ರಷ್ಯಾ ಮಹಿಳೆಯರ ಸೌಂದರ್ಯದ ಗುಟ್ಟು ಈಗ ನಿಮ್ಮಮುಂದೆ

ರಷ್ಯಾ ಮಹಿಳೆಯರ ಸೌಂದರ್ಯದ ಗುಟ್ಟು ಈಗ ನಿಮ್ಮಮುಂದೆ

ರಷ್ಯಾದ ಮಹಿಳೆಯರು ತುಂಬಾನೆ ಸುಂದರವಾಗಿರುತ್ತಾರೆ. ರಷ್ಯಾದ ಮಹಿಳೆಯರ ಸ್ಕಿನ್‌ ಮತ್ತು ಕೂದಲು ತುಂಬಾನೆ ಹೆಲ್ತಿಯಾಗಿರುತ್ತದೆ. ಈ ದೇಶಕ್ಕೆ ಬೇರೆ ಬೇರೆ ಕಡೆಗಳಿಂದ ಜನರು ಬಂದು ತಮಗಾಗಿ ಸುಂದರ ವಧುವನ್ನು ಹುಡುಕುತ್ತಾರೆ. ಇದಕ್ಕೆ ಕಾರಣ ರಷ್ಯಾದ ಭೌಗೋಳಿಕ ಮತ್ತು ಜೆನೆಟಿಕ್‌ ಕಂಡೀಶನ್‌ ಆಗಿದೆ. ಆದ್ರೂ ಇದರ ಕ್ರೆಡಿಟ್‌ ಅವರು ಸೇವಿಸುವ ಕೆಲವೊಂದು ಆಹಾರ ಮತ್ತು ಪಾಲಿಸುವ ಬ್ಯೂಟಿ ಸೂತ್ರಕ್ಕೆ ಸಲ್ಲುತ್ತದೆ. ರಷ್ಯಾದ ಮಹಿಳೆಯರು ಮುಖಕ್ಕೆ ಮೊಸರು ಮತ್ತು ಜೇನಿನಿಂದ ಮಾಡಿದ ಫೇಸ್‌ಪ್ಯಾಕ್‌ ಬಳಸ್ತಾರೆ. ಮೊಸರು ಮತ್ತು ಜೇನಿನ ಕಾಂಬಿನೇಷನ್​ನಿಂದ […]

sadhu srinath

|

Oct 24, 2019 | 2:03 PM

ರಷ್ಯಾದ ಮಹಿಳೆಯರು ತುಂಬಾನೆ ಸುಂದರವಾಗಿರುತ್ತಾರೆ. ರಷ್ಯಾದ ಮಹಿಳೆಯರ ಸ್ಕಿನ್‌ ಮತ್ತು ಕೂದಲು ತುಂಬಾನೆ ಹೆಲ್ತಿಯಾಗಿರುತ್ತದೆ. ಈ ದೇಶಕ್ಕೆ ಬೇರೆ ಬೇರೆ ಕಡೆಗಳಿಂದ ಜನರು ಬಂದು ತಮಗಾಗಿ ಸುಂದರ ವಧುವನ್ನು ಹುಡುಕುತ್ತಾರೆ. ಇದಕ್ಕೆ ಕಾರಣ ರಷ್ಯಾದ ಭೌಗೋಳಿಕ ಮತ್ತು ಜೆನೆಟಿಕ್‌ ಕಂಡೀಶನ್‌ ಆಗಿದೆ. ಆದ್ರೂ ಇದರ ಕ್ರೆಡಿಟ್‌ ಅವರು ಸೇವಿಸುವ ಕೆಲವೊಂದು ಆಹಾರ ಮತ್ತು ಪಾಲಿಸುವ ಬ್ಯೂಟಿ ಸೂತ್ರಕ್ಕೆ ಸಲ್ಲುತ್ತದೆ.

ರಷ್ಯಾದ ಮಹಿಳೆಯರು ಮುಖಕ್ಕೆ ಮೊಸರು ಮತ್ತು ಜೇನಿನಿಂದ ಮಾಡಿದ ಫೇಸ್‌ಪ್ಯಾಕ್‌ ಬಳಸ್ತಾರೆ. ಮೊಸರು ಮತ್ತು ಜೇನಿನ ಕಾಂಬಿನೇಷನ್​ನಿಂದ ಮುಖದ ಬಣ್ಣ ಗ್ಲೋ ಆಗುತ್ತದೆ. ಜೊತೆಗೆ ನಿಮ್ಮ ತ್ವಚೆಯನ್ನು ಪೋಷಿಸುತ್ತೆ.

ರಷ್ಯಾ ಮಹಿಳೆಯರ ಬ್ಯೂಟಿ ಸೀಕ್ರಟ್ ಟೀ: ಹೌದು, ಯಾಕೆಂದರೆ ಇಲ್ಲಿನ ಜನರು ಕೆಮೋಮೈಲ್‌ ಟೀ ಕುಡಿತ್ತಾರೆ. ಕೆಮೀಮೈಲ್ ಟೀಯಲ್ಲಿ ಸ್ಕಿನ್‌ ಶೈನಿಂಗ್‌ ಮಾಡುವಂತಹ ಅಂಶ ಇದೆ. ಇದ್ರಿಂದ ತ್ವಚೆಗೆ ಹೊಳಪು ಸಿಗುತ್ತೆ.

ತರಕಾರಿ ಇವರ ಡಯಟ್ ಸೂತ್ರ: ರಷ್ಯಾ ಮಹಿಳೆಯರು ಪ್ರತಿದಿನ ಮಿಕ್ಸ್‌ ವೆಜಿಟೇಬಲ್‌ ಸೂಪ್‌ ಸೇವಿಸ್ತಾರೆ. ಇದರಿಂದ ಕ್ಯಾಲೋರಿ ಕಡಿಮೆಯಾಗುತ್ತದೆ. ಹಾಗೆ ತೂಕ ಕೂಡ ಕಡಿಮೆಯಾಗುತ್ತದೆ.

ರಷ್ಯಾ ಮಹಿಳೆಯರು ಬಳಸುವ ಫೇಸ್ ಪ್ಯಾಕ್ ಯಾವುದು ಗೊತ್ತಾ..? ಇವರು ಆಲೂ ಪೇಸ್ಟ್‌ನ್ನು, ಹಾಲು ಮತ್ತು ಬಾದಾಮಿ ಆಯಿಲ್‌ನಲ್ಲಿ ಮಿಕ್ಸ್‌ ಮಾಡಿ ಸ್ಕಿನ್‌ಗೆ ಹಚ್ಚುತ್ತಾರೆ. ಈ ಫೇಸ್ ಪ್ಯಾಕ್​ನಿಂದ ಫೇರ್‌ನೆಸ್‌ ಹೆಚ್ಚುತ್ತದೆ.

ರಷ್ಯಾ ಮಹಿಳಯರ ಹೆಲ್ತಿ ಹೇರ್ ಸೀಕ್ರೆಟ್ ಏನು ಗೊತ್ತಾ..? ಇವರು ಕೂದಲಿಗೆ ಪ್ರತಿದಿನ ದಿನ ಬಾಳೆಹಣ್ಣನ್ನು ಮ್ಯಾಶ್‌ ಮಾಡಿ ಹಚ್ಚುತ್ತಾರೆ. ಇದರಿಂದ ಕೂದಲಿನ ಅಂದ ಹೆಚ್ಚುತ್ತದೆ.

ರಷ್ಯಾ ಮಹಿಳೆಯರು ಮೊಟ್ಟೆಯ ಹಳದಿ ಭಾಗಕ್ಕೆ ಆಲಿವ್‌ ಆಯಿಲ್‌ ಮಿಕ್ಸ್‌ ಮಾಡಿ ಸ್ಕಿನ್‌ಗೆ ಹಚ್ಚುತ್ತಾರೆ. ಇದರಿಂದ ಡ್ರೈನೆಸ್‌ ದೂರವಾಗಿ, ಗ್ಲೋ ಹೆಚ್ಚುತ್ತದೆ. ರಷ್ಯಾ ದೇಶದ ಮಹಿಳೆಯರು ಕ್ಯಾಬೇಜ್‌ ಮತ್ತು ಪಾಲಕ್‌ನ್ನು ಹೆಚ್ಚಾಗಿ ಸೇವನೆ ಮಾಡ್ತಾರೆ. ಇದ್ರಿಂದ ತೂಕ ಕಂಟ್ರೋಲ್‌ ಆಗುತ್ತೆ. ಹಾಗೆ ದೇಹದ ಸೌಂದರ್ಯ ಕೂಡ ಹೆಚ್ಚುತ್ತದೆ.

Follow us on

Related Stories

Most Read Stories

Click on your DTH Provider to Add TV9 Kannada