
ಜ್ಯೋತಿಷ್ಯದ ಪ್ರಕಾರ, ಯಾವಾಗೆಂದರೆ ಆವಾಗ ಕೂದಲು ಕತ್ತರಿವುಸುವುದು ಅಥವಾ ಗಡ್ಡ ತೆಗೆಯುವುದು ಒಳ್ಳೆಯದಲ್ಲ. ಉಗುರು, ಕೂದಲು ಕತ್ತರಿಸುವಂತಹ ದೈನಂದಿನ ಚಟುವಟಿಕೆಗಳಿಗೆ ಶುಭ ಮತ್ತು ಅಶುಭ ದಿನಗಳಿವೆ. ಸಾಕಷ್ಟು ಪುರುಷರು ಶುಭ ಅಶುಭ ದಿನಗಳನ್ನು ಲೆಕ್ಕಿಸದೇ ಹೋಗಿ ಶೇವಿಂಗ್ ಮಾಡಿಕೊಂಡು ಬರುತ್ತಾರೆ. ಆದರೆ ಇಂತಹ ಅಭ್ಯಾಸಗಳು ಒಳ್ಳೆಯದಲ್ಲ ಎಂದು ಜ್ಯೋತಿಷ್ಯಶಾಸ್ತ್ರಜ್ಞರು ಎಚ್ಚರಿಸುತ್ತಾರೆ.
ಧಾರ್ಮಿಕ ನಂಬಿಕೆಗಳು ಸೋಮವಾರದಂದು ಶೇವಿಂಗ್ ಮಾಡುವುದು ಅಶುಭ ಎಂದು ಹೇಳಲಾಗುತ್ತದೆ. ಸೋಮವಾರ ಶಿವನಿಗೆ ಅರ್ಪಿತವಾದ ದಿನ. ಈ ದಿನ ಕೂದಲನ್ನು ಕತ್ತರಿಸುವುದರಿಂದ ಮಾನಸಿಕ ತೊಂದರೆ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ. ಇದಲ್ಲದೇ ಸೋಮವಾರದಂದು ಕೂದಲು ಕತ್ತರಿಸುವುದರಿಂದ ಅಕಾಲಿಕ ಮರಣ ಸಂಭವಿಸುತ್ತದೆ ಎಂಬ ಧಾರ್ಮಿಕ ನಂಬಿಕೆ ಇದೆ. ಶಿವನ ಭಕ್ತ ಅಥವಾ ತನ್ನ ಮಗನ ಕಲ್ಯಾಣವನ್ನು ಬಯಸುವ ವ್ಯಕ್ತಿಯು ಸೋಮವಾರದಂದು ಕೂದಲು ಅಥವಾ ಗಡ್ಡವನ್ನು ಕತ್ತರಿಸಬಾರದು ಎಂದು ಹೇಳಲಾಗುತ್ತದೆ.
ಇದನ್ನೂ ಓದಿ: ಮದುವೆ ಸಮಯದಲ್ಲಿ ಅಲಂಕೃತ ತೆಂಗಿನಕಾಯಿ ಬಳಸುವುದು ಶುಭವೇ?
ಪ್ರಸಿದ್ಧ ಸಂತ ಪ್ರೇಮಾನಂದ ಮಹಾರಾಜ್ ಅವರ ಪ್ರಕಾರ, ಸೋಮವಾರದಂದು ಕೂದಲು ಅಥವಾ ಗಡ್ಡವನ್ನು ಕತ್ತರಿಸಬಾರದು. ಸೋಮವಾರದಂದು ಕೂದಲು ಕತ್ತರಿಸುವುದರಿಂದ ಜಾತಕದಲ್ಲಿ ಚಂದ್ರನ ಸ್ಥಾನ ದುರ್ಬಲಗೊಳ್ಳುತ್ತದೆ ಮತ್ತು ಇದು ಮಾನಸಿಕ ಅಸ್ವಸ್ಥತೆಗೆ ಕಾರಣವಾಗಬಹುದು ಎಂದು ಹೇಳಿದ್ದಾರೆ.
ಮಂಗಳವಾರ ಮತ್ತು ಶನಿವಾರದಂದು ಕೂಡ ಕೂದಲು ಕತ್ತರಿಸುವುದು ಅಥವಾ ಗಡ್ಡ ಬೋಳಿಸುವುದು ಒಳ್ಳೆಯದಲ್ಲ. ಆದ್ದರಿಂದ ಕೂದಲು, ಉಗುರು ಕತ್ತರಿಸಲು ಬುಧವಾರ ಮತ್ತು ಶುಕ್ರವಾರ ಮೀಸಲಿಡಿ. ಈ ಎರಡು ದಿನವನ್ನು ಶುಭವೆಂದು ಪರಿಗಣಿಸಲಾಗುತ್ತದೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ