‘ಜಗತ್ತಿನಲ್ಲಿ ಎರಡು ಸಾವಿರ ಮಕ್ಕಳು ಮಾತ್ರ ಹೀಗಿರೋದು’; ಮಗನ ಪರಿಸ್ಥಿತಿ ನೆನೆದು ಅವಿನಾಶ್-ಮಾಳವಿಕಾ ಭಾವುಕ

Weekend With Ramesh: ಅವಿನಾಶ್​-ಮಾಳವಿಕಾ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಅವರು ವೀಕೆಂಡ್ ವಿತ್ ರಮೇಶ್​ನಲ್ಲಿ ಮಗನ ಬಗ್ಗೆ ಮಾತನಾಡಿದ್ದಾರೆ.

‘ಜಗತ್ತಿನಲ್ಲಿ ಎರಡು ಸಾವಿರ ಮಕ್ಕಳು ಮಾತ್ರ ಹೀಗಿರೋದು’; ಮಗನ ಪರಿಸ್ಥಿತಿ ನೆನೆದು ಅವಿನಾಶ್-ಮಾಳವಿಕಾ ಭಾವುಕ
ವೀಕೆಂಡ್ ವಿತ್ ರಮೇಶ್
Follow us
ರಾಜೇಶ್ ದುಗ್ಗುಮನೆ
|

Updated on: Apr 22, 2023 | 8:03 AM

ಕನ್ನಡದ ನಟ ಅವಿನಾಶ್ (Avinash) ಅವರು ಈ ವಾರದ ‘ವೀಕೆಂಡ್ ವಿತ್ ರಮೇಶ್​ ಸೀಸನ್ 5’ರ ಅತಿಥಿ ಆಗಿದ್ದಾರೆ. ಹಲವು ಸಿನಿಮಾಗಳಲ್ಲಿ ವಿಲನ್ ಹಾಗೂ ಪೊಲೀಸ್ ಪಾತ್ರ ಮಾಡಿ ಮಿಂಚಿರೋ ಅವರಿಗೆ ಸಾಧಕರ ಕುರ್ಚಿ ಮೇಲೆ ಕುಳಿತುಕೊಳ್ಳುವ ಅವಕಾಶ ಸಿಕ್ಕಿದೆ. ಈ ವೇಳೆ ಅವರು ತಮ್ಮ ಬದುಕಿನ ಪಯಣ ತೆರೆದಿಟ್ಟಿದ್ದಾರೆ. ಅವಿನಾಶ್ ಮಗ ವಿಶೇಷಚೇತನ. ಅವನ ಪರಿಸ್ಥಿತಿ ನೆನೆದು ಅವಿನಾಶ್ ಹಾಗೂ ಮಾಳವಿಕಾ (Malavika Avinash) ದಂಪತಿ ಭಾವುಕರಾಗಿದ್ದಾರೆ. ಈ ಪ್ರೋಮೋನ ಜೀ ಕನ್ನಡ ವಾಹಿನಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.

ಅವಿನಾಶ್ ಅವರು ಚಿತ್ರರಂಗದಲ್ಲಿ ಮಾಡಿದ ಸಾಧನೆ ತುಂಬಾನೇ ದೊಡ್ಡದು. ಅವರಿಗೆ ಈಗ 63 ವರ್ಷ ವಯಸ್ಸು. ಈಗಲೂ ಅವರಿಗೆ ಸಾಕಷ್ಟು ಬೇಡಿಕೆ ಇದೆ. ವಿಲನ್ ಆಗಿ, ಖಡಕ್ ಪೊಲೀಸ್ ಅಧಿಕಾರಿಯಾಗಿ, ತಂದೆಯಾಗಿ ಹೀಗೆ ಅನೇಕ ಪಾತ್ರಗಳ ಮೂಲಕ ಅವರು ಅನೇಕರಿಗೆ ಇಷ್ಟ ಆಗಿದ್ದಾರೆ. ಅವರು ಸಾಧಕರ ಕುರ್ಚಿ ಮೇಲೆ ಕೂರೋಕೆ ಅರ್ಹರು ಎನ್ನುವ ಅಭಿಪ್ರಾಯ ಅನೇಕರದ್ದು. ಅವರ ಪತ್ನಿ ಮಾಳವಿಕಾ ಕೂಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಅವರು ವೀಕೆಂಡ್ ವಿತ್ ರಮೇಶ್​ನಲ್ಲಿ ಮಗನ ಬಗ್ಗೆ ಮಾತನಾಡಿದ್ದಾರೆ.

ಅವಿನಾಶ್ ಹಾಗೂ ಮಾಳವಿಕಾ ಮಗ ವಿಶೇಷಚೇತನ. ಅವನಿಗೆ ಸರಿಯಾಗಿ ನಡೆಯಲು ಹಾಗೂ ಮಾತನಾಡಲು ಬರುವುದಿಲ್ಲ. ಹಾಡು ಹೇಳಿ ಊಟ ಮಾಡಿಸಬೇಕು. ಮಗ ಹೀಗೆ ಹುಟ್ಟಿದನಲ್ಲ ಎನ್ನುವ ಬೇಸರ ಅವರಿಗೆ ಇಲ್ಲ. ದೇವರು ಕೊಟ್ಟಿದ್ದನ್ನು ಅವರು ಸ್ವೀಕರಿಸಿದ್ದಾರೆ.

‘ಜಗತ್ತಿನಲ್ಲಿ 2 ಸಾವಿರ ಮಕ್ಕಳು ಹೀಗಿದ್ದಾರೆ. ಅವನ ಬಗ್ಗೆ ಒಬ್ಬೊಬ್ಬರು ಒಂದು ರೀತಿ ಮಾತನಾಡಿದ್ರು. ಕೆಲವೊಮ್ಮೆ ಅನಿಸುತ್ತದೆ, ನಮ್ಮ ಮನೆಯಲ್ಲಿ ಮಾತ್ರ ಯಾಕೆ ಹೀಗೆ? ಎಲ್ಲರ ಮನೆಯ ಮಕ್ಕಳು ಶಾಲೆಗೆ ಹೋಗುತ್ತಾರೆ. ನಾವು ಸೋಶಿಯಲ್ ಗ್ಯಾದರಿಂಗ್ ಹೋಗಲ್ಲ. ಅಲ್ಲೊಂದು ದೇವಸ್ಥಾನ ಇದೆ ತಾಯತ ಕಟ್ಟಿಸಿ ಎನ್ನುತ್ತಾರೆ’ ಎಂದು ಮಗನ ಬಗ್ಗೆ ಬಂದ ಮಾತುಗಳು, ಮಗನ ಬಗ್ಗೆ ಅನಿಸೋದನ್ನು ಮಾಳವಿಕಾ ಅವಿನಾಶ್ ಹೇಳಿದ್ದಾರೆ. ಈ ವೇಳೆ ದಂಪತಿ ಭಾವುಕರಾಗಿದ್ದರು.

View this post on Instagram

A post shared by Zee Kannada (@zeekannada)

ಇದನ್ನೂ ಓದಿ: ಅವಿನಾಶ್​ ಮನೆಯ ದೇವರಕೋಣೆಯಲ್ಲಿ ವಿಷ್ಣುವರ್ಧನ್​ ಫೋಟೋ; ‘ಆಪ್ತರಕ್ಷಕ’ನಿಗೆ ಮಾಳವಿಕಾ ಗೌರವ

ವಿಷ್ಣುವರ್ಧನ್ ಅವರನ್ನು ಅವಿನಾಶ್ ದೇವರ​ ರೀತಿ ಕಾಣುತ್ತಾರೆ. ಈ ಬಗ್ಗೆಯೂ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದಾರೆ. ಅವಿನಾಶ್ ಅವರ ದೇವರ ಕೋಣೆಯಲ್ಲಿ ವಿಷ್ಣು ಫೋಟೋ ಇದೆ. ಈ ಬಗ್ಗೆ ಮಾಳವಿಕಾ  ಮಾತನಾಡಿದ್ದಾರೆ. ‘ಹೃದಯದಲ್ಲಿ ಕೂರಿಸಿರುವವರನ್ನು ದೇವರಮನೆಯಲ್ಲಿ ಕೂರಿಸುವುದು ಏನು ದೊಡ್ಡ ವಿಷಯ’ ಎಂದು ಅವಿನಾಶ್​ ಪತ್ನಿ ಮಾಳವಿಕಾ ಅವರು ಹೇಳಿದ್ದಾರೆ. ಆ ಮೂಲಕ ವಿಷ್ಣುವರ್ಧನ್​ ಬಗ್ಗೆ ತಮಗೆ ಇರುವ ಗೌರವ ಎಂಥದ್ದು ಎಂಬುದನ್ನು ಅವರು ವಿವರಿಸಿದ್ದಾರೆ. ‘ವಿಷ್ಣುವರ್ಧನ್​ ಅವರು ಒಬ್ಬ ತಂದೆಯ ಸ್ವರೂಪದಲ್ಲಿ ನಮ್ಮ ಬದುಕಿನಲ್ಲಿ ಇದ್ದರು. ಅವರ ನೆರಳು ನಮ್ಮನ್ನು ಬಿಟ್ಟು ಅಗಲಿಯೇ ಇಲ್ಲ’ ಎಂದು ಮಾಳವಿಕಾ ಅವಿನಾಶ್​ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ