ಬೆಡ್​​ ರೂಮಲ್ಲಿ ಕೆಲಸ ಮಾಡಬೇಡಿ … ಮಾಡಿದರೆ ಏನಾಗುತ್ತದೆ ಗೊತ್ತಾ?

| Updated By: ಸಾಧು ಶ್ರೀನಾಥ್​

Updated on: Aug 31, 2024 | 12:48 PM

Don't work in the bed room: ಇಂದು ಕಾಲ ಬದಲಾಗಿದೆ. ಮನೆಯಿಂದಲೇ ಕೆಲಸ ಮಾಡುವವರು ಅನೇಕರಿದ್ದಾರೆ. ಆದರೆ ವಾಸ್ತು ಪ್ರಕಾರ ಕೆಲವು ವಿಶೇಷ ವಿಷಯಗಳನ್ನು ಸಹ ನೋಡಿಕೊಳ್ಳಬೇಕು. ನೀವು ಮಲಗುವ ಕೋಣೆಯಲ್ಲಿ ಎಂದಿಗೂ ಕೆಲಸ ಮಾಡಬಾರದು. ನೀವು ಯಾವಾಗಲೂ ಅಧ್ಯಯನ ಕೊಠಡಿಯಲ್ಲಿ ಕೆಲಸ ಮಾಡಬೇಕು.

ಬೆಡ್​​ ರೂಮಲ್ಲಿ ಕೆಲಸ ಮಾಡಬೇಡಿ ... ಮಾಡಿದರೆ ಏನಾಗುತ್ತದೆ ಗೊತ್ತಾ?
ಬೆಡ್​​ ರೂಮಲ್ಲಿ ಕೆಲಸ ಮಾಡಬೇಡಿ ...
Follow us on

ಜೀವನ ನಡೆಸಲು ಪ್ರಮುಖವಾದ ವಿಷಯವೆಂದರೆ ಹಣ. ಹಣವಿಲ್ಲದೆ ಮನುಷ್ಯ ಬದುಕುವುದು ಕಷ್ಟ. ಇಂದಿನ ಕಾಲದಲ್ಲಿ, ಉದ್ಯೋಗವನ್ನು ಸಂಪೂರ್ಣವಾಗಿ ಅವಲಂಬಿಸಿರುವ ಅನೇಕ ಜನರಿದ್ದಾರೆ. ಅವರಿಗೆ ಬೇರೆ ಆಯ್ಕೆ ಇಲ್ಲ. ಆದರೆ ಇದಾದ ನಂತರವೂ ವೃತ್ತಿಯಲ್ಲಿ ಸಿಗಬೇಕಾದ ಬೆಳವಣಿಗೆ ಸಿಗದಿರುವುದು ಅನೇಕರಲ್ಲಿ ಕಂಡು ಬರುತ್ತಿದೆ. ಇಂತಹ ಸಂದರ್ಭದಲ್ಲಿ ನೀವು ಪ್ರಯತ್ನಿಸಬಹುದಾದ ಕೆಲವು ವಾಸ್ತು ಸಲಹೆಗಳಿವೆ. ಜೀವನದಲ್ಲಿ ಕೆಲವೊಮ್ಮೆ ಸಣ್ಣ ಸಣ್ಣ ವಿಷಯಗಳೂ ಬದಲಾವಣೆ ತರುತ್ತವೆ. ನಾವು ಹೇಗೆ ಬದುಕುತ್ತೇವೆ, ನಮ್ಮ ಜೀವನಶೈಲಿ ಏನು, ನಮ್ಮ ನಡವಳಿಕೆ ಏನು, ಇವೆಲ್ಲವೂ ಮಾನವ ಜೀವನದಲ್ಲಿ ಮುಖ್ಯವಾಗಿದೆ. ವಾಸ್ತು ಪ್ರಕಾರ, ನಿಮ್ಮ ಜೀವನದಲ್ಲಿ ಈ 4 ವಿಷಯಗಳನ್ನು ನೀವು ಕಾಳಜಿ ವಹಿಸಲು ಪ್ರಾರಂಭಿಸಿದರೆ, ನಿಮ್ಮ ವೃತ್ತಿಜೀವನದಲ್ಲಿ ಎತ್ತರಕ್ಕೆ ಹಾರುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ.

ಕುಳಿತುಕೊಳ್ಳುವ ಪ್ರದೇಶ (ವರ್ಕ್​ ಸ್ಟೇಷನ್​)
ಮೊದಲನೆಯದಾಗಿ, ನೀವು ಕೆಲಸ ಮಾಡುವ ಪರಿಸರ ಹೇಗಿದೆ ಎಂಬುದನ್ನು ನೋಡುವುದು ಮುಖ್ಯ. ನಿಮ್ಮ ಕೆಲಸವು ಸೃಜನಾತ್ಮಕವಾಗಿ ಮಾಡುವಂತಿದ್ದರೆ, ನೀವು ಕುಳಿತುಕೊಳ್ಳಲು ತೆರೆದ ಮುಕ್ತ ಸ್ಥಳವನ್ನು ಆರಿಸಿಕೊಳ್ಳಬೇಕು. ಇದು ತಾಜಾತನವನ್ನು ಕಾಪಾಡುತ್ತದೆ. ಹಾಗಂತ ನೀವು ಕಚೇರಿಯಲ್ಲಿದ್ದಾಗ, ನೀವು ಮುಖ್ಯ ಬಾಗಿಲಿನ ಮುಂದೆ ಕುಳಿತುಕೊಳ್ಳಬಾರದು. ನೀವು ಅದರಿಂದ ದೂರ ಕುಳಿತುಕೊಳ್ಳಲು ಪ್ರಯತ್ನಿಸಬೇಕು.

ಮಲಗುವ ಕೋಣೆಯಲ್ಲಿ ಕೆಲಸ ಮಾಡಬೇಡಿ
ಇಂದು ಕಾಲ ಬದಲಾಗಿದೆ. ಮನೆಯಿಂದಲೇ ಕೆಲಸ ಮಾಡುವವರು ಅನೇಕರಿದ್ದಾರೆ. ಆದರೆ ವಾಸ್ತು ಪ್ರಕಾರ ಕೆಲವು ವಿಶೇಷ ವಿಷಯಗಳನ್ನು ಸಹ ನೋಡಿಕೊಳ್ಳಬೇಕು. ನೀವು ಮಲಗುವ ಕೋಣೆಯಲ್ಲಿ ಎಂದಿಗೂ ಕೆಲಸ ಮಾಡಬಾರದು. ನೀವು ಯಾವಾಗಲೂ ಅಧ್ಯಯನ ಕೊಠಡಿಯಲ್ಲಿ ಕೆಲಸ ಮಾಡಬೇಕು. ಆರಾಮವಾಗಿ, ವಿಶ್ರಾಂತಿ ಪಡೆಯುವಂತಹ ಸ್ಥಳವನ್ನು ಆಯ್ಕೆ ಮಾಡಬಾರದು. ಮಲಗುವ ಕೋಣೆಯಲ್ಲಿ ಕೆಲಸ ಮಾಡುವುದರಿಂದ ನಿಮ್ಮ ಕೆಲಸದ ಮೇಲೆ ನಕಾರಾತ್ಮಕ ಪರಿಣಾಮ ಹೆಚ್ಚಿಸುತ್ತದೆ.

ಅಂತಹ ಕುರ್ಚಿಯನ್ನು ಆರಿಸಿ
ಅನೇಕರಿಗೆ ಕಚೇರಿಯಿಂದ ಕೆಲಸ ಮಾಡುವ ಜರೂರತ್ತುಇದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಕುಳಿತುಕೊಳ್ಳುವ ಕುರ್ಚಿಯ ಸ್ಥಿತಿಯನ್ನು ಸಹ ಗಮನಿಸುವುದು ಮುಖ್ಯವಾಗಿದೆ. ಯಾವಾಗಲೂ ಎತ್ತರದ ಹಿಂಭಾಗವನ್ನು ಹೊಂದಿರುವ ಕುರ್ಚಿಯನ್ನು ಆರಿಸಿ. ಇದು ಪ್ರಗತಿಯ ಹಾದಿಯನ್ನು ತೆರೆಯುತ್ತದೆ. ಇದರ ಹೊರತಾಗಿ, ಮುಖ್ಯ ದ್ವಾರದ ಕಡೆಗೆ ನಿಮ್ಮ ಬೆನ್ನನ್ನು ಹಾಕಿ ಎಂದಿಗೂ ಕುಳಿತುಕೊಳ್ಳಬೇಡಿ. ಇದರಿಂದ ನಕಾರಾತ್ಮಕತೆ ಹರಡುತ್ತದೆ.

ಟೇಬಲ್ ಹೇಗಿರಬೇಕು?
ನೀವು ಕೆಲಸ ಮಾಡುತ್ತಿರುವ ಮೇಜಿನ ಬಗ್ಗೆ ಕೆಲವು ವಿಷಯಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಕೆಲಸ ಮಾಡುವಾಗ ನೀವು ಬಳಸುತ್ತಿರುವ ಟೇಬಲ್ ಅಂಡಾಕಾರದ ಆಕಾರವನ್ನು ಹೊಂದಿರುವಂತೆ ಪ್ರಯತ್ನಿಸಿ. ಅದು ಚೌಕಾಕಾರದಲ್ಲಿ ಇರಬಾರದು . ಇದಲ್ಲದೆ, ಟೇಬಲ್ ಅನ್ನು ಮರ ಅಥವಾ ಗಾಜಿನಿಂದ ಮಾಡಿದ್ದರೆ ಅದು ವಾಸ್ತು ಪ್ರಕಾರ ಸರಿಯಾಗಿದೆ ಎಂದು ಪರಿಗಣಿಸಲಾಗುತ್ತದೆ.