
ಲಕ್ಮೀ ದೇವಿ ಸಂಪತ್ತಿನ ಅಧಿದೇವತೆ. ಲಕ್ಷ್ಮಿ ದೇವಿಯನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸುವ ಮನೆಯಲ್ಲಿ ಸಂಪತ್ತು ಸದಾ ನೆಲೆಸಿರುತ್ತದೆ ಎಂದು ನಂಬಲಾಗಿದೆ. ಆದರೆ ನೀವು ಮನೆಯಲ್ಲಿ ಮಾಡುವಂತಹ ಕೆಲವೊಂದು ಕೆಲಸಗಳು ಲಕ್ಮೀ ದೇವಿಯ ಕೋಪಕ್ಕೆ ಗುರಿಯಾಗುವಂತೆ ಮಾಡಬಹುದು. ಇದರಿಂದ ನೀವು ಸಾಲದ ಹೊರೆಯಲ್ಲಿ ಸಿಲುಕಿಕೊಳ್ಳಬಹುದು. ಅಂತಹ ತಪ್ಪುಗಳು ಯಾವುವು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ವಾಸ್ತು ಶಾಸ್ತ್ರದ ಪ್ರಕಾರ, ಲಕ್ಷ್ಮಿ ದೇವಿಯು ಕೊಳಕು ಇರುವಲ್ಲಿ ಎಂದಿಗೂ ವಾಸಿಸುವುದಿಲ್ಲ. ಲಕ್ಷ್ಮಿ ದೇವಿಯಾವಾಗಲೂ ಸ್ವಚ್ಛವಾದ ಸ್ಥಳದಲ್ಲಿ ವಾಸಿಸುತ್ತಾಳೆ. ಹಾಗಾಗಿ, ಅಶುಚಿತ್ವದಲ್ಲಿ ವಾಸಿಸುವ ಮತ್ತು ತನ್ನ ಸುತ್ತಮುತ್ತಲಿನ ಪ್ರದೇಶಗಳನ್ನು ಅಶುಚಿಯಾಗಿಟ್ಟುಕೊಳ್ಳುವ ಸ್ಥಳದಲ್ಲಿ ಲಕ್ಷ್ಮಿ ದೇವಿಯು ವಾಸಿಸಲು ಅಸಾಧ್ಯ.
ಇದನ್ನೂ ಓದಿ: ಹನುಮಾನ್ ಚಾಲೀಸಾವನ್ನು ಯಾವಾಗ, ಹೇಗೆ ಮತ್ತು ಎಷ್ಟು ಬಾರಿ ಪಠಿಸಬೇಕು?
ಇದರ ಜೊತೆಗೆ, ಮನೆಯಲ್ಲಿ ಪೊರಕೆಯನ್ನು ಇಲ್ಲಿ ಅಲ್ಲಿ ಎಸೆಯುತ್ತಾರೆ ಮತ್ತು ಪೊರಕೆಯ ಬಳಿ ಕಸವನ್ನು ಸಂಗ್ರಹಿಸುತ್ತಾರೆ. ಇದು ಲಕ್ಷ್ಮಿ ದೇವಿಯ ಕೋಪಕ್ಕೆ ಕಾರಣವಾಗಬಹುದು. ಮನೆಯಲ್ಲಿ ಪೊರಕೆಯನ್ನು ಸರಿಯಾದ ಸ್ಥಳದಲ್ಲಿ ಇಡಿ ಮತ್ತು ಅದನ್ನು ನಿಮ್ಮ ಕಾಲಿನಿಂದ ಒದೆಯಬೇಡಿ. ಆದ್ದರಿಂದ ನೀವು ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆಯಲು ಬಯಸಿದರೆ, ಸ್ವಚ್ಛತೆ ಮತ್ತು ಶುದ್ಧತೆಯಿಂದಿರಿ ಮತ್ತು ಈ ವಾಸ್ತು ದೋಷ ನಿವಾರಿಸಲು ವಾಸ್ತು ತಜ್ಞರ ಸಲಹೆ ಪಡೆದುಕೊಳ್ಳಿ.
ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ