AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

54 ವರ್ಷದ ಹಿಂದೆಯೇ 2024ರಲ್ಲಿ ಸಂಭವಿಸುವ  ಸೂರ್ಯಗ್ರಹಣದ ಬಗ್ಗೆ ಇತ್ತು ಮಾಹಿತಿ, ಈ ಗ್ರಹಣದ ಪರಿಣಾಮ ಹೇಗಿರಲಿದೆ?  

2024ರಲ್ಲಿ ಸಂಭವಿಸುವ ಸಂಪೂರ್ಣ ಸೂರ್ಯಗ್ರಹಣದ ಬಗ್ಗೆ 1970ರಲ್ಲಿಯೇ ಓಹಿಯೋ ಎಂಬ ಪತ್ರಿಕೆ ಮುನ್ಸೂಚನೆ ನೀಡಿರುವ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರೆಲ್ ಆಗಿದೆ. ಓಹಿಯೋದ 54 ವರ್ಷದ ಹಿಂದಿನ ಪತ್ರಿಕೆಯಲ್ಲಿ "2024 ರಲ್ಲಿ ಬರುವ ಗ್ರಹಣವನ್ನು ಮಿಲಿಯನ್ ಜನರು ವೀಕ್ಷಿಸುತ್ತಾರೆ" ಎಂಬ ಶೀರ್ಷಿಕೆ ಅಡಿಯಲ್ಲಿ ಪ್ರಕಟವಾದ ಲೇಖನದ ಕ್ಲಿಪಿಂಗ್ ಈಗ ಜನರನ್ನು ನಿಬ್ಬೆರಗಾಗಿಸಿದೆ.

54 ವರ್ಷದ ಹಿಂದೆಯೇ 2024ರಲ್ಲಿ ಸಂಭವಿಸುವ  ಸೂರ್ಯಗ್ರಹಣದ ಬಗ್ಗೆ ಇತ್ತು ಮಾಹಿತಿ, ಈ ಗ್ರಹಣದ ಪರಿಣಾಮ ಹೇಗಿರಲಿದೆ?  
2024ರಲ್ಲಿ ಸಂಭವಿಸುವ ಸಂಪೂರ್ಣ ಸೂರ್ಯಗ್ರಹಣ
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​|

Updated on:Mar 21, 2024 | 5:03 PM

Share

ಮುಂದೆ ನಡೆಯಲಿರುವ ಘಟನೆಗಳನ್ನು ಊಹಿಸಲು ಸಾಧ್ಯವಾಗುತ್ತದೆ ಎಂಬುದನ್ನು ನಾವು ಕೇಳಿದ್ದೆವು, ಕೆಲವು ಬಾರಿ ಅದು ಅನುಭವಕ್ಕೆ ಬಂದಿರಬಹುದು ಆದರೆ ಮುಂದಿನ ಹಲವು ವರ್ಷಗಳ ನಂತರ ಬರಬಹುದಾದ ಸೂರ್ಯ ಗ್ರಹಣವನ್ನು ಪ್ರತ್ರಿಕೆಯೊಂದು  54 ವರ್ಷಗಳ ಹಿಂದೆಯೇ ಊಹೆ ಮಾಡಿತ್ತು ಎಂದರೆ ನಂಬುತ್ತೀರಾ? ಆಶ್ಚರ್ಯ ಎನಿಸಿದರೂ ಸತ್ಯ. ಕೆಲವು ಲೆಕ್ಕಾಚಾರಗಳಿಂದ ಇದು ಸಾಧ್ಯವಾದರೂ ಕೂಡ ಇದನ್ನು ಸ್ಪಷ್ಟವಾಗಿ ಹೇಳುವುದು ಸುಲಭವಲ್ಲ. ಆದರೆ 2024 ರಲ್ಲಿ ಸಂಭವಿಸುವ ಸಂಪೂರ್ಣ ಸೂರ್ಯಗ್ರಹಣದ ಬಗ್ಗೆ 1970 ರಲ್ಲಿಯೇ ಓಹಿಯೋ ಎಂಬ ಪತ್ರಿಕೆ ಮುನ್ಸೂಚನೆ ನೀಡಿರುವ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರೆಲ್ ಆಗಿದೆ. ಓಹಿಯೋದ 54 ವರ್ಷದ ಹಿಂದಿನ ಪತ್ರಿಕೆಯಲ್ಲಿ “2024 ರಲ್ಲಿ ಬರುವ ಗ್ರಹಣವನ್ನು ಮಿಲಿಯನ್ ಜನರು ವೀಕ್ಷಿಸುತ್ತಾರೆ” ಎಂಬ ಶೀರ್ಷಿಕೆ ಅಡಿಯಲ್ಲಿ ಪ್ರಕಟವಾದ ಲೇಖನದ ಕ್ಲಿಪಿಂಗ್ ಈಗ ಜನರನ್ನು ನಿಬ್ಬೆರಗಾಗಿಸಿದೆ. ಈ ಸಂಪೂರ್ಣ ಸೂರ್ಯಗ್ರಹಣವು ಎ. 8 ರಂದು ಸಂಭವಿಸಲಿದೆ. ಇದು ಉತ್ತರ ಅಮೆರಿಕ, ಮೆಕ್ಸಿಕೊ ಮತ್ತು ಕೆನಡಾದಲ್ಲಿ 4 ನಿಮಿಷ 28 ಸೆಕೆಂಡುಗಳ ಕಾಲ ಗೋಚರಿಸುತ್ತದೆ ಎಂದು ಅಂದಾಜಿಸಲಾಗಿದೆ.

ಚಂದ್ರನು ಭೂಮಿ ಮತ್ತು ಸೂರ್ಯನ ನಡುವೆ ಹಾದುಹೋದಾಗ, ಸೂರ್ಯನ ಬೆಳಕು ಭೂಮಿಯನ್ನು ತಲುಪುವುದಿಲ್ಲ. ಈ ವಿದ್ಯಮಾನವನ್ನು ಸೂರ್ಯಗ್ರಹಣ ಎಂದು ಕರೆಯಲಾಗುತ್ತದೆ. ಏಪ್ರಿಲ್ 8 ರಂದು, ಸೋಮವಾರ, ವರ್ಷದ ಮೊದಲ ಸೂರ್ಯಗ್ರಹಣ ಸಂಭವಿಸಲಿದೆ. ಸೂರ್ಯಗ್ರಹಣವು ಈ ದಿನ ರಾತ್ರಿ 9:12 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಮಧ್ಯರಾತ್ರಿ 1:25 ಕ್ಕೆ ಕೊನೆಗೊಳ್ಳುತ್ತದೆ. ಈ ಗ್ರಹಣವು ಮೀನ ರಾಶಿಯಲ್ಲಿ ಸಂಭವಿಸಲಿದೆ. ಆದರೆ ಗೋಚರವಾಗುವುದು ಕೇವಲ 4 ನಿಮಿಷ 28 ಸೆಕೆಂಡುಗಳು ಮಾತ್ರ.

ದಕ್ಷಿಣ ಪೆಸಿಫಿಕ್ ಮಹಾಸಾಗರದಲ್ಲಿ ಪ್ರಾರಂಭವಾಗುವ ಸಂಪೂರ್ಣ ಸೂರ್ಯ ಗ್ರಹಣವು ಮೆಕ್ಸಿಕೊ, ಬಳಿಕ ಟೆಕ್ಸಾಸ್ನಲ್ಲಿ ಅಮೆರಿಕವನ್ನು ನಂತರ ಒಕ್ಲಹೋಮ, ಅರ್ಕಾನ್ಸಾಸ್, ಮಿಸ್ಸೌರಿ, ಇಲಿನಾಯ್ಸ್, ಕೆಂಟುಕಿ, ಇಂಡಿಯಾನಾ, ಓಹಿಯೋ, ಪೆನ್ಸಿಲ್ವೇನಿಯಾ, ನ್ಯೂಯಾರ್ಕ್, ವರ್ಮಾಂಟ್, ನ್ಯೂ ಹ್ಯಾಂಪ್ಶೈರ್ ಮತ್ತು ಮೈನೆ ಮೂಲಕ ಹಾದು ಹೋಗುತ್ತದೆ. ಟೆನ್ನೆಸ್ಸಿ ಮತ್ತು ಮಿಚಿಗನ್ ನ ಸಣ್ಣ ಭಾಗಗಳಲ್ಲಿಯೂ ಸಹ ಸಂಪೂರ್ಣ ಸೂರ್ಯ ಗ್ರಹಣದ ಅನುಭವವಾಗಲಿದೆ ಎಂದು ನಾಸಾ ತಿಳಿಸಿದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಹೋಳಿ ಆಚರಣೆ ಹೀಗಿರಬೇಕು? ಈ ಪದ್ಧತಿಯನ್ನು ಪಾಲಿಸಿ

ಈ ಪೋಸ್ಟ್ ನೋಡಿದ ನೆಟ್ಟಿಗರು “ಮುಂದೆ ನಡೆಯಲಿರುವ ಘಟನೆಗಳ ಬಗ್ಗೆ ಹಿಂದೆಯೇ ಊಹಿಸಿರುವುದು ಆಶ್ಚರ್ಯಕರವಾಗಿದೆ” ಎಂದಿದ್ದಾರೆ.  ಇನ್ನು ಕೆಲವರು ಬ್ರಹ್ಮಾಂಡದ ವಿಸ್ಮಯಗಳ ಬಗ್ಗೆ ಕುತೂಹಲ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ವಿಜ್ಞಾನ ಮತ್ತು ಇತಿಹಾಸ ಒಂದೇ ಪತ್ರಿಕೆಯ ಪುಟದಲ್ಲಿ ಹೆಣೆದುಕೊಂಡಿವೆ ಎಂದು ಪ್ರತಿಕ್ರಿಯಿಸಿದ್ದಾರೆ.  ಮತ್ತೊಂದಿಷ್ಟು ಜನ “ಹಿಂದಿನ ಭವಿಷ್ಯ ವಾಣಿಗಳು ಇಂದಿಗೂ ನಮ್ಮನ್ನು ಕುತೂಹಲಗೊಳಿಸುತ್ತಿವೆ ಎಂಬುದು ನಿಜವಾಗಿಯೂ ನಂಬಲಾಗುತ್ತಿಲ್ಲ ಎಂದಿದ್ದಾರೆ. ಈ ಪೋಸ್ಟ್ ನೋಡಿದ ಹಲವಾರು ಜನ “ಇತಿಹಾಸ ಮತ್ತು ಬ್ರಹ್ಮಾಂಡದ ನಡುವಿನ ಸಂಬಂಧವು ನಿಜವಾಗಿಯೂ ಕಾಲಾತೀತವಾಗಿದೆ” ಎಂದಿದ್ದಾರೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 5:02 pm, Thu, 21 March 24