Valentine’s Day: ಲೈನ್ ಹೊಡೆದ್ರೆ ಬೀಳ್ತಾಳ, ಅವಳಿಗೆ ಬೇರೆ ಲವ್ವರ್ ಇದಾನಾ? ಎಂದು ಕೇಳಿಕೊಂಡೇ ಫ್ರೆಂಡ್​ ರಿಕ್ವೆಸ್ಟ್​ ಕಳುಹಿಸಿದ್ದೆ

My Love Story: ಮಾತಿನಲ್ಲಿ ಗಟ್ಟಿಗಿತ್ತಿಯಾಗಿ, ನಿಲುವುಗಳಲ್ಲಿ ಶಕ್ತಳಾಗಿ, ಒಂದರ್ಥದಲ್ಲಿ ನನ್ನ ಕನಸ ಶಿಲ್ಪಿಯಾಗಿ, ಒಮ್ಮೊಮ್ಮೆ ಜಗಳಗಂಟಿಯಾಗಿ, ಮಿತಿ ಮೀರಿದಾಗ ಚಂಡಿಯಾಗಿ, ಈಗೀಗ ಮೌನಿಯಾಗಿ ನನ್ನೊಡನೆ ಸಾಗುತ್ತಾ ಬಂದ ಅವಳಿಗೆ ನಾನು ಪ್ರೇಮಿಗಳ ದಿನದಂದು ಏನೆಂದು ಹೇಳಲಿ?

Valentine's Day: ಲೈನ್ ಹೊಡೆದ್ರೆ ಬೀಳ್ತಾಳ, ಅವಳಿಗೆ ಬೇರೆ ಲವ್ವರ್ ಇದಾನಾ? ಎಂದು ಕೇಳಿಕೊಂಡೇ ಫ್ರೆಂಡ್​ ರಿಕ್ವೆಸ್ಟ್​ ಕಳುಹಿಸಿದ್ದೆ
ಏಕಾಏಕಿ ನನ್ನ ಮನದರಸಿಯಾದವಳು.
Follow us
Skanda
|

Updated on: Feb 13, 2021 | 7:10 PM

ಆ ದಿನ ನನಗಿನ್ನೂ ನೆನಪಿದೆ ಸೋಮಾರಿಯಂತೆ ಮಂಚದ ಮೇಲೆ ಬೋರಲು ಬಿದ್ದುಕೊಂಡು ಮೊಬೈಲ್ ತಿಕ್ಕುತ್ತಿದ್ದ ನನ್ನನ್ನು, ಅವಳ ಕನ್ನಡಕಗಳ ಸಂದಿಯ ಚೆಲುವಾದ ಕಂಗಳಿಂದ, ಫೋಟೋಗೆ ಪೋಸು ನೀಡುವಷ್ಟು ಮಾತ್ರ ನಗೆ ಬೀರುತ್ತಿದ್ದ ಕೆಂದುಟಿಗಳ ಕೆಂಪಿನಿಂದ, ಹೊಳಪು ಮುಖದ ಮುದ್ದಿನಿಂದ ಎಚ್ಚರಿಸಿ, ಎದೆಯ ಬಾಗಿಲು ಬಡಿದು ಒಳ ನುಗ್ಗಿ ಮನೆ ಮಾಡಿದ ದಿನ. ಅಂದು ಅವಳೇಕೆ ಅಷ್ಟು ಮುದ್ದಾಗಿ ಕಂಡಳೋ ನನಗೂ ಗೊತ್ತಿಲ್ಲ. ನಾನು ಹಿಂದೆ ನೋಡಿದ್ದ ಬೇರೆ ಹುಡುಗಿಯರಿಗಿಂತ ಬಲು ಸುಂದರಿಯೇನೂ ಅವಳಾಗಿರಲಿಲ್ಲ. ಮತ್ತೆ ಮತ್ತೆ ಅವಳನ್ನು ಭೇಟಿಯಾಗಿ, ಪದೇ ಪದೇ ನೋಡಿ ಇವಳು ಚಂದ ಎನಿಸಿಕೊಂಡವಳೂ ಅಲ್ಲ. ಗೆಳತಿಯೊಬ್ಬಳ ವಾಟ್ಸಾಪ್ ಸ್ಟೇಟಸ್ಸಿನಲ್ಲಿ ಕಾಣಿಸಿಕೊಂಡು ಪಟ್ಟನೆ ಮನ ಕದ್ದ ಕಿನ್ನರಿಯವಳು. ಗೆದ್ದರೆ ಅವಳ ಮನಸ್ಸನ್ನೇ ಗೆಲ್ಲಬೇಕು ಎಂದು ಸವಾಲೊಡ್ಡಿದವಳು. ಚಿತ್ರ ನೋಡಿಯೇ ಜಾರಿ ಬಿದ್ದೆಯಲ್ಲೋ ಎಂದು ನಕ್ಕು ಕಾಡಿದವಳು. ಏಕಾಏಕಿ ನನ್ನ ಮನದರಸಿಯಾದವಳು.

ಪ್ರೀತಿಯೆಂದರೆ ಹಾಗೆ, ಯಾರಿಗೆ, ಯಾವಾಗ, ಹೇಗೆ ಆಗುತ್ತೆ ಅಂತ ಊಹೆ ಮಾಡೋಕಾಗಲ್ಲ ಅಂತ ಹಿಂದೆ ಗೆಳೆಯನೊಬ್ಬ ಹೇಳಿದ್ದ. ಅವನಾಡಿದ್ದ ಮಾತು ಕೇಳಿ ಬಿದ್ದು ಬಿದ್ದು ನಕ್ಕು ಅವನ ಕಾಲೆಳೆದಿದ್ದೆ. ‘‘ನೀನು ರೋಮಿಯೋ, ಅವಳು ಜೂಲಿಯೆಟ್ ನಿಮ್ಮಿಬ್ರದ್ದೂ Love at first sight’’ ಎನ್ನುತ್ತಾ ಹಂಗಿಸಿದ್ದೆ. ಆದರೆ ಇಂದು ಅವನಾಡಿದ್ದ ಮಾತು ನಿಜವಾಗಿತ್ತು. ಹಿಂದೆಂದೂ ಕಂಡಿರದ ಹುಡುಗಿಯೊಬ್ಬಳು ಮನದ ಮನೆಯೊಳಗೆ ಒಲವಿನ ಅಡುಗೆ ಮಾಡಿ ಬಡಿಸಲು ತಯಾರಾಗಿದ್ದಳು. ಒಲವು ನನಗೆ ಮಾತ್ರ ಆಗಿದ್ದರಿಂದಲೋ ಏನೋ ಕಹಿ ಉಣಿಸುವಳೋ ಸಿಹಿ ಕೊಟ್ಟು ಸಂತೈಸುವಳೋ ಎಂಬ ಭಯ ನನ್ನ ಬೆನ್ನು ಹತ್ತಿತ್ತು. ನಂತರ ಇನ್ನೇನು, ಅವಳನ್ನು ನನ್ನವಳನ್ನಾಗಿಸಿಕೊಳ್ಳುವುದೇ ಮುಂದಿನ ಕಾರ್ಯಕ್ರಮ ಎಂದು ಫೋಟೋ ಹಾಕಿದ್ದ ಗೆಳತಿಗೆ ದುಂಬಾಲು ಬಿದ್ದು ಅವಳ ಬಗೆಗಿನ ವಿಚಾರಗಳನ್ನು ಕಲೆ ಹಾಕಿ, ‘‘ಲೈನ್ ಹೊಡೆದ್ರೆ ಬೀಳ್ತಾಳ, ಅವಳಿಗೆ ಬೇರೆ ಲವ್ವರ್ ಇದಾನಾ?’’ ಎಂಬೆಲ್ಲಾ ಪ್ರಶ್ನೆಗಳನ್ನು ಕೇಳಿ, ಅವಳಿಗೆ ಫೇಸ್​ಬುಕ್‌ನಲ್ಲಿ ಒಂದು ಗೆಳೆತನದ ಕೋರಿಕೆ ಬಿಟ್ಟೆ. ಯಾರಿವನು ನನ್ನ ಬಗ್ಗೆ ಇಷ್ಟೊಂದು ವಿಚಾರಿಸಿದವನು ಎಂಬ ಕುತೂಹಲದಲ್ಲೇ ಕಾಯುತ್ತಿದ್ದಳೇನೋ ತಕ್ಷಣವೇ ಗೆಳೆತನಕ್ಕೆ ಸಮ್ಮತಿಯೂ ಸಿಕ್ಕಿತ್ತು. ಅಲ್ಲಿಂದ ಮುಂದೆ ಆರಂಭವಾಗಿದ್ದು ನಿಜವಾದ ಪೇಚಾಟ.

ಅಲ್ಲಿಯವರೆಗೂ ಸಿಕ್ಕ ಸಿಕ್ಕವರ ಬಳಿ ಬಾಯಿ ನೋವು ಬರುವಷ್ಟು ಮಾತನಾಡುತ್ತಿದ್ದ ನಾನು, ಇವಳ ಬಳಿ ಮಾತಾಡಲು ಹೆದರುತ್ತಿದ್ದೆ. ನಾನು ಹೀಗೆ ಹೇಳಿದರೆ, ಅವಳು ಹಾಗೆ ಅರ್ಥ ಮಾಡಿಕೊಂಡರೆ ಎಂಬೆಲ್ಲಾ ಚಿಂತೆಗಳು. ಹಾಗೂ ಹೀಗೂ ಮಾತನಾಡಿ ನಾನು ಪ್ರೀತಿಸಲು, ಜೊತೆಯಾಗಿ ನಿಲ್ಲಲು ಯೋಗ್ಯ ಎಂದು ಅವಳಿಗೆ ಮನವರಿಕೆ ಮಾಡಿಸಿ ಕೊನೆಗೊಂದು ದಿನ ನನ್ನ ಮನದ ಪ್ರೀತಿಯನೆಲ್ಲಾ ಹೇಳಿಬಿಟ್ಟೆ. ಸಮಯ ಬೇಕು ಎಂದವಳು ಮಾರನೆಯ ದಿನ ಬೆಳಗ್ಗೆಯೇ ಅಸ್ತು ಎಂದಳು. ಅಂದಿನಿಂದ ಎದ್ದರೆ, ಬಿದ್ದರೆ, ಸೋತರೆ, ಕಂಗೆಟ್ಟರೆ ಧೈರ್ಯ ತುಂಬಿ ಪ್ರೋತ್ಸಾಹ ನೀಡಿ. ತಪ್ಪಾದಾಗ ತಾಯಿಯಂತೆ ಗದರಿ, ಗೆದ್ದಾಗ ಮುದ್ದಿಸಿ, ಪೆಟ್ಟಾದಾಗ ನನಗಿಂತ ನೋವು ತಿಂದು ದುಃಖಿಸಿ, ಪ್ರೀತಿಯೆಂದರೆ ಬರೀ ಕೊಳ್ಳು ಕೊಡುವಿಕೆಯಲ್ಲ ಹಂಚಿಕೊಳ್ಳುವಿಕೆ ಎಂಬುದನ್ನು ಮನದಟ್ಟು ಮಾಡಿಸಿ ಜೊತೆ ಸಾಗುತ್ತಾ ಬಂದಳು.

ಇದನ್ನೂ ಓದಿ: ನಾವಿಬ್ರೂ ಒಂದೇ ಆಸ್ಪತ್ರೆಯಲ್ಲಿ ಹುಟ್ಟಿದ್ದು.. ನಮ್ಮ ಲವ್​ ಸ್ಟೋರಿಯನ್ನ ಎಲ್ಲಿಂದ ಶುರುಮಾಡ್ಲಿ?

ಮಾತಿನಲ್ಲಿ ಗಟ್ಟಿಗಿತ್ತಿಯಾಗಿ, ನಿಲುವುಗಳಲ್ಲಿ ಶಕ್ತಳಾಗಿ, ನನಗಾಗಿ ಹಲವು ವಿಚಾರಗಳಲ್ಲಿ ತ್ಯಾಗಿಯಾಗಿ, ಒಂದರ್ಥದಲ್ಲಿ ನನ್ನ ಕನಸ ಶಿಲ್ಪಿಯಾಗಿ, ಒಮ್ಮೊಮ್ಮೆ ಜಗಳಗಂಟಿಯಾಗಿ, ಮಿತಿ ಮೀರಿದಾಗ ಚಂಡಿಯಾಗಿ, ಈಗೀಗ ಮೌನಿಯಾಗಿ ನನ್ನೊಡನೆ ಸಾಗುತ್ತಾ ಬಂದ ಅವಳಿಗೆ ನಾನು ಪ್ರೇಮಿಗಳ ದಿನದಂದು ಏನೆಂದು ಹೇಳಲಿ? ಧನ್ಯವಾದ ಹೇಳಲು ಅವಳು ಹೊರಗಿನವಳಲ್ಲ. ನನ್ನವಳು, ನನ್ನಲ್ಲೇ ಬೆರೆತವಳು, ಬೆರೆತು ಒಂದಾದವಳು. ಪ್ರೇಮ ನಿವೇದನೆ ಮಾಡಿಕೊಳ್ಳಲು ನನಗೆ ಈಗಾಗಲೇ ದಕ್ಕಿದವಳು. ಕೇಳಬಹುದಾಗಿದ್ದು ಇಷ್ಟೇ, ಒಮ್ಮೆ ತಾಯಿಯಾಗಿ, ಮತ್ತೊಮ್ಮೆ ಸಂಗಾತಿಯಾಗಿ, ಇನ್ನೊಮ್ಮೆ ಸತಿಯಾಗಿ, ಕೆಲವೊಮ್ಮೆ ಸುತೆಯಾಗಿ, ಒಂದು ಹೆಣ್ಣು ಒಬ್ಬ ಹುಡುಗನ ಜೀವನದಲ್ಲಿ ಯಾವೆಲ್ಲಾ ಪಾತ್ರ ವಹಿಸಬಹುದೋ ಆ ಎಲ್ಲಾ ಪಾತ್ರಗಳಾಗಿ, ನನ್ನವಳಾಗಿ, ನನ್ನ ಮನದ ಸಾಮ್ರಾಜ್ಯದ ಪಟ್ಟದರಸಿಯಾಗಿ ಜೀವನದ ಉದ್ದಕ್ಕೂ ನನ್ನೊಡನೆ ಕೈ ಹಿಡಿದು ನಡೆ. ನಡೆಯಲು ಇನ್ನೂ ಸಾವಿರಾರು ಮೈಲಿಗಳಿವೆ, ನೂರಾರು ನೆನಪುಗಳ ಬುತ್ತಿ ಕಟ್ಟುವುದು ಬಾಕಿ ಇದೆ. ಹತ್ತಾರು ಕನಸುಗಳ ನನಸಾಗಿಸಿಕೊಳ್ಳುವ ಕಾರ್ಯಕ್ರಮ ಹಾಗೇ ಉಳಿದಿದೆ. ನಗು ನಗುತಾ, ಹುಸಿ ಕೋಪವನ್ನು ನನ್ನ ಮೇಲೆ ತೋರುತ್ತಾ, ಆಗಾಗ ಮುದ್ದಿಸುತ್ತಾ ಎದುರು ನೋಡುತ್ತಿರು. ಗೆದ್ದು ಬರುವೆ, ನಿನ್ನವನ ಮೇಲೆ ನಿನಗಿರುವ ನಂಬಿಕೆಯನ್ನು ನಿಜವಾಗಿಸುತ್ತಾ.

ಅಭಿರಾಮ ಶರ್ಮ

ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್