AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

12 ರಾಶಿಗಳ ಪೈಕಿ ಈ ಐದು ರಾಶಿಯ ಜನ ಅಸಭ್ಯರು ಮತ್ತು ಕಠೋರರು ಆಗಿರುತ್ತಾರೆ; ಯಾರವರು ತಿಳಿದುಕೊಳ್ಳಿ

ಇರುವ 12 ರಾಶಿಗಳ ಪೈಕಿ ಕೆಲ ರಾಶಿಯ ಜನ ಕಠೋರರಾಗಿರುತ್ತಾರೆ, ಅಸಭ್ಯರಾಗಿರುತ್ತಾರೆ. ತಾವು ಹೇಳಿದ್ದೇ ಸರಿ, ತಮ್ಮ ಮಾತೇ ಪರಮಸತ್ಯ ಎಂಬ ಅಚಲ ನಿರ್ಧಾರಕ್ಕೆ ಬಂದಿರುತ್ತಾರೆ. ಇದರಿಂದಲೇ ಸಮಸ್ಯೆಗಳು ಉದ್ಭವವಾಗುವುದು.

12 ರಾಶಿಗಳ ಪೈಕಿ ಈ ಐದು ರಾಶಿಯ ಜನ ಅಸಭ್ಯರು ಮತ್ತು ಕಠೋರರು ಆಗಿರುತ್ತಾರೆ; ಯಾರವರು ತಿಳಿದುಕೊಳ್ಳಿ
12 ರಾಶಿಗಳ ಪೈಕಿ ಈ ಐದು ರಾಶಿಯ ಜನ ಅಸಭ್ಯರು ಮತ್ತು ಕಠೋರರು ಆಗಿರುತ್ತಾರೆ; ಯಾರವರು ತಿಳಿದುಕೊಳ್ಳಿ
TV9 Web
| Edited By: |

Updated on:Aug 24, 2021 | 10:07 AM

Share

ನಮ್ಮ ಪಾಲನೆ-ಪೋಷಣೆ, ನಾವು ಬೆಳೆಯುವ ವಾತಾವರಣ, ಪರಿಸರ ಮತ್ತು ನಾವು ಪಡೆಯುವ ಶಿಕ್ಷಣ ನಮ್ಮಲ್ಲಿ ಸಮಗ್ರ ವ್ಯಕ್ತಿತ್ವವನ್ನು ರೂಪಿಸುತ್ತದೆ. ಇದರಿಂದ ನಾವು ಮತ್ತಷ್ಟು ವಿನಮ್ರವಾಗಿ ನಡೆದುಕೊಳ್ಳುವುದಕ್ಕೆ ಸಹಾಯಕವಾಗುತ್ತದೆ. ಇವು ನಮ್ಮ ಗುಣಾವಗುಣಗಳನ್ನು ಪರಿಚಯಿಸುತ್ತದೆ. ನಾವು ಕೆಟ್ಟದಾಗಿ ನಡೆದುಕೊಳ್ಳುವುದರಿಂದ ಬೇರೊಬ್ಬರಿಗೆ ಮಾನಸಿಕವಾಗಿ, ದೈಹಿಕವಾಗಿ ತೊಂದರೆಯನ್ನುಂಟು ಮಾಡಿದಂತಾಗುತ್ತದೆ.

ನಿಮ್ಮ ರಾಶಿ ನಿಮ್ಮ ವ್ಯಕ್ತಿತ್ವದ ಬಗ್ಗೆ ತಿಳಿಸಿಕೊಡುತ್ತದೆ. ನಿಮ್ಮ ರಾಶಿಯಲ್ಲಿ ಎಲ್ಲವೂ ದಾಖಲಾಗಿರುತ್ತದೆ. ನಿಮ್ಮ ಜೀವನದ ರೂಪುರೇಷೆ ನಿಮ್ಮ ರಾಶಿಯಿಂದ ನಿರ್ಧರಿತವಾಗಿರುತ್ತದೆ. ಇರುವ 12 ರಾಶಿಗಳ ಪೈಕಿ ಕೆಲ ರಾಶಿಯ ಜನ ಕಠೋರರಾಗಿರುತ್ತಾರೆ, ಅಸಭ್ಯರಾಗಿರುತ್ತಾರೆ. ತಾವು ಹೇಳಿದ್ದೇ ಸರಿ, ತಮ್ಮ ಮಾತೇ ಪರಮಸತ್ಯ ಎಂಬ ಅಚಲ ನಿರ್ಧಾರಕ್ಕೆ ಬಂದಿರುತ್ತಾರೆ. ಇದರಿಂದಲೇ ಸಮಸ್ಯೆಗಳು ಉದ್ಭವವಾಗುವುದು.

12 ರಾಶಿಗಳ ಪೈಕಿ ಈ ಐದು ರಾಶಿಯ ಜನ ಅಸಭ್ಯರು ಮತ್ತು ಕಠೋರರು ಆಗಿರುತ್ತಾರೆ, ಆ ರಾಶಿಗಳು ಯಾವುವು ಅಂದರೆ:

1. ಧನು ರಾಶಿ Sagittarius:

ಧನು ರಾಶಿ ಜನ ಮೋಜು ಮಸ್ತಿ ಮಾಡುವವರಾಗಿರುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಕುಂಡಲಿಯಲ್ಲಿ ಇವರು ಅಸಭ್ಯರು ಮತ್ತು ಕಠೋರ ಮನಸ್ಥಿತಿಯವರು ಆಗಿರುತ್ತಾರೆ. ಇವರು ವ್ಯವಹಾರಗಳಲ್ಲಿ ಒರಟುತನ ಹೆಚ್ಚಾಗಿ ಕಂಡುಬರುತ್ತದೆ. ಇದಕ್ಕೆಲ್ಲ ಕಳಂಕಪ್ರಾಯವಾಗಿರುವಂತೆ ತಮ್ಮ ತಪ್ಪಿಗೆ, ಅಶಿಷ್ಟತೆಗೆ ಕ್ಷಮೆಯನ್ನು ಕೇಳುವ ಮನಸ್ಸಿನವರಲ್ಲ.

2. ವೃಶ್ಚಿಕ ರಾಶಿ Scorpio:

ವೃಶ್ಚಿಕ ರಾಶಿ ಜನ ಬೇರೆ ರಾಶಿವರ ಭಾವನೆಗಳಿಗೆ ಕಿಂಚಿತ್ತೂ ಮರ್ಯಾದೆ ಕೊಡುವುದಿಲ್ಲ, ಅಸಭ್ಯರಾಗಿರುತ್ತಾರೆ. ಆದರೂ ತಮ್ಮ ಯಾವುದೇ ವ್ಯಕ್ತಿತ್ವವನ್ನೂ ಬದಲಾಯಿಸಿಕೊಳ್ಳುವುದಿಲ್ಲ. ತಾವು ಏನೇ ಹೇಳುವುದುದಿದ್ದರೂ ತಮ್ಮದೇ ಮಾತಿಗೆ ಪ್ರಾಶಸ್ತ್ಯ ಸಿಗಬೇಕು ಅನ್ನುತ್ತಾರೆ. ಬೇರೆಯವರು ಅದರ ಬಗ್ಗೆ ಬೇರೆ ಏನಾದರೂ ಆಲೋಚನೆ ಹೊಂದಿರುತ್ತಾರೆಯೇ? ಅದನ್ನು ತಿಳಿದುಕೊಳ್ಳೋಣ ಎಂಬ ಮಾತು ಇವರಿಗೆ ಇಷ್ಟವೇ ಆಗುವುದಿಲ್ಲ.

3. ಮಿಥುನ ರಾಶಿ Gemini:

ಮಿಥುನ ರಾಶಿಯವರು ತುಂಬಾ ಅಪರಿಪಕ್ವವಾದ ಜನರಾಗಿರುತ್ತಾರೆ. ಹಾಗಾಗಿಯೇ ಅನೇಕ ಬಾರಿ ತಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿ ಇಡುವುದಿಲ್ಲ. ಯಾವುದನ್ನೂ ಇವರು ಸಹಿಸುವುದಿಲ್ಲ. ಅವರ ಕಠೋರ ಭಾವನೆಗಳು ಜನಿತವಾಗಿರುತ್ತವೆ. ಇದೇ ಅವರ ವ್ಯಕ್ತಿತ್ವವವನ್ನು ರೂಪಿಸಿಬಿಡುತ್ತೆ.

4. ಮೇಷ ರಾಶಿ Aries:

ಮೇಷ ರಾಶಿ ಜನ ತಮ್ಮನ್ನು ತಾವು ನಿಯಂತ್ರಣದಲ್ಲಿಟ್ಟುಕೊಳ್ಳುವುದಿಲ್ಲ. ಪರಿಸ್ಥಿತಿಗಳು ಬಿಗಡಾಯಿಸಿ, ವಿಕೋಪಕ್ಕೆ ಹೋದಾಗ ತಮ್ಮಲ್ಲಿನ ಅಸಭ್ಯತನವನ್ನು ಮತ್ತಷ್ಟು ಜಗಜ್ಜಾಹೀರುಗೊಳಿಸುತ್ತಾರೆ.

5. ವೃಷಭ ರಾಶಿ Taurus:

ವೃಷಭ ರಾಶಿ ಜನ ತುಂಬಾ ಸಂಯಮದವರಾಗಿರುತ್ತಾರೆ. ಆದರೆ ಯಾರಿಂದಲಾದರೂ ಸ್ವಲ್ಪ ನಷ್ಟ, ಕೆಟ್ಟದ್ದು ಆಗುತ್ತಿದೆ ಅನಿಸಿದರೆ ಕೆರಳಿಬಿಡುತ್ತಾರೆ. ಆಗ ತಮ್ಮಲ್ಲಿನ ಕೆಟ್ಟತನವನ್ನು ಪ್ರದರ್ಶನಕ್ಕೆ ಇಡುತ್ತಾರೆ. ಅವಕಾಶ ಸಿಕ್ಕಿದಾಗಲೆಲ್ಲ ತಮ್ಮ ಕಠೋರತನವನ್ನು ತೋರಿಸುತ್ತಾರೆ. ಹಾಗಾಗಿಯೇ ಇಂತಹ ರಾಶಿಯ ಜನ ನಿಮಗೆ ಎದುರಾದಾಗ ನೀವು ಹುಷಾರಾಗಿಬಿಡಿ.

(according to astrology these 5 zodiac signs people are rigid know them )

Published On - 6:37 am, Tue, 24 August 21