AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Astrology: ಈ 4 ರಾಶಿಯವರು ಅದೆಂಥ ಅದ್ಭುತ ಕೇಳುಗರು ಗೊತ್ತೆ?

Good listener zodiac signs: ಈ ನಾಲ್ಕು ರಾಶಿಯವರು ಅದ್ಭುತ ಕೇಳುಗರು. ಇತರರು ಇವರ ಮುಂದೆ ಹೇಳಿಕೊಳ್ಳುವ ವಿಚಾರವನ್ನು ಶ್ರದ್ಧೆಯಿಂದ ಕೇಳಿಸಿಕೊಳ್ಳುತ್ತಾರೆ. ತರ್ಕಬದ್ಧವಾಗಿ ಪರಿಹಾರವನ್ನೂ ಹೇಳುತ್ತಾರೆ.

Astrology: ಈ 4 ರಾಶಿಯವರು ಅದೆಂಥ ಅದ್ಭುತ ಕೇಳುಗರು ಗೊತ್ತೆ?
ರಾಶಿಚಕ್ರದ ಚಿಹ್ನೆಗಳು
Follow us
Srinivas Mata
|

Updated on: Apr 22, 2021 | 4:03 PM

ಎದುರಿಗಿರುವ ವ್ಯಕ್ತಿ ತನಗೆ ಸಂಬಂಧಿಸಿದ ಸಂಗತಿಯನ್ನೇ ಮಾತನಾಡುತ್ತಿದ್ದರೂ ಅದಕ್ಕೂ ತನಗೂ ಏನೇನೂ ಸಂಬಂಧವಿಲ್ಲವೇನೋ ಎಂಬಂತೆ ನಡೆದುಕೊಳ್ಳುವವರನ್ನು ನಾವು ಈಗಿನ ದಿನಮಾನದಲ್ಲಿ ನೋಡುತ್ತಿರುತ್ತೇವೆ. ತಮಗೆ ಅನಿಸಿದ್ದನ್ನು ಹೇಳುವ, ಅದೇ ಸತ್ಯ ಎಂದು ಸಾಬೀತು ಮಾಡುವ ಉಮ್ಮೇದಿಯೇ ಹೆಚ್ಚಿರುವ ಮಂದಿ ಪ್ರತಿ ನಿತ್ಯವೂ ಕಾಣಸಿಗುತ್ತಾರೆ. ತಮ್ಮಷ್ಟಕ್ಕೆ ಹೇಳುತ್ತಾ ಹೋಗಬೇಕು, ಎದುರಿಗೆ ಇರುವವರು ಅದನ್ನು ಕೇಳಿಸಿಕೊಂಡು ತಲೆಯಾಡಿಸುತ್ತಿರಬೇಕು ಎಂಬುದಷ್ಟೇ ಇವರ ನಿರೀಕ್ಷೆ ಆಗಿರುತ್ತದೆ. ಆದರೆ ಯಾವುದೋ ಒಂದು ನಿರ್ಧಾರ ಮಾಡಬೇಕಿದ್ದಲ್ಲಿ, ಅದರಲ್ಲಿ ನಾಲ್ಕು ಜನರ ಹಿತವೂ ಇದ್ದಾಗ ಇತರರ ಮಾತನ್ನೂ ಕೇಳಿಸಿಕೊಂಡು ತೀರ್ಮಾನವನ್ನು ಕೈಗೊಳ್ಳಬೇಕು. ಇದು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ. ಈ ರಾಶಿಗಳವರು ಅದ್ಭುತ ಕೇಳುಗರು.

ಎದುರಿನವರು ಮಾತನಾಡುವಾಗ ಶ್ರದ್ಧೆಯಿಂದ ಕೇಳಿಸಿಕೊಳ್ಳುವ ಈ ನಾಲ್ಕು ರಾಶಿಯವರ ಈ ಸ್ವಭಾವವು ಇವರ ಪಾಲಿಗೆ ಅವಕಾಶಗಳಾಗಿಯೂ ಪರಿವರ್ತನೆ ಆಗುತ್ತದೆ. ಅಂದ ಹಾಗೆ ನಿಮ್ಮದು ಯಾವ ರಾಶಿ, ನೀವು ಒಳ್ಳೆ ಕೇಳಗುರಾ ಎಂಬ ಬಗ್ಗೆ ಈ ಲೇಖನದಲ್ಲಿ ಮಾಹಿತಿ ಇದೆ.

ಮಿಥುನ ರಾಶಿ ಮಿಥುನ ರಾಶಿಯವರು ಸಾಮಾಜಿಕವಾಗಿ ಬಹಳ ಚಟುವಟಿಕೆಯಿಂದ ಇರುವ ಜನ. ಇವರು ಇತರರ ಜತೆ ಮಾತನಾಡುವುದನ್ನು ಮತ್ತು ತಮ್ಮ ದೃಷ್ಟಿಕೋನವನ್ನು ಮುಂದಿಡುವುದನ್ನು ಬಹಳ ಇಷ್ಟಪಡುತ್ತಾರೆ. ಜತೆಗೆ ಇವರು ಬೇರೆಯವರ ಸಲಹೆ ಕೇಳುವುದನ್ನೂ ಅಷ್ಟೇ ಇಷ್ಟ ಪಡುತ್ತಾರೆ. ಎದುರಿನವರು ಮಾತನಾಡುವಾಗ ಧ್ಯಾನಸ್ಥರಂತೆ ಕೇಳಿಸಿಕೊಳ್ಳುತ್ತಾರೆ. ಉತ್ತಮ ಉದ್ದೇಶ ಇರಿಸಿಕೊಂಡು, ತರ್ಕಬದ್ಧವಾಗಿ ಸಲಹೆ ನೀಡುವ ವಿಚಾರಕ್ಕೆ ಮಿಥುನರಾಶಿಯವರ ಮೇಲೆ ವಿಶ್ವಾಸ ಇಡಬಹುದಾಗಿದೆ.

ಕರ್ಕಾಟಕ ರಾಶಿ ಕರ್ಕಾಟಕ ರಾಶಿಯ ಜನರು ಭಾವನಾಜೀವಿಗಳು. ಇವರಿಗೆ ಉತ್ತಮ ಸಂಪರ್ಕ ಇರುತ್ತದೆ. ಬೇರೆಯವರು ನಿಮ್ಮ ಮಾತನ್ನು ಕೇಳಿಸಿಕೊಂಡಲ್ಲಿ ನೀವೆಷ್ಟು ಸಂತೋಷ ಪಡುತ್ತೀರಿ ಎಂಬ ಸಂಗತಿ ಈ ರಾಶಿಯವರಿಗೆ ಚೆನ್ನಾಗಿ ಗೊತ್ತು. ಇತರರು ಮಾತನಾಡುವಾಗ ಕರ್ಕಾಟಕ ರಾಶಿಯವರು ಸಮವೇದನಾಶೀಲತೆಯಿಂದ ನಡೆದುಕೊಳ್ಳುತ್ತಾರೆ. ಏನಾದರೂ ಸರಿ ತಮ್ಮ ಅಭಿಪ್ರಾಯವನ್ನು ಹೇಳಿಯೇ ಬಿಡಬೇಕು ಎಂಬ ಆತುರ ಅಥವಾ ತುಡಿತ ಇರೋದಿಲ್ಲ.

ಕನ್ಯಾ ರಾಶಿ ಕನ್ಯಾ ರಾಶಿಯವರು ತರ್ಕಬದ್ಧವಾಗಿ, ವಿಶ್ಲೇಷಣಾತ್ಮಕವಾಗಿ ಆಲೋಚನೆ ಮಾಡುವಂಥವರು. ಇವರು ಅದ್ಭುತವಾದ ಕೇಳುಗರು. ತಮ್ಮಿಂದ ನೀಡುಬಹುದಾದ ಅತ್ಯುತ್ತಮವಾದ ಸಲಹೆಯನ್ನೇ ನೀಡುತ್ತಾರೆ. ಇವರು ತಮ್ಮ ಹೃದಯದಿಂದ ಯೋಚನೆ ಮಾಡುವ ಪೈಕಿ ಅಲ್ಲ, ತಲೆಯಿಂದ ಆಲೋಚಿಸುತ್ತಾರೆ. ಅದರರ್ಥ ಇವರು ವಾಸ್ತವವಾದಿಗಳು. ಸಹಾನುಭೂತಿ ಬೇಕು ಅಂತಷ್ಟೇ ಕೇಳಿಸಿಕೊಳ್ಳುವ ಜನರಲ್ಲ ಇವರು. ಸಮಸ್ಯೆಗಳಿಗೆ ತಾರ್ಕಿಕ ಪರಿಹಾರ ನೀಡಲು ಪ್ರಯತ್ನಿಸುತ್ತಾರೆ.

ಮೀನ ರಾಶಿ ಮೀನರಾಶಿವರು ಸಹಾನುಭೂತಿ ಇರಿಸಿಕೊಂಡಂಥ ಹಾಗೂ ಇತರರ ಬಗ್ಗೆ ಹೆಚ್ಚು ಕಾಳಜಿ ಇರುವ ಜನರು. ಇತರರಿಗೆ ಯಾವ ಸಂದರ್ಭದಲ್ಲಿ ಸಹಾಯದ ಅಗತ್ಯ ಇದೆ ಎಂಬುದನ್ನು ಗುರುತಿಸಬಲ್ಲಂಥವರು. ಕೇಳಿಸಿಕೊಳ್ಳುವುದೊಂದೇ ಅಲ್ಲ, ಸಮಸ್ಯೆಯನ್ನು ಕಡಿಮೆ ಮಾಡುವುದಕ್ಕೆ ಏನು ಬೇಕೋ ಅದನ್ನೂ ಮಾಡುತ್ತಾರೆ. ಇತರರ ಮಾತನ್ನು ಹೃದಯದ ಮೂಲಕ ಕೇಳಿಸಿಕೊಳ್ಳುವ ಇವರು, ಮನಸ್ಥಿತಿಯನ್ನು ಅರಿತು, ಸಹಾನುಭೂತಿಯೊಂದಿಗೆ ಸಹಾಯ ಮಾಡುತ್ತಾರೆ.

ಇದನ್ನೂ ಓದಿ: ಈ 4 ರಾಶಿಯ ಜನರು ಆಕರ್ಷಕ ವ್ಯಕ್ತಿತ್ವ ಹೊಂದಿರುತ್ತಾರೆ; ನಿಮ್ಮ ರಾಶಿ ಏನು ಹೇಳುತ್ತದೆ ಇಲ್ಲಿ ಗಮನಿಸಿ

ಇದನ್ನೂ ಓದಿ: Jobs according zodiac signs: ಮೇಷದಿಂದ ಮೀನದ ತನಕ ಯಾವ ರಾಶಿಗೆ ಯಾವ ಉದ್ಯೋಗ ಸೂಕ್ತ?

(According to vedic astrology Gemini, Cancer, Virgo and Pisces zodiac signs natives considered as good listeners)

ಕೆಂಡದಂಥ ಬಿಸಲಿನಿಂದ ರಕ್ಷಿಸಲು ವಿನೂತನ ಕ್ರಮ: ಪೊಲೀಸ್ ಕಮೀಷನರ್
ಕೆಂಡದಂಥ ಬಿಸಲಿನಿಂದ ರಕ್ಷಿಸಲು ವಿನೂತನ ಕ್ರಮ: ಪೊಲೀಸ್ ಕಮೀಷನರ್
ಸೋನು ನಿಗಮ್ ಬದಲಿಗೆ ಕನ್ನಡದ ಗಾಯಕನಿಗೆ ಅವಕಾಶ ಕೊಟ್ಟ ನಿರ್ಮಾಪಕ
ಸೋನು ನಿಗಮ್ ಬದಲಿಗೆ ಕನ್ನಡದ ಗಾಯಕನಿಗೆ ಅವಕಾಶ ಕೊಟ್ಟ ನಿರ್ಮಾಪಕ
ರೆಡ್ಡಿ ಜೈಲು ಸೇರುವಂತಾಗುವಲ್ಲಿ ಸಿಬಿಐ ಅಧಿಕಾರಿಗಳ ಪಾತ್ರ ದೊಡ್ಡದು: ಹಿರೇಮಠ
ರೆಡ್ಡಿ ಜೈಲು ಸೇರುವಂತಾಗುವಲ್ಲಿ ಸಿಬಿಐ ಅಧಿಕಾರಿಗಳ ಪಾತ್ರ ದೊಡ್ಡದು: ಹಿರೇಮಠ
ಉಗ್ರರ ದಾಳಿ ಖಂಡಿಸಿ ಜರ್ಮನಿಯಲ್ಲಿ ಅನಿವಾಸಿ ಭಾರತೀಯರಿಂದ ಮೆರವಣಿಗೆ
ಉಗ್ರರ ದಾಳಿ ಖಂಡಿಸಿ ಜರ್ಮನಿಯಲ್ಲಿ ಅನಿವಾಸಿ ಭಾರತೀಯರಿಂದ ಮೆರವಣಿಗೆ
ಅಪಾಯ ಉಂಟಾದಾಗ ಪಾರಾಗಲು ಮಾಕ್ ಡ್ರಿಲ್ ವೇಳೆ ಜಮ್ಮು ಶಾಲೆಯ ಮಕ್ಕಳಿಗೆ ತರಬೇತಿ
ಅಪಾಯ ಉಂಟಾದಾಗ ಪಾರಾಗಲು ಮಾಕ್ ಡ್ರಿಲ್ ವೇಳೆ ಜಮ್ಮು ಶಾಲೆಯ ಮಕ್ಕಳಿಗೆ ತರಬೇತಿ
ಸಿನಿಮಾದಿಂದ ಸೋನು ನಿಗಂ ಹಾಡು ಡ್ರಾಪ್, ನಿರ್ದೇಶಕ ಹೇಳಿದ್ದಿಷ್ಟು?
ಸಿನಿಮಾದಿಂದ ಸೋನು ನಿಗಂ ಹಾಡು ಡ್ರಾಪ್, ನಿರ್ದೇಶಕ ಹೇಳಿದ್ದಿಷ್ಟು?
ನನ್ನ ಮೇಲೆ ಹಲ್ಲೆ, ತಾತನ ವಿರುದ್ಧ ಅಟ್ರಾಸಿಟಿ ಕೇಸ್ ಹಾಕಲಾಗಿತ್ತು: ಗಣೇಶ್
ನನ್ನ ಮೇಲೆ ಹಲ್ಲೆ, ತಾತನ ವಿರುದ್ಧ ಅಟ್ರಾಸಿಟಿ ಕೇಸ್ ಹಾಕಲಾಗಿತ್ತು: ಗಣೇಶ್
ಮನೆಯೆದುರು ಮಕ್ಕಳು ಆಡುವಾಗ ಚಿರತೆ ಪ್ರತ್ಯಕ್ಷ; ಶಾಕಿಂಗ್ ವಿಡಿಯೋ ವೈರಲ್
ಮನೆಯೆದುರು ಮಕ್ಕಳು ಆಡುವಾಗ ಚಿರತೆ ಪ್ರತ್ಯಕ್ಷ; ಶಾಕಿಂಗ್ ವಿಡಿಯೋ ವೈರಲ್
ಪಾಕಿಸ್ತಾನೀಯರ ಬೆಂಬಲ ಭಾರತಕ್ಕಾ?
ಪಾಕಿಸ್ತಾನೀಯರ ಬೆಂಬಲ ಭಾರತಕ್ಕಾ?
ಐದು ವರ್ಷದಿಂದ ಸಿಎಂರನ್ನು ಟಾರ್ಗೆಟ್ ಮಾಡಿರುವ ಜೇಲ್ ವಾಚರ್: ಕಾಂಗ್ರೆಸ್
ಐದು ವರ್ಷದಿಂದ ಸಿಎಂರನ್ನು ಟಾರ್ಗೆಟ್ ಮಾಡಿರುವ ಜೇಲ್ ವಾಚರ್: ಕಾಂಗ್ರೆಸ್