World Organ Donation Day 2022: ವಿಶ್ವ ಅಂಗಾಂಗ ದಾನ ದಿನ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಅದರ ಇತಿಹಾಸ, ಮಹತ್ವ

ಅಂಗಾಂಗ ದಾನದ ಮಹತ್ವದ ಬಗ್ಗೆ ಅರಿವು ಮೂಡಿಸಲು ಮತ್ತು ಅಂಗಾಂಗ ದಾನಕ್ಕೆ ಪ್ರತಿಯೊಬ್ಬ ವ್ಯಕ್ತಿಯನ್ನು ಉತ್ತೇಜಿಸುವ ಸಲುವಾಗಿ ಭಾರತದಲ್ಲಿ ಪ್ರತಿ ವರ್ಷ ಆಗಸ್ಟ್ 13 ರಂದು ಸರ್ಕಾರಿ ಸಂಸ್ಥೆಗಳಲ್ಲಿ ಆಚರಿಸಲಾಗುತ್ತದೆ.

World Organ Donation Day 2022: ವಿಶ್ವ ಅಂಗಾಂಗ ದಾನ ದಿನ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಅದರ ಇತಿಹಾಸ, ಮಹತ್ವ
World Organ Donation Day 2022
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Aug 13, 2022 | 7:28 AM

ಅಂಗಾಂಗ ದಾನದ ಮಹತ್ವದ ಬಗ್ಗೆ ಅರಿವು ಮೂಡಿಸಲು ಮತ್ತು (World Organ Donation Day) ಅಂಗಾಂಗ ದಾನಕ್ಕೆ  ಪ್ರತಿಯೊಬ್ಬ ವ್ಯಕ್ತಿಯನ್ನು ಉತ್ತೇಜಿಸುವ ಸಲುವಾಗಿ ಭಾರತದಲ್ಲಿ ಪ್ರತಿ ವರ್ಷ ಆಗಸ್ಟ್ 13 ರಂದು ಸರ್ಕಾರಿ ಸಂಸ್ಥೆಗಳಲ್ಲಿ ಆಚರಿಸಲಾಗುತ್ತದೆ. ಸಾಕಷ್ಟು ಜೀವಗಳನ್ನು ಉಳಿಸುವ ಸಲುವಾಗಿ ಸಾವಿನ ನಂತರ ತಮ್ಮ ಆರೋಗ್ಯಕರ ಅಂಗಗಳನ್ನು ದಾನ ಮಾಡಲು ಜನರನ್ನು ಪ್ರೋತ್ಸಾಹಿಸಲು ಈ ದಿನವು ಮೀಸಲಾಗಿರುವುದು. ಅಂಗಾಂಗ ದಾನಿ ಯಾರೇ ಆಗಿರಬಹುದು ಅವರ ಅಂಗವನ್ನು ತುಂಬಾ ಅಗತ್ಯವಿರುವ ರೋಗಿಗೆ ದಾನ ಮಾಡಬಹುದು. ರೋಗಿಗೆ ಕಸಿ ಮಾಡಲು, ಸಾಮಾನ್ಯ ವ್ಯಕ್ತಿ ನೀಡಿದ ಅಂಗವನ್ನು ಸರಿಯಾಗಿ ಸಂರಕ್ಷಿಸಲಾಗುವುದರಿಂದ ಅದನ್ನು ಸಮಯಕ್ಕೆ ಸರಿಯಾಗಿ ಬಳಸಬಹುದು. ಯಾರೋ ಒಬ್ಬ ವ್ಯಕ್ತಿ ನೀಡಿದ ದೇಹದ ಭಾಗದಿಂದ ಬೇರೆಯೊಬ್ಬರು ಹೊಸ ಜೀವನವನ್ನು ಪಡೆಯಬಹುದು.

ಇದನ್ನೂ ಓದಿ: World Youth Day: ಧೂಮಪಾನವು ಯುವಕರ ಮೂಳೆಗಳ ಮೇಲೆ ಹೇಗೆ ಪರಿಣಾಮ ಬೀರುತ್ತೆ?

ಮೂತ್ರಪಿಂಡಗಳು, ಹೃದಯ, ಮೇದೋಜ್ಜೀರಕ ಗ್ರಂಥಿ, ಕಣ್ಣುಗಳು, ಶ್ವಾಸಕೋಶಗಳು ಮುಂತಾದ ಅಂಗಗಳನ್ನು ದಾನ ಮಾಡುವುದರಿಂದ ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವವರ ಜೀವವನ್ನು ಉಳಿಸಬಹುದು. ಆರೋಗ್ಯವಂತ ಅಂಗಾಂಗಗಳ ಅಲಭ್ಯತೆಯಿಂದಾಗಿ ಹಲವಾರು ಜನರು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಸಾವಿನ ನಂತರ ತಮ್ಮ ಅಂಗಗಳನ್ನು ದಾನ ಮಾಡಲು ಸ್ವಯಂ ಪ್ರೇರಿತರಾಗಿ ಮುಂದು ಬಂದರೇ ಅನೇಕರ ಜೀವಗಳನ್ನು ಮತ್ತು ಜೀವನವನ್ನು ಬದಲಾಯಿಸಬಹುದು ಎಂದು ಜನರು ಅರಿತುಕೊಳ್ಳಲು ಈ ದಿನವು ಪ್ರಮುಖವಾಗಿದೆ.

ಮೊದಲ ಅಂಗದಾನ:

ಆಧುನಿಕ ವೈದ್ಯಕೀಯವೂ ಗಮನಾರ್ಹವಾಗಿ ವಿಕಸನಗೊಂಡಿದ್ದು, ಅಂಗಗಳನ್ನು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ಕಸಿ ಮಾಡಲು ಸಾಧ್ಯವಾಗಿದೆ. ಜೊತೆಗ ಆರೋಗ್ಯಕರ ಜೀವನವನ್ನು ನಡೆಸಲು ಅನುವು ಮಾಡಿದೆ. 1954 ರಲ್ಲಿ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಮೊದಲ ಯಶಸ್ವಿ ಜೀವಂತ ದಾನಿ ಅಂಗಾಂಗ ಕಸಿ ಮಾಡಲಾಯಿತು. 1990 ರಲ್ಲಿ ಅವಳಿ ಸಹೋದರರಾದ ರೊನಾಲ್ಡ್ ಮತ್ತು ರಿಚರ್ಡ್ ಹೆರಿಕ್ ನಡುವೆ ಮೂತ್ರಪಿಂಡ ಕಸಿಯನ್ನು ಯಶಸ್ವಿಯಾಗಿ ನಡೆಸಿದಕ್ಕೆ ವೈದ್ಯ ಜೋಸೆಫ್ ಮುರ್ರೆ ಅವರಿಗೆ 1990 ರಲ್ಲಿ ಶರೀರಶಾಸ್ತ್ರ ಮತ್ತು ವೈದ್ಯಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿಯನ್ನು ಪಡೆದರು.

ಅಂಗಾಂಗ ದಾನದ ಮಹತ್ವ:

ಪ್ರತಿ ವರ್ಷ ಕನಿಷ್ಠ 5 ಲಕ್ಷ ಭಾರತೀಯರು ಅಂಗಾಂಗಗಳ ಸಮಸ್ಯೆ ಅಥವಾ ತೊಂದರೆಗಳಿಂದ ಸಾವನ್ನಪ್ಪುದ್ದಾರೆ. ಸಾಕಷ್ಟು ಜನ ಹೆಚ್ಚು ದಿನಗಳವರೆಗೆ ಬದುಕಲು ಇಷ್ಟ ಪಡುತ್ತಾರೆ. ಆದರೆ ನೈಸರ್ಗಿಕ ಬಿಕ್ಕಟ್ಟಿನಿಂದ ಅವರು ತಮ್ಮ ಜೀವನದಲ್ಲಿ ತೃಪ್ತಿ ಹೊಂದಲು ಸಾಧ್ಯವಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ಜೀವನವನ್ನು ನಡೆಸಲು ಅಂಗ ಕಸಿ ದೊಡ್ಡ ಪಾತ್ರವನ್ನು ವಹಿಸುತ್ತದೆ. ಅಂಗಾಂಗ ದಾನಿಯು ಕಸಿ ಮಾಡಿದ ವ್ಯಕ್ತಿಯ ಜೀವನದಲ್ಲಿ ದೇವರಾಗತ್ತಾನೆ. ಅಂಗಾಂಗ ದಾನಿಯು ತನ್ನ ಉತ್ತಮವಾಗಿ ಕಾರ್ಯನಿರ್ವಹಿಸುವ ಅಂಗಗಳನ್ನು ದಾನ ಮಾಡುವ ಮೂಲಕ 8 ಕ್ಕೂ ಹೆಚ್ಚು ಜೀವಗಳನ್ನು ಉಳಿಸಬಹುದು. ಆಗಸ್ಟ್ 13 ರಂದು ಆಚರಿಸಲಾಗುವ ಅಂಗದಾನ ದಿನದ ಅಭಿಯಾನವು ಪ್ರತಿಯೊಬ್ಬರ ಜೀವನದಲ್ಲಿ ತಮ್ಮ ಅಮೂಲ್ಯವಾದ ಅಂಗಗಳನ್ನು ದಾನ ಮಾಡುವ ನೀಡುವುದಾಗಿ ಪ್ರತಿಜ್ಞೆ ಮಾಡುವುದೇ ಇದರ ಮಹತ್ವವಾಗಿದೆ.

ಇದನ್ನೂ ಓದಿ: International Female Orgasm Day 2022: ಮಹಿಳಾ ಪರಾಕಾಷ್ಠೆಯ ದಿನದ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಕೆಲವು ಅಂಶಗಳು

ಅಂಗಾಂಗ ದಾನ ದಿನದ ಉದ್ದೇಶ:

ಅಂಗಾಂಗ ದಾನದ ಅಗತ್ಯತೆಯ ಬಗ್ಗೆ ಜನರಿಗೆ ಅರಿವು ಮೂಡಿಸುವುದು.

ಅಂಗಾಂಗ ದಾನದ ಸಂದೇಶಗಳನ್ನು ದೇಶದಾದ್ಯಂತ ಹರಡುವುದು.

ಅಂಗಾಂಗಗಳನ್ನು ದಾನ ಮಾಡುವ ಬಗ್ಗೆ ಜನರಲ್ಲಿರುವ ಹಿಂಜರಿಕೆಗಳನ್ನು ಹೋಗಲಾಡಿಸುವುದು.

ಅಂಗಾಂಗಗಳ ದಾನಿಗಳಿಗೆ ಕೃತಜ್ಞತೆಯಿಂದ ಧನ್ಯವಾದ ಹೇಳುವುದು.

ಅಂಗಾಂಗ ದಾನದ ಕಡೆಗೆ ಹೆಚ್ಚು ಜನರನ್ನು ಪ್ರೇರೇಪಿಸುವುದು ಮತ್ತು ಪ್ರೋತ್ಸಾಹಿಸಲು.

ಯಾವ ಅಂಗಗಳನ್ನು ದಾನ ಮಾಡಬಹುದು?

ಮೂತ್ರಪಿಂಡ, ಶ್ವಾಸಕೋಶಗಳು, ಹೃದಯ, ಕಣ್ಣು, ಯಕೃತ್ತು, ಮೇದೋಜೀರಕ ಗ್ರಂಥಿ, ಕಾರ್ನಿಯಾ, ಸಣ್ಣ ಕರುಳು, ಚರ್ಮದ ಅಂಗಾಂಶಗಳು, ಮೂಳೆ ಅಂಗಾಂಶಗಳು, ಹೃದಯ ಕವಾಟಗಳು ಮತ್ತು ನರಗಳು.

ಮತ್ತಷ್ಟು ವಿಶೇಷ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 7:23 am, Sat, 13 August 22