AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Niti: ಈ 6 ಅಭ್ಯಾಸಗಳಿಂದ ದೂರವಿರದಿದ್ದರೆ ಹಣ ನಿಮ್ಮ ಬಳಿ ಉಳಿಯುವುದೇ ಇಲ್ಲ

ಮನೆಯನ್ನು ಹಾಗೂ ಸುತ್ತಲಿನ ವಾತಾವರಣವನ್ನು ಸ್ವಚ್ಛವಾಗಿಟ್ಟುಕೊಳ್ಳದಿದ್ದರೆ ಲಕ್ಷ್ಮಿ ಒಲಿಯುವುದಿಲ್ಲ. ಅಷ್ಟೇ ಅಲ್ಲದೇ, ಯಾರು ಸ್ವಚ್ಛತೆಗೆ ಆದ್ಯತೆ ನೀಡುವುದಿಲ್ಲವೋ ಅವರಿಗೆ ಸಮಾಜದಲ್ಲಿ ಗೌರವಾದರಗಳೂ ಸಿಗುವುದಿಲ್ಲ. ಹೀಗಾಗಿ ಲಕ್ಷ್ಮಿಯ ಕೃಪೆಗೆ ಪಾತ್ರರಾಗಲು ಹಾಗೂ ಸಮಾಜದಲ್ಲಿ ಗೌರವ ಪಡೆಯಲು ಶುಭ್ರ ಬಟ್ಟೆಗಳನ್ನು ಧರಿಸಬೇಕು.

Chanakya Niti: ಈ 6 ಅಭ್ಯಾಸಗಳಿಂದ ದೂರವಿರದಿದ್ದರೆ ಹಣ ನಿಮ್ಮ ಬಳಿ ಉಳಿಯುವುದೇ ಇಲ್ಲ
ಆಚಾರ್ಯ ಚಾಣಕ್ಯ
Skanda
| Updated By: Digi Tech Desk|

Updated on:May 18, 2021 | 12:56 PM

Share

ಭಾರತೀಯ ಪರಂಪರೆಯಲ್ಲಿ ಆಚಾರ್ಯ ಚಾಣಕ್ಯರಿಗೆ ವಿಶೇಷ ಸ್ಥಾನಮಾನವಿದೆ. ನೈತಿಕ ವಿಚಾರಗಳಿಂದ ಹಿಡಿದು ಬದುಕಿನ ಹಲವು ತತ್ವಗಳಿಗೆ ಪೂರಕವಾಗುವ ಅವರ ವಿಚಾರಧಾರೆಗಳು ಇಂದಿಗೂ ಪ್ರಸ್ತುತ. ಚಾಣಕ್ಯ ನೀತಿಯ ಆಧಾರದ ಮೇಲೆಯೇ ಅಧಿಕಾರಕ್ಕೇರಿದವರು ಹಲವರಿದ್ದಾರೆ. ಬದುಕಿನಲ್ಲಿ ಹೇಗೆ ಯಶಸ್ವಿಯಾಗಬೇಕೆಂಬ ಒಳಗುಟ್ಟುಗಳನ್ನು ತಿಳಿಸುವ ಚಾಣಕ್ಯ ನೀತಿ ಇದೇ ಕಾರಣಕ್ಕಾಗಿ ಜನಪ್ರಿಯವಾಗಿದೆ. ಕೌಟಿಲ್ಯ ಹಾಗೂ ವಿಷ್ಣುಗುಪ್ತ ಎಂಬ ಹೆಸರಿನಿಂದಲೂ ಪ್ರಸಿದ್ಧರಾದ ಚಾಣಕ್ಯರ ಕೃತಿಗಳನ್ನು 21ನೇ ಶತಮಾನದಲ್ಲೂ ಇಷ್ಟಪಡಲು ಕಾರಣ ಅವುಗಳಲ್ಲಿರುವ ಜ್ಞಾನ ಸಂಪತ್ತು. ಆರ್ಥಿಕತೆ, ಸಾಮಾಜಿಕ ನೀತಿ, ರಾಜತಾಂತ್ರಿಕತೆಯಂತಹ ಗಂಭೀರ ವಿಚಾರಗಳನ್ನು ಪ್ರಸ್ತುತಪಡಿಸುವ ಚಾಣಕ್ಯ, ಜೀವನ ನೀತಿಗೆ ಸಂಬಂಧಿಸಿದ ಕೆಲ ಮಾತುಗಳನ್ನೂ ಹೇಳಿದ್ದಾರೆ.

ಚಾಣಕ್ಯ ತಮ್ಮ ಕೃತಿಗಳಲ್ಲಿ ಉತ್ತಮ ಜೀವನಕ್ಕೆ ಬೇಕಾದ ಕೆಲ ಸಲಹೆಗಳನ್ನು ನೀಡಿದ್ದಾರೆ. ಬಹುಮುಖ್ಯವಾಗಿ ಕೆಲವು ಶಿಸ್ತುಕ್ರಮಗಳು ಜೀವನಕ್ಕೆ ಮುಖ್ಯ ಎನ್ನುವ ಅವರು, ಬದುಕಿನಲ್ಲಿ 6 ಅಭ್ಯಾಸಗಳು ಮನುಷ್ಯನನ್ನು ಬಡವನನ್ನಾಗಿಸಲು ಕಾರಣವಾಗುತ್ತವೆ. ಅಂತಹ ಅಭ್ಯಾಸಗಳಿಂದ ದೂರವಿರದ ಹೊರತು ಲಕ್ಷ್ಮಿ ಕೃಪೆಗೆ ಪಾತ್ರರಾಗುವುದು ಸಾಧ್ಯವಿಲ್ಲ. ಜತೆಗೆ, ಅಂತಹವರ ಬಳಿ ಸಂಪತ್ತು ನಿಲ್ಲುವುದಿಲ್ಲ ಎಂದು ಎಚ್ಚರಿಸಿದ್ದಾರೆ. ಹಾಗಾದರೆ ಆ ಆರು ಅಭ್ಯಾಸಗಳು ಯಾವುವು ಎಂಬ ವಿವರ ಇಲ್ಲಿದೆ.

ಮನೆಯನ್ನು ಹಾಗೂ ಸುತ್ತಲಿನ ವಾತಾವರಣವನ್ನು ಸ್ವಚ್ಛವಾಗಿಟ್ಟುಕೊಳ್ಳದಿದ್ದರೆ ಲಕ್ಷ್ಮಿ ಒಲಿಯುವುದಿಲ್ಲ. ಅಷ್ಟೇ ಅಲ್ಲದೇ, ಯಾರು ಸ್ವಚ್ಛತೆಗೆ ಆದ್ಯತೆ ನೀಡುವುದಿಲ್ಲವೋ ಅವರಿಗೆ ಸಮಾಜದಲ್ಲಿ ಗೌರವಾದರಗಳೂ ಸಿಗುವುದಿಲ್ಲ. ಹೀಗಾಗಿ ಲಕ್ಷ್ಮಿಯ ಕೃಪೆಗೆ ಪಾತ್ರರಾಗಲು ಹಾಗೂ ಸಮಾಜದಲ್ಲಿ ಗೌರವ ಪಡೆಯಲು ಶುಭ್ರ ಬಟ್ಟೆಗಳನ್ನು ಧರಿಸಬೇಕು ಮತ್ತು ನಮ್ಮ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು.

ದಂತಪಂಕ್ತಿಗಳ ಶುದ್ಧತೆಯೂ ಮುಖ್ಯ ಎನ್ನುವುದನ್ನು ಚಾಣಕ್ಯ ಬಹಳ ವರ್ಷಗಳ ಹಿಂದೆಯೇ ಒತ್ತಿ ಹೇಳಿದ್ದಾರೆ. ಹಲ್ಲನ್ನು ಶುಭ್ರವಾಗಿಟ್ಟುಕೊಳ್ಳದೇ ಇದ್ದರೆ ಹಣ ನಮ್ಮ ಬಳಿಗೆ ಸುಳಿಯುವುದಿಲ್ಲ. ಯಾರು ಲಕ್ಷ್ಮಿ ಕೃಪೆಗೆ ಪಾತ್ರರಾಗಲು ಬಯಸುತ್ತಾರೋ ಅವರು ನಿತ್ಯವೂ ಹಲ್ಲುಜ್ಜುವುದರ ಬಗ್ಗೆಯೂ ಗಮನಹರಿಸಬೇಕು. ಇದು ಆರೋಗ್ಯದ ದೃಷ್ಟಿಯಿಂದಷ್ಟೇ ಅಲ್ಲದೆ ಆರ್ಥಿಕ ಲಾಭದ ನಿಟ್ಟಿನಲ್ಲೂ ಸಹಕಾರಿ.

ಅವಶ್ಯಕತೆಗಿಂತ ಹೆಚ್ಚು ತಿನ್ನುವವರು ಸದಾ ಬಡವರಾಗಿಯೇ ಉಳಿಯುತ್ತಾರೆ ಎಂಬುದು ಚಾಣಕ್ಯರ ಅಭಿಮತ. ಯಾವ ಮನುಷ್ಯ ಹೊಟ್ಟೆ ತುಂಬಿದ ನಂತರವೂ ಊಟಕ್ಕಾಗಿ ಹಾತೊರೆಯುತ್ತಾನೋ, ಹೊಟ್ಟೆಗೆ ಬೇಕಿರುವುದಕ್ಕಿಂತ ಹೆಚ್ಚು ತುಂಬಿಸಿಕೊಳ್ಳುತ್ತಾನೋ ಆತ ಉನ್ನತ ಮಟ್ಟಕ್ಕೆ ಏರಲು ಸಾಧ್ಯವಿಲ್ಲ. ಆದ್ದರಿಂದ ಹಸಿವು ನೀಗಿಸಿಕೊಳ್ಳಲಷ್ಟೇ ಊಟ ಮಾಡಬೇಕು ಮಿತಿಮೀರಿ ತಿನ್ನಬಾರದು.

ಸದಾ ಕಹಿ ಮಾತುಗಳನ್ನು ಆಡುವವರ ಬಳಿ ಲಕ್ಷ್ಮಿ ಸುಳಿಯುವುದಿಲ್ಲ. ಮಾತಿನ ಮೂಲಕ ಸದಾ ಇನ್ನೊಬ್ಬರನ್ನು ನೋಯಿಸುವುದು, ಹೀಯಾಳಿಸುವುದು, ಟೀಕಿಸುವುದು ಮಾಡುತ್ತಿದ್ದರೆ ಅವರು ಧನಿಕರಾಗಲಾರರು. ಜತೆಗೆ, ಯಾರ ಸ್ನೇಹವನ್ನೂ ಸಂಪಾದಿಸಲಾರರು ಎನ್ನುವುದು ಚಾಣಕ್ಯರ ನುಡಿ.

ನಿದ್ರೆ ನಮ್ಮ ದೇಹಕ್ಕೆ ವಿಶ್ರಾಂತಿ ಒದಗಿಸುವ ಅತ್ಯವಶ್ಯಕ ವಿಧಾನ ಹೌದಾದರೂ ಸೂರ್ಯೋದಯ ಹಾಗೂ ಸೂರ್ಯಾಸ್ತದ ಸಂದರ್ಭದಲ್ಲಿ ಮಲಗಿ ಕಾಲಹರಣ ಮಾಡುವವರು ಲಕ್ಷ್ಮಿ ಕೃಪೆಗೆ ಪಾತ್ರರಾಗುವುದು ಸಾಧ್ಯವಿಲ್ಲ. ಹೊತ್ತುಗೊತ್ತಿಲ್ಲದೆ ಮಲಗುವುದು, ಸೋಮಾರಿತನ ಪ್ರದರ್ಶಿಸುವುದು ಮಾಡಿದರೆ ಹಣ ನಮ್ಮ ಕೈಜಾರಿ ಹೋಗುತ್ತದೆ ಎಂದು ಚಾಣಕ್ಯ ಎಚ್ಚರಿಸಿದ್ದಾರೆ.

ಹಣವಂತರಾಗಲೇಬೇಕು, ಸಂಪತ್ತು ಗಳಿಸಲೇಬೇಕು ಎಂಬ ಹಟದಿಂದ ಅಡ್ಡದಾರಿ ಹಿಡಿಯುವವರಿಗೂ ಲಕ್ಷ್ಮಿ ಒಲಿಯುವುದಿಲ್ಲ ಎಂದು ಎಚ್ಚರಿಸಿರುವ ಚಾಣಕ್ಯ, ಸದಾ ಪ್ರಾಮಾಣಿಕತೆಯ ಮಾರ್ಗವನ್ನು ಅನುಸರಿಸಲು ಸಲಹೆ ನೀಡಿದ್ದಾರೆ. ಇನ್ನೊಬ್ಬರಿಗೆ ಮೋಸ ಮಾಡಿ, ಅನ್ಯಾಯದ ಹಾದಿ ತುಳಿದು ಸಂಪಾದನೆ ಮಾಡುವವರನ್ನು ಲಕ್ಷ್ಮಿ ಸದಾ ಬಡತನದ ಕೂಪಕ್ಕೆ ತಳ್ಳುತ್ತಾಳೆಯೇ ವಿನಃ ಕೈಹಿಡಿದು ಮೇಲೆತ್ತುವುದಿಲ್ಲ ಎನ್ನುವುದು ಕೌಟಿಲ್ಯರ ಅಭಿಪ್ರಾಯ.

ಇದನ್ನೂ ಓದಿ: Chanakya Niti: ಚಾಣಕ್ಯ ನೀತಿ ಪಾಲನೆಯಿಂದ ಜೀವನದಲ್ಲಿ ಮಹತ್ತರ ಬದಲಾವಣೆ ಸಾಧ್ಯ; ಉತ್ತಮ ಜೀವನಕ್ಕೆ ಇಲ್ಲಿದೆ ಕೆಲವು ಅಂಶ

Published On - 12:18 pm, Tue, 18 May 21

ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ