AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೈದರಾಬಾದ್​ನಲ್ಲಿ ಮತ್ತೊಂದು ದುಬಾರಿ ಬೆಲೆಯ ಮನೆ ಖರೀದಿಸಿದ ಸಮಂತಾ

Samantha: ಹೈದರಾಬಾದ್​ನಲ್ಲಿ ನಟಿ ಸಮಂತಾ ಭಾರಿ ದುಬಾರಿ ಮನೆ ಖರೀದಿ ಮಾಡಿದ್ದಾರಂತೆ. ಹೊಸ ಮನೆಯ ಬೆಲೆ ಎಷ್ಟು ಗೊತ್ತೆ?

ಹೈದರಾಬಾದ್​ನಲ್ಲಿ ಮತ್ತೊಂದು ದುಬಾರಿ ಬೆಲೆಯ ಮನೆ ಖರೀದಿಸಿದ ಸಮಂತಾ
ಸಮಂತಾ
ಮಂಜುನಾಥ ಸಿ.
|

Updated on: May 09, 2023 | 5:20 PM

Share

ಸಮಂತಾ (Samantha) ನಟಿಸಿದ್ದ ಎರಡು ಸಿನಿಮಾಗಳು ಒಂದರ ಹಿಂದೊಂದು ಬಿಡುಗಡೆ ಆಗಿ ಫ್ಲಾಪ್ ಆಗಿವೆ. ಹಾಗಿದ್ದರೂ ಸಹ ಸಮಂತಾಗೆ ಬೇಡಿಕೆ ಕಡಿಮೆಯಾಗಿಲ್ಲ. ಸಮಂತಾ ನಟಿಸಿದ್ದ ಯಶೋಧಾ (Yashodha) ಹಾಗೂ ಶಾಕುಂತಲಂ (Shakunthalam) ಸಿನಿಮಾಗಳು ಬಾಕ್ಸ್ ಆಫೀಸ್​ನಲ್ಲಿ ಧಾರುಣವಾಗಿ ನೆಲಕಚ್ಚಿದವು. ಅದಕ್ಕೆ ಮುಂಚೆ ನಯನತಾರಾ, ವಿಜಯ್ ಸೇತುಪತಿ ಜೊತೆಗೆ ನಟಿಸಿದ್ದ ಕಾತುವಾಕ್ಕು ರೆಂಡು ಕಾದಲ್ ಸಿನಿಮಾ ಸಹ ದೊಡ್ಡ ಹಿಟ್ ಏನೂ ಆಗಿರಲಿಲ್ಲ. ಹಾಗಿದ್ದರೂ ಸಮಂತಾಗೆ ಬೇಡಿಕೆ ಕಡಿಮೆಯಾಗಿಲ್ಲ, ಸಿನಿಮಾದಿಂದ ಸಿನಿಮಾಕ್ಕೆ ಅವರ ಸಂಭಾವನೆ ಹೆಚ್ಚುತ್ತಲೇ ಹೋಗುತ್ತಿದೆ. ಇದರ ನಡುವೆ ಸಮಂತಾ ಸಹ ಆಸ್ತಿಯ ಮೇಲೆ ಆಸ್ತಿ ಖರೀದಿಸುತ್ತಿದ್ದಾರೆ.

ವಿಚ್ಛೇದನಕ್ಕೂ ಮೊದಲು ಸಮಂತಾ ಹಾಗೂ ನಾಗ ಚೈತನ್ಯ ಒಟ್ಟಿಗೆ ವಾಸವಿದ್ದ ಅದೇ ಐಶಾರಾಮಿ ಮನೆಯನ್ನು ವಿಚ್ಛೇದನದ ಬಳಿಕ ಹಠಕ್ಕೆ ಬಿದ್ದು ನಟಿ ಸಮಂತಾ ಖರೀದಿ ಮಾಡಿ ಅದೇ ಮನೆಯಲ್ಲಿ ವಾಸ ಮಾಡುತ್ತಿದ್ದರು. ಇತ್ತೀಚೆಗೆ ಹೈದರಾಬಾದ್​ನ ಐಶಾರಾಮಿ ಏರಿಯಾ ಒಂದರಲ್ಲಿ ಡ್ಯೂಪ್ಲೆಕ್ಸ್​ ಮನೆಯನ್ನು ಭಾರಿ ದುಬಾರಿ ಬೆಲೆ ತೆತ್ತು ಖರೀದಿ ಮಾಡಿದ್ದಾರೆ ಎನ್ನಲಾಗುತ್ತಿದೆ.

7944 ಚದರ ಅಡಿ ವಿಸ್ತೀರ್ಣದ ನಾಲ್ಕು ಬೆಡ್​ರೂಂಗಳುಳ್ಳ ಡ್ಯೂಪ್ಲೆಕ್ಸ್ ಮನೆಯನ್ನು ಸಮಂತಾ ಖರೀದಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಹೈದರಾಬಾದ್​ನ ದುಬಾರಿ ಏರಿಯಾದ ಐಶಾರಾಮಿ ಅಪಾರ್ಟ್​ಮೆಂಟ್ ಒಂದರ 14ನೇ ಅಂತಸ್ತಿನಲ್ಲಿ ಈ ಡ್ಯೂಪ್ಲೆಕ್ಸ್ ಮನೆ ಇದೆಯಂತೆ. ಈ ಡ್ಯೂಪ್ಲೆಕ್ಸ್ ಮನೆಗೆ ಸಮಂತಾ 7.8 ಕೋಟಿ ರುಪಾಯಿ ಹಣ ತೆತ್ತಿರುವುದಾಗಿ ಹಲವು ತೆಲುಗು ಮಾಧ್ಯಮಗಳು ವರದಿ ಮಾಡಿವೆ. ಆದರೆ ಬಾಲಿವುಡ್​ನ ಪಿಂಕ್​ವಿಲ್ಲಾ ಈ ಮಾಹಿತಿ ಸುಳ್ಳೆಂದು ವರದಿ ಮಾಡಿದೆ.

ಸಮಂತಾ ಪ್ರಸ್ತುತ ಹೈದರಾಬಾದ್​ನ ಪಲಾಟಿಯಾಲ್ ಹೌಸ್​ನಲ್ಲಿ ನೆಲೆಸಿದ್ದಾರೆ. ಅದು ಜಯಭೇರಿ ಆರೆಂಜ್ ಕೌಂಟಿ ಅಪಾರ್ಟ್​ಮೆಂಟ್​ನಲ್ಲಿದೆ. ಈ ಮನೆಯನ್ನು ನಾಗ ಚೈತನ್ಯ ಹಾಗೂ ಸಮಂತಾ ವಿವಾಹವಾದಾಗ ಹಿರಿಯ ನಟರೊಬ್ಬರಿಂದ ಖರೀದಿಸಿದ್ದರು. ವಿಚ್ಛೇದನದ ಬಳಿಕ ಮನೆಯನ್ನು ಮಾರಾಟ ಮಾಡಲಾಗಿತ್ತು ಆ ಬಳಿಕ ಮತ್ತೆ ನಟಿ ಸಮಂತಾ ಭಾರಿ ಮೊತ್ತದ ಹಣ ಪಾವತಿಸಿ ಮರಳಿ ಆ ಮನೆ ಖರೀದಿಸಿ ಅಲ್ಲಿಯೇ ವಾಸವಿದ್ದಾರೆ.

ಇದನ್ನೂ ಓದಿ:ಸಮಂತಾ ಬಗ್ಗೆ ನಾಗ ಚೈತನ್ಯ ಮೆಚ್ಚುಗೆ; ಮಾಜಿ ಪತ್ನಿಯನ್ನು ಬಾಯ್ತುಂಬ ಹೊಗಳಿದ ನಟ

ಸಮಂತಾರ ಒಟ್ಟು ಮೌಲ್ಯ ಸುಮಾರು 100 ಕೋಟಿಗಳಿಗೂ ಹೆಚ್ಚಿದೆ. ಸಿನಿಮಾ ಒಂದಕ್ಕೆ ನಾಲ್ಕರಿಂದ ಐದು ಕೋಟಿ ಸಂಭಾವನೆಯನ್ನು ಸಮಂತಾ ಪಡೆಯುತ್ತಾರೆ. ಇದಲ್ಲದೆ ಇನ್​ಸ್ಟಾಗ್ರಾಂನಲ್ಲಿ ಜಾಹೀರಾತು ಪ್ರಕಟಿಸಲು ಸಹ ದೊಡ್ಡ ಮೊತ್ತದ ಹಣವನ್ನೇ ಸಂಭಾವನೆಯಾಗಿ ಪಡೆಯುತ್ತಾರೆ. ಮನೆಯ ಜೊತೆಗೆ ಹಲವು ಐಶಾರಾಮಿ ಕಾರುಗಳನ್ನು ಸಹ ಸಮಂತಾ ಹೊಂದಿದ್ದಾರೆ. ಸಮಂತಾ ಬಳಿ ಲ್ಯಾಂಡ್ ರೋವರ್, ಬಿಎಂಡಬ್ಲು 7 ಸೇರಿದಂತೆ ಇನ್ನೂ ಕೆಲವು ಐಶಾರಾಮಿ ಕಾರುಗಳಿವೆ. ಕೆಲವು ಉದ್ಯಮಗಳಲ್ಲಿಯೂ ಸಮಂತಾ ಬಂಡವಾಳ ಹೂಡಿದ್ದಾರೆ.

ಸಿನಿಮಾಗಳ ವಿಷಯಕ್ಕೆ ಬರುವುದಾದರೆ ಸಮಂತಾ ಪ್ರಸ್ತುತ, ವಿಜಯ್ ದೇವರಕೊಂಡ ಜೊತೆಗೆ ಖುಷಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅದರ ಜೊತೆಗೆ ಹಿಂದಿಯ ಸಿಟಾಡೆಲ್ ವೆಬ್ ಸರಣಿಯಲ್ಲಿ ನಟಿಸುತ್ತಿದ್ದಾರೆ. ಅದರ ಬಳಿಕ ಅರೇಂಜ್ ಮೆಂಟ್ಸ್ ಆಫ್ ಲವ್ ಕಾದಂಬರಿ ಆಧರಿತ ಚೆನ್ನೈ ಸ್ಟೋರಿ ಸಿನಿಮಾದಲ್ಲಿ ನಟಿಸಲಿದ್ದಾರೆ. ಬಾಲಿವುಡ್​ನ ಸಿನಿಮಾ ಒಂದರಲ್ಲಿಯೂ ಸಮಂತಾ ನಟಿಸುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?