ನಾಗಮಂಗಲ: ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ಒಟ್ಟಾಗಿ ಗಣೇಶ ವಿಸರ್ಜನೆ
ಅಪರೂಪದ ಘಟನೆಗೆ ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಕೊಪ್ಪ ಪಟ್ಟಣ ಸಾಕ್ಷಿಯಾಗಿದೆ. ಹಿಂದೂ ಮುಸ್ಲಿಂ ಯುವಕರು ಒಟ್ಟಾಗಿ ಸೇರಿ ಗಣೇಶನ ವಿಸರ್ಜನೆ ಮಾಡಿದ್ದಾರೆ. ಗಣೇಶನ ವಿಸರ್ಜನೆ ವೇಳೆ ಮುಸ್ಲಿಂ ಯುವಕರು ಕೂಡ ಭಾಗಿಯಾಗಿದ್ದು ಪರಸ್ಪರ ಟೋಪಿ, ಶಾಲು ಹಾಕಿ ಸಾಮರಸ್ಯ ತೋರಿದ್ದಾರೆ.
ಮಂಡ್ಯ, ಸೆ.21: ಒಂದೆಡೆ ಕೋಮುಗಲಭೆಯಿಂದ ಮಂಡ್ಯ ಜಿಲ್ಲೆ ನಾಗಮಂಗಲ ಹೊತ್ತಿ ಉರಿದಿದೆ. ಮತ್ತೊಂದೆಡೆ ಗಣೇಶನ ಮೂರ್ತಿ ವಿಸರ್ಜನೆ ವೇಳೆ ಹಿಂದೂ ಮುಸ್ಲಿಂ ಯುವಕರು ಒಟ್ಟಾಗಿ ಕೈ ಜೋಡಿಸಿ ಭಾವೈಕ್ಯತೆ ಮೆರೆದಿದ್ದಾರೆ. ಗಣೇಶನ ವಿಸರ್ಜನೆ ವೇಳೆ ಮುಸ್ಲಿಂ ಯುವಕರು ಕೂಡ ಭಾಗಿಯಾಗಿದ್ದು ಪರಸ್ಪರ ಟೋಪಿ, ಶಾಲು ಹಾಕಿ ಸಾಮರಸ್ಯ ತೋರಿದ್ದಾರೆ. ಮುಸ್ಲಿಂ ಯುವಕ ಹಿಂದೂ ಯುವಕನಿಗೆ ಟೋಪಿ ಹಾಕಿದ್ದು ಹಿಂದೂ ಯುವಕ ಮುಸ್ಲಿಂ ಯುವಕನಿಗೆ ಕೇಸರಿ ಶಾಲು ಹಾಕಿದ್ದಾನೆ. ಮುಸ್ಲಿಂ ಯುವಕ ಗಣೇಶ ಮೂರ್ತಿ ಇದ್ದ ಟ್ರಾಕ್ಟರ್ ಚಾಲನೆ ಮಾಡಿದ್ದಾನೆ. ಹಿಂದೂ ಮುಸ್ಲಿಂ ಯುವಕರು ಒಟ್ಟಾಗಿ ಸೇರಿ ಗಣೇಶನ ವಿಸರ್ಜನೆ ಮಾಡಿದ್ದಾರೆ. ಅಪರೂಪದ ಘಟನೆಗೆ ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಕೊಪ್ಪ ಪಟ್ಟಣ ಸಾಕ್ಷಿಯಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ
Published On - 1:14 pm, Sat, 21 September 24