House Purchase: ಮನೆ ಖರೀದಿಗಾಗಿ ಒಂದಷ್ಟು ಟಿಪ್ಸ್ -ಸ್ವಂತ ಮನೆ ಖರೀದಿಯ ಕನಸನ್ನು ನನಸಾಗಿಸಿಕೊಳ್ಳಬೇಕಾ? ಹಾಗಾದರೆ ಈ ಸರಳ ಸೂತ್ರಗಳನ್ನು ಅನುಸರಿಸಿ

ಹೊಸ ಮನೆ ಕಟ್ಟಲು ಇಚ್ಛಿಸುವವರು.. ಶುಭ ಮುಹೂರ್ತದಲ್ಲಿ ಮನೆಯ ಅಡಿಪಾಯ ಹಾಕಿ. ಅಡಿಪಾಯ ಹಾಕುವ ಸಮಯದಲ್ಲಿ ಬೆಳ್ಳಿ ನಾಗಪ್ಪ, ತಾಮ್ರದ ಹಣತೆ, ತಾಮ್ರದ ಪಾತ್ರೆ, ಮುಚ್ಚಳ ಇತ್ಯಾದಿಗಳನ್ನು ಹಾಕಬೇಕು.

House Purchase: ಮನೆ ಖರೀದಿಗಾಗಿ ಒಂದಷ್ಟು ಟಿಪ್ಸ್ -ಸ್ವಂತ ಮನೆ ಖರೀದಿಯ ಕನಸನ್ನು ನನಸಾಗಿಸಿಕೊಳ್ಳಬೇಕಾ? ಹಾಗಾದರೆ ಈ ಸರಳ ಸೂತ್ರಗಳನ್ನು ಅನುಸರಿಸಿ
ಸ್ವಂತ ಮನೆ ಖರೀದಿಗಾಗಿ ಒಂದಷ್ಟು ಟಿಪ್ಸ್
Follow us
ಸಾಧು ಶ್ರೀನಾಥ್​
|

Updated on:May 11, 2023 | 12:02 PM

ಪ್ರತಿಯೊಬ್ಬ ವ್ಯಕ್ತಿಯ ಕನಸು ಸ್ವಂತ ಮನೆ (Own House) ಹೊಂದುವುದಾಗಿರುತ್ತದೆ. ಚಿಕ್ಕದೇ ಇರಲಿ, ದೊಡ್ಡದೇ ಆಗಿರಲಿ ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಸ್ವಂತ ಮನೆ ಹೊಂದಲು ಜನ ಬಯಸುತ್ತಾರೆ. ಆದರೆ ಈ ಕನಸು ಕೆಲವರಿಗೆ ನನಸಾಗುತ್ತದೆ. ಹಾಗೆ ಮನೆ ಸ್ವಂತ ಮಾಡಿಕೊಳ್ಳಲು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಬಾಡಿಗೆ ಮನೆಯಲ್ಲಿಯೇ ವಾಸಿಸುತ್ತಾ ಕಷ್ಟಪಡುತ್ತಿರುತ್ತಾರೆ. ಎಷ್ಟೇ ಪ್ರಯತ್ನಿಸಿದರೂ ಸ್ವಂತ ಮನೆ ಕಟ್ಟಲು ಸಾಧ್ಯವಾಗುವುದಿಲ್ಲ. ಸ್ವಂತ ಮನೆ ಖರೀದಿಸಲು (Purchase) ಅವರು ವಿಫಲರಾಗುತ್ತಲೇ ಇರುತ್ತಾರೆ. ಅಂತಹವರು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಿರುವ ಕೆಲವು ಕ್ರಮಗಳನ್ನು ಅನುಸರಿಸಿದರೆ… ಸ್ವಂತ ಮನೆಯ ಕನಸು (House) ನನಸಾಗುವತ್ತ ಹೆಜ್ಜೆ ಹಾಕುತ್ತಾರೆ. ಅದು ಏನು ಎಂದು ಈಗ ತಿಳಿದುಕೊಳ್ಳೋಣ..

ಯಾವುದೇ ಶುಕ್ರವಾರದಂದು 3 ತೆಂಗಿನಕಾಯಿಗಳನ್ನು ತೆಗೆದುಕೊಂಡು ಮನೆಯಲ್ಲಿ ಇರಿಸಿ. ಮರುದಿನ ಅಂದರೆ ಶನಿವಾರ ಬೆಳಗ್ಗೆ ಈ 3 ತೆಂಗಿನಕಾಯಿಗಳಲ್ಲಿ ಒಂದನ್ನು ತೆಗೆದುಕೊಂಡು ಯಾವುದಾದರೂ ಶಿವನ ದೇವಸ್ಥಾನದಲ್ಲಿ ಶಿವನಿಗೆ ಅರ್ಪಿಸಿ. ಅದೇ ರೀತಿ ಶಿವನ ದೇವಸ್ಥಾನದಲ್ಲಿರುವ ಶಿವನಿಗೆ, ಭಾನುವಾರ ಎರಡನೇ ತೆಂಗಿನಕಾಯಿ ಮತ್ತು ಸೋಮವಾರ ಮೂರನೇ ತೆಂಗಿನಕಾಯಿಯನ್ನು ಅರ್ಪಿಸಿ.

ಶಿವಲಿಂಗಕ್ಕೆ ಜಲಾಭಿಷೇಕ ಮಾಡಿ. ಈ ಮೂರು ತೆಂಗಿನಕಾಯಿಗಳನ್ನು ಶಿವನ ದೇವಸ್ಥಾನದಲ್ಲಿ ಅರ್ಪಿಸಲು ಮರೆಯದಿರಿ.

ನಂತರ ಪ್ರತಿ ಸೋಮವಾರ ಯಾವುದೇ ಶಿವ ದೇವಾಲಯದಲ್ಲಿ ಶಿವನಿಗೆ ಒಂದು ತೆಂಗಿನಕಾಯಿಯನ್ನು ನಿಯಮಿತವಾಗಿ ಅರ್ಪಿಸುವ ಪ್ರಕ್ರಿಯೆಯನ್ನು ಮುಂದುವರಿಸಿ.

ಹೀಗೆ ಮಾಡುವುದರಿಂದ ಸಮಸ್ಯೆಗಳು ಇತ್ಯರ್ಥವಾಗಲು ಪ್ರಾರಂಭವಾಗುತ್ತದೆ. ಇದಲ್ಲದೆ, ಮನಸಿನ ಬಯಕೆಗಳು ಸಹ ಈಡೇರುತ್ತವೆ. ಇದನ್ನು ಕನಿಷ್ಠ ಆರು ತಿಂಗಳ ಕಾಲ ಮಾಡಬೇಕು.

Also Read: ಹೈದರಾಬಾದ್​ನಲ್ಲಿ ಮತ್ತೊಂದು ದುಬಾರಿ ಬೆಲೆಯ ಮನೆ ಖರೀದಿಸಿದ ಸಮಂತಾ

ಹೊಸ ಮನೆ ಕಟ್ಟಲು ಇಚ್ಛಿಸುವವರು.. ಶುಭ ಮುಹೂರ್ತದಲ್ಲಿ ಮನೆಯ ಅಡಿಪಾಯ ಹಾಕಿ. ಅಡಿಪಾಯ ಹಾಕುವ ಸಮಯದಲ್ಲಿ ಬೆಳ್ಳಿ ನಾಗಪ್ಪ, ತಾಮ್ರದ ಹಣತೆ, ತಾಮ್ರದ ಪಾತ್ರೆ, ಮುಚ್ಚಳ ಇತ್ಯಾದಿಗಳನ್ನು ಹಾಕಬೇಕು. ನಂತರ ಮನೆ ಶಂಕುಸ್ಥಾಪನೆ ಪ್ರಾರಂಭಿಸಿ. ಅಡಿಪಾಯದಲ್ಲಿ ಹಾಕಿದ್ದನ್ನು ಹಿಂದಕ್ಕೆ ತೆಗೆದುಕೊಳ್ಳಬೇಡಿ.

ಬುನಾದಿ ಹಾಕುವಾಗ ಶ್ರೀ ಯಂತ್ರವನ್ನು ಅಲ್ಲಿ ಸ್ಥಾಪಿಸಿ. ಇದರಿಂದ ಆ ಮನೆಯಲ್ಲಿ ವಾಸಿಸುವವರಿಗೆ ದೇವರ ಕೃಪೆ ಸದಾ ಇರುತ್ತದೆ. ಆರ್ಥಿಕ ಬಿಕ್ಕಟ್ಟು ಎದುರಿಸುವ ಅಗತ್ಯ ಬೀಳುವುದಿಲ್ಲ.

ಆದರೆ ಈಗಾಗಲೇ ನಿರ್ಮಾಣ ಮಾಡಿರುವ ಮನೆಯನ್ನು ಖರೀದಿ ಮಾಡಿದರೆ.. ಮನೆಯ ಮುಖ್ಯ ಬಾಗಿಲಿನ ಹೊರಗೆ ಗಣಪತಿ ವಿಗ್ರಹವನ್ನು (ತಾಮ್ರ, ಹಿತ್ತಾಳೆ, ಪಂಚಧಾತು, ಅಷ್ಟಧಾತು ಇತ್ಯಾದಿ) ಇರಿಸಿ. ಆದರೆ ಈ ಗಣೇಶನ ವಿಗ್ರಹದಲ್ಲಿ ಸೊಂಡಿಲು ಬಲಕ್ಕೆ ಇರುವಂತೆ ನೋಡಿಕೊಳ್ಳಿ. ಹೀಗೆ ಮಾಡುವುದರಿಂದ ಆ ಕುಟುಂಬದ ಸದಸ್ಯರಿಗೆ ಅದೃಷ್ಟ ಒಲಿದು ಬರುತ್ತದೆ ಎಂಬ ನಂಬಿಕೆ ಇದೆ.

ಅನೇಕ ಜನರು ಮನೆಯ ಮುಖ್ಯ ದ್ವಾರದಲ್ಲಿ ಮೂರು ಕೋನಗಳಿರುವ ಮಂಗಳ ಯಂತ್ರವನ್ನು ಸ್ಥಾಪಿಸುತ್ತಾರೆ. ಈ ಯಂತ್ರದ ಜೊತೆಗೆ. ಮನೆಯ ಮುಖ್ಯ ಬಾಗಿಲಿನ ಹೊರಗೆ ಚಿಕ್ಕ ಗಂಟೆಗಳನ್ನು ಕೂಡ ಜೋಡಿಸಬಹುದು. ಹೀಗೆ ಮಾಡುವುದರಿಂದ ದುಷ್ಟಶಕ್ತಿಗಳು ಮನೆಗೆ ಬರುವುದಿಲ್ಲ ಎಂಬ ವಿಶ್ವಾಸ ಇದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 12:01 pm, Thu, 11 May 23

ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ