Avinash: ‘ಕಾಳಿ ನಮ್ಮನೆಯ ಯಶೋಧಾ, ನಾನು ಹೆತ್ತವಳಷ್ಟೆ, ಆದರೆ..’; ಮಗನ ಬಗ್ಗೆ ಮಾಳವಿಕಾ ಅವಿನಾಶ್ ಮಾತು

ಯಾವ ಪರಿಸ್ಥಿತಿಯಲ್ಲಿ ಹೇಗೆ ಮಾತನಾಡಬೇಕು ಎಂಬುದು ರಮೇಶ್ ಅರವಿಂದ್​ಗೆ ಅವರಿಗೆ ಗೊತ್ತು. ಇದೇ ಕಾರಣಕ್ಕೆ ಮಗನನ್ನು ‘ವೀಕೆಂಡ್ ವಿತ್ ರಮೇಶ್’ ಶೋಗೆ ಕರೆತರೋಕೆ ಅವರು ಒಪ್ಪಿದರು.

Avinash: ‘ಕಾಳಿ ನಮ್ಮನೆಯ ಯಶೋಧಾ, ನಾನು ಹೆತ್ತವಳಷ್ಟೆ, ಆದರೆ..’; ಮಗನ ಬಗ್ಗೆ ಮಾಳವಿಕಾ ಅವಿನಾಶ್ ಮಾತು
ಗಾಲವ್-ಮಾಳವಿಕಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Apr 24, 2023 | 11:02 AM

‘ವೀಕೆಂಡ್ ವಿತ್ ರಮೇಶ್ 5’ನೇ ಸೀಸನ್​ನಲ್ಲಿ ಕಳೆದ ವಾರ ಅತಿಥಿಯಾಗಿ ಅವಿನಾಶ್ (Avinash) ಬಂದಿದ್ದರು. ಇಂಗ್ಲಿಷ್ ಎಂಎ ಮಾಡಿ ನಂತರ ಶಿಕ್ಷಕ ವೃತ್ತಿ ಆರಂಭಿಸಿದರು. ಅವರು ನಾಟಕದಲ್ಲಿ ಆಸಕ್ತಿ ಹೊಂದಿದ್ದರು. ರಂಗಭೂಮಿಯ ಜೊತೆ ಅವರಿಗೆ ಒಡನಾಟ ಇತ್ತು. ಈಗ ಅವರು ವಿಲನ್ ಆಗಿ, ಖಡಕ್ ಪೊಲೀಸ್ ಆಗಿ ಗುರುತಿಸಿಕೊಂಡಿದ್ದಾರೆ. ಅವರು ತಮ್ಮ ಬದುಕಿನ ಪಯಣ ತೆರೆದಿಟ್ಟಿದ್ದಾರೆ. ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಮಗ ಗಾಲವ್ ಬಗ್ಗೆ, ಆತನಿಗೆ ಇರುವ ಕಾಯಿಲೆ ಯಾವುದು ಎನ್ನುವ ಬಗ್ಗೆ ಅವಿನಾಶ್ ಹಾಗೂ ಅವರ ಪತ್ನಿ ಮಾಳವಿಕಾ ಅವಿನಾಶ್ ಮಾತನಾಡಿದ್ದಾರೆ.

ಮಾಳವಿಕಾ ಅವಿನಾಶ್ ಅವರು ಯಾವುದೇ ಶೋಗೆ ಮಗನನ್ನು ಕರೆತಂದಿಲ್ಲ. ನಿರೂಪಕರು ಕೇಳುವ ಪ್ರಶ್ನೆಯಿಂದ ತಮಗೆ ಬೇಸರ ಆಗಬಹುದು ಎನ್ನುವ ಭಯ ಅವರಿಗೆ ಇತ್ತು. ಆದರೆ, ರಮೇಶ್ ಅರವಿಂದ್ ಆ ರೀತಿ ಅಲ್ಲ. ಯಾವ ಪರಿಸ್ಥಿತಿಯಲ್ಲಿ ಹೇಗೆ ಮಾತನಾಡಬೇಕು ಎಂಬುದು ಅವರಿಗೆ ಗೊತ್ತು. ಇದೇ ಕಾರಣಕ್ಕೆ ಮಗನನ್ನು ‘ವೀಕೆಂಡ್ ವಿತ್ ರಮೇಶ್’ ಶೋಗೆ ಕರೆತರೋಕೆ ಅವರು ಒಪ್ಪಿದರು. ಈ ಮಾತನ್ನು ಸ್ವತಃ ಮಾಳವಿಕಾ ಅವಿನಾಶ್ ಹೇಳಿದ್ದಾರೆ.

‘ಮಗ ಗಾಲವ್​​ನನ್ನು ಕಾಳಿ (ಕೇರ್​ ಟೇಕರ್) ನೋಡಿಕೊಳ್ಳುತ್ತಾಳೆ. ಹೆತ್ತವಳು ಮಾತ್ರ ನಾನು, ಆದರೆ, ಇವನನ್ನು ಸಾಕುವವಳು ಇವಳೇ. ಗಾಲವ್ ಹುಟ್ಟಿದಾಗ ಎಲ್ಲರ ರೀತಿ ಇರಲಿಲ್ಲ. ಅವನನ್ನು ನೋಡಿ ಒಬ್ಬೊಬ್ಬರು ಒಂದೊಂದು ರೀತಿ ಹೇಳುತ್ತಿದ್ದರು. 2018ರಲ್ಲಿ ಆತನ ಆರೋಗ್ಯದಲ್ಲಿ ತೀವ್ರ ಏರುಪೇರಾಯಿತು. ಆತ 50 ದಿನ ಐಸಿಯುನಲ್ಲಿ ಇದ್ದ. ನಮ್ಮನ್ನು ಬಿಟ್ಟು ಹೋಗೋಕೆ ರೆಡಿ ಆದ ಎಂದುಕೊಂಡೆ. ಆದರೆ, ಬದುಕಿದ’ ಎಂದಿದ್ದಾರೆ ಅವರು.

ಇದನ್ನೂ ಓದಿ: ‘ಜಗತ್ತಿನಲ್ಲಿ ಎರಡು ಸಾವಿರ ಮಕ್ಕಳು ಮಾತ್ರ ಹೀಗಿರೋದು’; ಮಗನ ಪರಿಸ್ಥಿತಿ ನೆನೆದು ಅವಿನಾಶ್-ಮಾಳವಿಕಾ ಭಾವುಕ

‘ನಾವು ಒಂದು ಪರೀಕ್ಷೆ​ ಮಾಡಿಸಿದೆವು. ಅವನಿಗೆ ವುಲ್ಫ್ ಹರ್ಷೋನ್ ಸಿಂಡ್ರೋಮ್ ಇದೆ ಅಂತ ನಮಗೆ ವೈದ್ಯಕೀಯ ಪರೀಕ್ಷೆಯಲ್ಲಿ ಗೊತ್ತಾಯ್ತು. ಆರಂಭದಲ್ಲಿ ನಮಗೆ ಯಾವ ವೈದ್ಯರೂ ಈ ಬಗ್ಗೆ ಹೇಳಿರಲಿಲ್ಲ. ಈ ಸಿಂಡ್ರೋಮ್ ಇದ್ದರೆ ಬುದ್ಧಿಮಾಂದ್ಯತೆ ಉಂಟಾಗುತ್ತದೆ. ಮಾತು ಬರುವುದಿಲ್ಲ. ನಡಿಗೆ ಸ್ವಲ್ಪ ಬರುತ್ತದೆ. ಆಯಸ್ಸಿನ ಬಗ್ಗೆ ಗ್ಯಾರಂಟಿ ಇಲ್ಲ. ಪರೀಕ್ಷೆ ಮಾಡಿಸಿದಾಗ, ನಿಮ್ಮ ಕಾರಣಕ್ಕೂ, ಅವಿನಾಶ್ ಕಾರಣಕ್ಕೂ ಅವನು ಹಿಗಿಲ್ಲ. ನೀವು ಅನ್​ಲಕ್ಕಿ ಅಷ್ಟೇ ಎಂದು ವೈದ್ಯರು ಹೇಳಿದರು’ ಎಂದು ಮಾಳವಿಕಾ ನೋವು ತೋಡಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ