ಸುಂದರವಾಗಿ ಕಾಣಲು ಐದೇ ನಿಮಿಷದಲ್ಲಿ ನಿಮಗಿಷ್ಟವಾದ ಮೇಕಪ್ ಹೀಗೆ ಮಾಡಿ
ವಿದ್ಯಾರ್ಥಿ ಜೀವನ, ಅದರಲ್ಲೂ ಕಾಲೇಜು ಜೀವನ, ಹದಿ ಹರೆಯದ ವಯಸ್ಸು ಎಂದರೆ ಎಲ್ಲಿಲ್ಲದ ಹುಮ್ಮಸ್ಸು, ಸೌಂದರ್ಯದ ಬಗ್ಗೆ ಒಂದಿಷ್ಟು ಕಾಳಜಿಯ ಭಾವನೆಗಳು ಇರುತ್ತವೆ. ಹಾಗಾಗಿ ಹುಡುಗಿಯರು ತಮ್ಮ ವ್ಯಕ್ತಿತ್ವ, ಉಡುಗೆ, ಮೇಕಪ್ಗಳ ಬಗ್ಗೆ ಸಾಕಷ್ಟು ಕಾಳಜಿ ಹಾಗು ಮುನ್ನೆಚ್ಚರಿಕೆಯನ್ನು ತೋರುತ್ತಾರೆ. ಕೇವಲ ಐದು ನಿಮಿಷದಲ್ಲಿ ನೀವು ಬಯಸುವಂತಹ ಮೇಕಪ್ ಮಾಡಿಕೊಳ್ಳಬಹುದು. ಕಡಿಮೆ ಸಮಯದಲ್ಲಿ ಆಕರ್ಷಕ ಮುಖ ಚರ್ಯೆಯನ್ನು ಪಡೆದುಕೊಳ್ಳಬಹುದು. ಮೊದಲು ಮುಖವನ್ನು ಶುದ್ಧ ನೀರಿನಿಂದ ಸ್ವಚ್ಛಗೊಳಿಸಿ. ಒಣಗಿದ ಟವೆಲ್ನಿಂದ ಮುಖವನ್ನು ಮೆತ್ತಗೆ ಒತ್ತುವುದರ ಮೂಲಕ ಒಣಗಿಸಿ. ನಂತರ […]
ವಿದ್ಯಾರ್ಥಿ ಜೀವನ, ಅದರಲ್ಲೂ ಕಾಲೇಜು ಜೀವನ, ಹದಿ ಹರೆಯದ ವಯಸ್ಸು ಎಂದರೆ ಎಲ್ಲಿಲ್ಲದ ಹುಮ್ಮಸ್ಸು, ಸೌಂದರ್ಯದ ಬಗ್ಗೆ ಒಂದಿಷ್ಟು ಕಾಳಜಿಯ ಭಾವನೆಗಳು ಇರುತ್ತವೆ. ಹಾಗಾಗಿ ಹುಡುಗಿಯರು ತಮ್ಮ ವ್ಯಕ್ತಿತ್ವ, ಉಡುಗೆ, ಮೇಕಪ್ಗಳ ಬಗ್ಗೆ ಸಾಕಷ್ಟು ಕಾಳಜಿ ಹಾಗು ಮುನ್ನೆಚ್ಚರಿಕೆಯನ್ನು ತೋರುತ್ತಾರೆ.
ಕೇವಲ ಐದು ನಿಮಿಷದಲ್ಲಿ ನೀವು ಬಯಸುವಂತಹ ಮೇಕಪ್ ಮಾಡಿಕೊಳ್ಳಬಹುದು. ಕಡಿಮೆ ಸಮಯದಲ್ಲಿ ಆಕರ್ಷಕ ಮುಖ ಚರ್ಯೆಯನ್ನು ಪಡೆದುಕೊಳ್ಳಬಹುದು. ಮೊದಲು ಮುಖವನ್ನು ಶುದ್ಧ ನೀರಿನಿಂದ ಸ್ವಚ್ಛಗೊಳಿಸಿ. ಒಣಗಿದ ಟವೆಲ್ನಿಂದ ಮುಖವನ್ನು ಮೆತ್ತಗೆ ಒತ್ತುವುದರ ಮೂಲಕ ಒಣಗಿಸಿ. ನಂತರ ಉತ್ತಮ ಮಾಯ್ಚುರೈಸ್ ಅನ್ನು ಮುಖಕ್ಕೆ ಅನ್ವಯಿಸಿ. ವೃತ್ತಾಕಾರದಲ್ಲಿ ಮಸಾಜ್ ಮಾಡುವ ಮೂಲಕ ಎಲ್ಲಾ ಭಾಗಗಳಿಗೂ ಸರಿಯಾಗಿ ಅನ್ವಯಿಸಿ. ಮೇಕಪ್ ಮಾಡುವ ಮೊದಲು ಮಾಯ್ಚುರೈಸರ್ ಅನ್ನು ಅನ್ವಯಿಸುವುದು ಚರ್ಮಕ್ಕೆ ಉತ್ತಮ ಆರೈಕೆ ಮಾಡಿದಂತಾಗುವುದು.
ಮೇಕಪ್ ಮಾಡಿದ ನಂತರ ಮುಖದಲ್ಲಿ ಕಪ್ಪು ಕಲೆ ಅಥವಾ ಕುಳಿಗಳು ಕಾಣಬಾರದು. ಅದಕ್ಕಾಗಿ ನೀವು ಸ್ಪಾಟ್ ಕನ್ಸೆಲಿಂಗ್ ಬಳಸಿ. ಇದನ್ನು ಮುಖಕ್ಕೆ ಅನ್ವಯಿಸುವುದರ ಮೂಲಕ ಮುಖದ ಮೇಲಿರುವ ಕಲೆಗಳನ್ನು ಸುಲಭವಾಗಿ ಮರೆಮಾಚಬಹುದು. ಅದು ನಿಮ್ಮ ಮುಖದ ಸೌಂದರ್ಯವನ್ನು ಹೆಚ್ಚಿಸುವುದು.
ಮುಖವು ಹೆಚ್ಚು ಆಕರ್ಷಣೆಯಿಂದ ಕೂಡಿರಲು ಹಾಗೂ ಅನ್ವಯಿಸಿದ ಸೌಂದರ್ಯ ಉತ್ಪನ್ನವು ತ್ವಚೆಯೊಂದಿಗೆ ಹೊಂದಿಕೊಳ್ಳಲು ಬ್ಲಶ್ ಮಾಡುವುದು ಅತ್ಯಗತ್ಯ. ಸೂಕ್ತ ರೀತಿಯಲ್ಲಿ ಬ್ಲಶ್ ಮಾಡಿಕೊಂಡರೆ ಮುಖವು ಹೆಚ್ಚು ಆಕರ್ಷಣೆಯೊಂದಿಗೆ ಕಂಗೊಳಿಸುವುದು. ಕೆನ್ನೆಯ ಭಾಗದಲ್ಲಿ ಲಘುವಾಗಿ ಅನ್ವಯಿಸಿ. ಅದು ನಿಮ್ಮ ಮುಖವನ್ನು ತಾಜಾತನದಿಂದ ಶೋಭಿಸುವಂತೆ ಮಾಡುವುದು.
ಮುಖವು ಹೆಚ್ಚು ಆಕರ್ಷಣೆಯಿಂದ ಹಾಗೂ ಶುದ್ಧವಾಗಿ ಕಾಣಿಸುವಲ್ಲಿ ಹುಬ್ಬು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಮುಖಕ್ಕೆ ಹೊಂದುವಂತೆ ಹುಬ್ಬುಗಳಿಗೆ ಆಕಾರವನ್ನು ನೀಡಿ. ನಿಮ್ಮ ಹುಬ್ಬು ತಿಳಿಯಾಗಿದ್ದರೆ, ಅದನ್ನು ಹುಬ್ಬಿನ ಪೆನ್ಸಿಲ್ ಮೂಲಕ ತೀಡಿ. ಆಗ ಸ್ವಲ್ಪ ಗಾಢತೆಗೆ ಬರುವುದು. ಅತಿಯಾಗಿ ತಿದ್ದುವದರಿಂದ ಮುಖದ ಸೌಂದರ್ಯ ಹಾಳಾಗುತ್ತೆ.
ಮುಖದ ಸೌಂದರ್ಯವನ್ನು ಸುಂದರವಾಗಿ ಕಂಗೊಳಿಸುವಂತೆ ಮಾಡುವುದು ಸುಂದರವಾದ ಕಣ್ಣುಗಳು. ಮೇಕಪ್ ಮಾಡುವಾಗ ಕಣ್ಣಿಗೆ ಕಪ್ಪು ಮತ್ತು ಐ ಲೈನರ್ ಅನ್ನು ಸೂಕ್ತವಾಗಿ ಅನ್ವಯಿಸುವುದರ ಮೂಲಕ ಕಣ್ಣನ್ನು ಸುಂದರವಾಗಿಸಬಹುದು. ಸರಳವಾದ ಮೇಕಪ್ ನೊಂದಿಗೆ ನೀವು ಸುಂದರವಾಗಿ ಕಾಣಲು ಐ ಲೈನರ್ ಬಳಸಿ. ಅದು ಕಣ್ಣಿನ ಆಕರ್ಷಣೆ ಹೆಚ್ಚಿಸುವುದು.
ಕಣ್ ರೆಪ್ಪೆಗಳು ದಟ್ಟವಾಗಿದ್ದರೆ ಕಣ್ಣಿನ ಆಕರ್ಷಣೆ ಹೆಚ್ಚುವುದು. ತೆಳುವಾದ ಕಣ್ ರೆಪ್ಪೆಗಳು ಇದ್ದಾಗ ಮಸ್ಕರವನ್ನು ಬಳಸಿ. ಅದು ರೆಪ್ಪೆಗಳು ದಟ್ಟವಾಗಿರುವಂತೆ ತೋರುವುದು. ಆಗ ಕಣ್ಣಿನ ಸೌಂದರ್ಯ ಹೆಚ್ಚುವುದು. ಮುಖದಲ್ಲಿ ಕಣ್ಣುಗಳ ಆಕಾರ ಸುಂದರವಾಗಿ ಕಂಡರೆ ನಿಮ್ಮ ಮುಖದ ಮೇಕಪ್ ಮತ್ತು ಆಕರ್ಷಣೆಯನ್ನು ಹೆಚ್ಚಿಸುವುದು.
ಮುಖದ ಸೌಂದರ್ಯ ಹೆಚ್ಚಿಸುವಲ್ಲಿ ಬಾಯಿ ಮತ್ತು ತುಟಿಗಳ ಪಾತ್ರವು ಅತ್ಯಂತ ಮಹತ್ವವಾದದ್ದು. ನೀವು ಧರಿಸಿದ ಉಡುಗೆಗೆ ಹೊಂದುವಂತಹ ತುಟಿ ಬಣ್ಣವನ್ನು ಅನ್ವಯಿಸಬಹುದು. ಇಲ್ಲವಾದರೆ ನಿಮ್ಮ ತ್ವಚೆಗೆ ಹೊಂದುವಂತಹ ಕೆಂಪು ಬಣ್ಣ ಅಥವಾ ಗುಲಾಬಿ ಬಣ್ಣವನ್ನು ಹಚ್ಚಿರಿ. ಆಗ ನೀವು ಮಾಡಿಕೊಂಡ ಮೇಕಪ್ ಸಂಪೂರ್ಣವಾಗುವುದು.
Published On - 9:38 pm, Sun, 20 October 19