ಗರುಡ ಪುರಾಣದ ಪ್ರಕಾರ ನಿಮ್ಮ ಸುಂದರ ಜೀವನಕ್ಕಾಗಿ ಈ ಎರಡು ವಿಷಯಗಳನ್ನು ತ್ಯಜಿಸಿ

ಗರುಡ ಪುರಾಣದ ಪ್ರಕಾರ ಈ ಎರಡು ವಿಷಯಗಳನ್ನು ನೀವು ತ್ಯಜಿಸಿದಲ್ಲಿ ಜೀವನ ಸುಖ ಸಂತೋಷದಿಂದ ತುಂಬಿರುತ್ತದೆ ಎಂದು ಹೇಳುತ್ತಾರೆ. ಹಾಗಾದರೆ ಆ ಎರಡು ವಿಷಯಗಳೇನು? ಇಲ್ಲಿದೆ ಮಾಹಿತಿ.

ಗರುಡ ಪುರಾಣದ ಪ್ರಕಾರ ನಿಮ್ಮ ಸುಂದರ ಜೀವನಕ್ಕಾಗಿ ಈ ಎರಡು ವಿಷಯಗಳನ್ನು ತ್ಯಜಿಸಿ
Garuda Purana Image Credit source: Quora
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷತಾ ವರ್ಕಾಡಿ

Updated on:May 13, 2023 | 6:46 PM

ಜೀವನದಲ್ಲಿ ಸುಖ ಎನ್ನುವುದು ಪ್ರತಿಯೊಬ್ಬರಿಗೂ ಮುಖ್ಯ. ಎಲ್ಲರೂ ದೇವರಲ್ಲಿ ಸುಖವನ್ನೇ ನೀಡು ಎಂದು ಕೇಳುತ್ತಾರೆ. ಕಷ್ಟವನ್ನು ಯಾರು ಬೇಕು ಬೇಕೆಂದು ಕೇಳುವುದಿಲ್ಲ. ಆದರೆ ಕಷ್ಟ ಸುಖವೆನ್ನುವುದು ಅಥವಾ ಖುಷಿ ಎನ್ನುವುದು ನೀವು ಮಾಡುವ ಕೆಲಸದಲ್ಲಿಯೇ ಅಡಕವಾಗಿದೆ. ಅಂತದ್ರಲ್ಲಿ ನಾವು ಪ್ರತಿನಿತ್ಯವೂ ಯಾಂತ್ರಿಕ ಜೀವನ ನಡೆಸುತ್ತಿದ್ದೇವೆ. ಯಾವುದೇ ಹೊಸತನವಿಲ್ಲ. ಜೊತೆಗೆ ಎದ್ದೆನೋ ಬಿದ್ದೆನೋ ಎಂಬ ಓಟ. ಜೀವನದಲ್ಲಿ ಏನೋ ಸಾಧಿಸಬೇಕು, ಇನ್ನೇನೋ ಪಡೆಯಬೇಕೆಂಬ ಜಿದ್ದಾ ಜಿದ್ದಿಯಲ್ಲಿ ನಮ್ಮನ್ನು ನಾವೇ ಮರೆತುಬಿಟ್ಟಿದ್ದೇವೆ. ಹೇಗೆಲ್ಲಾ ಮಾಡುತ್ತಿದ್ದೇವೆ ನಿಜ. ಆದರೆ ನಿಜವಾದ ಸಂತೋಷ ನಮ್ಮಲ್ಲಿದೆಯಾ? ನಮ್ಮ ಬಳಿ ಇದಕ್ಕೆ ಉತ್ತರವಿಲ್ಲ.

ಆದರೆ ಗರುಡ ಪುರಾಣದ ಪ್ರಕಾರ ಈ ಎರಡು ವಿಷಯಗಳನ್ನು ನೀವು ತ್ಯಜಿಸಿದಲ್ಲಿ ಜೀವನ ಸುಖ ಸಂತೋಷದಿಂದ ತುಂಬಿರುತ್ತದೆ ಎಂದು ಹೇಳುತ್ತಾರೆ ಹಾಗಾದರೆ ಆ ಎರಡು ವಿಷಯಗಳೇನು?

ಮಹಿಳೆಯರನ್ನು ಗೌರವಿಸು:

ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾ, ಯತ್ರೈತಾಸ್ತು ನ ಪೂಜ್ಯಂತೇ ಸರ್ವಾಸ್ತತ್ರಫಲಾಃ ಕ್ರಿಯಾಃ. ಅಂದರೆ ಎಲ್ಲಿ ಸ್ತ್ರೀಯರನ್ನು ಗೌರವಿಸಲಾಗುತ್ತದೆ, ಅಲ್ಲಿ ದೈವತ್ವವು ಉಳಿಯುತ್ತದೆ. ಮತ್ತು ಎಲ್ಲಿ ಸ್ತ್ರೀಯರನ್ನು ಅವಮಾನಿಸಲಾಗುತ್ತದೆ, ಎಷ್ಟೇ ಉದಾತ್ತವಾಗಿದ್ದರೂ ಯಾವ ಕ್ರಿಯೆಗಳು ಫಲಪ್ರದವಾಗುವುದಿಲ್ಲ. ಪ್ರಾಚೀನ ಭಾರತೀಯ ಸಂಸ್ಕೃತಿಯಲ್ಲಿ ಸ್ತ್ರೀತ್ವವನ್ನು ದೈವಿಕ ಗುಣಗಳ ದ್ಯೋತಕವಾಗಿ ಗೌರವಿಸಲಾಗಿದೆ. ಹೆಣ್ತನವು ಸಹಾನುಭೂತಿ, ನಿಸ್ವಾರ್ಥ ಪ್ರೀತಿ ಮತ್ತು ಇತರರ ಬಗ್ಗೆ ಕಾಳಜಿಯನ್ನು ವ್ಯಕ್ತಪಡಿಸುವ ಮಾನವೀಯತೆಯ ಶಾಶ್ವತ ಸದ್ಗುಣಗಳ ಸಂಕೇತವಾಗಿದೆ. ಆದರೆ ಹೆಣ್ಣಿಗೆ ಎಷ್ಟೋ ಕಡೆಗಳಲ್ಲಿ ಇಂದಿಗೂ ಗೌರವ ಸಿಗುತ್ತಿಲ್ಲ. ಮಹಿಳೆಯರನ್ನು ಗೌರವಿಸದ ಪುರುಷರು ಸಹ ಸಂತೋಷವಾಗಿ ಇರುವುದಿಲ್ಲ ಎನ್ನುತ್ತದೆ ಗರುಡ ಪುರಾಣ. ಮಹಿಳೆಯರನ್ನು ಅವಮಾನಿಸುವವರು ಜೀವನದಲ್ಲಿ ಮೇಲೆ ಬರುವುದಿಲ್ಲ. ಸಮಾಜದಲ್ಲಿ ಅಂತವರಿಗೆ ಗೌರವವೂ ಕಡಿಮೆಯಾಗುತ್ತದಂತೆ. ಯಾರು ಮಹಿಳೆಯರಿಗೆ ಗೌರವ ಕೊಡುತ್ತಾರೋ ಅಂತಹವರಿಗೆ ಸಮಾಜದಲ್ಲಿ ಗೌರವ ಸಿಗುತ್ತದೆ ಎನ್ನುತ್ತದೆ ಗರುಡ ಪುರಾಣ.

ಇದನ್ನೂ ಓದಿ: ಮನೆ ಖರೀದಿಗಾಗಿ ಒಂದಷ್ಟು ಟಿಪ್ಸ್ -ಸ್ವಂತ ಮನೆ ಖರೀದಿಯ ಕನಸನ್ನು ನನಸಾಗಿಸಿಕೊಳ್ಳಬೇಕಾ? ಹಾಗಾದರೆ ಈ ಸರಳ ಸೂತ್ರಗಳನ್ನು ಅನುಸರಿಸಿ

ಧೂಮಪಾನ ಮತ್ತು ಮಧ್ಯಪಾನ ತ್ಯಜಿಸು:

ಧೂಮಪಾನ ಮತ್ತು ಮಧ್ಯಪಾನ ಯಾವ ರೀತಿಯಲ್ಲಿ ಬಿಡಿಸಲಾಗದ ವ್ಯಸನವಾಗಿದೆಯೋ ಅದ್ಕಕಿಂತ ಮಿಗಿಲಾದ ಸಪ್ತ ವ್ಯಸನಗಳಲ್ಲಿ ಒಂದು ಜೂಜು. ಜೂಜಿನ ಚಟಕ್ಕೆ ಬಿದ್ದವರ ಜೀವನ ನರಕ. ಜೊತೆಗೆ ಅವರ ಕುಟುಂಬವು ಅವರ ಜೊತೆಯಲ್ಲಿ ಕಷ್ಟ ಅನುಭವಿಸುತ್ತದೆ. ಹಾಗಾಗಿ ಅವರಿಗೆ ಎಂದಿಗೂ ಸಂತೋಷವಾಗಿ ಇರಲು ಆಗುವುದಿಲ್ಲ. ಅಷ್ಟೇ ಅಲ್ಲದೆ ಇವರ ಜತೆ ಬದುಕುವವರೂ ಸಂತೋಷವಾಗಿರುವುದಿಲ್ಲ ಎಂದು ಗರುಡ ಪುರಾಣ ಹೇಳುತ್ತದೆ. ಜೂಜಿನಿಂದ ದೈಹಿಕ, ಮಾನಸಿಕ ಸಮಸ್ಯೆಗಳು ಹೆಚ್ಚಾಗುತ್ತದೆ ಎನ್ನುತ್ತದೆ ಗರುಡ ಪುರಾಣ. ಹಾಗಾಗಿ ಕಷ್ಟ ಪಟ್ಟು ದುಡಿಯಬೇಕು ಅದನ್ನು ಬಿಟ್ಟು ಸಾಲ ಮಾಡಿ ದುಂದುವೆಚ್ಚ ಮಾಡಬಾರದು. ನಾವು ಕಷ್ಟ ಪಟ್ಟು ಸಂಪಾದಿಸಿದ ಹಣವಾದರೆ ಎಂದಿಗೂ ಪೋಲಾಗುವುದಿಲ್ಲ. ಸಾಲ ಮಾಡಿಕೊಂಡರೆ ಜೀವನದಲ್ಲಿ ನೆಮ್ಮದಿ, ಸಂತೋಷ ಎಲ್ಲವೂ ದೂರವಾಗುತ್ತದೆ. ನಿತ್ಯ ಒತ್ತಡ, ಆತಂಕದಿಂದ ಬದುಕಬೇಕಾಗುತ್ತದೆ. ಹಾಗಾಗಿ ಆ ರೀತಿಯ ಮಸಸ್ಥಿತಿಯನ್ನು ಬಿಡಬೇಕು ಎಂದು ಗರುಡ ಪುರಾಣ ಹೇಳುತ್ತದೆ.

ನೀವು ಬದುಕಿನಲ್ಲಿ ಈ ಮಾತುಗಳನ್ನು ಅಳವಡಿಸಿಕೊಳ್ಳಿ. ಗರುಡ ಪುರಾಣ ಎನ್ನುವುದು ಕೇವಲ ಒಂದು ಪುರಾತನ ಗ್ರಂಥವಲ್. ಅದು ಜೀವನ ಕಟ್ಟಿಕೊಳ್ಳಲು ಬೇಕಾದ ಮೊದಲ ಸಲಹೆ ಅಥವಾ ನಿಮ್ಮ ಒಳ್ಳೆಯ ದಾರಿಗೆ ಬೆಳಕಾಗುವ ದೀಪ. ಓದಿ ಅರ್ಥ ಮಾಡಿಕೊಂಡಲ್ಲಿ ನಿಮಗೂ ಇದರ ಅನುಭವವಾಗಬಹುದು.

ಮತ್ತಷ್ಟುಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 6:46 pm, Sat, 13 May 23

ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ