AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿನಾಯಕನಿಗೆ ಎಷ್ಟು ನಮಸ್ಕಾರ ಹಾಕಿದ್ರೆ ಈ ಫಲಗಳು ಪ್ರಾಪ್ತಿಯಾಗುತ್ತೆ?

ನಮಸ್ಕಾರ ಮಾಡುವುದು ಹಿಂದೂ ಸಂಪ್ರದಾಯದಲ್ಲಿ ಶುಭಾಶಯದ ಒಂದು ಗೌರವಯುತ ರೂಪ. ಸಾಮಾನ್ಯವಾಗಿ ನಾವೆಲ್ಲರೂ ದೇವಸ್ಥಾನಗಳಿಗೆ ಹೋಗೋ ರೂಢಿಯನ್ನು ಬೆಳೆಸಿಕೊಂಡಿರ್ತೀವಿ. ಕೆಲವರು ನಿತ್ಯ ದೇವಸ್ಥಾನಗಳಿಗೆ ಹೋದ್ರೆ, ಇನ್ನು ಕೆಲವರು ವಾರಕ್ಕೊಮ್ಮೆ ಅಥವಾ ವಿಶೇಷ ದಿನಗಳಲ್ಲಿ ಭೇಟಿ ನೀಡ್ತಾರೆ. ಹೀಗೆ ದೇವಸ್ಥಾನಗಳಿಗೆ ಭೇಟಿ ನೀಡಿದಾಗ ಅಲ್ಲಿ ಹಲವಾರು ನಿಯಮಗಳನ್ನು ಪಾಲಿಸಬೇಕಾಗುತ್ತೆ. ಅಂತಹ ನಿಯಮಗಳಲ್ಲಿ ಒಂದು ದೇವರಿಗೆ ನಮಸ್ಕರಿಸೋದು. ದೇವಸ್ಥಾನಕ್ಕೆ ಹೋದವರೆಲ್ಲಾ ದೇವರಿಗೆ ಕೈ ಮುಗಿಯೋದು ಕಾಮನ್. ಅದ್ರಲ್ಲೂ ಗಣೇಶನಿಗೆ 21 ನಮಸ್ಕಾರ ಹಾಕೋದ್ರಿಂದ ನಮ್ಮ ಕಷ್ಟಗಳು ನಿವಾರಣೆ ಆಗುತ್ತವೆ ಎಂಬ […]

ವಿನಾಯಕನಿಗೆ ಎಷ್ಟು ನಮಸ್ಕಾರ ಹಾಕಿದ್ರೆ ಈ ಫಲಗಳು ಪ್ರಾಪ್ತಿಯಾಗುತ್ತೆ?
ಸಾಧು ಶ್ರೀನಾಥ್​
|

Updated on:Oct 24, 2019 | 12:39 PM

Share

ನಮಸ್ಕಾರ ಮಾಡುವುದು ಹಿಂದೂ ಸಂಪ್ರದಾಯದಲ್ಲಿ ಶುಭಾಶಯದ ಒಂದು ಗೌರವಯುತ ರೂಪ. ಸಾಮಾನ್ಯವಾಗಿ ನಾವೆಲ್ಲರೂ ದೇವಸ್ಥಾನಗಳಿಗೆ ಹೋಗೋ ರೂಢಿಯನ್ನು ಬೆಳೆಸಿಕೊಂಡಿರ್ತೀವಿ. ಕೆಲವರು ನಿತ್ಯ ದೇವಸ್ಥಾನಗಳಿಗೆ ಹೋದ್ರೆ, ಇನ್ನು ಕೆಲವರು ವಾರಕ್ಕೊಮ್ಮೆ ಅಥವಾ ವಿಶೇಷ ದಿನಗಳಲ್ಲಿ ಭೇಟಿ ನೀಡ್ತಾರೆ. ಹೀಗೆ ದೇವಸ್ಥಾನಗಳಿಗೆ ಭೇಟಿ ನೀಡಿದಾಗ ಅಲ್ಲಿ ಹಲವಾರು ನಿಯಮಗಳನ್ನು ಪಾಲಿಸಬೇಕಾಗುತ್ತೆ. ಅಂತಹ ನಿಯಮಗಳಲ್ಲಿ ಒಂದು ದೇವರಿಗೆ ನಮಸ್ಕರಿಸೋದು.

ದೇವಸ್ಥಾನಕ್ಕೆ ಹೋದವರೆಲ್ಲಾ ದೇವರಿಗೆ ಕೈ ಮುಗಿಯೋದು ಕಾಮನ್. ಅದ್ರಲ್ಲೂ ಗಣೇಶನಿಗೆ 21 ನಮಸ್ಕಾರ ಹಾಕೋದ್ರಿಂದ ನಮ್ಮ ಕಷ್ಟಗಳು ನಿವಾರಣೆ ಆಗುತ್ತವೆ ಎಂಬ ನಂಬಿಕೆ ಇದೆ. ಇಷ್ಟಕ್ಕೂ ಗಣೇಶನಿಗೆ 21 ನಮಸ್ಕಾರಗಳನ್ನೇ ಏಕೆ ಮಾಡಬೇಕು ಅಂತಿದ್ದೀರಾ? ಸೂರ್ಯನು ನಮಸ್ಕಾರ ಪ್ರಿಯ, ವಿಷ್ಣು ಅಲಂಕಾರ ಪ್ರಿಯ, ಗಣಪತಿ ತರ್ಪಣ ಪ್ರಿಯ, ಮಹಾಗಣಪತಿಗೆ ಪ್ರಿಯವಾದ ತರ್ಪಣ ಅರ್ಪಿಸುವುದರಿಂದ ಬುದ್ಧಿ, ಯಶಸ್ಸು, ಐಶ್ವರ್ಯ, ಶಕ್ತಿ, ಭಕ್ತಿ, ಯುಕ್ತಿ, ಮುಕ್ತಿ ದೊರೆಯುತ್ತದೆ ಎಂಬ ನಂಬಿಕೆ ಇದೆ.

ವಿಘ್ನ ನಿವಾರಕನಾದ ಗಣಪತಿಗೆ ತರ್ಪಣ ಅರ್ಪಿಸಿ 21 ನಮಸ್ಕಾರಗಳನ್ನು ಮಾಡುವ ಕ್ರಮವಿದೆ. ನಿಮಗೆ ಗೊತ್ತಾ? 21 ಗಣಪತಿಗೆ ಇಷ್ಟವಾದ ಸಂಖ್ಯೆ. ಇದನ್ನು ಕೂಡಿದರೆ 2 + 1 = 3 ಆಗುತ್ತದೆ. ಇದು ಓಂಕಾರದ ಸಂಕೇತ. ಗಣೇಶ ಚತುರ್ಥಿಯಂದು ವಿನಾಯಕನಿಗೆ ಏಕವಿಂಶತಿ ಪತ್ರ ಪೂಜೆ ಮಾಡಲಾಗುತ್ತೆ. ಅಂದರೆ 21 ಬಗೆಯ ಪತ್ರೆಗಳಿಂದ ಪೂಜೆ ಮಾಡುತ್ತೇವೆ. ಮಾನವನ ದೇಹದಲ್ಲಿ ಜ್ಞಾನೇಂದ್ರಿಯ, ಕರ್ಮೇಂದ್ರಿಯಗಳು ಹತ್ತು. ಅವುಗಳ ಕಾರ್ಯಗಳು ಹತ್ತು. ಅವೆರಡರೊಂದಿಗೆ ಮನಸ್ಸು ಸೇರಿದಾಗ 21 ಆಗುತ್ತೆ.

ಜ್ಞಾನೇಂದ್ರಿಯ, ಕರ್ಮೇಂದ್ರಿಯಗಳು * 5 ಪಂಚ ಭೂತಗಳು-ಭೂಮಿ, ನೀರು, ಅಗ್ನಿ, ವಾಯು, ಆಕಾಶ * 5 ಪಂಚೇಂದ್ರಿಯಗಳು -ಕಣ್ಣು, ಕಿವಿ, ಮೂಗು, ನಾಲಿಗೆ, ಚರ್ಮ * 5 ಕರ್ಮೇಂದ್ರಿಯಗಳು -ಕೈ, ಕಾಲುಗಳು, ಬಾಯಿ, ಗುದ, ಗುಹ್ಯ * 5 ಪಂಚ ತನ್ಮತೃಗಳು-ರೂಪ, ಶಬ್ಧ, ಗಂಧ, ರಸ, ಸ್ಪರ್ಶ ಮತ್ತು ಮನಸ್ಸು ಸೇರಿ 21 ಆಗುತ್ತವೆ

ಈ 21 ತತ್ವವು ಒಟ್ಟಿಗೆ ಸೇರಿದಾಗ ಪೂಜೆಯಲ್ಲಿ ಏಕಾಗ್ರತೆ ಬರುತ್ತೆ ಎನ್ನಲಾಗುತ್ತೆ. ಈ ಕಾರಣದಿಂದಾಗಿ ಗಣಪತಿಗೆ 21 ಗರಿಕೆ, 21 ಹಣ್ಣು, 21 ಕಾಯಿ, 21 ಕಡುಬುಗಳನ್ನು ಅರ್ಪಿಸುತ್ತೇವೆ. 14ವರ್ಷದ ಮಕ್ಕಳು 14 ನಮಸ್ಕಾರ, 14ಕ್ಕೆ ಮೇಲ್ಪಟ್ಟುವರು 21 ನಮಸ್ಕಾರ ಮಾಡುವುದು ಪುಣ್ಯಪ್ರದ ಎನ್ನಲಾಗುತ್ತೆ. ಗಣಪನಿಗೆ 21 ನಮಸ್ಕಾರ ಮಾಡೋಕು ಒಂದು ನಿಯಮ ಇದೆ. ಅದೇನಂದ್ರೆ ವಿವಾಹಿತರು ಉತ್ತರ ದಿಕ್ಕಿಗೆ ಮುಖ ಮಾಡಿ, ವಯಸ್ಕರು ಮತ್ತು ಮಕ್ಕಳು ಪೂರ್ವದಿಕ್ಕೆಗೆ ಮುಖ ಮಾಡಿ ಗಣೇಶನಿಗೆ ನಮಸ್ಕಾರ ಮಾಡಬೇಕು. ಇನ್ನೂ ಗಣೇಶ ಗರಿಕೆಪ್ರಿಯ. ಗರಿಕೆ ಹುಲ್ಲಿಗೆ ಗಣೇಶನ ಆತ್ಮವನ್ನು ಆಕರ್ಷಿಸುವ ಶಕ್ತಿಯಿದೆ. ಗರಿಕೆಯು ಬುದ್ಧಿಯ ಮೇಲೆ ಪ್ರಭಾವ ಬೀರುತ್ತೆ. ಹೀಗಾಗೇ 21 ಗರಿಕೆಯನ್ನು ಗಣೇಶನಿಗೆ ಅರ್ಪಿಸಿ ಭಕ್ತಿಯಿಂದ ಪೂಜಿಸುವುದರಿಂದ ಶುಭಫಲಗಳು ಉಂಟಾಗುತ್ತವೆ ಎನ್ನಲಾಗುತ್ತೆ.

Published On - 8:25 pm, Tue, 22 October 19

Follow Us
ವಚನಾನಂದ ಸ್ವಾಮೀಜಿ ಉಚ್ಚಾಟನೆ ಮಠದಲ್ಲಿ ತಳ್ಳಾಟ, ನೂಕಾಟ: ಶ್ರೀಗಳಿಗೆ ಗಾಯ
ವಚನಾನಂದ ಸ್ವಾಮೀಜಿ ಉಚ್ಚಾಟನೆ ಮಠದಲ್ಲಿ ತಳ್ಳಾಟ, ನೂಕಾಟ: ಶ್ರೀಗಳಿಗೆ ಗಾಯ
ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ
ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ
ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಹೆರಿಗೆಗೆ ಹೋದಾಗ ಮತ್ತೊಂದು
ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಹೆರಿಗೆಗೆ ಹೋದಾಗ ಮತ್ತೊಂದು
ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು
ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್
ಹರಿಹರ ಪಂಚಮಸಾಲಿ ಮಠದ ಮುಂದೆ ಭಕ್ತರ ಗಲಾಟೆ!
ಹರಿಹರ ಪಂಚಮಸಾಲಿ ಮಠದ ಮುಂದೆ ಭಕ್ತರ ಗಲಾಟೆ!
ಅಂಕ ಮುಖ್ಯವಲ್ಲ, ಮಗ ಪಾಸಾಗಿದ್ದೇ ದೊಡ್ಡ ಸಂಭ್ರಮ
ಅಂಕ ಮುಖ್ಯವಲ್ಲ, ಮಗ ಪಾಸಾಗಿದ್ದೇ ದೊಡ್ಡ ಸಂಭ್ರಮ
ನ್ಯೂಸ್ ಪೇಪರ್ ವಿತರಕನ ಮೇಲೆ ಬೀದಿ ನಾಯಿ ದಾಳಿ
ನ್ಯೂಸ್ ಪೇಪರ್ ವಿತರಕನ ಮೇಲೆ ಬೀದಿ ನಾಯಿ ದಾಳಿ
ಚಿಕ್ಕಮಗಳೂರು: ತಮ್ಮದೇ ಹೆಸರಿನ ಸೇತುವೆ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ
ಚಿಕ್ಕಮಗಳೂರು: ತಮ್ಮದೇ ಹೆಸರಿನ ಸೇತುವೆ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ