ಮನೆಯ ಮುಂಭಾಗವೇ ತುಳಸಿ ಗಿಡ ನೆಡೋದೇಕೆ?
ಗಿಡಮರಗಳಿಗೆ ಹಿಂದೂ ಧರ್ಮದಲ್ಲಿ ಪೂಜನೀಯ ಸ್ಥಾನಮಾನ ನೀಡಲಾಗಿದೆ. ಜ್ಯೋತಿಷ್ಯಶಾಸ್ತ್ರದಲ್ಲಿ ಋುಷಿಮುನಿಗಳು ಒಂದೊಂದು ನಕ್ಷತ್ರ ಹಾಗೂ ಒಂದೊಂದು ಗ್ರಹಕ್ಕೂ ಮರಗಿಡಗಳ ಹೆಸರಿಟ್ಟಿದ್ದಾರೆ. “ವೃಕ್ಷೋ ರಕ್ಷತಿ ರಕ್ಷಿತಃ” ಅಂದ್ರೆ ಮರಗಿಡಗಳನ್ನು ರಕ್ಷಿಸಿದ್ರೆ ಮನುಕುಲ ಉಳಿಯುತ್ತೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮರಗಿಡಗಳ ಪೋಷಣೆ, ಆರಾಧನೆ, ರಕ್ಷಣೆಯಿಂದ ದೋಷಗಳು ನಿವಾರಣೆಯಾಗುತ್ತವೆ ಎನ್ನಲಾಗುತ್ತೆ. ಮನೆಯ ವಾಸ್ತುದೋಷ ನಿವಾರಣೆಗೂ ಇದು ಪೂರಕವಾಗಿದೆ. ಹೌದು, ಮನೆಯಂಗಳದಲ್ಲಿ ತುಳಸಿ ಇದ್ರೆ ಯಾವ ದೋಷಗಳೂ ಬಾಧಿಸಲ್ಲ ಅಂತಾ ನಮ್ಮ ಶಾಸ್ತ್ರಗಳು ಹೇಳುತ್ತವೆ. ಹಾಗೇ ಮನೆಯಲ್ಲಿ ತುಳಸಿ ಗಿಡ ಇದ್ರೆ ವೈದ್ಯನಿದ್ದಂತೆ […]
ಗಿಡಮರಗಳಿಗೆ ಹಿಂದೂ ಧರ್ಮದಲ್ಲಿ ಪೂಜನೀಯ ಸ್ಥಾನಮಾನ ನೀಡಲಾಗಿದೆ. ಜ್ಯೋತಿಷ್ಯಶಾಸ್ತ್ರದಲ್ಲಿ ಋುಷಿಮುನಿಗಳು ಒಂದೊಂದು ನಕ್ಷತ್ರ ಹಾಗೂ ಒಂದೊಂದು ಗ್ರಹಕ್ಕೂ ಮರಗಿಡಗಳ ಹೆಸರಿಟ್ಟಿದ್ದಾರೆ. “ವೃಕ್ಷೋ ರಕ್ಷತಿ ರಕ್ಷಿತಃ” ಅಂದ್ರೆ ಮರಗಿಡಗಳನ್ನು ರಕ್ಷಿಸಿದ್ರೆ ಮನುಕುಲ ಉಳಿಯುತ್ತೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮರಗಿಡಗಳ ಪೋಷಣೆ, ಆರಾಧನೆ, ರಕ್ಷಣೆಯಿಂದ ದೋಷಗಳು ನಿವಾರಣೆಯಾಗುತ್ತವೆ ಎನ್ನಲಾಗುತ್ತೆ. ಮನೆಯ ವಾಸ್ತುದೋಷ ನಿವಾರಣೆಗೂ ಇದು ಪೂರಕವಾಗಿದೆ. ಹೌದು, ಮನೆಯಂಗಳದಲ್ಲಿ ತುಳಸಿ ಇದ್ರೆ ಯಾವ ದೋಷಗಳೂ ಬಾಧಿಸಲ್ಲ ಅಂತಾ ನಮ್ಮ ಶಾಸ್ತ್ರಗಳು ಹೇಳುತ್ತವೆ. ಹಾಗೇ ಮನೆಯಲ್ಲಿ ತುಳಸಿ ಗಿಡ ಇದ್ರೆ ವೈದ್ಯನಿದ್ದಂತೆ ಎನ್ನಲಾಗುತ್ತೆ. ದೇವದಾನವರ ನಡುವಿನ ಸಮುದ್ರಮಥನದಲ್ಲಿ ವರವಾಗಿ ಭೂಲೋಕಕ್ಕೆ ಬಂದವುಗಳಲ್ಲಿ ಬೇವು, ಬಿಲ್ವ, ಅಶ್ವತ್ಥದೊಂದಿಗೆ ತುಳಸಿಯೂ ಸಹ ಇತ್ತು. ಶ್ರೀ ಮಹಾವಿಷ್ಣುವಿಗೆ ಪ್ರಿಯವಾದದ್ದು, ಪ್ರೀತಿಕರವಾದದ್ದು ತುಳಸಿ.
ತುಳಸಿಯ ಪ್ರಯೋಜನಗಳು *ತುಳಸಿ ಬೃಂದಾವನ ಇರುವ ಮನೆಗೆ ದುಷ್ಟಶಕ್ತಿಗಳ ಕಾಟವಿರಲ್ಲ. *ತುಳಸಿಯ ಗಾಳಿ ಸೋಕಿದರೆ ಸೂಕ್ಷ್ಮ ಕ್ರಿಮಿಕೀಟಗಳು ನಾಶವಾಗುತ್ತವೆ. *ಮನೆಯ ಮುಂದೆ ವಿವಿಧ ಬಗೆಯ ತುಳಸಿ ಗಿಡಗಳನ್ನು ಬೆಳೆಸುವುದರಿಂದ ಮನೆಯ ವಾತಾವರಣ ಶುದ್ಧವಾಗುತ್ತೆ. *ಕೃಷ್ಣ ತುಳಸಿಯು ಔಷಧೀಯ ಗುಣವನ್ನು ಹೊಂದಿದೆ. ಇದರ ರಸವನ್ನು ಸೇವಿಸಿದರೆ ಕೆಮ್ಮು ನಿವಾರಣೆಯಾಗುತ್ತೆ.
ತುಳಸಿಯನ್ನು ಪೂಜೆಗೆ ಮತ್ತು ದೇವರಿಗೆ ಅಲಂಕಾರ ಮಾಡಲು ಬಳಸಲಾಗುತ್ತದೆ. ಹೆಚ್ಚಿನವರು ತೋಟಗಳಲ್ಲಿ ಅನೇಕ ರೀತಿಯ ಗಿಡಗಳನ್ನು ಬೆಳೆಸುತ್ತಾರೆ. ಆದರೆ ಗಿಡಗಳನ್ನು ಬೆಳೆಸಲು ಕೂಡ ವಾಸ್ತು ಅಗತ್ಯ. ಇಲ್ಲದಿದ್ದರೆ ಇದರಿಂದ ಕುಟುಂಬದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತೆ ಎನ್ನಲಾಗುತ್ತೆ. ಆದ್ದರಿಂದ ವಾಸ್ತು ದೋಷ ಪರಿಹಾರಕ್ಕೆ ಮನೆಯಲ್ಲಿ ತುಳಸಿ ಗಿಡ ನೆಡಬೇಕು ಎಂಬ ನಂಬಿಕೆ ಇದೆ. ಹಾಗೇ ತುಳಸಿ ಗಿಡದ ಜೊತೆ ಈ ಒಂದು ಗಿಡವನ್ನು ನೆಟ್ಟರೆ ಮನೆಯಲ್ಲಿ ಎಂದೂ ಆರ್ಥಿಕ ಸಮಸ್ಯೆ ಎದುರಾಗುವುದಿಲ್ಲವಂತೆ. ಆ ಗಿಡ ಯಾವುದೆಂದರೆ ಬಾಳೆಗಿಡ. ಮನೆ ಮುಂದೆ ತುಳಸಿ ಗಿಡದ ಜೊತೆ ಬಾಳೆಗಿಡ ಇದ್ದರೆ ಶುಭ ಸಂಕೇತ ಅಂತಾ ಶಾಸ್ತ್ರಗಳಲ್ಲಿ ಉಲ್ಲೇಖವಿದೆ. ತುಳಸಿ ಗಿಡದ ಅಕ್ಕಪಕ್ಕ ಬಾಳೆಗಿಡವನ್ನು ಬಿಟ್ಟು ಬೇರೆ ಯಾವ ಗಿಡಗಳನ್ನು ನೆಡಬಾರದು ಅಂತಾ ನಮ್ಮ ಹಿರಿಯರು ಹೇಳ್ತಾರೆ.
Published On - 7:43 am, Wed, 16 October 19