ನೀವು ಅಶ್ವಿನೀ ನಕ್ಷತ್ರದಲ್ಲಿ ಜನಿಸಿದವರಾ? ಈ ಗುಣ ಖಂಡಿತ ನಿಮ್ಮಲ್ಲಿ ಇರುತ್ತೇ

| Updated By: ಅಕ್ಷಯ್​ ಪಲ್ಲಮಜಲು​​

Updated on: Sep 21, 2024 | 5:56 PM

ಅಶ್ವಿನೀ ನಕ್ಷತ್ರವು ಇಪ್ಪತ್ತೇಳು ನಕ್ಷತ್ರಗಳಲ್ಲಿ ಮೊದಲನೇ ನಕ್ಷತ್ರ. ಇದು ಆಕಾಶದಲ್ಲಿ ಕುದುರೆಯ ಮುಖದಂತೆ ಕಾಣುತ್ತದೆ. ಮೂರು ನಕ್ಷತ್ರಗಳ ಪುಂಜವಾಗಿ ಆಕಾಶದಲ್ಲಿ ತೋರುವುದು.‌ ಇದನ್ನು ಸರಳವಾಗಿ ನೋಡುವುದೆಂದರೆ ಚಂದ್ರನು ಯಾವಾಗ ಅಶ್ವಿನೀ ನಕ್ಷತ್ರದ ಬಳಿ ಬರುತ್ತಾನೆ ಅಂದು ಅದು ಸರಿಯಾಗಿ ಅರ್ಥವಾಗುತ್ತದೆ. ಈ ನಕ್ಷತ್ರದ ಅಧಿಪತಿ ಅಶ್ವಿನೀ ಕುಮಾರರು.

ನೀವು ಅಶ್ವಿನೀ ನಕ್ಷತ್ರದಲ್ಲಿ ಜನಿಸಿದವರಾ? ಈ ಗುಣ ಖಂಡಿತ ನಿಮ್ಮಲ್ಲಿ ಇರುತ್ತೇ
ಸಾಂದರ್ಭಿಕ ಚಿತ್ರ
Follow us on

ಜ್ಯೋತಿಷ್ಯದಲ್ಲಿ ಕೇವಲ‌ ಗ್ರಹ ಆಧಾರದ ಮೇಲೆ ವ್ಯಕ್ತಿಯ ಗುಣಾವಗುಣಗಳನ್ನು ಹೇಳುವುದಿಲ್ಲ.‌ ನಕ್ಷತ್ರದ ಪ್ರಕಾರವೂ ತಿಳಿಸುವ ಕ್ರಮವಿದೆ. ಗ್ರಹಗಳ ಮೂಲಕ ಭೂತ ಮತ್ತು ಭವಿಷ್ಯವನ್ನು ತಿಳಿದುಕೊಳ್ಳುವುದಾದರೆ ನಕ್ಷತ್ರದ ಮೂಲಕ ವರ್ತಮಾನವನ್ನು ತಿಳಿಯಲು ಸಾಧ್ಯ. ಆ ನಕ್ಷತ್ರದಲ್ಲಿ ಜನಿಸಿದವರು ನಕ್ಷತ್ರದ ಹಲವು ಅಂಶಗಳನ್ನು ಇಟ್ಟುಕೊಂಡಿರುತ್ತಾರೆ.

ಅಶ್ವಿನೀ ನಕ್ಷತ್ರವಾದರೆ?

ಅಶ್ವಿನೀ ನಕ್ಷತ್ರವು ಇಪ್ಪತ್ತೇಳು ನಕ್ಷತ್ರಗಳಲ್ಲಿ ಮೊದಲನೇ ನಕ್ಷತ್ರ. ಇದು ಆಕಾಶದಲ್ಲಿ ಕುದುರೆಯ ಮುಖದಂತೆ ಕಾಣುತ್ತದೆ. ಮೂರು ನಕ್ಷತ್ರಗಳ ಪುಂಜವಾಗಿ ಆಕಾಶದಲ್ಲಿ ತೋರುವುದು.‌ ಇದನ್ನು ಸರಳವಾಗಿ ನೋಡುವುದೆಂದರೆ ಚಂದ್ರನು ಯಾವಾಗ ಅಶ್ವಿನೀ ನಕ್ಷತ್ರದ ಬಳಿ ಬರುತ್ತಾನೆ ಅಂದು ಅದು ಸರಿಯಾಗಿ ಅರ್ಥವಾಗುತ್ತದೆ. ಈ ನಕ್ಷತ್ರದ ಅಧಿಪತಿ ಅಶ್ವಿನೀ ಕುಮಾರರು. ಇದು ದೇವಗಣಕ್ಕೆ ಸೇರಿದ‌ ನಕ್ಷತ್ರವಾಗಿದೆ.

ಈ ನಕ್ಷತ್ರದಲ್ಲಿ ಜನಿಸಿಸವರು…

ದೈವಭಕ್ತಿ :

ಈ ನಕ್ಷತ್ರದಲ್ಲಿ ಜನಿಸಿದವರಿಗೆ ದೈವಭಕ್ತಿ ಹೆಚ್ಚು. ನಿರಂತರವಾಗಿ ದೇವರ ಉಪಾಸನೆಯನ್ನು ಮಾಡುತ್ತಾರೆ ಅಥವಾ ಹೆಚ್ಚು ದೇವತೆಗಳಿಗೆ ಪ್ರೀತಿಕರವಾದ ಕಾರ್ಯವನ್ನು ಮಾಡುತ್ತಾರೆ.

ವಿನಯಶೀಲತೆ :

ಹಿರಿಯರಲ್ಲಿ ಗೌರವಕ್ಕೆ ಪಾತ್ರರಾದವರಲ್ಲಿ, ವಿದ್ಯಾವಂತರಲ್ಲಿ ವೀನತಭಾವವು ಇರುತ್ತದೆ. ಯಾರನ್ನೂ ಧಿಕ್ಕರಿಸಿ ಕಾರ್ಯವನ್ನು ಮಾಡಲು ಹೋಗುವುದಿಲ್ಲ. ತಮ್ಮ ಸಭ್ಯತೆಯ ಚೌಕಟ್ಟಿನಲ್ಲಿ ಇರುವರು.

ಸಾತ್ತ್ವಿಕ‌ ಮನಸ್ಸು :

ಸಕಾರಾತ್ಮಕ ಆಲೋಚನೆಗಳು ಇರುತ್ತವೆ. ‌ಯಾರಿಗೂ ತೊಂದರೆಯನ್ನು ಉಂಟುಮಾಡುವ ಯೋಚನೆಯನ್ನು ಮಾಡಲಾರರು. ಎಲ್ಲರಿಗೂ ಹಿತವನ್ನು, ಸುಖವನ್ನು ಬಯಸುವವರು ಇವರಾಗುವರು. ಬಲದಿಂದ ಕೂಡಿದವರೂ ಇವರಾಗುವರು.

ಇದನ್ನೂ ಓದಿ: ಗರುಡ ಪುರಾಣದಲ್ಲಿ ​ಸ್ವರ್ಗ-ನರಕ ಪ್ರಾಪ್ತಿಯ ವ್ಯಾಖ್ಯಾನ ಏನಿದೆ? ಮೋಕ್ಷ- ಶಿಕ್ಷೆಯ ಪರಿಧಿ ಏನಿದೆ?

ಸಂಪತ್ತಿನ ಪ್ರಾಪ್ತಿ :

ಇವರಿಗೆ ಬೇರೆ ಬೇರೆ ಸಂಪತ್ತುಗಳು ಕಾಲಾನಂತರದಲ್ಲಿ ಸಿಗಲಿವೆ. ಬಯಸಿದ ಎಲ್ಲ ಸಂಪತ್ತುಗಳನ್ನೂ ಇವರು ಪಡೆಯುವರು. ಇದರಿಂದ ಸಂತೋಷಪಡುವರು.

ಸ್ತ್ರೀ ಪ್ರೀತಿ :

ಇವರಿಗೆ ಎಲ್ಲರಿಂದ ಪ್ರೀತಿ ಗೌರವವಗಳು ಸಿಕ್ಕರೂ ಸ್ತ್ರೀಯರಿಂದ ಹೆಚ್ಚು ಗೌರವ ಪ್ರೀತಿ ಒಡನಾಟಗಳು ಇರುತ್ತವೆ. ಸ್ತ್ರೀಯರೂ ಇವರನ್ನು ಹೆಚ್ಚು ಇಷ್ಟಪಡುತ್ತಾರೆ.

ಮಕ್ಕಳಿಂದ ಸಂತೋಷ :

ಇವರಿಗೆ ಹೆಚ್ಚು ಸಂತಾನವು ಪ್ರಾಪ್ತಿಯಾಗುತ್ತದೆ. ಮಕ್ಕಳಿಂದ ಸಂತೋಷವು ಇವರಿಗೆ ಸಿಗುವುದು.

ಸುರೂಪ :

ಎಲ್ಲರನ್ನೂ ಆಕರ್ಷಿಸುವ ಎತ್ತರ ಮೈಕಟ್ಟು ಮತ್ತು ನೋಡಲು ಅತ್ಯಂತ ಸುಂದರವಾದ ರೂಪಗಳನ್ನು ಇವರು ಹೊಂದಿರುತ್ತಾರೆ.

ಕಾರ್ಯದಲ್ಲಿ ದಕ್ಷ :

ಯಾವ ಕಾರ್ಯವನ್ನಾದರೂ ನಿರ್ವಹಿಸುವ, ಮಾಡುವ ದಕ್ಷತೆ ಇವರಲ್ಲಿ‌ ಇರುವುದು. ಎಲ್ಲರನ್ನೂ ನಿಭಾಯಿಸುವ ಶಕ್ತಿಯು ಇವರಿಗೆ ಬರುವುದು.

ಈ ಎಲ್ಲ ಲಕ್ಷಣಗಳನ್ನು ಹುಟ್ಟುವಾಗ ಇಟ್ಟುಕೊಂಡಿದ್ದರೂ ಕಾಲಕ್ರಮೇಣ ಎಲ್ಲವೂ ಪ್ರಾಪ್ತವಾಗುವುದು.

-ಲೋಹಿತ ಹೆಬ್ಬಾರ್ – 8762924271