದನ್ನು ನಾವು ಗಮನಿಸಬೇಕು. ಸಾಮಾನ್ಯವಾಗಿ ಸೀಫುಡ್, ಮಾಂಸ ಮತ್ತು ಧಾನ್ಯಗಳಲ್ಲಿ ತಾಮ್ರದ ಅಂಶವಿದೆ. ಇದೆಲ್ಲಾ ಇದ್ದೂ ತಾಮ್ರದಿಂದ ಅಪಾಯವಿದೆಯಂತೆ. ಕೆಲವೊಂದು ಅಧ್ಯಯನಗಳನ್ನು ಆಧರಿಸಿ ನೋಡಿದಾಗ ಕೆಲವೊಂದು ಅಂಶಗಳು ಬೆಳಕಿಗೆ ಬರ್ತಿವೆ. ಅದ್ರಂತೆ ತಾಮ್ರ ಸೇವನೆ ಅಲ್ಝೈಮರ್ ಕಡಿಮೆ ಮಾಡುತ್ತೆ ಅಂತ ಎಲ್ರೂ ನಂಬಿದ್ದಾರೆ ಆದ್ರೆ, ತಾಮ್ರವನ್ನು ಸೇವಿಸೋದ್ರಿಂದ ಅನುಕೂಲವಾಗುತ್ತೆ ಅನ್ನೋದು ಪೊಳ್ಳು ಅನ್ನೋದು ಗೊತ್ತಾಗುತ್ತೆ. ಇದಲ್ಲದೇ ಡಯಾರಿಯಾದಿಂದ ಆಗುವ ಇನ್ಫ್ಯಾಕ್ಷನಿಗೆ ತಾಮ್ರದ ಅಂಶವನ್ನು ಸೇವನೆಗೆ ನೀಡಿದ್ರೆ ಏನೇನೂ ಉಪಯೋಗವಿಲ್ಲ ಎನ್ನಲಾಗುತ್ತೆ.

ಇಷ್ಟೆಲ್ಲಾ ಉಪಯೋಗಕಾರಿಯಾಗಿರುವ ತಾಮ್ರ ಯಾವಾಗ ಮತ್ತು ಹೇಗೆ ಅಪಾಯಕಾರಿಯಾಗಿರುತ್ತೆ ಅನ್ನೋದನ್ನು ಗಮನಿಸಿದ್ರೆ, ನೀವು ತಾಮ್ರದ ಅಂಶವನ್ನು ಡೈರೆಕ್ಟಾಗಿ ಬಾಯಿಯ ಮೂಲಕ ಸ್ವೀಕರಿಸೋದಿದ್ರೆ ಒಂದು ಅಂಶ ನೆನಪಿರಬೇಕು. ಅದ್ರಂತೆ ನೀವು ದಿನಕ್ಕೆ 10 ಮಿಲಿ ಗ್ರಾಮ್ಸ್ ಗಿಂತ ಜಾಸ್ತಿ ತಾಮ್ರ ಡೈರೆಕ್ಟಾಗಿ ಸೇವಿಸಿದ್ರೆ ಅಪಾಯ. ಹೀಗೆ ಹೆಚ್ಚಾಗಿ ಸೇವಿಸಿದ್ರೆ ಖಂಡಿತಾ ಕಿಡ್ನಿ ಸಮಸ್ಯೆ ಬಂದೇ ಬರುತ್ತೆ. ತಾಮ್ರದ ಪ್ರಮಾಣ ಹೆಚ್ಚಾಗಿ ಸೇವಿಸಿದ್ರೆ ನಿಮಗೆ ತಲೆಸುತ್ತು, ವಾಂತಿ, ರಕ್ತ ಮಿಶ್ರಿತ ಬೇಧಿ, ಜ್ವರ, ಹೊಟ್ಟೆ ನೋವು, ಕಡಿಮೆ ರಕ್ತದೊತ್ತಡ, ರಕ್ತಹೀನತೆ ಮತ್ತು ಹಾರ್ಟ್ ಪ್ರಾಬ್ಲಂ ಬರಬಹುದು ಎನ್ನಲಾಗಿದೆ. ಆದ್ದರಿಂದ ಪ್ರಮಾಣದ ಬಗ್ಗೆ ಎಚ್ಚರವಿರಲಿ.

ಗರ್ಭಿಣಿ ಮತ್ತು ಮಗುವಿಗೆ ಹಾಲುಣಿಸುವ ಮಹಿಳೆ ತಾಮ್ರದ ಪ್ರಮಾಣ ಸೇವನೆಯಲ್ಲಿ ತುಂಬಾ ಎಚ್ಚರದಿಂದಿರಬೇಕು. ಅವರು 14 ರಿಂದ 18 ವರ್ಷ ವಯಸ್ಸಿನವರಾಗಿದ್ದರೆ 8 ಮಿಲಿ ಗ್ರಾಂಗಿಂತ ಹೆಚ್ಚು ತಾಮ್ರದ ಪ್ರಮಾಣ ಸೇವಿಸಿದ್ರೆ ಜೋಕೆ. ವಯಸು 19ರ ನಂತರ 10 ಮಿಲಿ ಗ್ರಾಮ್ ನಷ್ಟು ತಾಮ್ರ ತೆಗೆದುಕೊಳ್ಳುವ ಅವಕಾಶವಿದ್ದರೂ ಅದು ಅಪಾಯದಿಂದ ಹೊರತೇನಲ್ಲಾ. ಮಕ್ಕಳ ಬಗ್ಗೆ ಹೇಳೋದಿದ್ರೆ ಒಂದು ಪಟ್ಟಿಯೇ ಇದೆ. ಆ ಪ್ರಕಾರ 1 ರಿಂದ 3 ವರ್ಷದ ಮಕ್ಕಳಿಗೆ ಒಂದು ಮಿಲಿ ಗ್ರಾಮ್, 4 ರಿಂದ 8 ವರ್ಷದ ಮಕ್ಕಳಿಗೆ 3 ಮಿಲಿ ಗ್ರಾಂ, 9 ರಿಂದ 13 ವರ್ಷದ ಮಕ್ಕಳಿಗೆ 5 ಮಿಲಿಗ್ರಾಮ್ ಅಗತ್ಯಕ್ಕೆ ಬೇಕೆಂದರೆ ಸೇವಿಸಬಹುದು. ಅದಕ್ಕಿಂತ ಹೆಚ್ಚಿನ ಪ್ರಮಾಣ ತಪ್ಪಿಯೂ ಸೇವಿಸಬಾರದು ನೆನಪಿರಲಿ.

ತಾಮ್ರದ ಚಂಬಲ್ಲಿ ನೀರು ಇಟ್ಟು ಕುಡಿದ್ರೆ ಆರೋಗ್ಯ ವೃದ್ಧಿ, ಸೌಂದರ್ಯ ಅಂತ ಹೇಳ್ತಾ ಇದ್ದವರು ಈಗ ಉಲ್ಟಾ ಹೊಡೆದಿದ್ದಾರೆ. ಯಾಕೆಂದರೆ, ತಾಮ್ರದ ಚಂಬಲ್ಲಿ ರಾತ್ರಿ ನೀರಿಟ್ಟು ಬೆಳಿಗ್ಗೆ ಕುಡಿಯುವ ಪರಿಪಾಠ ಮೋಸದ್ದು ಎನನ್ಲಾಗಿದೆ. ಇದರಿಂದ ಆಪಾಯ ಎದುರಾಗಬಹುದು. ಹೀಗೆ ಕುಡಿಯೋದ್ರಿಂದ ನೀರಿನಲ್ಲಿ ಶೇಕಡಾ 4 ಸಾವಿರದಷ್ಟು ತಾಮ್ರದ ಅಂಶ ಹೆಚ್ಚಾಗುತ್ತಂತೆ. ಆಗ ನೀರಿನಲ್ಲಿ ಕಾಪರ್ ಲಿಚ್ಚಿಂಗ್ ಆದಾಗ ಮೆಟಲ್ ಪ್ರಮಾಣ ಹೆಚ್ಚಾಕಿ ಲಿವರ್ ಗೆ ಪ್ರಾಬ್ಲಂ ಆಗುತ್ತೆ ಎನ್ನಲಾಗಿದೆ. ಇದರಿಂದ ಮೆಟಲ್ ದೇಹದಲ್ಲಿ ಸಂಗ್ರಹವಾಗಿ ತೊಂದರೆ ಆಗೋದೇ ಹೆಚ್ಚು. ಆದ್ದರಿಂದ ಅತಿಯಾದ್ರೆ ಅಮೃತವೂ ವಿಷ ಅನ್ನೋದು ಎಲ್ಲರಿಗೂ ನೆನಪಿರಲಿ.

Published On - 7:49 pm, Sun, 27 October 19

ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು