Amavasya 2026: ಆಗಸ್ಟ್ 12ರಂದು ಅಮಾವಾಸ್ಯೆ; ಈ 4 ರಾಶಿಯವರಿಗೆ ಕಾದಿದೆ ಸಂಕಷ್ಟ!

ಹಿಂದೂ ಸಂಪ್ರದಾಯದಲ್ಲಿ ಅಮಾವಾಸ್ಯೆಗೆ ವಿಶೇಷ ಮಹತ್ವವಿದೆ, ಈ ದಿನ ಗ್ರಹಗಳ ಸಂಚಾರದಿಂದ ಕೆಲವು ರಾಶಿಗಳ ಜೀವನದಲ್ಲಿ ಏರಿಳಿತಗಳುಂಟಾಗುತ್ತವೆ. ಮುಖ್ಯವಾಗಿ ಮೇಷ, ಕನ್ಯಾ, ಧನು ಮತ್ತು ಕುಂಭ ರಾಶಿಯವರು ಹಣಕಾಸು, ಆರೋಗ್ಯ, ಮತ್ತು ಕಾರ್ಯ ಸ್ಥಗಿತದಂತಹ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ನಕಾರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚಿರುವ ಈ ಸಮಯದಲ್ಲಿ ಈ ನಾಲ್ಕು ರಾಶಿಯವರು ಅತ್ಯಂತ ಜಾಗರೂಕರಾಗಿರಬೇಕು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

Amavasya 2026: ಆಗಸ್ಟ್ 12ರಂದು ಅಮಾವಾಸ್ಯೆ; ಈ 4 ರಾಶಿಯವರಿಗೆ ಕಾದಿದೆ ಸಂಕಷ್ಟ!
ಅಮಾವಾಸ್ಯೆ

Updated on: Aug 11, 2026 | 8:42 AM

ಹಿಂದೂ ಸಂಪ್ರದಾಯ ಮತ್ತು ಜ್ಯೋತಿಷ್ಯ ಶಾಸ್ತ್ರದಲ್ಲಿ ಅಮಾವಾಸ್ಯೆಗೆ ಅತ್ಯಂತ ವಿಶೇಷವಾದ ಮಹತ್ವವಿದೆ. ಆಷಾಢ ಮಾಸದ ಕೊನೆಯ ಅಮಾವಾಸ್ಯೆಯನ್ನು ಆಗಸ್ಟ್ 12 ರಂದು ಆಚರಿಸಲಾಗುತ್ತದೆ. ಈ ದಿನದಂದು ನಕಾರಾತ್ಮಕ ಶಕ್ತಿಗಳ ಪ್ರಭಾವ ತುಸು ಹೆಚ್ಚಿರುತ್ತದೆ ಎಂದು ಹೇಳಲಾಗುತ್ತದೆ. ಜೊತೆಗೆ, ಅಮಾವಾಸ್ಯೆ ಮತ್ತು ಹುಣ್ಣಿಮೆಯ ಸಮಯದಲ್ಲಿ ಗ್ರಹ ಗತಿಗಳಲ್ಲಿ ಪ್ರಮುಖ ಬದಲಾವಣೆಗಳು ಸಂಭವಿಸುತ್ತವೆ. ಅಮಾವಾಸ್ಯೆಯಂದು ಜರುಗುವ ಗ್ರಹಗಳ ಸಂಚಾರ ಮತ್ತು ಬದಲಾವಣೆಗಳಿಂದಾಗಿ ಕೆಲವು ರಾಶಿಯವರ ಜೀವನದಲ್ಲಿ ಏರಿಳಿತಗಳು ಉಂಟಾಗಲಿವೆ. ಮುಖ್ಯವಾಗಿ ನಾಲ್ಕು ರಾಶಿಗಳ ಜನರು ಈ ಸಮಯದಲ್ಲಿ ಜಾಗರೂಕರಾಗಿರಬೇಕಾದ ಅಗತ್ಯವಿದೆ. ಆ ರಾಶಿಗಳು ಯಾವುವು ಮತ್ತು ಅವರು ಎದುರಿಸಬಹುದಾದ ಸವಾಲುಗಳೇನು ಎಂಬುದರ ವಿವರ ಇಲ್ಲಿದೆ.

ಮೇಷ ರಾಶಿ:

ಮೇಷ ರಾಶಿಯವರಿಗೆ ಈ ಅಮಾವಾಸ್ಯೆಯು ವಿವಿಧ ರೀತಿಯ ಸವಾಲುಗಳನ್ನು ತರಬಹುದು. ಈ ಸಮಯದಲ್ಲಿ ನೀವು ಕೈಗೆತ್ತಿಕೊಳ್ಳುವ ಕೆಲಸಗಳು ಹಠಾತ್ತಾಗಿ ಮಧ್ಯದಲ್ಲೇ ನಿಂತುಹೋಗುವ ಸಾಧ್ಯತೆ ಇದೆ. ಆರ್ಥಿಕ ನಷ್ಟ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಎದುರಾಗಬಹುದು. ಪ್ರತಿಯೊಂದು ಹೆಜ್ಜೆಯನ್ನೂ ಅತ್ಯಂತ ಎಚ್ಚರಿಕೆಯಿಂದ (ಹರಿತವಾದ ಚಾಕುವಿನ ಮೇಲೆ ನಡೆದಂತೆ) ಇಡುವುದು ಒಳ್ಳೆಯದು.

ಕನ್ಯಾ ರಾಶಿ:

ಕನ್ಯಾ ರಾಶಿಯವರು ಈ ಅವಧಿಯಲ್ಲಿ ಸಾಲದ ಸುಳಿಗೆ ಸಿಲುಕುವ ಸಾಧ್ಯತೆ ಹೆಚ್ಚು. ಆದಾಯದ ಮೂಲಗಳು ಕಡಿಮೆಯಾಗುವುದರಿಂದ ಆರ್ಥಿಕ ಮುಗ್ಗಟ್ಟು ಉಂಟಾಗಬಹುದು. ಯಾವುದೇ ಕೆಲಸ ಆರಂಭಿಸಿದರೂ ಅದು ಪೂರ್ಣಗೊಳ್ಳದೆ ಮಧ್ಯದಲ್ಲೇ ಸ್ಥಗಿತಗೊಳ್ಳಬಹುದು. ಮಾನಸಿಕ ಹಾಗೂ ದೈಹಿಕವಾಗಿ ಆಯಾಸ ಮತ್ತು ತೊಂದರೆಗಳು ಎದುರಾಗಬಹುದು. ಜ್ಯೋತಿಷ್ಯ ವಿದ್ವಾಂಸರ ಪ್ರಕಾರ, ಈ ಸಮಯದಲ್ಲಿ ಕನ್ಯಾ ರಾಶಿಯವರು ಎಷ್ಟು ತಾಳ್ಮೆಯಿಂದಿರುತ್ತಾರೋ ಅಷ್ಟು ಒಳ್ಳೆಯದು.

ಇದನ್ನೂ ಓದಿ: ತಪ್ಪಿಯೂ ಈ ದಿನ ದೇವರ ಕೋಣೆಯನ್ನು ಸ್ವಚ್ಛಗೊಳಿಸಬೇಡಿ; ಸರಿಯಾದ ನಿಯಮ ಇಲ್ಲಿದೆ

ಧನು ರಾಶಿ:

ಧನು ರಾಶಿಯ ಜನರಿಗೆ ಅನಿರೀಕ್ಷಿತ ರೀತಿಯಲ್ಲಿ ತೊಂದರೆಗಳು ಎದುರಾಗುವ ಲಕ್ಷಣಗಳಿವೆ. ಮನೆಯಲ್ಲಿ ಶುಭ ಕಾರ್ಯಗಳನ್ನು ನೆರವೇರಿಸಲು ನೀವು ಬಹುದಿನಗಳಿಂದ ಯೋಜಿಸುತ್ತಿದ್ದರೂ, ಅದು ಪೂರ್ಣಗೊಳ್ಳದೆ ಮುಂದೂಡಲ್ಪಡಬಹುದು. ಮನೆಯಲ್ಲಿ ಸಣ್ಣಪುಟ್ಟ ವಿಚಾರಗಳಿಗೂ ವಿವಾದಗಳು ಉಂಟಾಗಿ ಮಾನಸಿಕ ಶಾಂತಿ ಭಂಗವಾಗಬಹುದು. ಕೈಯಲ್ಲಿರುವ ಹಣ ನೀರಂತೆ ಬೇಗನೆ ಖರ್ಚಾಗುವ ಸನ್ನಿವೇಶ ನಿರ್ಮಾಣವಾಗಲಿದೆ.

ಕುಂಭ ರಾಶಿ:

ಕುಂಭ ರಾಶಿಯವರು ಈ ಸಮಯದಲ್ಲಿ ತಮ್ಮ ಆರೋಗ್ಯದ ಕುರಿತು ಹೆಚ್ಚಿನ ಕಾಳಜಿ ವಹಿಸುವುದು ಅತ್ಯಗತ್ಯ. ಮಾನಸಿಕ ಮತ್ತು ದೈಹಿಕವಾಗಿ ಸಾಕಷ್ಟು ಕಿರಿಕಿರಿ ಅನುಭವಿಸಬೇಕಾಗಬಹುದು. ಸಮಸ್ಯೆಯೊಂದು ಬಗೆಹರಿಯಿತು ಎಂದುಕೊಳ್ಳುವಷ್ಟರಲ್ಲೇ ಅದು ಮತ್ತಷ್ಟು ದೊಡ್ಡದಾಗಿ ಬೆಳೆದು, ಹೊಸ ಸಮಸ್ಯೆಗೆ ಹಾದಿ ಮಾಡಿಕೊಡಬಹುದು. ಅನಿರೀಕ್ಷಿತ ವಿವಾದಗಳಲ್ಲಿ ಸಿಲುಕಿಕೊಳ್ಳುವ ಸಾಧ್ಯತೆ ಇರುವುದರಿಂದ, ಪ್ರತಿಯೊಂದು ಮಾತಿನಲ್ಲೂ ಮತ್ತು ನಿರ್ಧಾರದಲ್ಲೂ ಜಾಗರೂಕರಾಗಿರಲು ವಿದ್ವಾಂಸರು ಸಲಹೆ ನೀಡುತ್ತಾರೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us