ನವರಾತ್ರಿಯ ಆರನೇ ದಿನ ದೇವಿಯ ಯಾವ ರೂಪ ಆರಾಧಿಸಬೇಕು?
ನವರಾತ್ರಿಯ ಆರನೇ ದಿನ ಕಾತ್ಯಾಯಿನಿ ಆರಾಧನೆ ವಿಶೇಷ. ನವದುರ್ಗೆಯರಲ್ಲಿ ಕಾತ್ಯಾಯಿನಿಯದ್ದು ಆರನೇ ರೂಪ. ತ್ರಿಮೂರ್ತಿಗಳ ಅಂಶವೇ ಈ ದೇವಿ. ಈಕೆಯನ್ನು ಮೊದಲು ಕಾತ್ಯಾಯನ ಋಷಿ ಪೂಜಿಸಿದ್ದರಿಂದ ಇವಳಿಗೆ ಕಾತ್ಯಾಯಿನಿ ಎಂಬ ಹೆಸರು ಬಂತು. ಕಾತ್ಯಾಯಿನಿ ಅಂದ್ರೆ ಪರೋಪಕಾರದ ಪ್ರತಿರೂಪ. ಈ ದೇವಿಯದ್ದು ಅತ್ಯಂತ ಭವ್ಯ ಸ್ವರೂಪ. ಇವಳು ಸದಾ ಬಂಗಾರದಂತೆ ಹೊಳೆಯುತ್ತಾಳೆ. ಈ ದೇವಿಗೆ ನಾಲ್ಕು ಭುಜಗಳಿವೆ. ಬಲಗಡೆಯ ಮೇಲಿನ ಕೈ ಅಭಯ ಮುದ್ರೆಯಲ್ಲಿದೆ. ಬಲಗಡೆಯ ಕೆಳಗಿನ ಕೈ ವರಮುದ್ರೆಯಲ್ಲಿದೆ. ಎಡಗಡೆಯ ಮೇಲಿನ ಕೈಯಲ್ಲಿ ಖಡ್ಗವಿದೆ. ಎಡಗಡೆಯ […]
ನವರಾತ್ರಿಯ ಆರನೇ ದಿನ ಕಾತ್ಯಾಯಿನಿ ಆರಾಧನೆ ವಿಶೇಷ. ನವದುರ್ಗೆಯರಲ್ಲಿ ಕಾತ್ಯಾಯಿನಿಯದ್ದು ಆರನೇ ರೂಪ. ತ್ರಿಮೂರ್ತಿಗಳ ಅಂಶವೇ ಈ ದೇವಿ. ಈಕೆಯನ್ನು ಮೊದಲು ಕಾತ್ಯಾಯನ ಋಷಿ ಪೂಜಿಸಿದ್ದರಿಂದ ಇವಳಿಗೆ ಕಾತ್ಯಾಯಿನಿ ಎಂಬ ಹೆಸರು ಬಂತು. ಕಾತ್ಯಾಯಿನಿ ಅಂದ್ರೆ ಪರೋಪಕಾರದ ಪ್ರತಿರೂಪ. ಈ ದೇವಿಯದ್ದು ಅತ್ಯಂತ ಭವ್ಯ ಸ್ವರೂಪ. ಇವಳು ಸದಾ ಬಂಗಾರದಂತೆ ಹೊಳೆಯುತ್ತಾಳೆ. ಈ ದೇವಿಗೆ ನಾಲ್ಕು ಭುಜಗಳಿವೆ. ಬಲಗಡೆಯ ಮೇಲಿನ ಕೈ ಅಭಯ ಮುದ್ರೆಯಲ್ಲಿದೆ. ಬಲಗಡೆಯ ಕೆಳಗಿನ ಕೈ ವರಮುದ್ರೆಯಲ್ಲಿದೆ. ಎಡಗಡೆಯ ಮೇಲಿನ ಕೈಯಲ್ಲಿ ಖಡ್ಗವಿದೆ. ಎಡಗಡೆಯ ಕೆಳಗಿನ ಕೈಯಲ್ಲಿ ಕಮಲವಿದೆ. ಕಾತ್ಯಾಯಿನಿ ದುಷ್ಟರನ್ನು ಸಂಹರಿಸುವ, ಶಿಷ್ಟರ ಉದ್ಧಾರ ಮಾಡುವ ಶಕ್ತಿದೇವತೆ. ಈಕೆಯನ್ನು ಮಂತ್ರ ಸಹಿತವಾಗಿ ಆರಾಧಿಸಿದ್ರೆ ದುಷ್ಟಶಕ್ತಿಗಳು ನಾಶವಾಗುತ್ತವೆ ಎಂಬ ನಂಬಿಕೆ ಇದೆ.
ಕಾತ್ಯಾಯಿನಿ ಮಂತ್ರ
ಚಂದ್ರಹಾಸೋಜ್ವಲಕರಾ ಶಾರ್ದೂಲವರವಾಹನಾ ಕಾತ್ಯಾಯನೀ ಶುಭಂ ದದ್ಯಾದ್ದೇವಿ ದಾನವಘಾತಿನೀ
ಕಲಿಯುಗದಲ್ಲಿ ಕಾತ್ಯಾಯಿನಿ ಮೋಕ್ಷ ನೀಡ್ತಾಳೆ ಅಂತಾ ನಮ್ಮ ಪುರಾಣಗಳು ಹೇಳುತ್ತವೆ. ಶ್ರೀಕೃಷ್ಣ ಪರಮಾತ್ಮನನ್ನು ಪತಿಯಾಗಿ ಪಡೆಯಲು ಗೋಪಿಕೆಯರು ಈ ದೇವಿಯನ್ನು ಪೂಜಿಸಿದ್ರಂತೆ. ನವರಾತ್ರಿಯ ಆರನೇ ದಿನ ಈ ತಾಯಿಯನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸಿದ್ರೆ ವಿಶೇಷ ಫಲಗಳನ್ನು ಪಡೆಯಬಹುದು ಎನ್ನಲಾಗುತ್ತೆ.
ಕಾತ್ಯಾಯಿನಿ ದೇವಿ ಪೂಜಾ ಫಲಗಳು
* ಅಮೋಘ ಫಲಗಳನ್ನು ಕರುಣಿಸ್ತಾಳೆ * ಧರ್ಮ, ಅರ್ಥ, ಕಾಮ, ಮೋಕ್ಷ ಪ್ರಾಪ್ತಿ * ರೋಗಗಳು ದೂರ * ಶೋಕ ಪರಿಹಾರ * ಭಯ ನಿವಾರಣೆ * ಜನ್ಮ ಜನ್ಮಾಂತರದ ಪಾಪ ಪರಿಹಾರ * ಉತ್ತಮ ಪದವಿ ಪ್ರಾಪ್ತಿ * ಶತ್ರುಗಳ ಶತ್ರುತ್ವ ಗುಣ ಧ್ವಂಸ * ಸುಖ–ಶಾಂತಿ, ನೆಮ್ಮದಿ ಪ್ರಾಪ್ತಿ
Published On - 2:34 pm, Fri, 4 October 19