ಗಾಂಧಿ ಸೂತ್ರ ಫಾಲೋ ಮಾಡಿದ್ರೆ ಮಾನಸಿಕವಾಗಿ-ದೈಹಿಕವಾಗಿ ಸ್ಟ್ರಾಂಗ್‌ ಆಗಬಹುದು!

|

Updated on: Oct 03, 2019 | 4:05 PM

ಅಹಿಂಸೆ ಮತ್ತು ಶಾಂತಿಯಿಂದ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟ ಮಹಾನ್ ನಾಯಕ ಮಹಾತ್ಮ ಗಾಂಧಿ ಅವರ ತತ್ವಗಳನ್ನು ಇಂದು ವಿಶ್ವದೆಲ್ಲೆಡೆ ಪ್ರತಿಯೊಬ್ಬರು ಪಾಲಿಸಿಕೊಂಡು ಹೋಗುತ್ತಿದ್ದಾರೆ. ಆದರೆ ಅವರ ಆರೋಗ್ಯಕರವಾದ ಜೀವನಶೈಲಿ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಅವರ ಜೀವನಶೈಲಿಯಿಂದ ನಾವು ಸಾಕಷ್ಟು ಕಲಿಯಬೇಕಾಗಿದೆ. ಹೊಟ್ಟೆ ತುಂಬಿಸಿಕೊಳ್ಳಲು ಮಾತ್ರ ಊಟ ಮಾಡುವುದಲ್ಲ, ಅದರಿಂದ ಸಾಕಷ್ಟು ಇತರ ಉಪಯೋಗಗಳೂ ಇದೆ ಎಂದು ಗಾಂಧೀಜಿ ನಂಬಿದ್ದರು. ಆಹಾರವು ನಿಮ್ಮನ್ನು ಚುರುಕಾಗಿಡುತ್ತದೆ. ಆರೋಗ್ಯಕರ ಜೀವನಕ್ಕೆ ಆರೋಗ್ಯಕರ ಆಹಾರವು ತುಂಬಾ ಮುಖ್ಯವಾಗಿದೆ ಎಂದು ಗಾಂಧಿ ಹೇಳುತ್ತಿದ್ದರು. ಸರಳವಾಗಿಯೇ […]

ಗಾಂಧಿ ಸೂತ್ರ ಫಾಲೋ ಮಾಡಿದ್ರೆ ಮಾನಸಿಕವಾಗಿ-ದೈಹಿಕವಾಗಿ ಸ್ಟ್ರಾಂಗ್‌ ಆಗಬಹುದು!
Follow us on

ಅಹಿಂಸೆ ಮತ್ತು ಶಾಂತಿಯಿಂದ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟ ಮಹಾನ್ ನಾಯಕ ಮಹಾತ್ಮ ಗಾಂಧಿ ಅವರ ತತ್ವಗಳನ್ನು ಇಂದು ವಿಶ್ವದೆಲ್ಲೆಡೆ ಪ್ರತಿಯೊಬ್ಬರು ಪಾಲಿಸಿಕೊಂಡು ಹೋಗುತ್ತಿದ್ದಾರೆ. ಆದರೆ ಅವರ ಆರೋಗ್ಯಕರವಾದ ಜೀವನಶೈಲಿ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಅವರ ಜೀವನಶೈಲಿಯಿಂದ ನಾವು ಸಾಕಷ್ಟು ಕಲಿಯಬೇಕಾಗಿದೆ.

ಹೊಟ್ಟೆ ತುಂಬಿಸಿಕೊಳ್ಳಲು ಮಾತ್ರ ಊಟ ಮಾಡುವುದಲ್ಲ, ಅದರಿಂದ ಸಾಕಷ್ಟು ಇತರ ಉಪಯೋಗಗಳೂ ಇದೆ ಎಂದು ಗಾಂಧೀಜಿ ನಂಬಿದ್ದರು. ಆಹಾರವು ನಿಮ್ಮನ್ನು ಚುರುಕಾಗಿಡುತ್ತದೆ. ಆರೋಗ್ಯಕರ ಜೀವನಕ್ಕೆ ಆರೋಗ್ಯಕರ ಆಹಾರವು ತುಂಬಾ ಮುಖ್ಯವಾಗಿದೆ ಎಂದು ಗಾಂಧಿ ಹೇಳುತ್ತಿದ್ದರು. ಸರಳವಾಗಿಯೇ ಜೀವನ ಸಾಗಿಸುತ್ತಿದ್ದ ಗಾಂಧಿ ಅವರ ಆರೋಗ್ಯಕರ ಜೀವನಶೈಲಿ ಬಗ್ಗೆ ನೀವು ತಿಳಿದುಕೊಂಡು ಅದನ್ನು ಪಾಲಿಸಿ..

 ಗಾಂಧೀಜಿಗೆ ಹಣ್ಣು ಮತ್ತು ತರಕಾರಿಗಳೆಂದರೆ ತುಂಬಾ ಇಷ್ಟ. ಆಯಾಯ ಋತುಗಳಲ್ಲಿ ಸಿಗುವಂತಹ ಹಣ್ಣು ಮತ್ತು ತರಕಾರಿಗಳನ್ನು ಆಹಾರ ಕ್ರಮದಲ್ಲಿ ಸೇವಿಸುತ್ತಿದ್ದರು. ಸಮಯೋಚಿತವಾಗಿ ಆ ಕಾಲ್ಕಕೆ ಸಿಗೋ ಹಣ್ಣು ಹಂಪಲು ತರಕಾರಿ ಸೇವಿಸಬೇಕು ಅನ್ನೋದು ಗಾಂಧೀಜಿ ಹೇಳಿಕೊಟ್ಟ ಪಾಠ. ಅದನ್ನು ಸಮರ್ಪಕವಾಗಿ ನಿರ್ವಹಿಸಿದ್ರೆ ಆರೋಗ್ಯ ಚೆನ್ನಾಗಿರುತ್ತೆ.

ಸಂಸ್ಕರಿತ ಆಹಾರಗಳಿಂದ ಗಾಂಧೀಜಿ ದೂರವಿರುತ್ತಿದ್ದರು. ಅವರು ಸಕ್ಕರೆ ಸೇವನೆ ಕೂಡ ಮಾಡುತ್ತಿರಲಿಲ್ಲ. ಸಕ್ಕರೆ ಬದಲಿಗೆ ಬೆಲ್ಲ ಸೇವನೆ ಮಾಡುತ್ತಿದ್ದ ಗಾಂಧೀಜಿ ಅವರು ಖಾರದ ಪದಾರ್ಥಗಳಿಂದ ದೂರವಿರುತ್ತಿದ್ದರು. ಸಕ್ಕರೆ ಮತ್ತು ಮೈದಾ ಕೂಡಾ ಆರೋಗ್ಯ ದೃಷ್ಟಿಯಿಂದ ವರ್ಜ್ಯ. ಅದರ ಜೊತೆ ಹೆಚ್ಚು ಮಸಾಲಭರಿತ ಆಹಾರಗಳಿಂದ ದೂರವಿದ್ದು ಬಿಟ್ರೆ ಇನ್ನೂ ಉತ್ತಮ. ಖಾರ ದೂರವಿದ್ದಷ್ಟು ಆರೋಗ್ಯ ಉತ್ತಮ.

ಯೌವನದಲ್ಲಿ ಮಾಂಸಾಹಾರ ಸೇವನೆ ಮಾಡಿದ್ದ ಗಾಂಧೀಜಿ ಬಳಿಕ ಮಾಂಸಾಹಾರದಿಂದ ದೂರವಿದ್ದರು. ಅವರು ಹಲವಾರು ದಶಕಗಳ ಕಾಲ ಸಸ್ಯಾಹಾರ ಸೇವನೆ ಮಾಡುತ್ತಿದ್ದರು. ಸಸ್ಯಹಾರವೇ ಗ್ರೇಟ್‌ ಅನ್ನೋದು ಈಗೀಗ ಎಲ್ಲರಿಗೂ ಗೊತ್ತಾಗಿದೆ. ಈಗೀಗ ಜನ ಮಾಂಸಹಾರದಿಂದ ಸಸ್ಯಹಾರದತ್ತ ತಿರುಗಲಾರಂಭಿಸಿದೆ. ದೀರ್ಘಕಾಲೀನ ಸಸ್ಯಹಾರದ ಅಭ್ಯಾಸ ನಮ್ಮನ್ನು ಪರ್ಫೆಕ್ಟ್‌ ಫಿಟ್‌ ಆಗಿಸುತ್ತೆ. ಇಲ್ಲೂ ನಾವು ಗಾಂಧೀಜಿಯವರನ್ನು ಫಾಲೋ ಮಾಡಬೇಕಿದೆ.

ನಡೆಯುವುದು ಅವರ ದೈಹಿಕ ಚಟುವಟಿಕೆಯಾಗಿತ್ತು. ಉತ್ತಮ ಆರೋಗ್ಯ ಕಾಪಾಡಲು ಅವರು ನಿಯಮಿತವಾಗಿ ನಡೆಯುತ್ತಿದ್ದರು. ಈಗೀಗ ಮಾಡ್ರನ್‌ ಲೈಫ್‌ಸ್ಟೈಲ್‌ನಲ್ಲಿ ಹತ್ತು ಹೆಜ್ಜೆಗೂ ಆಟೋ ಹತ್ತುವ ಚಾಳಿ ಇಟ್ಕೊಂಡಿರೋ ನಾವು ಫಿಟ್‌ ಆಗಬೇಕು ಅಂತ ಸರ್ಕಸ್‌ ಮಾಡ್ತೀವಿ. ಅದ್ರ ಬದಲಿಗೆ ಎಲ್ಲೆಲ್ಲಿ ಸಾಧ್ಯವೋ ಅಲ್ಲಲ್ಲಿ ನಡೆದುಕೊಂಡೇ ಹೋದ್ರೆ ಫಿಟ್‌ ಕೂಡಾ ಆಗಬಹುದು ಗಾಂಧೀಜಿಯವರ ಹೆಲ್ತ್‌ಸೂತ್ರ ಅಳವಡಿಸಿಕೊಂಡಂತೆ ಕೂಡ ಆಗುತ್ತೆ.

ಗಾಂಧೀಜಿ ಅವರು ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಒತ್ತಡದಿಂದ ದೂರವಿರಲು ಧಾನ್ಯಕ್ಕೆ ಮೊರೆ ಹೋಗುತ್ತಿದ್ದರು. ಧ್ಯಾನದಿಂದ ಅವರು ಒಳ್ಳೆಯ ಆರೋಗ್ಯವನ್ನು ಕಾಪಾಡಿಕೊಂಡಿದ್ದರು. ಮಾಡ್ರನ್‌ ಯುಗಕ್ಕೆ ಗಾಂಧೀಜಿ ಹೆಲ್ತ್‌ ಸೂತ್ರಗಳು ಬಹಳ ಉಪಯೋಗಕ್ಕೆ ಬೀಳ್ತವೆ. ಸಿಂಪಲ್ಲಾಗಿ ಹೇಳೋದಿದ್ರೆ ಮಾಡ್ರನ್‌ ಯುಗದ ಒತ್ತಡಗಳೇ ಅನಾರೋಗ್ಯಕ್ಕೆ ಮೂಲ ಕಾರಣ. ಇದಕ್ಕಾಗಿ ನಾವು ಒಂದಿಷ್ಟು ಕಾಲ ಬಿಡುವು ಮಾಡಿಕೊಂಡು ಧ್ಯಾನಕ್ಕೆ ಮೊರೆ ಹೋಗಬೇಕು. ಧ್ಯಾನ ನಮ್ಮ ಮಾನಸಿಕ ಕ್ಲೇಷ ಕಳೆಯುತ್ತೆ. ಮಾನಸಿಕ ಮಾತ್ರವಲ್ಲ ದೈಹಿಕ ಆರೋಗ್ಯ ತಂದುಕೊಡುತ್ತೆ.

ಮದ್ಯಪಾನ ಮತ್ತು ಧೂಮಪಾನ ಬಲು ದೂರ
ಯುವಕರಾಗಿದ್ದಾಗ ಮದ್ಯಪಾನ ಮತ್ತು ಧೂಮಪಾನ ಮಾಡಿದ್ದ ಗಾಂಧೀಜಿ ಅವರು ಬಳಿಕ ಜೀವಮಾನವಿಡಿ ಎಂದೂ ಅದನ್ನು ಮುಟ್ಟಲಿಲ್ಲ. ಗಾಂಧೀಜಿ ಕಥೆ ಕೇಳಿದ ಎಲ್ಲರಿಗೂ ಇದು ಗೊತ್ತಿರುವ ಸತ್ಯ. ನಾವು ಹೆಲ್ತಿಯಾಗಿರಬೇಕು ಅಂದ್ರೆ ಈ ವಿಷಯದಲ್ಲೂ ಗಾಂಧೀಜಿಯನ್ನು ಅನುಸರಿಸಬೇಕು. ಮಧ್ಯಪಾನದಿಂದ ಮಾನಸಿಕ ಸಮತೋಲನ ಕೂಡಾ ಹದ ತಪ್ಪುತ್ತೆ. ಇದು ನಮ್ಮ ಲಿವರ್‌, ಜೀರ್ಣಾಂಗ ವ್ಯೂಹ ಮೆದುಳು ಹೀಗೆ ಎಲ್ಲಾ ಒಳಾಂಗಗಳನ್ನು ಘಾಸಿಗೊಳಿಸುತ್ತೆ. ಮಧ್ಯಪಾನದ ವಿಷಯದಲ್ಲಿ ಕಟ್ಟು ನಿಟ್ಟಾದರೆ ಒಳ್ಳೆ ಆರೋಗ್ಯ ನಿಮ್ಮದಾಗುತ್ತೆ.

ಗಾಂಧಿ ಸೂತ್ರ ಫಾಲೋ ಮಾಡಿದ್ರೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಸ್ಟ್ರಾಂಗ್‌ ಆಗಬಹುದು. ಒಳ್ಳೆಯ ಜೀವನ ನಡೆಸಬಹುದು.