ನಿಮ್ಮ ಸಮೃದ್ಧ ಸೌಂದರ್ಯದ ಆರೈಕೆಗೆ ಇಲ್ಲಿದೆ ಮನೆಮದ್ದು

ಕೂದಲು ತ್ವಚೆಯ ಬಗ್ಗೆ ಕಾಳಜಿ ವಹಿಸುವವರಿಗಿಂತ ತಲೆ ಕೆಡಿಸಿಕೊಳ್ಳುವವರೇ ಹೆಚ್ಚು. ಯಾರಿಗೆ ಆದರೂ ಮೈಬಣ್ಣ ಚರ್ಮದ ಹೊಳಪು ಎಲ್ಲದರ ಮೇಲೂ ಹೆಚ್ಚಿನ ಆಸಕ್ತಿ ಇರುತ್ತದೆ. ಜೊತೆಗೆ ತಮ್ಮ ಕೂದಲು ನಯವಾಗಿ, ಸೊಂಪಾಗಿ ಮತ್ತು ಸುಂದರವಾಗಿ ಇರಬೇಕೆಂದು ಆಸೆ ಕೂಡಾ ಇರುತ್ತದೆ. ಏಕೆಂದರೆ ಚರ್ಮದ ಹೊಳಪಿನ ಜೊತೆಗೆ ಕೂದಲು ಸೊಂಪಾಗಿದ್ದರೆ, ನೋಡಲು ಸುಂದರವಾಗಿ ಕಾಣುತ್ತಾರೆ. ಆದರೆ ಒರಟಾದ ಕೂದಲು ಮತ್ತು ಕಾಂತಿ ಕಳೆದುಕೊಂಡ ಚರ್ಮ, ಅವರ ನಿದ್ದೆ ಕೆಡಿಸುವುದು ಗ್ಯಾರಂಟಿ. ಇಂಥವರಿಗೋಸ್ಕರ ನಾವು ಕೆಲವೊಂದು ಹೋಮ್​ ರೆಮಿಡಿ ಸಲಹೆಗಳನ್ನು […]

ನಿಮ್ಮ ಸಮೃದ್ಧ ಸೌಂದರ್ಯದ ಆರೈಕೆಗೆ ಇಲ್ಲಿದೆ ಮನೆಮದ್ದು
Follow us
ಸಾಧು ಶ್ರೀನಾಥ್​
|

Updated on:Oct 21, 2019 | 4:47 PM

ಕೂದಲು ತ್ವಚೆಯ ಬಗ್ಗೆ ಕಾಳಜಿ ವಹಿಸುವವರಿಗಿಂತ ತಲೆ ಕೆಡಿಸಿಕೊಳ್ಳುವವರೇ ಹೆಚ್ಚು. ಯಾರಿಗೆ ಆದರೂ ಮೈಬಣ್ಣ ಚರ್ಮದ ಹೊಳಪು ಎಲ್ಲದರ ಮೇಲೂ ಹೆಚ್ಚಿನ ಆಸಕ್ತಿ ಇರುತ್ತದೆ. ಜೊತೆಗೆ ತಮ್ಮ ಕೂದಲು ನಯವಾಗಿ, ಸೊಂಪಾಗಿ ಮತ್ತು ಸುಂದರವಾಗಿ ಇರಬೇಕೆಂದು ಆಸೆ ಕೂಡಾ ಇರುತ್ತದೆ. ಏಕೆಂದರೆ ಚರ್ಮದ ಹೊಳಪಿನ ಜೊತೆಗೆ ಕೂದಲು ಸೊಂಪಾಗಿದ್ದರೆ, ನೋಡಲು ಸುಂದರವಾಗಿ ಕಾಣುತ್ತಾರೆ. ಆದರೆ ಒರಟಾದ ಕೂದಲು ಮತ್ತು ಕಾಂತಿ ಕಳೆದುಕೊಂಡ ಚರ್ಮ, ಅವರ ನಿದ್ದೆ ಕೆಡಿಸುವುದು ಗ್ಯಾರಂಟಿ. ಇಂಥವರಿಗೋಸ್ಕರ ನಾವು ಕೆಲವೊಂದು ಹೋಮ್​ ರೆಮಿಡಿ ಸಲಹೆಗಳನ್ನು ತಿಳಿಸುವ ಪ್ರಯತ್ನ ಮಾಡ್ತೀವಿ.

ಸಾಮಾನ್ಯವಾಗಿ ಹೆಚ್ಚಿನ ಯುವತಿಯರು ಮುಖದ ಸೌಂದರ್ಯದ ಕಡೆ ಹೆಚ್ಚಿನ ಕಾಳಜಿ ವಹಿಸ್ತಾರೆ. ಆದ್ರೆ ಕೈ ಮತ್ತು ಕಾಲಿನ ಸೌಂದರ್ಯವನ್ನು ಹಾಗೆ ನೆಗ್ಲೆಟ್ ಮಾಡ್ತಾರೆ. ಇದ್ರ ಪರಿಣಾಮವಾಗಿಯೇ ಕೈ ಕಾಲು ಮತ್ತು ಮುಖದ ಬಣ್ಣದಲ್ಲಿ ತುಂಬಾನೇ ವ್ಯತ್ಯಾಸ ಕಂಡು ಬರುತ್ತೆ. ಅರ್ಥಾತ್ ಕೈ ಕಾಲು ಒಂದು ಬಣ್ಣದಲ್ಲಿದ್ದರೆ ಮುಖದ ಬಣ್ಣ ಬೇರೆನೇ ಇರುತ್ತೆ.ಇಲ್ಲಿ ನಾವು ಮುಖದ ತ್ವಚೆಯ ಕಡೆಗೆ ಹೆಚ್ಚಿನ ಗಮನ ಹರಿಸುವುದು ಸ್ಪಷ್ಟವಾಗಿ ಕಾಣುತ್ತಿರುತ್ತದೆ. ಈ ಸಮಸ್ಯೆ ನಿವಾರಣೆಗೆ ಒಂದು ಪರಿಹಾರವಿದೆ. ಹೌದು ಮನೆಯಲ್ಲಿಯೇ ಇರುವ ಕಾಫಿ ಸ್ಕ್ರಬ್ ನ ಮೂಲಕ ಡೆಡ್​ ಸ್ಕಿನ್ ಸಮಸ್ಯೆ ನಿವಾರಣೆ ಮಾಡಬಹುದು. ಇದಕ್ಕೆ ಬೇಕಾಗಿರುವ ಸಾಮಾಗ್ರಿಗಳೆಂದರೆ ತುಪ್ಪ, ಟೊಮ್ಯಾಟೋ , ಕಾಫಿ ಪುಡಿ ,ಸಕ್ಕರೆ ಮತ್ತು ನಿಂಬೆ ಹಣ್ಣು.

ಮಾಡುವ ವಿಧಾನ: ಒಂದು ಬೌಲ್​ಗೆ ಒಂದರಿಂದ ಮೂರು ಟೀ ಸ್ಪೂನ್ ಕಾಫಿ ಪೌಡರ್,ಮೂರರಿಂದ ನಾಲ್ಕು ಟೀ ಸ್ಪೂನ್ ಸಕ್ಕರೆ ಹಾಗೆಯೇ ಅರ್ಧ ನಿಂಬೆಯ ರಸವನ್ನು ಹಿಂಡಿ. ಇದಾದ ಬಳಿಕ ಈ ಎಲ್ಲಾ ಸಾಮಗ್ರಿಗಳನ್ನು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ಈಗ ಕಾಪೀ ಸ್ಕ್ರಬ್ ರೆಡಿಯಾಗಿರುತ್ತದೆ. ನಂತರ ಟೊಮ್ಯಾಟೋ ವನ್ನು ಸಮವಾಗಿ ಎರಡು ಭಾಗ ಮಾಡಿಕೊಳ್ಳಿ. ಈಗ ರೆಡಿ ಮಾಡಿಕೊಂಡಿರುವ ಸ್ಕ್ರಬ್​ ನ್ನು ಕಟ್​ ಮಾಡಿದ ಅರ್ಧ ಟೊಮ್ಯಾಟೋದ ಮೇಲೆ ಹರಡಿಕೊಳ್ಳಿ. ನಂತರ ಅದನ್ನು ತ್ವಚೆಗೆ ಚೆನ್ನಾಗಿ ಸ್ಕ್ರಬ್ ಮಾಡಿ. ವಿಶೇಷ ಅಂದ್ರೆ ಇದೇ ಸ್ಕ್ರಬ್​ನ್ನು ಶರೀರದ ಇತರ ತ್ವಚೆಗೂ ಬಳಸಿಕೊಳ್ಳಬಹುದು. ಹತ್ತು ನಿಮಿಷಗಳ ಕಾಲ ಸ್ಕ್ರಬ್​ನ್ನು ತ್ವಚೆಯ ಮೇಲೆ ಹಾಗೆಯೇ ಬಿಡಿ. ಇದಾದ ಬಳಿಕ ಉಳಿದ ಅರ್ಧ ಟೊಮ್ಯಟೋದಿಂದ ಮಸಾಜ್ ಮಾಡುವ ಮೂಲಕ ಸ್ಕ್ರಬ್​ ಪ್ಯಾಕ್ ರಿಮೂವ್ ಮಾಡಬೇಕು. ಈ ಪ್ರೋಸೆಸ್​ ವಾರಕ್ಕೆ ಎರಡು ಬಾರಿ ಮಾಡಿಕೊಳ್ಳಿ. ಇದ್ರಿಂದ ತ್ವಚೆ ಲೈಟ್ ಮತ್ತು ಬ್ರೈಟ್ ಆಗಿಯೂ ಕೂಡಾ ಕಾಣುತ್ತದೆ. ಇನ್ನು ಮೃದು ಮತ್ತು ಬೇಬಿ ಸಾಫ್ಟ್ ತ್ವಚೆಗಾಗಿ ತುಪ್ಪ ಹಚ್ಚಿಕೊಳ್ಳುವುದನ್ನು ಮರೆಯಲೇಬಾರದು.ಆದಷ್ಟು ಶುದ್ಧ ತುಪ್ಪವನ್ನು ಬಳಸಿಕೊಂಡರೆ ಉತ್ತಮ. ಒಂದು ವೇಳೆ ಶುದ್ಧ ತುಪ್ಪ ಅನಿವಾರ್ಯ ಆದ್ರೆ ಆದ್ರೆ ತೆಂಗಿನ ಎಣ್ಣೆಯನ್ನು ಕೂಡಾ ಬಳಸಬಹುದು.

ಕೂದಲ ಆರೋಗ್ಯ: ಪ್ರತಿಯೊಬ್ಬ ಮಹಿಳೆಯ ಸೌಂದರ್ಯ ಅಡಗಿರುವುದು ಆಕೆಯ ಕೂದಲಿನಲ್ಲಿ. ಇದಕ್ಕಾಗಿಯೇ ಮಹಿಳೆಯರು ಹೊಳೆಯುವ ಹಾಗೂ ದಪ್ಪ ಕೂದಲನ್ನು ಬಯಸುತ್ತಾರೆ. ಆದರೆ ಇಂತಹ ಕೂದಲನ್ನು ಪಡೆಯುವುದು ಅಷ್ಟು ಸುಲಭವಲ್ಲ, ಕೂದಲಿನ ಆರೈಕೆ ಮಾಡುವ ಮಹಿಳೆಯರು ಸುಂದರ ಕೂದಲಿಗಾಗಿ ತುಂಬಾ ಮುಖ್ಯವಾಗಿರುವುದನ್ನು ಮಾಡಬೇಕಾಗುತ್ತದೆ. ನೈಸರ್ಗಿಕವಾಗಿ ಸುಂದರ ಹಾಗೂ ದಪ್ಪಗಿನ ಸಮೃದ್ಧ ಕೂದಲನ್ನು ಪಡೆಯಲು ನೈಸರ್ಗಿಕ ಮನೆಮದ್ದನ್ನು ಉಪಯೋಗಿಸಿಕೊಳ್ಳಬಹುದು. ಈ ಮನೆಮದ್ದುಗಳಲ್ಲಿ ತೆಂಗಿನ ಕಾಯಿ ಹಾಲು ಕೂಡಾ ಒಂದು. ತೆಂಗಿನಕಾಯಿ ಹಾಲಿನಲ್ಲಿ ಅಸಂಖ್ಯಾತ ಉಪಯೋಗಗಳಿವೆ. ಅದರಲ್ಲಿ ಮುಖ್ಯವಾಗಿ ತೆಂಗಿನಕಾಯಿ ಹಾಲನ್ನು ಪ್ರೋಟಿನ್ ಚಿಕಿತ್ಸೆಗೆ ಬಳಸಬಹುದು. ಇದಕ್ಕೆ ಬೇಕಾಗಿರುವ ಸಾಮಗ್ರಿಗಳೆಂದರೆ ತೆಂಗಿನಕಾಯಿ ಹಾಲು, ಮೊಟ್ಟೆ ,ಎಕ್ಸ್ ಟ್ರಾ ವರ್ಜಿನ್ ಆಲಿವ್ ಆಯಿಲ್, ಆರ್ಗನ್ ತೈಲ ಮತ್ತು ತೆಂಗಿನ ಎಣ್ಣೆ

ಮಾಡುವ ವಿಧಾನ: ಈ ಎಲ್ಲಾ ಸಾಮಗ್ರಿಗಳನ್ನು ಸಮಪ್ರಮಾಣದಲ್ಲಿ ಸೇರಿಸಿ ಮಿಶ್ರಣ ಮಾಡಿ. ಕೂದಲನ್ನು ಎರಡು ಭಾಗವಾಗಿ ಮಾಡಿ ವೃತ್ತಾಕಾರದ ಚಾಲನೆಯಲ್ಲಿ ಇದನ್ನು ಹಚ್ಚಿರಿ. ಇದರಿಂದ ರಕ್ತಪರಿಚಲನೆ ಉತ್ತಮಗೊಳ್ಳುತ್ತದೆ. ರಕ್ತ ಪರಿಚಲನೆ ಉತ್ತಮಗೊಳ್ಳುವುದರಿಂದ ಕೂದಲಿನ ಬೆಳವಣಿಗೆ ಉತ್ತಮವಾಗುತ್ತದೆ. ತೆಂಗಿನಕಾಯಿ ಹಾಲು ತುಂಬಾ ಪರಿಶುದ್ಧ ಮತ್ತು ಇದಕ್ಕೆ ಯಾವುದೇ ಕಲಬೆರಕೆ ಆಗಿರುವುದಿಲ್ಲ. ಇದನ್ನು ನೀವು ಮನೆಯಲ್ಲಿಯೇ ತಯಾರಿಸಿ.

ಒಣಗಿದ ತೆಂಗಿನಕಾಯಿಯಿಂದ ಹಾಲನ್ನು ತೆಗೆಯಬೇಕು. ನಿಮ್ಮ ಕೂದಲಿಗೆ ನೇರವಾಗಿ ತೆಂಗಿನಕಾಯಿ ಹಾಲನ್ನು ಹಚ್ಚಬಹುದು. ಇದರಿಂದ ಕೂಡ ನಿಮ್ಮ ಕೂದಲಿನ ಬೆಳವಣಿಗೆಯಾಗುತ್ತದೆ. ಮಹಿಳೆಯ ಕೂದಲಿನ ಆರೈಕೆಯಲ್ಲಿ ತೆಂಗಿನಕಾಯಿ ಹಾಲು ಪ್ರಮುಖ ಪಾತ್ರ ವಹಿಸುತ್ತದೆ. ಮಹಿಳೆಯರಿಗೆ ಮನೆಯಲ್ಲಿಯೇ ಕೂದಲಿನ ಆರೈಕೆ ಮಾಡಬಹುದು. ಇದಕ್ಕೆ ಬ್ಯೂಟಿ ಪಾರ್ಲರ್ ಗೆ ಓಡಿ ಹಣ ವ್ಯಯ ಮಾಡುವ ಅತ್ಯವಾದರೂ ಏನಿದೆ? ತೆಂಗಿನಕಾಯಿ ಹಾಲಿನ ಕೆಲವೊಂದು ಸರಳ ಪ್ಯಾಕ್ ಗಳನ್ನು ಪ್ರಯತ್ನಿಸಿ ಮತ್ತು ತೆಂಗಿನಕಾಯಿ ಹಾಲಿನ ಎಲ್ಲಾ ಲಾಭಗಳನ್ನು ನೀವೂ ಕೂಡಾ ಪಡೆಯಬಹುದು.

ಈ ರೀತಿಯಾಗಿ ಬೆಲೆಬಾಳುವ ಕ್ರೀಮ್,ಪೌಡರ್ ಇತರೆ ಯಾವುದೇ ಕಾಸ್ಮೆಟಿಕ್ಸ್​​ಗಳ ಅಗತ್ಯವಿಲ್ಲದೆ ಮನೆಯಲ್ಲಿಯೇ ಸರಳವಾಗಿ ಸೌಂದರ್ಯ ಸಮೃದ್ಧಿ ಮಾಡಬಹುದು.

Published On - 12:58 pm, Mon, 21 October 19