Weekend With Ramesh: ಅವಿನಾಶ್​ ಮನೆಯ ದೇವರಕೋಣೆಯಲ್ಲಿ ವಿಷ್ಣುವರ್ಧನ್​ ಫೋಟೋ; ‘ಆಪ್ತರಕ್ಷಕ’ನಿಗೆ ಮಾಳವಿಕಾ ಗೌರವ

Dr Vishnuvardhan: ‘ವಿಷ್ಣುವರ್ಧನ್​ ಅವರು ಒಬ್ಬ ತಂದೆಯ ಸ್ವರೂಪದಲ್ಲಿ ನಮ್ಮ ಬದುಕಿನಲ್ಲಿ ಇದ್ದರು. ಅವರ ನೆರಳು ನಮ್ಮನ್ನು ಬಿಟ್ಟು ಅಗಲಿಯೇ ಇಲ್ಲ’ ಎಂದು ಮಾಳವಿಕಾ ಅವಿನಾಶ್​ ಹೇಳಿದ್ದಾರೆ.

Weekend With Ramesh: ಅವಿನಾಶ್​ ಮನೆಯ ದೇವರಕೋಣೆಯಲ್ಲಿ ವಿಷ್ಣುವರ್ಧನ್​ ಫೋಟೋ; ‘ಆಪ್ತರಕ್ಷಕ’ನಿಗೆ ಮಾಳವಿಕಾ ಗೌರವ
ಮಾಳವಿಕಾ, ಅವಿನಾಶ್
Follow us
ಮದನ್​ ಕುಮಾರ್​
|

Updated on:Apr 21, 2023 | 4:15 PM

ಜೀ ಕನ್ನಡ ವಾಹಿನಿಯ ‘ವೀಕೆಂಡ್​ ವಿತ್​ ರಮೇಶ್​’ (Weekend With Ramesh) ಕಾರ್ಯಕ್ರಮದ 5ನೇ ಸೀಸನ್​ ಯಶಸ್ವಿಯಾಗಿ ಮೂಡಿಬರುತ್ತಿದೆ. ಅನೇಕ ಸಾಧಕರು ಈ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸುತ್ತಿದ್ದಾರೆ. ಈಗಾಗಲೇ ರಮ್ಯಾ ದಿವ್ಯ ಸ್ಪಂದನಾ, ಪ್ರಭುದೇವ, ದತ್ತಣ್ಣ, ಡಾ. ಮಂಜುನಾಥ್​, ಡಾಲಿ ಧನಂಜಯ್​ ಅವರು ಸಾಧಕರ ಸೀಟ್​ ಮೇಲೆ ಕುಳಿತು ಈ ಕಾರ್ಯಕ್ರಮಕ್ಕೆ ಮೆರುಗು ತಂದಿದ್ದಾರೆ. ಈ ವಾರ (ಏಪ್ರಿಲ್​ 29 ಮತ್ತು 30) ಬರುವ ಸಾಧಕರು ಯಾರು ಎಂಬುದು ಕೂಡ ಈಗಾಗಲೇ ಬಹಿರಂಗ ಆಗಿದೆ. ಕನ್ನಡ ಚಿತ್ರರಂಗದ ಪ್ರತಿಭಾವಂತ ಪೋಷಕ ಕಲಾವಿದರಾದ ಅವಿನಾಶ್​ (Avinash) ಮತ್ತು ಮಂಡ್ಯ ರಮೇಶ್​ ಅವರು ತಮ್ಮ ಬದುಕಿನ ನೆನಪಿನ ಪುಟವನ್ನು ‘ವೀಕೆಂಡ್​ ವಿತ್ ರಮೇಶ್​’ ವೇದಿಕೆಯಲ್ಲಿ ತೆರೆಯಲಿದ್ದಾರೆ. ವಿಶೇಷ ಎಂದರೆ, ನಟ ವಿಷ್ಣುವರ್ಧನ್​ (Dr Vishnuvardhan) ಬಗ್ಗೆ ಅವಿನಾಶ್​ ಅವರು ಒಂದಷ್ಟು ವಿಷಯಗಳನ್ನು ಹಂಚಿಕೊಳ್ಳಲಿದ್ದಾರೆ.

ಈ ವಾರದ ಸಂಚಿಕೆಗಳ ಪ್ರೋಮೋವನ್ನು ಜೀ ಕನ್ನಡ ವಾಹಿನಿಯ ಸೋಶಿಯಲ್​ ಮೀಡಿಯಾ ಖಾತೆಗಳಲ್ಲಿ ಹಂಚಿಕೊಳ್ಳಲಾಗಿದೆ. ಅದರಲ್ಲಿ ಅವಿನಾಶ್​ ಮತ್ತು ಮಾಳವಿಕಾ ಅವರು ವಿಷ್ಣುವರ್ಧನ್​ ಬಗ್ಗೆ ಮಾತನಾಡಿರುವುದು ಗಮನ ಸೆಳೆಯುತ್ತಿದೆ. ‘ನಿಮ್ಮ ಮನೆಯ ದೇವರ ರೂಮ್​ನಲ್ಲಿ ವಿಷ್ಣುವರ್ಧನ್​ ಅವರ ಫೋಟೋ ಇದೆ ಎಂಬುದು ನಿಜನಾ?’ ಎಂದು ರಮೇಶ್​ ಕೇಳಿದ್ದಕ್ಕೆ ‘ನಿಜ’ ಎಂದು ಉತ್ತರಿಸಿದ್ದಾರೆ ಅವಿನಾಶ್​.

‘ಹೃದಯದಲ್ಲಿ ಕೂರಿಸಿರುವವರನ್ನು ದೇವರಮನೆಯಲ್ಲಿ ಕೂರಿಸುವುದು ಏನು ದೊಡ್ಡ ವಿಷಯ’ ಎಂದು ಅವಿನಾಶ್​ ಪತ್ನಿ ಮಾಳವಿಕಾ ಅವರು ಹೇಳಿದ್ದಾರೆ. ಆ ಮೂಲಕ ವಿಷ್ಣುವರ್ಧನ್​ ಬಗ್ಗೆ ತಮಗೆ ಇರುವ ಗೌರವ ಎಂಥದ್ದು ಎಂಬುದನ್ನು ಅವರು ವಿವರಿಸಿದ್ದಾರೆ. ‘ವಿಷ್ಣುವರ್ಧನ್​ ಅವರು ಒಬ್ಬ ತಂದೆಯ ಸ್ವರೂಪದಲ್ಲಿ ನಮ್ಮ ಬದುಕಿನಲ್ಲಿ ಇದ್ದರು. ಅವರ ನೆರಳು ನಮ್ಮನ್ನು ಬಿಟ್ಟು ಅಗಲಿಯೇ ಇಲ್ಲ’ ಎಂದು ಮಾಳವಿಕಾ ಅವಿನಾಶ್​ ಹೇಳಿದ್ದಾರೆ.

ಇದನ್ನೂ ಓದಿ: Vishnuvardhan: ಸಿಗರೇಟ್ ಸೇದುತ್ತಿದ್ದಾಗ ವಿಷ್ಣುವರ್ಧನ್ ಕೈಲಿ ಸಿಕ್ಕಿ ಬಿದ್ದಿದ್ದ ಶ್ರೀನಗರ ಕಿಟ್ಟಿ

‘ನಮ್ಮನ್ನು ತುಂಬ ಪ್ರೀತಿ ಮಾಡುತ್ತಿದ್ದರು. ಪ್ರತಿಯೊಂದು ಹೆಜ್ಜೆಯಲ್ಲೂ ಫೋನ್​ ಮಾಡುತ್ತಿದ್ದರು’ ಎಂದು ಅವಿನಾಶ್​ ಹೇಳಿದ್ದಾರೆ. ‘ಆಪ್ತರಕ್ಷಕ ಎಂದರೆ ಅದು ಕೇವಲ ಟೈಟಲ್​ ಅಲ್ಲ. ಅದು ಅವರ ನೇಚರ್​’ ಎಂದು ರಮೇಶ್​ ಅರವಿಂದ್​ ದನಿಗೂಡಿಸಿದ್ದಾರೆ. ಈ ಎಪಿಸೋಡ್​ ನೋಡಲು ವಿಷ್ಣುವರ್ಧನ್​ ಅಭಿಮಾನಿಗಳು ಕಾದಿದ್ದಾರೆ.

ಇದನ್ನೂ ಓದಿ: ಜೀವ ಕೊಟ್ಟ ಎರಡನೇ ತಾಯಿಯನ್ನು ವೀಕೆಂಡ್ ವಿತ್ ರಮೇಶ್​ನಲ್ಲಿ ಭೇಟಿಯಾದ ಡಾಲಿ

‘ಆಪ್ತಮಿತ್ರ’ ಸಿನಿಮಾದಲ್ಲಿ ಅವಿನಾಶ್​, ವಿಷ್ಣುವರ್ಧನ್​ ಹಾಗೂ ರಮೇಶ್​ ಅವರು ತೆರೆ ಹಂಚಿಕೊಂಡಿದ್ದರು. 2010ರಲ್ಲಿ ಬಂದ ‘ಆಪ್ತರಕ್ಷಕ’ ಚಿತ್ರದಲ್ಲೂ ಅವಿನಾಶ್​ ಮತ್ತು ವಿಷ್ಣುವರ್ಧನ್​ ನಟಿಸಿದ್ದರು. ಅದು ವಿಷ್ಣು ಅಭಿನಯದ ಕೊನೇ ಸಿನಿಮಾ. ಇಂದಿಗೂ ಅವರನ್ನು ವಿವಿಧ ರೀತಿಯಲ್ಲಿ ನೆನಪಿಸಿಕೊಳ್ಳಲಾಗುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 4:15 pm, Fri, 21 April 23

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ