AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇವರ ಪೂಜೆಗೆ ಹೂವು ಬಳಸೋ ನಿಯಮಗಳು ಏನೇನು?

ಹಿಂದೂ ಪೂಜೆಯಲ್ಲಿ ಹೂವುಗಳಿಗೆ ವಿಶೇಷ ಮಹತ್ವವಿದೆ. ದೇವರಿಗೆ ಹೂವುಗಳನ್ನು ಅರ್ಪಿಸದೇ ಪೂಜೆ ಸಂಪನ್ನಗೊಳ್ಳೋದೇ ಇಲ್ಲ. ಆದರೆ ಯಾವ ದೇವರಿಗೆ ಯಾವ ಹೂವು ಇಷ್ಟ ಎಂಬುದನ್ನು ಮೊದಲೇ ಅರಿತು ಪೂಜೆ ಸಲ್ಲಿಸಬೇಕು. ಹಾಗೆ ಮಾಡಿದಾಗ ಮಾತ್ರ ನಾವು ದೇವರ ಅನುಗ್ರಹಕ್ಕೆ ಬಹಳ ಬೇಗ ಪಾತ್ರರಾಗಬಹುದು ಎನ್ನಲಾಗುತ್ತೆ. ಅಷ್ಟೇ ಅಲ್ಲದೇ, ನಾವು ದೇವರ ಪೂಜೆಗೆ ಸಲ್ಲಿಸುವ ಹೂವುಗಳ ಮಹತ್ವವನ್ನು ಮೊದಲು ತಿಳಿದುಕೊಳ್ಳಬೇಕು. ನಂತರ ಹೂವನ್ನು ಅರ್ಪಿಸಿ ಪೂಜಿಸಿದ್ರೆ ಭಗವಂತ ಪ್ರಸನ್ನನಾಗಿ ನಮ್ಮ ಬೇಡಿಕೆಗಳನ್ನು ಈಡೇರಿಸುತ್ತಾನೆ ಎಂಬ ನಂಬಿಕೆ ಇದೆ. ಹಿಂದೂ […]

ದೇವರ ಪೂಜೆಗೆ ಹೂವು ಬಳಸೋ ನಿಯಮಗಳು ಏನೇನು?
ಸಾಧು ಶ್ರೀನಾಥ್​
|

Updated on:Oct 24, 2019 | 6:57 AM

Share

ಹಿಂದೂ ಪೂಜೆಯಲ್ಲಿ ಹೂವುಗಳಿಗೆ ವಿಶೇಷ ಮಹತ್ವವಿದೆ. ದೇವರಿಗೆ ಹೂವುಗಳನ್ನು ಅರ್ಪಿಸದೇ ಪೂಜೆ ಸಂಪನ್ನಗೊಳ್ಳೋದೇ ಇಲ್ಲ. ಆದರೆ ಯಾವ ದೇವರಿಗೆ ಯಾವ ಹೂವು ಇಷ್ಟ ಎಂಬುದನ್ನು ಮೊದಲೇ ಅರಿತು ಪೂಜೆ ಸಲ್ಲಿಸಬೇಕು.

ಹಾಗೆ ಮಾಡಿದಾಗ ಮಾತ್ರ ನಾವು ದೇವರ ಅನುಗ್ರಹಕ್ಕೆ ಬಹಳ ಬೇಗ ಪಾತ್ರರಾಗಬಹುದು ಎನ್ನಲಾಗುತ್ತೆ. ಅಷ್ಟೇ ಅಲ್ಲದೇ, ನಾವು ದೇವರ ಪೂಜೆಗೆ ಸಲ್ಲಿಸುವ ಹೂವುಗಳ ಮಹತ್ವವನ್ನು ಮೊದಲು ತಿಳಿದುಕೊಳ್ಳಬೇಕು. ನಂತರ ಹೂವನ್ನು ಅರ್ಪಿಸಿ ಪೂಜಿಸಿದ್ರೆ ಭಗವಂತ ಪ್ರಸನ್ನನಾಗಿ ನಮ್ಮ ಬೇಡಿಕೆಗಳನ್ನು ಈಡೇರಿಸುತ್ತಾನೆ ಎಂಬ ನಂಬಿಕೆ ಇದೆ.

ಹಿಂದೂ ಧರ್ಮದಲ್ಲಿ ಮುಕ್ಕೋಟಿ ದೇವರುಗಳು ಇದ್ದಾರೆ ಎನ್ನಲಾಗುತ್ತೆ. ಪ್ರತಿಯೊಬ್ಬರೂ ಒಂದೊಂದು ದೇವತೆ ಅಥವಾ ದೇವರುಗಳನ್ನು ಪೂಜಿಸುತ್ತಾರೆ. ಹಾಗೆಯೇ ಪ್ರತಿಯೊಂದು ದೇವರಿಗೂ ಪ್ರತ್ಯೇಕ ಹೂವಿನಿಂದ ಪೂಜೆ ಸಲ್ಲಿಸುವ ಪದ್ಧತಿ ನಮ್ಮಲ್ಲಿದೆ. ಈ ಆಚರಣೆಯ ಹಿಂದೆ ವೈಜ್ಞಾನಿಕ ಸತ್ಯ ಅಡಗಿದೆ. ಪ್ರತಿಯೊಂದು ಹೂವು ಕೂಡ ತನ್ನದೇ ಆದ ಸುವಾಸನೆ ಮತ್ತು ಬಣ್ಣವನ್ನು ಒಳಗೊಂಡಿದೆ. ಪ್ರತಿಯೊಂದು ಹೂವಿನ ಶಕ್ತಿ ವಿಭಿನ್ನವಾಗಿರುತ್ತೆ.

ನಿರ್ದಿಷ್ಟ ದೇವರುಗಳ ದೈವೀಕ ಶಕ್ತಿಯನ್ನು ನಿರ್ದಿಷ್ಟ ಹೂವುಗಳು ಹೀರಿಕೊಳ್ಳುವುದರಿಂದ ದೇವರು ಪ್ರಸನ್ನನಾಗುತ್ತಾನೆ ಎಂಬ ನಂಬಿಕೆ ಇದೆ. ಹೂವುಗಳನ್ನು ದೇವರ ಪೂಜೆಗೆ ಬಳಸುವಾಗ ಕೆಲವೊಂದು ನಿಯಮಗಳನ್ನು ಪಾಲಿಸಬೇಕು.

ದೇವರ ಪೂಜೆಗೆ ಹೂವು ಬಳಸೋ ನಿಯಮಗಳು -ಹೂವನ್ನು ಎಡಗೈಯಲ್ಲಿ ಸ್ಪರ್ಶಿಸಬಾರದು -ಖಾಲಿ ನೆಲದ ಮೇಲೆ ಹೂವನ್ನು ಇಡಬಾರದು -ದೇವರ ಪೂಜೆಗೆ ಬಳಸೋ ಹೂವಿನ ಸುವಾಸನೆಯನ್ನು ತೆಗೆದುಕೊಳ್ಳಬಾರದು. -ಸುವಾಸನೆ ರಹಿತ ಹೂವುಗಳನ್ನು ಪೂಜೆಗೆ ಬಳಸಬಾರದು -ಸರಿಯಾಗಿ ಅರಳಿರದ ಹೂವನ್ನು ದೇವರಿಗೆ ಅರ್ಪಿಸಬಾರದು -ಮೊಗ್ಗನ್ನು ಪೂಜೆಗೆ ಬಳಸುವ ಹಾಗಿಲ್ಲ -ಕದ್ದು ತಂದ ಹೂವುಗಳನ್ನು ಪೂಜೆಗೆ ಬಳಸಬಾರದು -ನೀರಿನಲ್ಲಿ ಅದ್ದಿದ, ತೊಳೆದ ಹೂವುಗಳನ್ನು ಬಳಸಬಾರದು ಹೀಗೆ ದೇವರ ಪೂಜೆಗೆ ಬಳಸುವ ಹೂಗಳ ಕುರಿತಾಗಿ ಕೆಲ ನಿಯಮಗಳನ್ನು ಪಾಲಿಸಿದ್ರೆ ಶುಭಫಲಗಳಾಗುತ್ತವೆ ಅಂತಾ ನಮ್ಮ ಶಾಸ್ತ್ರಗಳು ಹೇಳುತ್ತವೆ. ಈ ನಿಯಮಗಳು ಇಂದು ನಿನ್ನೆಯದಲ್ಲ. ಪುರಾತನ ಕಾಲದಿಂದಲೂ ಆಚರಿಸಿಕೊಂಡು ಬರಲಾಗಿದೆ. ನಮ್ಮ ಹಿರಿಯರು ಇಂತಹ ಆಚರಣೆಗಳನ್ನು ನಿಯಮಗಳ ರೂಪದಲ್ಲಿ ಮುಂದಿನ ಪೀಳಿಗೆಗೆ ಕೊಡುಗೆಯಾಗಿ ಕೊಟ್ಟು ಹೋಗಿದ್ದಾರೆ.

Published On - 3:06 pm, Wed, 23 October 19

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ