Holi 2024: ಕರ್ನಾಟಕದಲ್ಲಿ ಹೋಳಿ ಆಚರಣೆ ಹೀಗಿರಬೇಕು? ಈ ಪದ್ಧತಿಯನ್ನು ಪಾಲಿಸಿ
ಹೋಳಿ ಅಥವಾ ಓಕುಳಿಯನ್ನು ದೇಶದ ವಿವಿಧ ಭಾಗಗಳಲ್ಲಿ ವಿಭಿನ್ನ ರೀತಿಯಲ್ಲಿ ಸಂತೋಷ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತದೆ. ಈ ಬಾರಿ ಫಾಲ್ಗುಣ ಮಾಸದ ಹುಣ್ಣಿಮೆ ತಿಥಿಯಂದು ಅಂದರೆ ಮಾ. 25 ರಂದು ಹೋಳಿ ಹಬ್ಬವನ್ನು ಆಚರಿಸಲಾಗುವುದು. ಈ ಆಚರಣೆಯ ಹಿಂದೆ ಹಲವಾರು ಪೌರಾಣಿಕ ಕಥೆಗಳಿವೆ. ಆ ಪ್ರಕಾರವಾಗಿ ಹಬ್ಬವನ್ನು ವಿವಿಧ ನಂಬಿಕೆ ಅನುಗುಣವಾಗಿ ಸಂಭ್ರಮದಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಹಾಗಾದರೆ ಯಾವ ಭಾಗದಲ್ಲಿ ಹೇಗೆ ಆಚರಿಸಲಾಗುತ್ತದೆ? ಎಂಬುದರ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.
ಹೋಳಿ ಹಬ್ಬವು ಹಿಂದೂಗಳ ಅತ್ಯಂತ ಪ್ರಸಿದ್ಧ ಮತ್ತು ದೇಶಾದ್ಯಂತ ಆಚರಿಸಲಾಗುವ ಅತ್ಯಂತ ವರ್ಣರಂಜಿತ ಹಬ್ಬಗಳಲ್ಲಿ ಒಂದಾಗಿದೆ. ಹೋಳಿ ಅಥವಾ ಓಕುಳಿಯನ್ನು ದೇಶದ ವಿವಿಧ ಭಾಗಗಳಲ್ಲಿ ವಿಭಿನ್ನ ರೀತಿಯಲ್ಲಿ ಸಂತೋಷ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತದೆ. ಈ ಬಾರಿ ಫಾಲ್ಗುಣ ಮಾಸದ ಹುಣ್ಣಿಮೆ ತಿಥಿಯಂದು ಅಂದರೆ ಮಾ. 25 ರಂದು ಹೋಳಿ ಹಬ್ಬವನ್ನು ಆಚರಿಸಲಾಗುವುದು. ಈ ಆಚರಣೆಯ ಹಿಂದೆ ಹಲವಾರು ಪೌರಾಣಿಕ ಕಥೆಗಳಿವೆ. ಆ ಪ್ರಕಾರವಾಗಿ ಹಬ್ಬವನ್ನು ವಿವಿಧ ನಂಬಿಕೆ ಅನುಗುಣವಾಗಿ ಸಂಭ್ರಮದಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಹಾಗಾದರೆ ಯಾವ ಭಾಗದಲ್ಲಿ ಹೇಗೆ ಆಚರಿಸಲಾಗುತ್ತದೆ? ಎಂಬುದರ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.
ಭಾರತದ ವಿವಿಧ ಭಾಗಗಳಲ್ಲಿ ಈ ಹಬ್ಬವನ್ನು ಹೇಗೆ ಆಚರಿಸಲಾಗುತ್ತದೆ?
ಕರ್ನಾಟಕ
ಇಲ್ಲಿ ಹೋಳಿ ಹಬ್ಬವನ್ನು “ಕಾಮದಹನ” ಮಾಡುವ ಮೂಲಕ ಆಚರಿಸಲಾಗುತ್ತದೆ. ಜೊತೆಗೆ ಬಣ್ಣಗಳ ಜೊತೆಯಲ್ಲಿ ಆಟವಾಡುವ ಮೂಲಕ ಪರಸ್ಪರ ಪ್ರೀತಿ ಹಂಚುತ್ತಾರೆ. ಇದು ಫಾಲ್ಗುಣ ಮಾಸದ ಅಂತ್ಯವನ್ನು ಕೂಡ ಸೂಚಿಸುತ್ತದೆ.
ಮಥುರಾ ಮತ್ತು ವೃಂದಾವನ
ಹೋಳಿ ಆಚರಣೆಗಳು ಇಲ್ಲಿ ವಿಜೃಂಭಣೆಯಿಂದ ನಡೆಯುತ್ತದೆ. ಈ ಸ್ಥಳ ಭಗವಾನ್ ಕೃಷ್ಣನ ಜೀವನಕ್ಕೆ ಸಂಬಂಧಿಸಿವೆ. ಹಾಗಾಗಿ ಇಲ್ಲಿನ ದೇವಾಲಯಗಳಲ್ಲಿ, ಜನರು ಕೃಷ್ಣನ ಜೀವನದ ಘಟನೆಗಳನ್ನು ಅಭಿನಯಿಸುವ ಮೂಲಕ ಬಣ್ಣಗಳನ್ನು ಎರಚಿ ಓಕುಳಿ ಆಡುತ್ತಾರೆ.
ದೆಹಲಿ ಮತ್ತು ಉತ್ತರ ಪ್ರದೇಶ
ಇಲ್ಲಿನ ಜನರು ಅಪಾರ ಉತ್ಸಾಹದಿಂದ ಈ ಹಬ್ಬವನ್ನು ಆಚರಿಸುತ್ತಾರೆ, ಹಬ್ಬದ ದಿನ ವಿವಿಧ ರೀತಿಯ ತಿಂಡಿ ತಿನಿಸುಗಳನ್ನು ಮಾಡುತ್ತಾರೆ. ಹೋಳಿ ಹಬ್ಬದ ಮುನ್ನಾದಿನದಂದು, ಹೋಲಿಕಾ ಎಂಬ ರಾಕ್ಷಸನ ಸುಡುವ ಸಂಕೇತವಾಗಿ ಮನೆ, ದೇವಾಲಯಗಳಲ್ಲಿ ಹೆಚ್ಚು ಹೆಚ್ಚು ದೀಪಗಳನ್ನು ಹಚ್ಚುತ್ತಾರೆ.
ಇದನ್ನೂ ಓದಿ: ಚಂದ್ರ ಗ್ರಹಣದ ದಿನ ಗರ್ಭಿಣಿಯರು ಈ ತಪ್ಪುಗಳನ್ನು ಮಾಡಬೇಡಿ
ಪಂಜಾಬ್
ಹೋಳಿಯನ್ನು ಸಿಖ್ಖರು ಹೋಲಾ ಮೊಹಲ್ಲಾ ಎಂದು ಆಚರಿಸುತ್ತಾರೆ, ಇದು ಅವರಿಗೆ ಸಮರ ಕಲೆಗಳ ಆಚರಣೆಯಾಗಿದ್ದು, ಮಿಲಿಟರಿ ಶಕ್ತಿಯನ್ನು ಪ್ರದರ್ಶಿಸಲು ಮೆರವಣಿಗೆಗಳನ್ನು ಮಾಡುತ್ತಾರೆ. ಜೊತೆಗೆ ಮಸಾಲೆ ಮತ್ತು ಖಾರದ ಆಹಾರಗಳನ್ನು ಮಾಡಿ ಊಟವನ್ನು ಸವಿಯುತ್ತಾರೆ.
ಗುಜರಾತ್
ಇಲ್ಲಿ ಹೋಳಿ ಆಚರಣೆಯ ಸಮಯದಲ್ಲಿ ಸಂಗೀತ ಮತ್ತು ನೃತ್ಯದ ಜೊತೆಗೆ ಸಾಂಪ್ರದಾಯಿಕ ಗುಜರಾತಿ ಸಿಹಿ ತಿಂಡಿಗಳಾದ ಗುಜಿಯಾ ಮತ್ತು ಥಂಡೈ ಅನ್ನು ಸವಿಯಲಾಗುತ್ತದೆ. ಈ ದಿನ ಯುವಕರ ಗುಂಪುಗಳು ಬೀದಿಗಳಲ್ಲಿ ಮಜ್ಜಿಗೆಯ ಮಡಕೆಯನ್ನು ಎತ್ತರದಲ್ಲಿ ಕಟ್ಟಿ ಪಿರಮಿಡ್ಗಳನ್ನು ಮಾಡಿಕೊಳ್ಳುವ ಮೂಲಕ ಅದನ್ನು ಒಡೆಯುತ್ತಾರೆ. ಅಲ್ಲದೆ ಈ ಮಡಿಕೆಗಳಲ್ಲಿ ಕೆಲವರು ವಿವಿಧ ರೀತಿಯ ಬಣ್ಣಗಳನ್ನು ಕೂಡ ಸೇರಿಸಿರುತ್ತಾರೆ.
ಮಹಾರಾಷ್ಟ್ರ
ಇಲ್ಲಿ ಹೋಳಿಯನ್ನು ಬಹಳ ವಿಜೃಂಭಣೆ ಮತ್ತು ಉತ್ಸಾಹದಿಂದ ಆಚರಿಸುತ್ತಾರೆ. ಜನರು ಪರಸ್ಪರ ಬಣ್ಣ ಹಚ್ಚಿಕೊಳ್ಳುವ ಮೂಲಕ ಸಾರ್ವಜನಿಕ ಮೆರವಣಿಗೆಗಳನ್ನು ಮಾಡಿ ಧೋಲಕ್ ಅಥವಾ ಡೋಲಕ್ ಬಡಿತಕ್ಕೆ ನೃತ್ಯ ಮಾಡುತ್ತಾರೆ.
ಪಶ್ಚಿಮ ಬಂಗಾಳ
ಡೋಲ್ ಜಾತ್ರೆ ಮಾಡುವ ಮೂಲಕ ರಾಧಾ ಮತ್ತು ಕೃಷ್ಣರ ವಿಗ್ರಹಗಳಿಗೆ ಪೂಜೆ ಮಾಡಿ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ. ಇದಲ್ಲದೆ, ಇವರು ಸಾಂಪ್ರದಾಯಿಕ ಜಾನಪದ ರಾಗಗಳಿಗೆ ನೃತ್ಯ ಮಾಡುತ್ತಾರೆ ಮತ್ತು ಪರಸ್ಪರ ಬಣ್ಣ ಹಚ್ಚಿಕೊಳ್ಳುತ್ತಾರೆ.
ಬಿಹಾರ
ಸಾಂಪ್ರದಾಯಿಕ ಹಾಡುಗಳನ್ನು ಹಾಡುವ ಮೂಲಕ ಇಲ್ಲಿನ ಜನರು ಹೋಳಿ ಹಬ್ಬವನ್ನು ಆಚರಿಸುತ್ತಾರೆ. ಜೊತೆಗೆ “ಮಾಲ್ಪುವಾ” ಎಂದು ಕರೆಯಲ್ಪಡುವ ವಿಶಿಷ್ಟ ಆಹಾರವನ್ನು ತಯಾರಿಸುತ್ತಾರೆ. ಅಕ್ಕಪಕ್ಕದ ಮನೆಗಳಿಗೆ ತೆರಳಿ ಪರಸ್ಪರರ ಬಣ್ಣಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ.
ತಮಿಳುನಾಡು
ಈ ಭಾಗದಲ್ಲಿ ಹೋಳಿ ಹಬ್ಬವು ಭಾರತದ ಇತರ ಪ್ರದೇಶಗಳಲ್ಲಿರುವಷ್ಟು ಜನಪ್ರಿಯವಾಗಿಲ್ಲದಿದ್ದರೂ ಕೂಡ ಅಲ್ಲಿನ ಜನರು ಹೋಳಿ ಆಚರಿಸುತ್ತಾರೆ. ಕೆಲವು ಸ್ಥಳಗಳಲ್ಲಿ ಸಮಾನ ಮನಸ್ಕರು ಒಂದುಗೂಡುವ ಮೂಲಕ ಬಣ್ಣಗಳೊಂದಿಗೆ ಆಟವಾಡುತ್ತಾರೆ.
ಮಧ್ಯಪ್ರದೇಶ
ಇಂದೋರ್ ಮತ್ತು ಭೋಪಾಲ್ ನಂತಹ ಪಟ್ಟಣಗಳಲ್ಲಿ ಹೋಳಿಯನ್ನು ಸಾಂಪ್ರದಾಯಿಕವಾಗಿ ಆಚರಿಸಲಾಗುತ್ತದೆ. ಬಣ್ಣಗಳನ್ನು ಹಚ್ಚುವ ಮೂಲಕ ಜಾನಪದ ಹಾಡಿಗೆ ಧ್ವನಿಗೂಡಿಸುತ್ತಾ ನೃತ್ಯ ಮಾಡಲಾಗುತ್ತದೆ ಬಳಿಕ ಹಬ್ಬದ ಔತಣಗಳನ್ನು ಸವಿಯಲಾಗುತ್ತದೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ