ನೀವು ಆಘಾತಕ್ಕೆ ಒಳಗಾಗಿದ್ದೀರಾ? ಭಯಪಡಬೇಡಿ ಇಲ್ಲಿದೆ ಪರಿಹಾರ
ಜೀವನದಲ್ಲಿ ಯಾವುದಾದರೂ ಕೆಟ್ಟ ಘಟನೆಗಳು ಅಥವಾ ನಮ್ಮ ನಿರೀಕ್ಷೆಗಳಿಗೆ ವಿರುದ್ಧವಾಗಿ ಏನಾದರೂ ಸಾಗಿದರೆ ಕೆಲವು ಜನರಲ್ಲಿ ತುಂಬಾ ದೀರ್ಘ ಪರಿಣಾಮ ಬೀರುವುದು. ಇದು ಮಾನಸಿಕವಾಗಿಯೂ ಅವರ ಮೇಲೆ ಪರಿಣಾಮ ಬೀರಬಹುದು. ಆ ಆಘಾತದಿಂದ ಕೆಲವೊಂದು ಸಲ ಖಿನ್ನತೆ ಹಾಗೂ ದೈನಂದಿನ ಚಟುವಟಿಕೆಗಳನ್ನು ಮಾಡಲು ಸಾಧ್ಯವಾಗದೆ ಇರಬಹುದು. ಏನಿದು ಅಂತಹ ಆಘಾತ ಎಂದು ನೀವು ಕೇಳಬಹುದು. ಅಮೆರಿಕನ್ ಸೈಕಾಜಲಿ ಅಸೋಸಿಯೇಶನ್(ಎಪಿಎ) ಪ್ರಕಾರ ಆಘಾತ ಎಂದರೆ ಅದೊಂದು ತೀರ ನಕಾರಾತ್ಮಕವಾದ ಘಟನೆಗೆ ಭಾವನಾತ್ಮಕ ಪ್ರತಿಕ್ರಿಯೆ. ಆ ಆಘಾತಕ್ಕೆ ಕೆಲವೊಂದು ಮೂಲ […]
ಜೀವನದಲ್ಲಿ ಯಾವುದಾದರೂ ಕೆಟ್ಟ ಘಟನೆಗಳು ಅಥವಾ ನಮ್ಮ ನಿರೀಕ್ಷೆಗಳಿಗೆ ವಿರುದ್ಧವಾಗಿ ಏನಾದರೂ ಸಾಗಿದರೆ ಕೆಲವು ಜನರಲ್ಲಿ ತುಂಬಾ ದೀರ್ಘ ಪರಿಣಾಮ ಬೀರುವುದು. ಇದು ಮಾನಸಿಕವಾಗಿಯೂ ಅವರ ಮೇಲೆ ಪರಿಣಾಮ ಬೀರಬಹುದು. ಆ ಆಘಾತದಿಂದ ಕೆಲವೊಂದು ಸಲ ಖಿನ್ನತೆ ಹಾಗೂ ದೈನಂದಿನ ಚಟುವಟಿಕೆಗಳನ್ನು ಮಾಡಲು ಸಾಧ್ಯವಾಗದೆ ಇರಬಹುದು. ಏನಿದು ಅಂತಹ ಆಘಾತ ಎಂದು ನೀವು ಕೇಳಬಹುದು. ಅಮೆರಿಕನ್ ಸೈಕಾಜಲಿ ಅಸೋಸಿಯೇಶನ್(ಎಪಿಎ) ಪ್ರಕಾರ ಆಘಾತ ಎಂದರೆ ಅದೊಂದು ತೀರ ನಕಾರಾತ್ಮಕವಾದ ಘಟನೆಗೆ ಭಾವನಾತ್ಮಕ ಪ್ರತಿಕ್ರಿಯೆ.
ಆ ಆಘಾತಕ್ಕೆ ಕೆಲವೊಂದು ಮೂಲ ಲಕ್ಷಣಗಳಿವೆ. ಆಘಾತಕ್ಕೆ ಒಳಗಾಗಿರುವಂತಹ ಜನರು ಯಾವಾಗಲೂ ನಡುಗುತ್ತಾ ಇರ್ತಾರೆ ಮತ್ತು ದಿಗ್ಬ್ರಮೆಗೆ ಒಳಗಾಗ್ತಾರೆ. ಸಾಮಾನ್ಯದಂತೆ ಅವರು ಯಾವುದೇ ರೀತಿಯ ಮಾತಿಗೆ ಪ್ರತಿಕ್ರಿಯೆ ನೀಡುವುದಿಲ್ಲ. ಕಳೆದು ಹೋದಂತೆ ಇರ್ತಾರೆ ಅಥವಾ ಮಾತಿನ ವೇಳೆ ಮೌನವಾಗಿರ್ತಾರೆ. ಆಘಾತಕ್ಕೆ ಒಳಗಾಗಿರುವ ವ್ಯಕ್ತಿಯ ಮತ್ತೊಂದು ಲಕ್ಷಣವೆಂದರೆ ಅದು ಆತಂಕ. ರಾತ್ರಿ ಭಯಗಳು, ಕಳಪೆ ಏಕಾಗ್ರತೆ ಮತ್ತು ಮನಸ್ಥಿತಿ ಬದಲಾಗುವುದು.
ಆಘಾತವು ಭಾವನೆಯ ಮೂಲಕ ಪ್ರಕಟಗೊಳ್ಳುತ್ತದೆ. ಸಾಮಾನ್ಯ ಭಾವನೆಗಳಾದ ನಿರಾಕರಣೆ, ಕೋಪ, ಬೇಸರ ಮತ್ತು ಭಾವನೆಗಳ ಸ್ಫೋಟ ಇತ್ಯಾದಿಗಳು ಬೇಗ ಪ್ರಕಟಗೊಳ್ಳುತ್ತವೆ. ಆಘಾತಕ್ಕೆ ಒಳಗಾಗಿರುವಂತಹ ಪೀಡಿತರು ತಮ್ಮ ಸ್ನೇಹಿತರು ಅಥವಾ ಕುಟುಂಬ ಸದಸ್ಯರೊಂದಿಗೆ ತಮಗಾದ ಆಘಾತದ ಭಾವನೆಗಳನ್ನು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಪ್ರದರ್ಶಿಸಬಹುದು.
ಆಘಾತವು ಯಾವಾಗಲೂ ದೈಹಿಕ ಹಾಗೂ ಮಾನಸಿಕವಾಗಿ ಪ್ರಕಟವಾಗುವುದು. ಆ ಪ್ರಕಾರ ಸಾಮಾನ್ಯ ದೈಹಿಕ ಲಕ್ಷಣಗಳೆಂದರೆ ಅದು ಆಲಸ್ಯ, ಆಯಾಸ, ಕಳಪೆ ಏಕಾಗ್ರತೆ ಮತ್ತು ಹೃದಯ ಬಡಿತ ಹೆಚ್ಚಾಗುವುದು. ಪೀಡಿತರಲ್ಲಿ ಆತಂಕ ಅಥವಾ ನೋವಿನ ಆಘಾತ, ಕೆಲವೊಂದು ಸಂದರ್ಭಗಳಿಗೆ ಸರಿಯಾಗಿ ಹೊಂದಿಕೊಳ್ಳದೆ ಇರುವ ಪರಿಸ್ಥಿತಿ ನಿರ್ಮಾಣವಾಗಬಹುದು. ದೈಹಿಕ ಗಾಯ ಅಥವಾ ಅನಾರೋಗ್ಯದಿಂದಾಗಿ ಆಘಾತದ ದೈಹಿಕ ಲಕ್ಷಣಗಳು ಕಾಣಿಸಿಕೊಳ್ಳುವುದು.
ಆಘಾತ ದೊಡ್ಡ ಪ್ರಮಾಣದಲ್ಲಿದ್ರೆ ಭಾವನೆಗಳನ್ನು ನಾಶ ಮಾಡಬಹುದು ಮತ್ತು ದೀರ್ಘಕಾಲದ ತನಕ ಅಥವಾ ಕೆಲವು ವಾರಗಳ ಕಾಲ ಇದು ಇರಬಹುದು. ಆಘಾತ ಉಂಟಾದ ವೇಳೆ ಖಿನ್ನತೆಯು ಕಾಣಿಸುವುದು. ಸಾಮಾನ್ಯ ಜನರಿಗಿಂತಲೂ ಪಿಟಿಎಸ್ಡಿ ಬೆಳವಣಿಗೆ ಇರುವವರಲ್ಲಿ ಖಿನ್ನತೆಯು ಮೂರರಿಂದ ಐದು ಪಟ್ಟು ಹೆಚ್ಚಾಗಿರುವುದು ಎಂದು ಅಧ್ಯಯನಗಳು ಹೇಳಿವೆ.
ಆಘಾತದ ಪರಿಣಾಮವನ್ನು ತಕ್ಷಣವೇ ಗುರುತಿಸಿದರೆ ಆಗ ಇದು ಶಾಶ್ವತವಾಗಿ ಕಾಡುವುದನ್ನು ತಪ್ಪಿಸಬಹುದು. ಆಘಾತದ ಅಲ್ಪಾವಧಿ ಹಾಗೂ ದೀರ್ಘಾವಧಿ ಪರಿಣಾಮಗಳು ಸಾಮಾನ್ಯವಾಗಿ ಒಂದೇ ರೀತಿಯಾಗಿ ಇರುವುದು. ಆದರೆ ದೀರ್ಘಾವಧಿಯ ಆಘಾತದ ಪರಿಣಾಮವು ತುಂಬಾ ತೀವ್ರವಾಗಿ ಇರುವುದು. ಆಘಾತದ ಬಳಿಕ ಅಲ್ಪಾವಧಿಗೆ ಮನಸ್ಥಿತಿ ಬದಲಾಗುವುದು ಸಾಮಾನ್ಯ. ಆದರೆ ಕೆಲವು ವಾರಗಳ ತನಕ ಮನಸ್ಥಿತಿ ಬದಲಾವಣೆ ಪರಿಣಾಮವು ಇದ್ದರೆ ಆಗ ಇದು ದೀರ್ಘಾವಧಿಗೆ ಪರಿಣಾಮ ಬೀರಬಹುದು.
ಸ್ವಯಂ ಮೌಲ್ಯಮಾಪನಕ್ಕಿಂತ ವೈದ್ಯರ ಭೇಟಿ ಸೂಕ್ತ ಅಥವಾ ಆನ್ಲೈನ್ನಲ್ಲಿ ಕೆಲವೊಂದು ಮೌಲ್ಯಮಾಪನಗಳು ಲಭ್ಯವಿದೆ. ಆದರೆ ಸ್ವಯಂ ಮೌಲ್ಯಮಾಪನ ಮಾಡಿಕೊಳ್ಳುವ ಬದಲು ತಜ್ಞರಿಂದ ಮೌಲ್ಯಮಾಪನ ಮಾಡಿಸಿಕೊಳ್ಳುವುದು ಒಳ್ಳೆಯದು. ಪೀಡಿತರು ಅಥವಾ ಪ್ರೀತಿ ಪಾತ್ರರು ಕೆಲವೊಂದು ವಿಚಾರಗಳನ್ನು ನೋಡಲು ಇಷ್ಟಪಡದೆ ಇರಬಹುದು. ಆದರೆ ವೃತ್ತಿಪರರು ಇದನ್ನು ಸರಿಯಾಗಿ ಗುರುತಿಸುವರು ಮತ್ತು ಅವರಿಗೆ ಯಾವುದೇ ಪಕ್ಷಪಾತವಿರಲ್ಲ.
ಬೇರೆ ಯಾವುದೇ ರೀತಿಯ ಮಾನಸಿಕ ತೊಂದರೆಗೆ ವಿರುದ್ಧವಾದ ಆಘಾತವು ಒಂದು ಘಟನೆ ಅಥವಾ ಅನುಭವದ ಪರಿಣಾಮವಾಗಿರುವುದು. ಕೆಲವೊಂದು ಔಷಧಿಗಳಿಂದ ಇದನ್ನು ನಿವಾರಣೆ ಮಾಡಬಹುದು. ಎಲ್ಲಾ ರೀತಿಯ ಆಘಾತಕ್ಕೆ ಔಷಧಿಯು ಬೇಕೆಂದಿಲ್ಲ. ಆದರೆ ಆತಂಕ ಮತ್ತು ಖಿನ್ನತೆಗೆ ಇದು ತುಂಬಾ ಪ್ರಭಾವಿಯಾಗಿರುವ ಚಿಕಿತ್ಸಾ ವಿಧಾನವಾಗಿರುವುದು.
ಪೀಡಿತರ ಮಾನಸಿಕ ಮತ್ತು ವೈದ್ಯಕೀಯ ಇತಿಹಾಸವನ್ನು ನೋಡಿಕೊಂಡು, ಅದೇ ರೀತಿಯಾಗಿ ಆಘಾತದ ತೀವ್ರತೆ ಹಾಗೂ ಲಕ್ಷಣಗಳನ್ನು ನೋಡಿಕೊಂಡು ಔಷಧಿ ಸೂಚಿಸಬಹುದು. ಖಿನ್ನತೆಯು ತೀವ್ರವಾಗಿದ್ದರೆ ಮತ್ತು ಇದು ದೀರ್ಘಕಾಲದ ತನಕ ಮುಂದುವರಿದರೆ ಆಗ ಇದಕ್ಕೆ ಖಿನ್ನತೆ ವಿರೋಧಿ ಔಷಧಿ ನೀಡುವ ಮೂಲಕ ಚಿಕಿತ್ಸೆ ನೀಡಬಹುದು. ಮೂರು ತಿಂಗಳಿಗಿಂತಲೂ ಹೆಚ್ಚು ಕಾಲ ಕಾಡುವಂತಹ ಖಿನ್ನತೆಯ ಪ್ರಸಂಗವನ್ನು ವೈದ್ಯಕೀಯವಾಗಿ ಖಿನ್ನತೆ ಎಂದು ಹೇಳಲಾಗುತ್ತದೆ.
ಆಘಾತಕ್ಕೊಳಗಾದವರು ಡ್ರಗ್ಸ್ಗೆ ದಾಸರಾಗುವ ಸಾಧ್ಯತೆ ಕೆಲವೊಂದು ಸಂದರ್ಭದಲ್ಲಿ ಆಘಾತ ಪೀಡಿತವು ಸ್ವಯಂ ಆಗಿ ಈ ಡ್ರಗ್ಸ್ ಅನ್ನು ತೆಗೆದುಕೊಳ್ಳಬಹುದು ಮತ್ತು ಆಘಾತದ ಪರಿಣಾಮವನ್ನು ದೂರ ಮಾಡಲು ಪ್ರಯತ್ನಿಸಬಹುದು. ಸರ್ಕಾರಿ ಅಂಕಿ ಅಂಶಗಳ ಪ್ರಕಾರ, 16ರ ಹರೆಯಕ್ಕಿಂತ ಕಡಿಮೆ ವಯಸ್ಸಿನಲ್ಲಿ ಆಘಾತಕ್ಕೆ ಒಳಗಾಗುವಂತಹ ಶೇ.25ರಷ್ಟು ಜನರು ಡ್ರಗ್ಸ್ ಮತ್ತು ಆಲ್ಕೋಹಾಲ್ಗೆ ದಾಸರಾಗುವಂತಹ ಸಾಧ್ಯತೆಯು ಹೆಚ್ಚಾಗಿರುವುದು.
ದೈಹಿಕವಾಗಿ ಹಾನಿ ಉಂಟು ಮಾಡಲು ಪ್ರಯತ್ನಿಸುವ ವೇಳೆ ಯಾರಾದರೂ ಔಷಧಿ ಚುಚ್ಚಿದರೆ, ಆಗ ಇದು ಓವರ್ ಡೋಸ್ ಆಗುವ ಸಾಧ್ಯತೆಗಳು ಇವೆ. ಓವರ್ ಡೋಸ್ ಎನ್ನುವುದು ಹೆಚ್ಚಾಗಿ ಮಾದಕ ದ್ರವ್ಯದೊಂದಿಗೆ ಸಂಭವಿಸುವುದು. ಆದರೆ ಇದು ಕೆಲವೊಂದು ಸಲ ಆಕಸ್ಮಿಕ ಮತ್ತು ಇನ್ನು ನಿಯಮಿತ ಸಂದರ್ಭದಲ್ಲಿ ನಡೆಯುವುದು. ಓವರ್ ಡೋಸನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ಇದು ಮರುಕಳಿಸದಂತೆ ತಡೆಯಲು ವೃತ್ತಿಪರರ ನೆರವು ಪಡೆಯಬೇಕು.
ದೀರ್ಘಕಾಲದ ಆಘಾತದ ನೋವಿಗೆ ವೈದ್ಯರ ನೆರವು ಕಡ್ಡಾಯ. ನೀವು ಅಥವಾ ನಿಮ್ಮ ಪ್ರೀತಿಪಾತ್ರರು ಆಘಾತದಿಂದ ಬಳಲುತ್ತಲಿದ್ದರೆ ಎಲ್ಲಾ ರೀತಿಯ ನೆರವು ಲಭ್ಯವಿದೆ. ಆಘಾತಕ್ಕೆ ವಿವಿಧ ರೀತಿಯ ಚಿಕಿತ್ಸೆಗಳು ಇವೆ ಮತ್ತು ಇದಕ್ಕೆ ವೈದ್ಯರ ನೆರವು ನೀಡುವರು. ಇದರ ಪರಿಣಾಮವಾಗಿ ಆಘಾತಕ್ಕೀಡಾದವರು ಬೇಗನೆ ಚೇತರಿಸಿಕೊಳ್ಳಬಹುದು.
Published On - 9:13 pm, Mon, 21 October 19