ದೀಪಾವಳಿಯಂದು ಏಕೆ ಮನೆ ಮುಂದೆ ಆಕಾಶ ದೀಪವನ್ನು ಕಟ್ಟಬೇಕು?
ಅಶ್ವಯುಜ ಅಮಾವಾಸ್ಯೆಯನ್ನು ದೀಪಾವಳಿ ಅಮಾವಾಸ್ಯೆಯಾಗಿ ಆಚರಿಸಲಾಗುತ್ತೆ. ಹಿಂದೂ ಧರ್ಮದಲ್ಲಿ ಈ ದಿನಕ್ಕೆ ವಿಶೇಷ ಮಹತ್ವವಿದೆ. ದೀಪಾವಳಿ ಅಮಾವಾಸ್ಯೆಯಂದು ಪಿತೃದೇವತೆಗಳಿಗೆ ತರ್ಪಣವನ್ನು ಬಿಡಬೇಕು. ಗೋಧೂಳಿ ಸಮಯದಲ್ಲಿ ಲಕ್ಷ್ಮೀಪೂಜೆಯನ್ನು ಮಾಡಬೇಕು ಅಂತಾ ಶಾಸ್ತ್ರಗಳಲ್ಲಿ ಉಲ್ಲೇಖವಿದೆ. ದೀಪಾವಳಿ ಅಮಾವಾಸ್ಯೆಯ ಮಾರನೆಯ ದಿನದಿಂದ ಕಾರ್ತಿಕಮಾಸ ಆರಂಭವಾಗುತ್ತೆ. ಪಿತೃಪಕ್ಷದ ಸಂದರ್ಭದಲ್ಲಿ ಭೂಲೋಕಕ್ಕೆ ಬಂದ ಪಿತೃಗಳು ಕಾರ್ತಿಕ ಶುದ್ಧ ಪಾಡ್ಯಮಿಯಂದು ಆಕಾಶಮಾರ್ಗದ ಮೂಲಕ ತಮ್ಮ ತಮ್ಮ ಲೋಕಗಳಿಗೆ ಪ್ರಯಾಣಿಸುತ್ತಿರುತ್ತಾರೆ. ಆ ಕಾಲದಲ್ಲಿ ಅವರಿಗೆ ದಾರಿ ತೋರಿಸುವುದಕ್ಕಾಗಿ ಒಂದು ದೀಪವನ್ನು ನಮ್ಮ ಕಡೆಯಿಂದ ವ್ಯವಸ್ಥೆ ಮಾಡಬೇಕು. ಇದನ್ನೇ […]
ಅಶ್ವಯುಜ ಅಮಾವಾಸ್ಯೆಯನ್ನು ದೀಪಾವಳಿ ಅಮಾವಾಸ್ಯೆಯಾಗಿ ಆಚರಿಸಲಾಗುತ್ತೆ. ಹಿಂದೂ ಧರ್ಮದಲ್ಲಿ ಈ ದಿನಕ್ಕೆ ವಿಶೇಷ ಮಹತ್ವವಿದೆ. ದೀಪಾವಳಿ ಅಮಾವಾಸ್ಯೆಯಂದು ಪಿತೃದೇವತೆಗಳಿಗೆ ತರ್ಪಣವನ್ನು ಬಿಡಬೇಕು. ಗೋಧೂಳಿ ಸಮಯದಲ್ಲಿ ಲಕ್ಷ್ಮೀಪೂಜೆಯನ್ನು ಮಾಡಬೇಕು ಅಂತಾ ಶಾಸ್ತ್ರಗಳಲ್ಲಿ ಉಲ್ಲೇಖವಿದೆ.
ದೀಪಾವಳಿ ಅಮಾವಾಸ್ಯೆಯ ಮಾರನೆಯ ದಿನದಿಂದ ಕಾರ್ತಿಕಮಾಸ ಆರಂಭವಾಗುತ್ತೆ. ಪಿತೃಪಕ್ಷದ ಸಂದರ್ಭದಲ್ಲಿ ಭೂಲೋಕಕ್ಕೆ ಬಂದ ಪಿತೃಗಳು ಕಾರ್ತಿಕ ಶುದ್ಧ ಪಾಡ್ಯಮಿಯಂದು ಆಕಾಶಮಾರ್ಗದ ಮೂಲಕ ತಮ್ಮ ತಮ್ಮ ಲೋಕಗಳಿಗೆ ಪ್ರಯಾಣಿಸುತ್ತಿರುತ್ತಾರೆ. ಆ ಕಾಲದಲ್ಲಿ ಅವರಿಗೆ ದಾರಿ ತೋರಿಸುವುದಕ್ಕಾಗಿ ಒಂದು ದೀಪವನ್ನು ನಮ್ಮ ಕಡೆಯಿಂದ ವ್ಯವಸ್ಥೆ ಮಾಡಬೇಕು. ಇದನ್ನೇ ಆಕಾಶ ದೀಪ ಎನ್ನಲಾಗುತ್ತೆ.
ಆಕಾಶ ದೀಪವು ಭೂಮಿಯ ಮೇಲಿರುವವರಿಗೆ ಬೆಳಕನ್ನು ನೀಡಲು ಉದ್ದೇಶಿಸಿದ್ದಲ್ಲ. ಬದಲಾಗಿ ಪಿತೃದೇವತೆಗಳು ತಮ್ಮ ಲೋಕಕ್ಕೆ ತೆರಳೋಕೆ ದಾರಿ ತೋರಿಸಲು ನೆರವಾಗಲೆಂದು ಆಕಾಶ ದೀಪಗಳನ್ನು ಬಿಡೋ ಪದ್ಧತಿ ಇದೆ. ಇನ್ನು ಈ ಆಕಾಶ ದೀಪದ ಹಿಂದೆ ಪುರಾಣ ಕಥೆಯೊಂದು ಬೆಸೆದುಕೊಂಡಿದೆ. ಅದೇನಂದ್ರೆ ತ್ರೇತಾಯುಗದಲ್ಲಿ ಪಿತೃವಾಕ್ಯ ಪರಿಪಾಲನೆಗಾಗಿ ಕಾಡಿಗೆ ತೆರಳಿದ್ದ ಶ್ರೀರಾಮಚಂದ್ರ ಸೀತೆಯನ್ನು ಕಳೆದುಕೊಳ್ತಾನೆ. ರಾವಣನನ್ನು ವಧಿಸಿ, ಹದಿನಾಲ್ಕು ವರ್ಷಗಳ ನಂತರ ವಿಜಯಿಯಾಗಿ ಅಯೋಧ್ಯೆಗೆ ಮರಳುತ್ತಾನೆ. ಶ್ರೀರಾಮನ ಆಗಮನವನ್ನು ಸ್ವಾಗತಿಸುವ ಮುನ್ನಾ ದಿನ ರಾತ್ರಿ ಕೋಸಲ ದೇಶದ ಜನತೆ ರಾಮನಿಗಾಗಿ ಒಂದು ದೀಪವನ್ನು ಬೆಳಗಿ ಸಂಭ್ರಮಿಸಿದರಂತೆ. ಅದೇ ಆಕಾಶದೀಪಕ್ಕೆ ನಾಂದಿಯಾಯ್ತು ಎನ್ನಲಾಗುತ್ತೆ.
ಆಕಾಶ ಕಂದೀಲು, ಜ್ಯೋತಿ ಕಲಶ, ಆಕಾಶ ಬುಟ್ಟಿ ಎಂಬಿತ್ಯಾದಿ ಹೆಸರುಗಳಿಂದ ಈ ದೀಪಗಳನ್ನು ಕರೆಯಲಾಗುತ್ತೆ. ಶ್ರೀರಾಮನಿಗೆ ಭಕ್ತಿಪೂರ್ವಕವಾಗಿ ಅಂದು ಪ್ರಜೆಗಳು ಅರ್ಪಿಸಿದ ಆಕಾಶ ಕಂದೀಲು ನಂತರದ ದಿನಗಳಲ್ಲಿ ದೀಪಾವಳಿಯ ಸಮಯದಲ್ಲಿ, ಕಾರ್ತಿಕ ಮಾಸದಲ್ಲಿ ಹಚ್ಚಲ್ಪಡುವ ದೀಪವೇ ಆಕಾಶ ಬುಟ್ಟಿಯಾಯ್ತು ಎನ್ನಲಾಗುತ್ತೆ. ಆಕಾಶ ದೀಪವನ್ನು ದೇವರು, ಪೂರ್ವಜರು, ಪಿತೃಗಳ ನೆನಪಿನಲ್ಲಿ ಭಕ್ತಿಯಿಂದ ಹಚ್ಚಲಾಗುತ್ತೆ. ದೀಪ ಹಚ್ಚುವ ಮುನ್ನ ಕೆಲವು ಮಂತ್ರಗಳನ್ನು ಹೇಳಲಾಗುತ್ತೆ.
ಆದ್ರೆ, ಈಗ ಆಕಾಶ ದೀಪ ಆಧುನಿಕ ಸ್ವರೂಪವನ್ನು ಪಡೆದುಕೊಂಡಿದೆ. ಇನ್ನು ಸಾಂಪ್ರದಾಯಿಕವಾಗಿ ಆಕಾಶ ದೀಪವನ್ನು ಹಚ್ಚುವವರು ದೀಪದ ತಳದಲ್ಲಿ ಸ್ವಲ್ಪ ಅಕ್ಕಿಯನ್ನು ಹಾಕ್ತಾರೆ. ನಂತರ ಅದರ ಮೇಲೆ ದೇಸಿ ಹಸುವಿನ ತುಪ್ಪದ ದೀಪವನ್ನು ಇಡ್ತಾರೆ. ಹೂಜಿಯ ಬಾಯನ್ನು ಮಣ್ಣಿನ ಮುಚ್ಚಳದಿಂದಲೇ ಮುಚ್ಚಿ, ಪಾತ್ರೆಯ ಕಂಠದ ಸುತ್ತ ಹಗ್ಗವೊಂದನ್ನು ಕಟ್ಟಿ, ಮನೆಯ ಹೊರಭಾಗದಲ್ಲಿ, ಎತ್ತರದಲ್ಲಿ ಅದನ್ನು ನೇತುಹಾಕ್ತಾರೆ. ಅನಾದಿಕಾಲದಿಂದಲೂ ನಡೆದುಕೊಂಡು ಬಂದಿರೋ ಈ ಸಂಪ್ರದಾಯ ಇಂದಿಗೂ ಮುಂದುವರಿಯುತ್ತಿದೆ.